28th March 2024
Share

TUMAKURU:SHAKTHIPEETA FOUNDATION

  ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 160 ಘನತ್ಯಾಜ್ಯ ವಸ್ತು ಸಂಗ್ರಹ ಆಟೋಗಳಿವೆಯಂತೆ, ಆಟೋವಾರು ನಿರ್ದಿಷ್ಠ ಪ್ರದೇಶಗಳಿಗೆ ನಿಗದಿಗೊಳಿಸಿ, ಆಯಾ ವ್ಯಾಪ್ತಿಯಲ್ಲಿ ಮನೆ ಮನೆಗೆ ಹೋಗಿ ಘನತ್ಯಾಜ್ಯ ವಸ್ತು ಸಂಗ್ರಹಣೆ ಮಾಡುತ್ತಿವೆ.

 ಪ್ರತಿ ತಿಂಗಳು ಪ್ರತಿ ಮನೆಯಿಂದ ಹಣವನ್ನು ಸಂಗ್ರಹ ಮಾಡುತ್ತಾರಂತೆ. ಇದು ಅಧಿಕೃತವೋ, ಅನಧಿಕೃತವೋ ಮಾಹಿತಿ ಇಲ್ಲ. ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಬೇಕು. ಯಾವ ಆಟೋ ಯಾವ ನಿರ್ಧಿಷ್ಠ ಪ್ರದೇಶದಲ್ಲಿ ಚಲಿಸಲಿದೆ ಎಂಬ ಬಗ್ಗೆ ಜಿಐಎಸ್ ಲೇಯರ್ ಮಾಡಲು ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಪ್ರಸ್ತುತ  ತುಮಕೂರು ಸ್ಮಾರ್ಟ್ ಸಿಟಿ – ಅದ್ವಾನಗಳ ಸ್ಮಾರ್ಟ್ ಸಿಟಿ’ ಮಧ್ಯೆ ಅತ್ಯುತ್ತಮವಾದ ಯೋಜನೆ ಯೊಂದನ್ನು ಜಾರಿಗೆ ತರಲಾಗಿದೆ ಎಂದು ದಾಖಲೆಗಳಲ್ಲಿ ಬರೆದುಕೊಂಡಿದೆ. ಶೀಘ್ರವಾಗಿ ಈ ಯೋಜನೆಗೆ ಚಾಲನೆ ನೀಡಬಹುದು ಅಥವಾ ಅನಧಿಕೃತವಾಗಿ ನೀಡಿರಬಹುದು.

 ಏಕೆಂದರೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಐಸಿಸಿಸಿಯಲ್ಲಿ ಯಾವುದೇ ಯೋಜನೆ ಕೇಳಿ ಮೊದಲು ಮಾಡಲಾಗಿದೆ ಎಂದು ಖಡಕ್ ಆಗಿ ಹೇಳುತ್ತಾರೆ, ಪರಿಶೀಲನೆ ಮಾಡಿ ಪ್ರದರ್ಶಿಸಲು ಕೇಳಿದಾಗ ಇನ್ನೂ ಕೆಲಸ ಆಗಬೇಕು ಎಂದು ಹೇಳುವುದು ವಾಡಿಕೆಯಾಗಿದೆ. ಇದರಿಂದ ಸ್ಪಷ್ಟವಾಗಿ ಹೇಳಲು ನನಗೆ ಭಯವಾಗುತ್ತಿದೆ.

 ಅದೇನೆ ಇರಲಿ, ಯೋಜನೆ ಜಾರಿಗೆ ಬಂದಲ್ಲಿ ಘನತ್ಯಾಜ್ಯ ವಸ್ತು ಆಟೋಗಳಿಗೆ ಸ್ಮಾರ್ಟ್ ಮೂಗುದಾರ ಗ್ಯಾರಂಟಿ ಬೀಳಲಿದೆ. ಯಾವ ವಾಹನ ಎಲ್ಲೆಲ್ಲಿ ಚಲಿಸುತ್ತಿದೆ, ಎಲ್ಲೆಲ್ಲಿ ಎಷ್ಟು ಸಮಯ ನಿಂತಿದೆ, ಯಾವ ಆಟೋಗಳು ದಿನ ಬಂದಿಲ್ಲ ಎಂಬ ಮಾಹಿತಿ ಲೈವ್ ಆಗಿ ಜನತೆಗೆ ಮತ್ತು ಅಧಿಕಾರಿಗಳಿಗೆ ದೊರೆಯಲಿದೆಯಂತೆ.

