22nd November 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಹಾಲಿ ಇರುವ ಗಿಡಗಳ ಜಾತಿ, ಹೊಸದಾಗಿ ಹಾಕುವ ಎಲ್ಲಾ ಔಷಧಿ ಗಿUಡಗಳ ಡಿಜಿಟಲ್ ಡೇಟಾ ಸಂಗ್ರಹಿಸಲು ಸಮಾಲೋಚನೆ ನಡೆಯಿತು.

ಸುಮಾರು 35 ದೇಶ ವಿದೇಶಗಳಲ್ಲಿ ಪ್ರವಾಸ ಮಾಡಿ ಹಲವಾರು ಸಂಶೋಧನೆ ಮಾಡಿರುವ ಕಲ್ಬುರ್ಗಿ ಜಿಲ್ಲೆಯ ಶ್ರೀ ಪ್ರಭಾಕರ್ ರವರು ಭೂಮಿಯಲ್ಲಿ ಯಾವ ಗಿಡ ಹಾಕಲು ಇಲ್ಲಿನ ಮಣ್ಣು, ತೇವಾಂಶ ಇತರೆ ಅಂಶಗಳು ಪೂರಕವಾಗಿವೆ ಎಂಬ ಬಗ್ಗೆ ಸಂಶೋಧನೆ ಮಾಡಿ ಒಂದು ಆಪ್ ಗೆ ಚಾಲನೆ ನೀಡುವ  ಹಂತದಲ್ಲಿದ್ದಾರೆ.

ಪ್ರಾಯೋಗಿಕವಾಗಿ ಶಕ್ತಿಪಿಠ ಕ್ಯಾಂಪಸ್ ನಲ್ಲಿ ಹಾಕಿ ತಾಜಾ ಡಿಜಿಟಲ್ ಮಾಹಿತಿ ನೀಡಲಾಗುವುದು. ಜೊತೆಗೆ ಇಲ್ಲಿನ ಪ್ರತಿಯೊಂದು ಗಿಡಗಳು ಎಷ್ಟು ಆಕ್ಸಿಜನ್ ಬಿಡುಗಡೆ ಮಾಡಲು ಶಕ್ತಿ ಇದೆ. ಯಾವ ಗಿಡ ಯಾವ ರೋಗಕ್ಕೆ ಯಾವ ರೀತಿ ಉಪಯೋಗ ಎಂಬ ಬಗ್ಗೆಯೂ ಡಿಜಿಟಲ್ ಮಾಹಿತಿ ಸಂಗ್ರಹಣೆ ಮಾಡಲಾಗುವುದು.

ದೇಶದ ಎಲ್ಲಾ ರಾಜ್ಯಗಳಿಂದ ಆಯಾ ರಾಜ್ಯದಲ್ಲಿ ಫೇಮಸ್ ಆಗಿರುವ ಗಿಡಗಳ ಸಂಗ್ರಹಣೆ ಮಾಡಿ ಶಕ್ತಿಪೀಠ ಕ್ಯಾಂಪಸ್ ನಲ್ಲಿ ತಂದು ಹಾಕಿ ಶಕ್ತಿದೇವತೆಗೆ ನನ್ನ ಅಳಿಲು ಸೇವೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಪ್ರತಾಪ್ ಹಾಜರಿದ್ದರು.