ಆಯುರ್ವೇದವು ನಮ್ಮ ಸಾಂಪ್ರದಾಯಿಕ ಭಾರತೀಯ ಔಷಧ ಪದ್ಧತಿ. ಇತ್ತೀಚೆಗೆ ಆಯುರ್ವೇದವು ಹೆಚ್ಚು ಜನಪ್ರಿಯವಾಗುತ್ತಿದೆ.
ಆಯುರ್ವೇದದ ಧ್ಯೇಯ ವಾಕ್ಯ :-
“ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಮ್ ,ಆತುರಸ್ಯ ವಿಕಾರ ಪ್ರಶಮನಮ್”.
ಆಯುರ್ವೇದ ಕೇವಲ ಚಿಕಿತ್ಸೆಗೆ ಸೀಮಿತವಲ್ಲ ಆದರೆ ಸ್ವಸ್ಥ ವ್ಯಕ್ತಿಯ ಆರೋಗ್ಯ ಸಂರಕ್ಷಣೆಯ ವಿಧಿ ವಿಧಾನಗಳ ಮಾಹಿತಿ ನೀಡುತ್ತೆ.
ಆಯುರ್ವೇದ ಅಥರ್ವ ವೇದದ ಉಪವೇದ. ವೇದಗಳಿಂದ ಉಪದೇಶವಾದ ಚಿಕಿತ್ಸಾ ಕ್ರಮಗಳು ಸಾರವಾಗಿ ಆಯುರ್ವೇದದಲ್ಲಿ ಉಲ್ಲೇಖವಾಗಿವೆ.
ಈ ರೀತಿಯಾದ ಒಂದು ವಿಶಿಷ್ಟ ಚಿಕಿತ್ಸಾ ಹಾಗೂ ವಿದ್ಯೆ ನಮ್ಮಿಂದ ದೂರವಾಗಿದೆ.
ಪ್ರಸ್ತುತ Allopathy ಔಷಧಿಗಳು ದೇಶದೆಲ್ಲೆಡೆ ಬಳಕೆಯಾದ ಕಾರಣ ಆಯುರ್ವೇದ ಔಷಧಿಗಳ ಬಳಕೆ ಕಮ್ಮಿಯಾಗಿವೆ.
ಜನರಲ್ಲಿ ಆಯುರ್ವೇದ ಚಿಕಿತ್ಸೆಯು ತುಂಬಾ “ನಿಧಾನವಾಗಿ ಪ್ರತಿಕ್ರಿಯಿಸುತ್ತದೆ” ಎಂಬ ತಪ್ಪು ತಿಳುವಳಿಕೆ ಹರಡಿದೆ.
ಆಯುರ್ವೇದದಲ್ಲಿಯೂ ಕೂಡ ಕೆಲವು ರೋಗಗಳಿಗೆ ಶೀಘ್ರವಾಗಿ ಗುಣಪಡಿಸುವ ಕ್ಷಮತೆ ಉಂಟು.
ಆಯುರ್ವೇದ ಚಿಕಿತ್ಸೆಯು ಕೇವಲ ರೋಗ ಚಿಕಿತ್ಸೆಗೆ ಸೀಮಿತವಲ್ಲ , ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.
ಇಂದಿನ ದಿನ 19/05/2024 ನಾನು ವಿಪುಲ್ ,ನನ್ನ ತಂದೆ ಸತ್ಯಾನಂದ ಹಾಗೂ ಶಕ್ತಿಪೀಠ ಫೌಂಡೇಶನ್ ನ ಸ್ಥಾಪಕರಾದ ಕುಂದರನಹಳ್ಳಿ ರಮೇಶರವರೊಂದಿಗೆ
ಆಯುರ್ವೇದ ಬಗ್ಗೆ ಚರ್ಚೆಯಾಯಿತು.
ಎಸ್ ಡಿ ಎಮ್ ಉಡುಪಿ ಕಾಲೇಜಿನಲ್ಲಿ BAMS ( ಆಯುರ್ವೇದ) ಅಧ್ಯಯನ ಮಾಡುತ್ತಿರುವ ಜನರಲ್ಲಿ ಆಯುರ್ವೇದದ ಕೆಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಯೋಜನೆಮಾಡಿದ್ದೇನೆ. ರಮೇಶ್ ಸರ್ ಅವರ ಮಾರ್ಗದರ್ಶನದ ಮೇರೆಗೆ ಇಂದು “ಅಂಗೈಯಲ್ಲಿ ಆಯುರ್ವೇದ A2 ” ವೆಂಬ E – Paper ಪ್ರಾರಂಭಿಸಲು ಚರ್ಚಿಸಲಾಗಿದೆ. ಈ ಮೂಲಕ ವೈದ್ಯರ ಸಲಹೆಯೊಂದಿಗೆ ಆಯುರ್ವೇದ ಚಿಕಿತ್ಸೆ ಮತ್ತು ಸ್ವಾಸ್ಥ್ಯ ಸಂರಕ್ಷಣೆ ಅರಿವು ಮೂಡಿಸುವ ಹಾಗೂ ಆಚರಿಸಬೇಕಾದ ಕ್ರಮಗಳನ್ನು ಪತ್ರಿಕೆಯಲ್ಲಿ ತಿಳಿಸಲಾಗುವುದು.
VIPUL
Chirantana Foundation
Tumakuru