  ಪಾಲಿಕೆ ಆಯುಕ್ತರು ಕಚೇರಿಯಲ್ಲಿ ಕುಳಿತು, ಇಚ್ಚಿಸಿದಲ್ಲಿ ಜನಪ್ರತಿನಿಧಿಗಳ ಕಚೇರಿಯಲ್ಲಿಯೂ ಪ್ರತಿಯೊಂದು ವಾಹನಗಳ ಚಲನ- ವಲನಗಳನ್ನು ಗಮನಿಸಬಹುದು. ಯಾವ ಆಟೋ ಬಂದಿಲ್ಲ ಆ ಆಟೋಗಳಿಗೆ ಆ ದಿನದ ಬಿಲ್ ಕಟ್ ಮಾಡಬಹುದು. 

  ಯಾವ ಭಾಗದ ಆಟೋ ದಿನ ಬರುವುದಿಲ್ಲಾ ಎಂದು ಪ್ರತಿ ಮನೆಯ ಮಹಿಳೆಯರ ಮೊಬೈಲ್‌ಗೆ ಮಾಹಿತಿ ರವಾನಿಸಬಹುದಾಗಿದೆ. ಇದರಿಂದ ಘನತ್ಯಾಜ್ಯ ವಸ್ತು ಆಟೋ ಕಾಯ್ದು ಮಹಿಳೆಯರಿಗೆ ಬಿಪಿ ಹೆಚ್ಚಿಗೆ ಆಗುವುದು ತಪ್ಪಲಿದೆಯಂತೆ. ಪ್ರತಿದಿನದ ಆಟೋಗಳ ಮಾಹಿತಿ ಸಂಜೆ ಪಾಲಿಕೆ ಆಯುಕ್ತರ ಟೇಬಲ್ ಮೇಲೆ ಬರಲಿದೆ ಅಥವಾ ಬೆರಳ ತುದಿಯಲ್ಲಿಯೂ ನೋಡಬಹುದಾಗಿದೆ.

 ದಿನಾಂಕ:25.07.2020 ರಂದು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಮ್ಮನವರು ನಡೆಸಿದ ಸಭೆಯಲ್ಲಿ ಶ್ರೀ ಕುಂದರನಹಳ್ಳಿ ರಮೇಶ್ ಈ ಯೋಜನೆಯ ಬಗ್ಗೆ ಕೇಳಿದಾಗ, ಓ ಈ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಸ್ಮಾರ್ಟ್ ಸಿಟಿ ಶ್ರೀ ಅಶ್ವಿನ್ ಹೇಳಿದರು. ತಕ್ಷಣ ಎಷ್ಟು ಆಟೋಗಳು ಓಡುತ್ತಿವೆ ತೋರಿಸಿ ಎಂದಾಗ ಕೇವಲ 68 ಆಟೋಗಳು ಓಡುತ್ತಿರುವುದು ಕಣ್ಣಿಗೆ ಕಾಣಿಸಿತು. ಉಳಿದವು ಎಲ್ಲಿವೆ ಎಂದರೆ ಅವರು ಆಪ್ ಮಾಡಿಕೊಂಡಿರಬಹುದು ಎಂದು ಉತ್ತರಿಸಿದರು.

 ಆಫ್ ಮಾಡಿಕೊಳ್ಳಲು ಕೋಟ್ಯಾಂತರ ಹಣ ಖರ್ಚು ಏಕೆ ಮಾಡಬೇಕು. ಇದನ್ನು ಮಾನಿಟರ್ ಮಾಡಬೇಕಾಗಿರುವುದು ಪಾಲಿಕೆಯ ಪರಿಸರ ಇಲಾಖೆಯವರು ಅವರಿಗೆ ವಿಷಯ ಗೊತ್ತಾಗಿದೆಯೇ ಎಂದಾಗ ಮೌನವೇ ಉತ್ತರ. ಪಾಲಿಕೆ ಆಯುಕ್ತರಿಗೆ ಗೊತ್ತಿಲ್ಲದ ವಿಷಯ ಪರಿಸರ ವಿಭಾಗದವರಿಗೆ ಹೇಗೆ ಗೊತ್ತಾಗಬೇಕು ದೇವರೇ ಬಲ್ಲ.

 ಕಳೆದವಾರ ತುಮಕೂರಿನ ಜಯನಗರ ಪೂರ್ವದ ಒಂದನೇ ಮುಖ್ಯ ರಸ್ತೆಯಲ್ಲಿ ಆಟೋ ಎಷ್ಟು ದಿವಸ ಓಡಿದೆ ಎಂದರೆ ಉತ್ತರವಿಲ್ಲ. ಮುಂದಿನ ವಾರದ ಸಭೆಯ ವೇಳೆಗೆ  ಈ ಯೋಜನೆಯ ಪರಿಪೂರ್ಣ ಮಾಹಿತಿಯನ್ನು ಲೈವ್ ಆಗಿ ಪ್ರದರ್ಶಿಸುವ ಭರವಸೆಯನ್ನು ಪಾಲಿಕೆ ಆಯುಕ್ತರ ಮುಂದೆ ಶ್ರೀ ಅಶ್ವಿನ್ ತಿಳಿಸಿದ್ದಾರೆ. ಕಾದು ನೋಡೋಣ.

 ಈ ಯೋಜನೆಯನ್ನು ಈ ವರ್ಷದ ಸ್ವಾತಂತ್ರೊತ್ಸವದ ಕೊಡುಗೆಯಾಗಿ ನಗರದ ಜನತೆಗೆ ನೀಡಲು ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ರಂಗಸ್ವಾಮಿಯವರು ಚುನಾಯಿತ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಚಾಲನೆ ನೀಡಬಹುದು ಎನಿಸುತ್ತಿದೆ.

 ಪಾಪ ಯೋಜನೆ ಮಾಡುವ ನೆಪದಲ್ಲಿ ಹಣ ದೋಚಿ ಅಪೂರ್ಣ ಮಾಹಿತಿ ನೀಡಿ ಸಲಹಾಗಾರರು ಓಡಿಹೋಗಿರಬಹುದು. ಎಲ್ಲಾ ಯೋಜನೆಗಳ ಹೊರೆಯನ್ನು ಶ್ರೀ ಅಶ್ವಿನ್‌ರವರು ತನ್ನ ತಲೆ ಮೇಲೆ ಎಳೆದುಕೊಂಡು ಒದ್ದಾಡುತ್ತಿದ್ದಾರೆ. ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕರು ಬಗ್ಗೆ ವಿಶೇಷ ಗಮನಹರಿಸಬೇಕಿದೆ.

 ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಕತೆ ಹೇಳಿದರೆ ಕೇಳುವುದಿಲ್ಲ, ಯೋಜನೆಯ ಅನುಕೂಲ ನಗರದ ಜನತೆಗೆ ತಲುಪಬೇಕು. ಮಾಹಿತಿ ಚಿತ್ರಗಳಲ್ಲಿದ್ದರೆ ಸಾಲದು. ಅದು ಬಳಕೆಗೆ ಬರಬೇಕು ಎಂಬುದನ್ನು ಮರೆಯದಿರಿ. ಕೇಂದ್ರ ಸರ್ಕಾರ ಇವುಗಳನ್ನು ಪರಿಶೀಲನೆ ಮಾಡಿ ಸರಪಡಿಸಲು ದಿಶಾ ಸಮಿತಿ ರಚಿಸಿರುವುದು. ಸಭೆಗೆ ಬಂದು ಕಾಫಿ ತಿಂಡಿ ತಿಂದು ಹೋಗಲು ಅಲ್ಲ.

 ಅದಕ್ಕೋಸ್ಕರವೇ ಜಿಲ್ಲಾಧಿಕಾರಿಗಳಾದ ಡಾ. ಶ್ರೀ ರಾಕೇಶ್ ಕುಮಾರ್‌ರವರು ತಮ್ಮ ಎಷ್ಟೆ ಕೆಲಸಗಳ ಒತ್ತಡವಿದ್ದರೂ, ಕೋವಿಡ್ ಸಂಕಷ್ಠದಲ್ಲೂ ಪ್ರತಿ ಶುಕ್ರವಾರ ಸಭೆ ನಡೆಸುತ್ತಿರುವುದು, ಈ ಸಭೆಗೆ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಮತ್ತು ಸದಸ್ಯರುಗಳು ಭಾಗವಹಿಸುತ್ತಿರುವುದು ಸಹ ದೇಶದ 100 ಸ್ಮಾರ್ಟ್ ಸಿಟಿಗಳಿಗೆ ಮಾದರಿಯಾಗಲಿದೆ.