26th April 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ 2014 ರಿಂದ 2024 ರವರೆಗೆ ಕಾಲ ಮಿತಿ ನಿಗದಿಗೊಳಿಸಿರುವ ಯೋಜನೆಗಳ ವಾಸ್ತವಾಂಶವಗಳ ಬಗ್ಗೆ ಆಯಾ ಇಲಾಖೆಗಳು ಕೂಡಲೇ ವೆಬ್ ಸೈಟ್ ಗೆ ಅಫ್ ಲೋಡ್ ಮಾಡುವ ಮೂಲಕ ದಿಶಾ ಪೋರ್ಟಲ್ ಗೆ ಚಾಲನೆ ನೀಡಲು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಮಹತ್ವದ ನಿರ್ಧಾರ ಮಾಡಿದೆ.

 ದಿನಾಂಕ:29.06.2021 ರಂದು ನಡೆಯುವ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಅಧಿಕೃತವಾಗಿ ದಿಶಾ ವೆಬ್‍ಸೈಟ್ ಆರಂಭಿಸುವ ಹಿನ್ನೆಲೆಯಲ್ಲಿ ದಿಶಾ ಸಮಿತಿ ಕಾರ್ಯದರ್ಶಿರವರು ಹಾಗೂ ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ರವರಾದ  ಶ್ರೀಮತಿ ಕೆ.ವಿದ್ಯಾಕುಮಾರಿಯವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಕೇಂದ್ರ ಸರ್ಕಾರ ದಿಶಾ ಡ್ಯಾಷ್ ಬೋರ್ಡ್‍ಗೆ ಮಾಹಿತಿ ಅಫ್ ಲೋಡ್ ಮಾಡಲು ಪ್ರತಿಯೊಂದು ಇಲಾಖೆಯ ಅಧಿಕಾರಿ ಮತ್ತು ಹೆಸರು ಸಹಿತ ಮೊಬೈಲ್ ನಂಬರ್ ಗಳೊಂದಿಗೆ ಪಟ್ಟಿ ನೀಡಲು ಪತ್ರ ಬರೆದು ವರ್ಷಗಳೇ ಆಗಿವೆ ಇನ್ನೂ ಪಟ್ಟಿ ಮಾಡಿಲ್ಲ. ಈಗ ಜಿಲ್ಲಾ ಮಟ್ಟದ ದಿಶಾ ಡ್ಯಾಷ್ ಬೋರ್ಡ್‍ಗೆ ಪ್ರತಿಯೊಂದು ಇಲಾಖೆಯವರು ಅಫ್ ಲೋಡ್ ಮಾಡಲು ಲಾಗಿನ್ ಪಾಸ್‍ವಾರ್ಡ್ ನೀಡುವುದರಿಂದ, ಆಯಾ ಇಲಾಖೆಯಲ್ಲಿಯೇ ಮಾಹಿತಿ ಅಫ್ ಲೋಡ್ ಮಾಡುವ ಬಗ್ಗೆ ಮತ್ತು ಇಲಾಖಾವಾರು ಕೇಂದ್ರ ಸರ್ಕಾರದ ಯೋಜನೆಗಳ ಪಟ್ಟಿಯನ್ನು ಮಾಡುವ ಮೂಲಕ ವೆಬ್‍ಸೈಟ್ ಡೆವಲಪ್ ಮಾಡಲು ಸಹಕರಿಸಲು ಒಂದು ಕಾರ್ಯಾಗಾರವನ್ನು ಏರ್ಪಡಿಸಲು ಚರ್ಚಿಸಲಾಯಿತು.

ಮುಂದಿನ ದಿಶಾ ಸಮಿತಿ ಸಭೆಗೆ ಬರುವ ಅಧಿಕಾರಿಗಳು ಕಡ್ಡಾಯವಾಗಿ ಕೆಳಕಂಡ ಮಾಹಿತಿಯೊಂದಿಗೆ ಬರಲು ಅಧಿಕಾರಿಗಳಿಗೆ ಸೂಚಿಸಲು ಚಿಂತನೆ ನಡೆಸಲಾಯಿತು.

  1. ಆಯಾ ಇಲಾಖಾವಾರು ಕೇಂದ್ರ ಸರ್ಕಾರದ ಯೋಜನೆಗಳ ಪಟ್ಟಿ.
  2. ಜಿಲ್ಲಾ ಮಟ್ಟದ ದಿಶಾ ಡ್ಯಾಷ್ ಬೋರ್ಡ್‍ಗೆ ಲಾಗಿನ್ ಪಾಸ್‍ವಾರ್ಡ್ ಪಡೆದು ಮಾಹಿತಿ ಅಫ್ ಲೋಡ್ ಮಾಡುವವರ ಪದನಾಮ, ಹೆಸರು, ದೂರವಾಣಿ, ಭಾವಚಿತ್ರಗಳು.
  3. ಕಾರ್ಯಾಗಾರಕ್ಕೆ ಇಲಾಖಾವಾರು ಒಬ್ಬರು ಅಥವಾ ಇಬ್ಬರು ಭಾಗವಹಿಸುವ  ಪಟ್ಟಿ ನೀಡುವುದು.

ಈ ವೇಳೆ ಡಿಎಸ್-2 ಶ್ರೀ ರಮೇಶ್ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಇ ಶ್ರೀ ಮುತ್ತಪ್ಪ ಇದ್ದರು ಚರ್ಚೆ ಸಕಾರಾತ್ಮಕವಾಗಿ ಇತ್ತು.