TUMAKURU:SHAKTHIPEETA FOUNDATION
16 ನೇ ಲೋಕಸಭಾ ಅವಧಿಯಲ್ಲಿ ದಿನಾಂಕ: 27.06.2016 ರಂದು ದಿಶಾ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. 16 ನೇ ಲೋಕಸಭಾ ಅವಧಿಯ ನಾಲ್ಕು ವರ್ಷಗಳು ಮತ್ತು 17 ನೇ ಲೋಕಸಭಾ ಅವಧಿಯ ಮೊದಲನೆ ಎರಡು ವರ್ಷಗಳು ಸೇರಿ ದಿಶಾ ಅರಂಭವಾದ 6 ವರ್ಷಗಳಿಂದ ದೇಶದಲ್ಲಿ ಕರ್ನಾಟಕ ರಾಜ್ಯದ ಸಂಸದರು ನಿರಂತರವಾಗಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ದೇಶದಲ್ಲಿ ಕರ್ನಾಟಕದ ಸಂಸದರೇ ಪಸ್ಟ್ ಎಂಬುದನ್ನು ಸಾಬೀತು ಮಾಡಿದ್ದಾರೆ.
‘ಎರಡು ವರ್ಷ ಕರ್ನಾಟಕದ ಒಬ್ಬೊಬ್ಬ ಸಂಸದರು ಮೊದಲ ಸ್ಥಾನದಲ್ಲಿದ್ದರೆ, ಇನ್ನುಳಿದ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಇಬ್ಬಿಬ್ಬರು ಸಂಸದರು ಮೊದಲ ಸ್ಥಾನದಲ್ಲಿದ್ದಾರೆ. ನಿರಂತರವಾಗಿ ದೇಶದ ಯಾವುದೇ ರಾಜ್ಯಗಳು ಪ್ರಥಮ ಸ್ಥಾನಗಳಲ್ಲಿ ಇಲ್ಲ. ಆದರೇ ಕರ್ನಾಟಕ ರಾಜ್ಯದ ಸಂಸದರು ನಿರಂತರವಾಗಿ ಪ್ರಥಮ ಸ್ಥಾನ ಕಾಯ್ದುಕೊಳ್ಳುವ ಮೂಲಕ ದಾಖಲೆ ಮಾಡಿದ್ದಾರೆ’
ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯವನವರು ಹೇಳುವ ಪ್ರಕಾರ ನಮ್ಮ ಸಂಸದರು ಯಾವತ್ತೂ ಬಿಲ ಸೇರಿಲ್ಲ, ಅವರ ಬಿಲ ಹೇಳಿಕೆ ಠುಸ್ ಪಟಾಕಿ ಆಗಿದೆ. ಕೊರೊನಾ ಅನುದಾನ, ಸಲಕರಣೆ, ಉಪಕರಣ ಮತ್ತು ವಿವಿಧ ಯೋಜನೆಗಳ ಪಲಾನುಭವಿಗಳ ಆಯ್ಕೆ ಇತ್ಯಾದಿ ವಿಚಾರಗಳ ಬಗ್ಗೆ ಜಿಲ್ಲಾವಾರು ಅಧ್ಯಯನ ಆರಂಭಿಸಿದ್ದೇನೆ. ಎಲ್ಲಾ ಮಾಹಿತಿ ಸಂಗ್ರಹಿಸದ ನಂತರ ನಮ್ಮ ಸಂಸದರ ಪಾತ್ರಗಳ ಬಗ್ಗೆ ನೋಡೋಣ?
’16 ನೇ ಲೋಕಸಭಾ ಅವಧಿಯಲ್ಲಿ ಮಾಜಿ ಸಂಸದರಾದ ಶ್ರೀ ಆರ್. ಧೃವನಾರಾಯಣರವರು, ಶ್ರೀ ಎಂ.ವೀರಪ್ಪಮೊಯ್ಲಿರವರು, ಶ್ರೀ ಹೆಚ್.ಡಿ.ದೇವೇಗೌಡರವರು, ಹಾಲಿ ಸಂಸದರಾದ ಶ್ರೀ ಡಿ.ಕೆ.ಸುರೇಶ್‌ರವರು, ಮತ್ತು 17 ನೇ ಲೋಕಸಭಾ ಅವಧಿಯಲ್ಲಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ಶ್ರೀ ಮುನಿಸ್ವಾಮಿರವರು ಮತ್ತು ಶ್ರೀಮತಿ ಸುಮಲಥಾ ಅಂಬರೀಶ್‌ರವರು ಭಾರತ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ದಿಶಾ ಸಮಿತಿ ಸಭೆ ನಡೆಸುವ ಮೂಲಕ ವಿವಿಧ ವರ್ಷಗಳ ಮೊದಲ ಸ್ಥಾನಗಳಲ್ಲಿ ಒಬ್ಬೊಬ್ಬರಾಗಿದ್ದಾರೆ.’
2015-16 ರಲ್ಲಿ ಭಾರತ ದೇಶದಲ್ಲಿ ಒಟ್ಟು 10 ಜಿಲ್ಲೆಗಳಲ್ಲಿ 15 ದಿಶಾ ಸಮಿತಿ ಸಭೆ ನಡೆದಿದ್ದು, ಕೇವಲ 2 ಜಿಲ್ಲೆಗಳಲ್ಲಿ ಮಾತ್ರ ಅತ್ಯಂತ ಹೆಚ್ಚಿನ 3 ಸಭೆಗಳು ನಡೆದಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ, ಚಾಮರಾಜನಗರ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಆರ್. ಧೃವನಾರಾಯಣರವರು 3 ಸಭೆಗಳನ್ನು ಮಾಡುವ ಮೂಲಕ ದೇಶದ ಮೊದಲ 2 ಜಿಲ್ಲೆಗಳಲ್ಲಿ ಒಬ್ಬರಾಗಿದ್ದಾರೆ.
2016-17 ರಲ್ಲಿ ಭಾರತ ದೇಶದಲ್ಲಿ ಒಟ್ಟು 484 ಜಿಲ್ಲೆಗಳಲ್ಲಿ 853 ದಿಶಾ ಸಮಿತಿ ಸಭೆ ನಡೆದಿದ್ದು, ಕೇವಲ 3 ಜಿಲ್ಲೆಗಳಲ್ಲಿ ಮಾತ್ರ ಅತ್ಯಂತ ಹೆಚ್ಚಿನ 4 ಸಭೆಗಳು ನಡೆದಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ, ಚಿಕ್ಕಬಳ್ಳಾಪುರ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಎಂ.ವೀರಪ್ಪಮೊಯ್ಲಿರವರು 4 ಸಭೆಗಳನ್ನು ಮಾಡುವ ಮೂಲಕ ದೇಶದ ಮೊದಲ 3 ಜಿಲ್ಲೆಗಳಲ್ಲಿ ಒಬ್ಬರಾಗಿದ್ದಾರೆ.
2017-18 ರಲ್ಲಿ ಭಾರತ ದೇಶದಲ್ಲಿ ಒಟ್ಟು 443 ಜಿಲ್ಲೆಗಳಲ್ಲಿ 821 ದಿಶಾ ಸಮಿತಿ ಸಭೆ ನಡೆದಿದ್ದು, ಕೇವಲ 15 ಜಿಲ್ಲೆಗಳಲ್ಲಿ ಮಾತ್ರ ಅತ್ಯಂತ ಹೆಚ್ಚಿನ 4 ಸಭೆಗಳು ನಡೆದಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್.ಡಿ.ದೇವೇಗೌಡರವರು ಮತ್ತು ಚಾಮರಾಜನಗರ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಆರ್. ಧೃವನಾರಾಯಣರವರು ತಲಾ 4 ಸಭೆಗಳನ್ನು ಮಾಡುವ ಮೂಲಕ ದೇಶದ ಮೊದಲ 15 ಜಿಲ್ಲೆಗಳಲ್ಲಿ ಒಬೊಬ್ಬರಾಗಿದ್ದಾರೆ.
