29th March 2024
Share

TUMAKURU:SHAKTHI PEETA FOUNDATION

ಸುಮಾರು ವರ್ಷಗಳ ಹಿಂದೆ ಗುಬ್ಬಿ ತಾಲ್ಲೂಕು ಅದಲಗೆರೆ ಜನರು ಪ್ಲೇ ಕಾರ್ಡ್ ಹಿಡಿದು ನ್ಯಾಯ ಕೊಡಿ ಎಂದು ನಮ್ಮೂರಿನ ಮುಂಬಾಗದಿಂದ ಬಿ.ಹೆಚ್.ರಸ್ತೆ ವರೆಗೆ ಪ್ರತಿಭಟನೆ ಮಾಡುತ್ತಿದ್ದ ಜನರ ಗುಂಪು ನಮ್ಮ ಕಣ್ಣು ಮುಂದಿದೆ.

ಅದಲಗೆರೆಯವರ ಬೇಡಿಕೆಗೆ ವಿರುಧ್ಧವಾಗಿ  ಮಾಜಿ ಸಚಿವರಾದ ದಿ. ಸಾಗರನಹಳ್ಳಿ ರೇವಣ್ಣನವರು ಮತ್ತು ಇತರರು ನ್ಯಾಯಾಲಯಕ್ಕೆ ಹೋಗಿದ್ದರಂತೆ, ಕೊನೆಗೆ ಸಿದ್ಧಗಂಗಾ ಶ್ರೀಗಳಾದ ಡಾ! ಶಿವಕುಮಾರ ಮಹಾ ಸ್ವಾಮಿಗಳು ನ್ಯಾಯ ಮಾಡಿ ರಸ್ತೆಗೆ ಭೂ ಸ್ವಾಧಿನ ಮಾಡಿಸಿದ್ದು ಇತಿಹಾಸ. ನಾವಿನ್ನೂ ಪ್ರೈಮರಿಯಲ್ಲಿ ಓದುತ್ತಿದ್ದೇವು.

ನಂತರ ಬಿ.ಹೆಚ್.ರಸ್ತೆ ಕುಂದರನಹಳ್ಳಿ ಗೇಟ್ ನಿಂದ ಕುಂದರನಹಳ್ಳಿ ವರೆಗೆ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ರಸ್ತೆ ಅಭಿವೃದ್ಧಿಗೆ ಹಣ ನೀಡಿದಾಗ ಮತ್ತೆ ಕೆಲವರು ನ್ಯಾಯಾಲಯಕ್ಕೆ ಹೋದರು. ಅವರ ಪ್ರಕಾರ ಕೇವಲ 3-4 ಜನರ ಸುಮಾರು 30 ಮೀಟರ್ ಗಿಂತ ಉದ್ದದ ರಸ್ತೆಯ  ಆಸ್ತಿ ಭೂಸ್ವಾಧೀನ ವಾಗಿರಲಿಲ್ಲ  ಮಾಡಿ ರಸ್ತೆ ಮಾಡಿ ಎಂಬುದಾಗಿತ್ತು.

ಬಹುಷಃ ಒಂದು ಹಳ್ಳಿಯಲ್ಲಿ 144 ಸೆಕ್ಷನ್ ಮಾದರಿಯಲ್ಲಿ ಕೇವಲ 100 ಮೀಟರ್ ರಸ್ತೆ ಮಾಡಿದ್ದು ಇತಿಹಾಸ. ಆಗಿನ ತುಮಕೂರು ಉಪವಿಭಾಗಾಧಿಕಾರಿ ಆಗಿದ್ದ ಶ್ರೀ ರವಿಕುಮಾರ್ ರವರ ನಿರ್ಧಾರ ನಿಜಕ್ಕೂ ಮೆಚ್ಚುವಂತಿತ್ತು. ಸುಮಾರು ಆರು ತಿಂಗಳ ಹಿಂದೆ ರವಿಕುಮಾರ್‍ರವರು ಮತ್ತು ನನ್ನ ಸ್ನೇಹಿತರು ನಮ್ಮ ಊರಿನ ಮೇಲೆ ಹೋಗುವಾಗ ಇದು ಕುಂದರನಹಳ್ಳಿ ರಮೇಶ್ ರವರು ಊರು ಎಂದು ಹೇಳಿದರಂತೆ. ಆಗ ರವಿಕುಮಾರ್ ಈ ಊರಿಗೆ ರಸ್ತೆ ಮಾಡಿಸಿದ್ದು ನಾನು ರಮೇಶ್ ರವರನ್ನು ಕೇಳಿ ಎಂದರಂತೆ. ನೋಡಿ  ಅಧಿಕಾರಿಗಳಿಗೆ ಎಷ್ಟು ಹೆಮ್ಮೆ.

ಮತ್ತೆ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಮಾಜಿ ಮುಖ್ಯ ಮಂತ್ರಿಯವರಾದ ದಿ.ದರ್ಮಸಿಂಗ್ ರವರು ಮತ್ತು ಅವರ ಓಎಸ್‍ಡಿ ಹನುಂತರಾವ್ ಅವರ ಕೃಪೆಯಿಂದ ನಬಾರ್ಡ್ ರಸ್ತೆ ಮಂಜೂರಾಗಿತ್ತು. ನಾವು ನ್ಯಾಯಾಲಯಕ್ಕೆ ಹೋಗಲೇ ಬೇಕಾದ ಪರಿಸ್ಥಿತಿ ಒದಗಿ ಬಂತು.

ಈಗ ಮತ್ತೆ ಜಿ.ಎಸ್.ಬಸವರಾಜ್ ರವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರಸ್ತೆಗೆ ಹಣ ನೀಡಿದ್ದಾರೆ. ರಾಷ್ಟ್ರೀಯ ಹೆದ್ಧಾರಿ 206 ರ  ಕುಂದರನಹಳ್ಳಿ ಗೇಟ್ ನಿಂದ ಅದಲಗೆರೆ ವರೆಗೆ ಭೂ  ಸ್ವಾಧೀನ ವಾಗಿರುವ ರಸ್ತೆ ಗಡಿ ಗುರುತಿಸಿ, ಅಗತ್ಯವಿದ್ದಲ್ಲಿ ರೈತರ ಸಭೆ ನಡೆಸಿ, ