28th March 2024
Share
SHAKTHI PEETA CAMPUS – SHAKTHI PEETA & INDIA BOUNDRY GIS POINTS

TUMAKURU:SHAKTHIPEETA FOUNDATION

ಸುಮಾರು ಒಂದು ಎಕರೆ ಪ್ರದೇಶದಲ್ಲಿ ಭೂಮಿಯ ಮೇಲೆ ಭಾರತದ ನಕ್ಷೆ ಸಿದ್ಧಪಡಿಸಿ ವಿಶ್ವದ ಏಳು ದೇಶಗಳಾದ ಭಾರತ ದೇಶದಲ್ಲಿ-93, ಶ್ರೀಲಂಕಾ-2, ಟಿಬೆಟ್-1, ಭಾಂಗ್ಲಾದೇಶ-6, ನೇಪಾಳ-3, ಭೂತಾನ್-1 ಮತ್ತು ಪಾಕಿಸ್ಥಾನ-2 ಸೇರಿದಂತೆ 108 ಶಕ್ತಿಪೀಠಗಳ ಸ್ಥಳ ಹುಡುಕಿ, ಗುರುತಿಸಿ, ಈ ಏಳು ದೇಶಗಳ ವ್ಯಾಪ್ತಿಯನ್ನು ಒಂದು ಎಕರೆಗೆ ಇಳಿಸಿ ಭೂಮಿಯ ಮೇಲೆ ಜಿಐಎಸ್ ಆಧಾರಿತ 117 ಶಕ್ತಿಪೀಠಗಳನ್ನು ಗುರುತು ಮಾಡಲಾಗಿದೆ.

ದಿನಾಂಕ:30.01.2021 ರಂದು ನನಗೆ ಬಹಳ ಖುಷಿಯಾದ ದಿನ. ಇಷ್ಟು ಮಾಡಲು ನನಗೆ ಸುಮಾರು ದಿನಾಂಕ:10.11.2014  ರಿಂದ ಇಲ್ಲಿಯವರೆಗೆ ಸಮಯ ತೆಗೆದುಕೊಂಡಿದೆ. ಇದು ಒಂದು ಲೈವ್ ಸಂಶೋಧನೆ. ಬಹಳಷ್ಟು ಜನರ ಸಹಕಾರ, ಸಮಯ,ಬುದ್ದಿವಂತಿಕೆಯನ್ನು ಒಳ್ಳೆಯ ಕಾರ್ಯಕ್ಕೆ ಬಳಸಲಾಗಿದೆ ಎಂಬ ಆತ್ಮ ತೃಪ್ತಿಯು ಆಗಿದೆ.

ಇನ್ನೂ ಮುಂದಿದೆ ಮಾರಿ ಹಬ್ಬ’ಎಂಬ ಗಾದೆಯಂತೆ ವಾದ-ವಿವಾದ ಶುರುವಾಗಲಿದೆ. ಇದು ಶಕ್ತಿಪೀಠವಲ್ಲ, ನಿಮಗೆ ಯಾರು ಹೇಳಿದ್ದು, ಇಲ್ಲಿ ಸತಿಯ ಈ ಭಾಗ ಬಿದ್ದಿಲ್ಲ, ಅದು ನಮ್ಮ ಊರಿನಲ್ಲಿ ಬಿದ್ದಿದೆ ಎಂಬ ಕೂಗು ಸಹ ಬರುವ ಅವಕಾಶಗಳು ಉಂಟು. ಇದೂವರೆಗೂ ಶ್ರಮಿಸಿರುವ ಎಲ್ಲರಿಗೂ ತಮ್ಮ ಬುದ್ಧಿಶಕ್ತಿ ಓರೆಹಚ್ಚುವ ಕೆಲಸವೂ ಆರಂಭವಾಗಲಿದೆ.

ಏಳು ದೇಶಗಳಲ್ಲಿರುವ ಶಕ್ತಿಪೀಠಗಳ ವಿವಿಧ ವರ್ಗದ ಸಮಿತಿಗಳು, ಆಯಾ ಜಿಲ್ಲಾಧಿಕಾರಿಗಳು ಮತ್ತು ಆಯಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಕೇಳುವ ಮೂಲಕ ವಿವಾದ ಹುಟ್ಟು ಹಾಕಲಾಗಿದೆಯೇನೊ ಎಂಬ ಅಂಶ ನನ್ನ ಗಮನಕ್ಕೆ ಬಂದಿದೆ.

ವಿವಿಧ ದೇಶಗಳಲ್ಲಿರುವ ಶಕ್ತಿಪೀಠಗಳ ಸಂಶೋಧಕರು, ಶಕ್ತಿಪೀಠ ಆರಾಧಕರು, ಶಕ್ತಿಪೀಠ ಪುಸ್ತಕ ಬರೆದಿರುವವರು, ಗೂಗಲ್‌ನಲ್ಲಿ ಶಕ್ತಿಪೀಠ ಮಾಹಿತಿ ಅಫ್‌ಲೋಡ್ ಮಾಡಿರುವವರು ಮತ್ತು ಶಕ್ತಿಪೀಠ ಪರಿಣಿತರ ಸಲಹೆಗಳಿಗೂ ಬಹಿರಂಗ ಆಹ್ವಾನಿಸಲಾಗುವುದು.

ಹೌದು ಸತಿಯ ದೇಹಕ್ಕೆ ವಿಷ್ಣು ಸುದರ್ಶನ ಚಕ್ರ ಬಿಟ್ಟಾಗ ಸತಿಯ ದೇಹ ಚೂರು ಚೂರಾಗಿ, 6400 ಕಡೆ ಬಿದ್ದಿದೆ, 108 ಕಡೆ ಬಿದ್ದಿದೆ, 72 ಕಡೆ ಬಿದ್ದಿದೆ. 51 ಕಡೆ ಬಿದ್ದಿದೆ ಹೀಗೆ ಹಲವಾರು ವ್ಯಾಖ್ಯಾನಗಳು ನಮ್ಮ ಕಣ್ಣುಮುಂದೆ ಇವೆ. ಅಂದಾಗ ವಾದ ವಿವಾದಗಳು ಬರುವುದು ಸಹಜವಾಗಿದೆ. ಆದಷ್ಟು ಚರ್ಚೆ ಮಾಡಿ ಅಂತಿಮ ರೂಪು ಕೊಡುವುದು ನಮ್ಮ ಶಕ್ತಿಪೀಠ ಫೌಂಡೇಷನ್ ಉದ್ದೇಶವಾಗಿದೆ.

ನಮ್ಮ ಫೌಂಡೇಷನ್‌ನ  ಗುರಿ ರಾಜ್ಯದಲ್ಲಿ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಜಾರಿಗೊಳಿಸುವುದು ಆಧ್ಯತೆಯಾಗಿದೆ. ಕಾಕತಾಳೀಯವಾಗಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಮನವಿ ಮೇರೆಗೆ, ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಆದೇಶದ ಮೇರೆಗೆ, ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಅನುಮೋದಿಸಿದ್ದಾರೆ.

ಅಷ್ಟೆ ಅಲ್ಲ ರಾಜ್ಯದ ಇತಿಹಾಸದಲ್ಲಿಯೇ ಕೇಂದ್ರ ಸರ್ಕಾರದ ನದಿ ಜೋಡಣೆ  ಯೋಜನೆಯಡಿ ಮಂಜೂರಾತಿಗಾಗಿ 3 ಯೋಜನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದೊಂದು ನಮ್ಮ ರಾಜ್ಯ ಸರ್ಕಾರದ ದಾಖಲೆಯಾಗಿರಬೇಕು. ಜೊತೆಗೆ ಇನ್ನೂ ನಾಲ್ಕು ತಿಂಗಳಲ್ಲಿ ಮತ್ತೊಂದು ನದಿ ಜೋಡಣೆ ಯೋಜನೆ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.

ನಮ್ಮ ಅಧಿಕಾರಿಗಳು ಇನ್ನೂ ಮುಂದೆ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಕುಂದರನಹಳ್ಳಿ ರಮೇಶ್ ರವರು ಬೆಂಗಳೂರಿನ ಜಲಸಂಪನ್ಮೂಲ ಇಲಾಖೆಯ ಸುತ್ತ ಸುತ್ತುವ ಹಾಗಿಲ್ಲ, ದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದ ಸುತ್ತಾ ಸುತ್ತಿ ಯೋಜನೆ ಮಂಜೂರು ಮಾಡಿಸ ಬೇಕು, ಇಲ್ಲವಾದಲ್ಲಿ ನಮ್ಮ ಕಚೇರಿಗೆ ಯಾವ ಮುಖ ಇಟ್ಟುಕೊಂಡು ಬರುತ್ತೀರಿ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ನೀವೂಇದೂವರೆಗೂ ಅಂದರೆ ಕಳೆದ 30 ವರ್ಷಗಳಿಂದ ಮಾಡಿರುವ ನಿರಂತರದ ಹೋರಾಟಕ್ಕೆ ನಾವು ಸ್ಪಂದಿಸಿದ್ದೇವೆ. ನೀವೂ ಸ್ಪಂದಿಸಬೇಕಲ್ಲವೇ, ಎಂಬ ಮಾತನ್ನು ದಿನಾಂಕ:29.01.2021  ನೇ ಶುಕ್ರವಾರ ಮಧ್ಯಾಹ್ನ ವಿಕಾಸ ಸೌಧದ 3 ನೇ ಮಹಡಿಯಲ್ಲಿ ಅಧಿಕಾರಿಗಳ ದಂಡು ವಾಕ್ ಮಾಡುತ್ತಿದ್ದ ಸಮಯದಲ್ಲಿ, ಜಲಸಂಪನ್ಮೂಲ ಇಲಾಖೆಯ ಉನ್ನತಮಟ್ಟದ ಅಧಿಕಾರಿಯವರು ನನಗೆ ಹೇಳಿದ ಮಾತು. (ಹೆಸರು ಬರೆಯಬೇಡಿ ಎಂಬ ನನ್ನ ಆತ್ಮೀಯ ಅಧಿಕಾರಿಯವರ ಸಲಹೆಯಂತೆ ಹೆಸರು ಬರೆದಿಲ್ಲ)’

ನಮ್ಮ ಶಕ್ತಿಪೀಠ ಕ್ಯಾಂಪಸ್‌ನಲ್ಲಿ ನೀರನ್ನು ಗಂಗಾಮಾತೆ’ಗೆ ಹೋಲಿಸಿ, ಗಂಗಾಮಾತೆ ಮತ್ತು ಶಕ್ತಿಪೀಠಗಳ ಸಂಬಂಧದ ನೈಜತೆಯನ್ನು ಜನತೆ ತಿಳಿಸುವ ಮೂಲಕ ನೀರೂ ಸಹ ಶಕ್ತಿದೇವತೆ-ಪೂಜಿಸಿ-ಮಿತವ್ಯಯವಾಗಿ ಬಳಸಿ’ ಎಂಬ ಸಂದೇಶ ಸಾರುವುದೇ ನಮ್ಮ ಉದ್ದೇಶವೂ ಆಗಿದೆ.

ನಾಳೆಯಿಂದಲೇ ನಮ್ಮ ಕ್ಯಾಂಪಸ್‌ನಲ್ಲಿ  ಭೂಮಿಯ ಮೇಲಿರುವ ಭಾರತ ನಕ್ಷೆಯಲ್ಲಿ ನದಿಜೋಡಣೆಯ ಪ್ರಾತ್ಯಕ್ಷಿಕೆಯನ್ನು ಭೂಮಿಗೆ ಇಳಿಸುವ ಲೈವ್ ಸಂಶೋಧನೆಯನ್ನು ಆರಂಭಿಸಲಾಗುವುದು. ನಂತರ ಯಾವ ನದಿಪಾತ್ರದಲ್ಲಿ ಯಾವ ಶಕ್ತಿದೇವತೆಯಿದೆ. ಯಾವ ನೀರು, ಯಾವ ರಾಜ್ಯದ ಜನತೆಯ/ರೈತರ ಬರವನ್ನು ನೀಗಿಸಬಹುದು ಎಂಬ ಮಾಹಿತಿಯನ್ನು ಜನತೆಗೆ ತಿಳಿಸುವುದು ನಮ್ಮ ಗುರಿಗಳಲ್ಲಿ ಒಂದಾಗಿದೆ.

ದೇಶದ ಮತ್ತು ಕರ್ನಾಟಕ ರಾಜ್ಯದ ಪ್ರತಿಯೊಂದು ಹನಿ ನೀರಿನ ಅಧ್ಯಯನಕ್ಕಾಗಿ ನಮ್ಮ ಕ್ಯಾಂಪಸ್‌ನಲ್ಲಿ  ದೇಶದ 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 37  ಜಲಶಕ್ತಿ ಭವನಗಳು ಹಾಗೂ ನಮ್ಮ ರಾಜ್ಯದ 31 ಜಿಲ್ಲೆಗಳ ನೀರಿನ ಅಧ್ಯಯನ ಮಾಡಲು ಸಹ ಇದೇ ಭವನಗಳನ್ನು ಬಳಸಲು ನಿರ್ಧರಿಸಿ ಒಟ್ಟು 37 ಭವನಗಳನ್ನು ನಿರ್ಮಿಸಲು ಉದ್ದೇಶಿಸಿಲಾಗಿದೆ. ಕ್ಯಾಂಪಸ್‌ನಲ್ಲಿ ಒಂದು ಭವನದ ಹೂಡಿಕೆಗಾಗಿ ಆಸಕ್ತರು ಸಂರ್ಕಿಸಬಹುದು.