2018-19 ರಲ್ಲಿ ಭಾರತ ದೇಶದಲ್ಲಿ ಒಟ್ಟು 405 ಜಿಲ್ಲೆಗಳಲ್ಲಿ 683 ದಿಶಾ ಸಮಿತಿ ಸಭೆ ನಡೆದಿದ್ದು, ಕೇವಲ 14 ಜಿಲ್ಲೆಗಳಲ್ಲಿ ಮಾತ್ರ ಅತ್ಯಂತ ಹೆಚ್ಚಿನ 4 ಸಭೆಗಳು ನಡೆದಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ, ರಾಮನಗರ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಡಿ.ಕೆ.ಸುರೇಶ್‌ರವರು ಮತ್ತು ಚಾಮರಾಜನಗರ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಆರ್. ಧೃವನಾರಾಯಣರವರು ತಲಾ 4 ಸಭೆಗಳನ್ನು ಮಾಡುವ ಮೂಲಕ ದೇಶದ ಮೊದಲ 15 ಜಿಲ್ಲೆಗಳಲ್ಲಿ ಒಬೊಬ್ಬರಾಗಿದ್ದಾರೆ.
17 ನೇ ಲೋಕಸಭಾ ಅವಧಿ. ದಿಶಾ ಸಮಿತಿಯನ್ನು ಕೇಂದ್ರ ಸರ್ಕಾರ ಆಗಸ್ಟ್-ಸೆಪ್ಪೆಂಬರ್ ತಿಂಗಳಲ್ಲಿ ರಚಿಸಿದೆ.
2019-20 ರಲ್ಲಿ ಭಾರತ ದೇಶದಲ್ಲಿ ಒಟ್ಟು 365 ಜಿಲ್ಲೆಗಳಲ್ಲಿ 461 ದಿಶಾ ಸಮಿತಿ ಸಭೆ ನಡೆದಿದ್ದು, ಕೇವಲ 11 ಜಿಲ್ಲೆಗಳಲ್ಲಿ ಮಾತ್ರ ಅತ್ಯಂತ ಹೆಚ್ಚಿನ 3 ಸಭೆಗಳು ನಡೆದಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಕೋಲಾರ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಮುನಿಸ್ವಾಮಿರವರು ತಲಾ 3 ಸಭೆಗಳನ್ನು ಮಾಡುವ ಮೂಲಕ ದೇಶದ ಮೊದಲ 11 ಜಿಲ್ಲೆಗಳಲ್ಲಿ ಒಬೊಬ್ಬರಾಗಿದ್ದಾರೆ.
2020-21 ರಲ್ಲಿ ಭಾರತ ದೇಶದಲ್ಲಿ ಒಟ್ಟು 440 ಜಿಲ್ಲೆಗಳಲ್ಲಿ 644 ದಿಶಾ ಸಮಿತಿ ಸಭೆ ನಡೆದಿದ್ದು, ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಅತ್ಯಂತ ಹೆಚ್ಚಿನ 4 ಸಭೆಗಳು ನಡೆದಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಮಂಡ್ಯ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸುಮಲಥಾ ಅಂಬರೀಶ್‌ರವರು ತಲಾ 4 ಸಭೆಗಳನ್ನು ಮಾಡುವ ಮೂಲಕ ದೇಶದ ಮೊದಲ 6 ಜಿಲ್ಲೆಗಳಲ್ಲಿ ಒಬೊಬ್ಬರಾಗಿದ್ದಾರೆ.
ಕುಂದರನಹಳ್ಳಿ ರಮೇಶ್
ತುಮಕೂರು ಜಿಲ್ಲಾ ಮಟ್ಟದ ಮತ್ತು ಕರ್ನಾಟಕ ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ.