29th March 2024
Share

TUMAKURU:SHAKTHIPEETA FOUNDATION

ಮೈಸೂರಿನ ಲೋಕಸಭಾ ಸದಸ್ಯರಾದ ಶ್ರೀ ಪ್ರತಾಪ್ ಸಿಂಹರವರು ಮೈಸೂರು ಜಿಲ್ಲೆ ಮತ್ತು ಕೊಡಗು ಜಿಲ್ಲೆ ಎರಡು ಜಿಲ್ಲೆಗಳ ದಿಶಾ ಸಮಿತಿ ಅಧ್ಯಕ್ಷರು. ಸಂವಿಧಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆ ಇಲ್ಲವಂತೆ. ಆದರೇ ಕೇಂದ್ರ ಸರ್ಕಾರ ಅಧಿಕೃತವಾಗಿ ಮಾಡಿರುವ ‘ದಿಶಾ ಸಮಿತಿಯ ಪವರ್ ಪ್ರತಾಪ್ ಸಿಂಹರವರಿಗೆ ತಿಳಿದಿಲ್ಲವೇನೋ ಅನ್ನಿಸುತ್ತಿದೆ’

ಬೀದಿಯಲ್ಲಿನಿಂತು ಜಿಲ್ಲಾಧಿಕಾರಿಗಳೇ ಲೆಕ್ಕಕೊಡಿ ಅಂದರೆ ಇವರೇನು ಸಾಮಾನ್ಯ ಪ್ರಜೆಯೇ? ಇವರ ಅಧ್ಯಕ್ಷತೆಯಲ್ಲಿನ ದಿಶಾ ಸಮಿತಿಯಲ್ಲಿ ಜಿಲ್ಲಾಧಿಕಾರಿ ಒಬ್ಬರು ಸದಸ್ಯರು, ಕೇಂದ್ರ ಸರ್ಕಾರದ ಒಂದೊಂದು ರೂಪಾಯಿ ಲೆಕ್ಕ ಕೊಡುವ ಜವಾಬ್ಧಾರಿಯನ್ನು ಸಂಸದರಿಗೆ ಮೋದಿಯವರು ನೀಡಿದ್ದಾರೆ, ಇವರು ದಿಶಾ ಸಮಿತಿಯ ಒಬ್ಬ ಸದಸ್ಯರನ್ನು ಲೆಕ್ಕಕೊಡಿ ಎಂದು ಕೇಳುವುದು ಒಂದು ದುರಂತವಲ್ಲವೇ?’

ಪ್ರಧಾನಿ ಶ್ರೀ ನರೇಂದ್ರಮೋದಿಯವರು ದಿನಾಂಕ:26.06.2016 ರಂದು ದಿಶಾ ಸಮಿತಿ ರಚಿಸಿದ್ದಾರೆ. ಅಂದಿನಿಂದಲೂ ಪ್ರತಾಪಸಿಂಹರವರು ದಿಶಾ ಸಮಿತಿಯ ಎರಡು ಜಿಲ್ಲೆಗಳ ಅಧ್ಯಕ್ಷರು. ಇವರು ಎಷ್ಟು ಸಭೆ ಮಾಡಿದ್ದಾರೆ, ಗಮನಿಸಿ.

  1. 2015-16 ರಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಮಟ್ಟದ ದಿಶಾ ಸಮಿತಿಯ ತಲಾ 4 ಸಭೆಗಳನ್ನು ಮಾಡಬೇಕಿತ್ತು, ಇವರು ಮಾಡಿರುವುದು ಕೇವಲ ಶೂನ್ಯ.
  2. 2016-17 ರಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಮಟ್ಟದ ದಿಶಾ ಸಮಿತಿಯ ತಲಾ 4 ಸಭೆಗಳನ್ನು ಮಾಡಬೇಕಿತ್ತು, ಇವರು ಮಾಡಿರುವುದು ಕೇವಲ ತಲಾ ಎರಡು ಸಭೆಗಳು.
  3. 2017-18 ರಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಮಟ್ಟದ ದಿಶಾ ಸಮಿತಿಯ ತಲಾ 4 ಸಭೆಗಳನ್ನು ಮಾಡಬೇಕಿತ್ತು, ಇವರು ಮಾಡಿರುವುದು ಕೇವಲ ತಲಾ ಮೂರು ಸಭೆಗಳು.
  4. 2018-19 ರಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಮಟ್ಟದ ದಿಶಾ ಸಮಿತಿಯ ತಲಾ 4 ಸಭೆಗಳನ್ನು ಮಾಡಬೇಕಿತ್ತು, ಇವರು ಮಾಡಿರುವುದು ಕೇವಲ ತಲಾ ಎರಡು ಸಭೆಗಳು.
  5. 2019-20 ರಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಮಟ್ಟದ ದಿಶಾ ಸಮಿತಿಯ ತಲಾ 3 ಸಭೆಗಳನ್ನು ಮಾಡಬೇಕಿತ್ತು, ಇವರು ಮಾಡಿರುವುದು ಕೇವಲ ತಲಾ ಒಂದು ಸಭೆಗಳು.
  6. 2020-21 ರಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಮಟ್ಟದ ದಿಶಾ ಸಮಿತಿಯ ತಲಾ 4 ಸಭೆಗಳನ್ನು ಮಾಡಬೇಕಿತ್ತು, ಇವರು ಮಾಡಿರುವುದು ಕೇವಲ ತಲಾ ಮೂರು ಸಭೆಗಳು.
  7. 2021-22 ರಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಮಟ್ಟದ ದಿಶಾ ಸಮಿತಿಯ ತಲಾ 1 ಸಭೆಗಳನ್ನು ಈ ವೇಳೆಗೆ ಮಾಡಬೇಕಿತ್ತು, ಇವರು ಇನ್ನೂ ಸಭೆ ಮಾಡಿಲ್ಲ.

ಈವರೆಗೆಅವರು ಮೈಸೂರು ಮತ್ತು ಕೊಡಗು ಜಿಲ್ಲಾ ಮಟ್ಟದ ದಿಶಾ ಸಮಿತಿಯ ತಲಾ 24 ಸಭೆಗಳನ್ನು ಮಾಡಬೇಕಿತ್ತು, ಅವರು ಈವರೆಗೆ ಮಾಡಿರುವ ದಿಶಾ ಸಮಿತಿ ಸಭೆಗಳು ತಲಾ 11 ಮಾತ್ರ ಇನ್ನೂ ತಲಾ 13 ಸಭೆಗಳನ್ನೇ ಮಾಡಿಲ್ಲ’

ಈ ಸಭೆಗಳಲ್ಲಿ ಯಾವುದೇ ಇಲಾಖೆಯ, ಯಾವುದೇ  ಕೇಂದ್ರ ಸರ್ಕಾರದ ಯೋಜನೆಯ ಪ್ರಗತಿ ಬಗ್ಗೆ ಚರ್ಚಿಸ ಬೇಕಿತ್ತು. ವಾರ್ಷಿಕ ಎಲ್ಲಾ ಇಲಾಖೆಗಳಿಂದ ಎಷ್ಟು ಮೊತ್ತ ಕೇಂದ್ರ ಸರ್ಕಾರದಿಂದ ಬಂದಿದೆ, ಎಷ್ಟು ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ಪ್ರತಿ ವರ್ಷ ಸಾರ್ವಜನಿಕರಿಗೆ ತಿಳಿಸಬೇಕಿತ್ತು. ದುರುಪಯೋಗ ಅಥವಾ ತಪ್ಪು ಮಾಡಿದ್ದರೇ ಶಿಕ್ಷೆಗೆ ನಿರ್ಣಯ ಮಾಡಬಹುದಿತ್ತು.

ಮೈಸೂರು ಮತ್ತು ಕೊಡಗು ಎರಡು ಜಿಲ್ಲೆಗಳಿಗೆ ಕೊರೊನಾಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಬಂದಿರುವ ಅನುದಾನ, ಸಲಕರಣೆ, ಉಪಕರಣ, ಲಸಿಕೆ ಮತ್ತು ಆತ್ಮನಿರ್ಭರ ಯೋಜನೆಗಳ ಪ್ರಗತಿಯನ್ನು ಪರಿಶೀಲನೆ ಮಾಡಿ, ಎರಡು ಜಿಲ್ಲೆಗಳ ಲೆಕ್ಕ ನೀಡ ಬೇಕಿತ್ತು.

‘ಇವರೇ ಕೇಂದ್ರದ ಅನುದಾನದ ಲೆಕ್ಕ ನೀಡುವ ಯಜಮಾನರು’. ಇವರು ಲೆಕ್ಕ ನೀಡದೇ ಒಬ್ಬ ಸದಸ್ಯರಾದ ಜಿಲ್ಲಾಧಿಕಾರಿಗಳನ್ನು ಲೆಕ್ಕ ಕೇಳುವುದು ಎಷ್ಟು ಸರಿ. ಇದು ಮೋದಿಯವರಿಗೆ ಮಾಡುವ ಅಪಮಾನ, ಸಂವಿಧಾನಕ್ಕೆ ಮಾಡುವ ಅಪಮಾನ’ ದಯವಿಟ್ಟು ನಿಮ್ಮ ಅಧಿಕಾರ ಬಳಸಿಕೊಂಡು ಕೇಂದ್ರ ಸರ್ಕಾರದ ಪ್ರತಿ ಒಂದೊಂದು ಪೈಸೆ ಲೆಕ್ಕಕೊಡಿ ಸ್ವಾಮಿ, ಇದು ಎರಡು ಜಿಲ್ಲೆಗಳ ಜನತೆಯ ಕೂಗು ಆಗಬೇಕಿತ್ತು. ‘ಮತದಾರ ಪ್ರಭುಗಳು ಏಕೋ ಎನೋ ಲೆಕ್ಕ ಕೇಳಿದ ಹಾಗೆ ಕಾಣಿಸಲಿಲ್ಲ’