29th March 2024
Share

TUMAKURU:SHAKTHIPEETA FOUNDATION

 ಸರ್ಕಾರಿ ಸುತ್ತೋಲೆ ಪ್ರಕಾರ ಕೋವಿಡ್ ನಗರ ಸ್ಥಳೀಯ ಸಂಸ್ಥೆಗಳ ಬೂತ್ ಲೆವೆಲ್ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ 3 ರಿಂದ 4 ನಾಗರೀಕ ಪ್ರತಿನಿಧಿಗಳು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪೋಲೀಸ್ ಬೀಟ್ ಕಾನ್ಸ್ ಟೇಬಲ್, ಸ್ವಸಹಾಯ ಸಂಘ/ನಿವಾಸಿ ಕಲ್ಯಾಣ ಸಮಿತಿಯ ಪ್ರತಿನಿಧಿಗಳು,ಎನ್‌ಎಸ್‌ಎಸ್. ಎನ್‌ಸಿಸಿ. ಎನ್ ವೈಕೆಯಿಂದ 2 ರಿಂದ 3 ಸ್ವಯಂಸೇವಕರು, ಬೂತ್ ಮಟ್ಟದ ಟಾಸ್ಕ್ ಪೋರ್ಸ್ 5 ರಿಂದ 6 ಜನ ಸದಸ್ಯರಿಗಿಂತ ಹೆಚ್ಚಿನ ಸದಸ್ಯರನ್ನು ಹೊಂದುವಂತಿಲ್ಲ ಎಂದಿದೆ.

 ಇವರ ಜೊತೆಗೆ ನ್ಯಾಯಬೆಲೆ ಅಂಗಡಿ ಪ್ರತಿನಿಧಿ, ವಿಧ್ಯುತ್ ಪ್ರತಿನಿಧಿ/ಮೀಟರ್ ರೀಡರ್, ವಾಟರ್ ಮ್ಯಾನ್, ಘನತ್ಯಾಜ್ಯ ವಸ್ತು ಆಟೋ ಪ್ರತಿನಿಧಿ, ಪೌರಕಾರ್ಮಿಕ, ಕರವಸೂಲಿಗಾರರು ಇವರುಗಳು ಇರುವುದು ಉತ್ತಮ. ಏಕೆಂದರೆ ಇವರಿಗೆ ಪ್ರತಿ ಮನೆಯ ಸಂಬಂಧ ಉತ್ತಮವಾಗಿದೆ.  ನಿರಂತರವಾಗಿ ಮನೆಗಳಿಗೆ ಭೇಟಿ ನೀಡುತ್ತಾರೆ, ಇವರೆಲ್ಲಾ ಹಳಬರಾಗಿದ್ದಾರೆ, ಇವರ ಜೊತೆ ಮಾತನಾಡಲು ಜನತೆ ಅಂಜಿಕೊಳ್ಳುವುದಿಲ್ಲಾ, ಇಲ್ಲಿ ಸಂಖ್ಯೆಗೆ ಸೀಮಿತಗೊಳಿಸಬಾರದು. ಹೊಸಬರಿಗೆ ಜನತೆ ವಿಷಯ ಹೇಳಲು ಹಿಂಜರಿಯುತ್ತಾರೆ.

 ಈ ಸಮಿತಿಗಳು ಹಿಂದಿನ ಓಟರ್‌ಲಿಸ್ಟ್ ಹಿಡಿದು ಕೊಂಡು, ಮುಖ್ಯ ರಸ್ತೆ, ಅಡ್ಡ ರಸ್ತೆ, ಲಿಂಕ್ ರಸ್ತೆವಾರು ಮನೆಗಳಿಗೆ ನಂಬರ್ ನೀಡಿ, ಆಯಾ ಮನೆಯ ಎಲ್ಲಾ ಮತದಾರರನ್ನು ಆಯಾ ಮನೆಯ ನಂಬರ್ ಕೆಳಗೆ ಬರುವಂತೆ ಜೋಡಣೆ ಮಾಡುವುದರ ಜೊತೆಗೆ ಮತದಾರರಲ್ಲದವರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಿ, ಈ ಪಟ್ಟಿಗೆ ಆರೋಗ್ಯ ತಪಾಸಣೆ ಪಟ್ಟಿ’ ಎಂದು ಹೆಸರಿಸಿ ಮಾಹಿತಿ ಸಂಗ್ರಹಿಸಿ, ಸೂಕ್ತ ಅರೋಗ್ಯ ಸೇವೆ ಕಲ್ಪಿಸುವುದು ಸೂಕ್ತವಾಗಿದೆ.

 ಹೊಸದಾಗಿ ಆಯಾ ಬೂತ್ ವ್ಯಾಪ್ತಿಗೆ ಬಂದಿರುವವರು, ನಗರದಿಂದ ಹೊರ ಹೋಗಿರುವವರು, ಸತ್ತು ಹೋಗಿರುವವರು ಸೇರಿದಂತೆ ಎಲ್ಲಾ ಮಾಹಿತಿಯೂ ಕರಾರುವಕ್ಕಾಗಿ ದೊರೆಯಲಿದೆ. ಕೊರೊನಾ ಬರುವ ಮುನ್ಸೂಚನೆಗೆ ಜನರಿಗೆ ಮೊದಲು ಯಾವ ಕಾಯಿಲೆ ಇತ್ತು ಎಂಬ ಮಾಹಿತಿಯೂ ಅಗತ್ಯ. ಈಗಂತೂ ಕೆಲವು ಜನರು ಬಿಪಿ. ಶುಗರ್, ಕೊಲೆಸ್ಟಾರಲ್ ಚೆಕ್ ಅಫ್‌ಗೂ ಆಸ್ಪತ್ರೆಗೆ ಹೋಗಲು ಭಯಭೀತರಾಗಿದ್ದಾರೆ.

 ಮೊಬೈಲ್ ಲ್ಯಾಬ್ ವಾಹನವನ್ನು ಮನೆ ಬಾಗಿಲಿಗೆ ಕೊಂಡೊಯ್ದು ವಿವಿಧ ರೀತಿಯ ಟೆಸ್ಟ್ ಮಾಡಿಸುವುದು ಅನಿವಾರ್ಯವಾಗಲಿದೆ. ಇದು ಜನತೆಯ ನೀರಿಕ್ಷೆಯೂ ಆಗಿದೆ. ಇದು ನಿಜವಾದ ಸೇವೆಯಾಗಲಿದೆ.