TUMAKURU:SHAKTHIPEETA FOUNDATION
ಬೆಂಗಳೂರು ನಗರ ಜಿಲ್ಲೆಯ ದಿಶಾ ಸಮಿತಿ ಅಧ್ಯಕ್ಷರಾಗಿ ಬೆಂಗಳೂರು ಉತ್ತರ ಲೋಕಸಭಾ ಸದಸ್ಯರಾದ ಹಾಗೂ ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದ್ಗೌಡರವರು, ಉಪಾಧ್ಯಾಕ್ಷರಾಗಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಸದಸ್ಯರಾದ ಶ್ರೀ ಪಿ.ಸಿ.ಮೋಹನ್ರವರು, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿಸೂರ್ಯರವರು, ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರಾದ ಶ್ರೀ ಬಿ.ಎನ್.ಬಚ್ಚೇಗೌಡರವರು ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಶ್ರೀ ಡಿ.ಕೆ.ಸುರೇಶ್ರವರನ್ನು ಕೇಂದ್ರ ಸರ್ಕಾರ ನೇಮಿಸಿದೆ.
2019-20 ರಲ್ಲಿ 3 ದಿಶಾ ಸಭೆಗಳನ್ನು ಮಾಡಬೇಕಿತ್ತು, ಆದರೇ ಕೇವಲ ಒಂದು ದಿಶಾ ಸಭೆ ಮಾಡಿದ್ದಾರೆ, 2020-21 ನೇ ಸಾಲಿನಲ್ಲಿ 4 ದಿಶಾ ಸಭೆಗಳನ್ನು ಮಾಡಬೇಕಿತ್ತು, ಒಂದೇ ಒಂದು ಸಭೆಯನ್ನು ಮಾಡಿಲ್ಲ. 2021-22 ರಲ್ಲಿ ಈವರೆಗೆ ಒಂದು ದಿಶಾ ಸಭೆಯನ್ನು ಮಾಡಬೇಕಿತ್ತು ಅದನ್ನು ಮಾಡಿಲ್ಲ. 17 ನೇ ಲೋಕಸಭಾ ಅವಧಿಯಲ್ಲಿ 8 ಸಭೆಗಳನ್ನು ಮಾಡಬೇಕಾಗಿದ್ದರೂ ಕೇವಲ ಒಂದು ಸಭೆ ಮಾಡಿದ್ದೀರಿ.
ಬೆಂಗಳೂರು ವಿಶ್ವದ ಗಮನ ಸೆಳೆದಿರುವ ಐಟಿ-ಬಿಟಿ ನಗರ, ಕೇಂದ್ರ ಸರ್ಕಾರದಿಂದ ನಡೆಯುತ್ತಿರುವ ಯೋಜನೆಗಳ ಬಗ್ಗೆ ಚರ್ಚಿಸಲು ಇವರು 5 ಜನಕ್ಕೂ ಸಮಯವಿಲ್ಲವೇ? ಕೊರೊನಾ ನಗರದಲ್ಲಿ ಅಬ್ಬರಿಸುತ್ತಿದೆ, ಕೇಂದ್ರ ಸರ್ಕಾರ ನೀಡಿರುವ ವೆಂಟಿಲೇಟರ್ಗಳನ್ನೇ ಬಳಸಿಲ್ಲ ಎಂಬ ದೂರುಗಳು ಇವೆ. ಸ್ವತಃ ಪ್ರಧಾನಿಯವರೇ ಆಡಿಟ್ ಮಾಡಲು ಘೋಷಣೆ ಮಾಡಿದ್ದಾರೆ. ನಿಮಗೆ ಪ್ರಧಾನಿಯವರು ನೀಡಿರುವ ಜವಾಬ್ಧಾರಿಯಿಂದ ಏಕೆ ದೂರವಿದ್ದೀರಿ?
ಶ್ರೀ ತೇಜಸ್ವಿಸೂರ್ಯರವರೇ ನೀವೂ ಟೆಕ್ನಲಾಜಿ ಬಲ್ಲವರೂ ಕೇಂದ್ರದಿಂದ ಬಿಡುಗಡೆಯಾದ ಒಂದು ರೂಪಾಯಿ ಸಹ ಎಲ್ಲಿ ಹೇಗೆ ಖರ್ಚಾಗಿದೆ ಎಂಬ ಡಿಜಿಟಲ್ ಲೆಕ್ಕ ಇಡಬೇಕಾದವರೂ, ನನಗೆ ಅಧಿಕಾರಿಗಳು ಮಾಹಿತಿಯನ್ನೆ ನೀಡಲಿಲ್ಲ ಎಂದರೆ ಹೇಗೆ. ಸಭೆ ಮಾಡಿ ಕುಳಿತಲ್ಲಿಗೆ ಮಾಹಿತಿ ತರಿಸಲು ನಿಮಗೆ ಅಧಿಕಾರ ನೀಡಿದ್ದರೂ ಸಾರ್ವಜನಿಕರಂತೆ ಮಾತನಾಡುವುದು ಶೋಭೆ ತರುವುದಿಲ್ಲ.
ಬೆರಳ ತುದಿಯಲ್ಲಿ ಕೇಂದ್ರದ ಅನುದಾನದ ಅಭಿವೃದ್ಧಿ ಟ್ರ್ಯಾಕಿಂಗ್ ಡಿಜಿಲೈಸ್ ಮಾಡುವ ಮೂಲಕ, ದೇಶಕ್ಕೆ ಮಾದರಿಯಾಗುವ ಕೆಲಸವನ್ನು ತಾವು ಮಾಡುವ ಶಕ್ತಿ ಇರುವವರು. ಕೇಂದ್ರದ ಮಲತಾಯಿ ಧೋರಣೆಗೆ ಇದೇ ಉತ್ತರ. ಪಾರದರ್ಶಕತೆ ಇಲ್ಲದೇ ಇದ್ದಲ್ಲಿ, ಬಾಷಣಕ್ಕೆ ತೃಪ್ತಿ ಪಡಲು ಆಗುವುದಿಲ್ಲ. ಮೋದಿಯವರು ಕೇಂದ್ರದ ಅಂಕಿ ಅಂಶಗಳನ್ನು ಬೆರಳ ತುದಿಯಲ್ಲಿ ಇಟ್ಟಿರುತ್ತಾರೆ. ನಿಮ್ಮ ಕ್ಷೇತ್ರಗಳ ಲೆಕ್ಕವನ್ನು ಬೆರಳ ತುದಿಯಲ್ಲಿ ಇಡಲು ನಿಮಗೆಲ್ಲರಿಗೂ ಏನು ತೊಂದರೆ ಎಂಬುದೇ ಅರ್ಥವಾಗುತ್ತಿಲ.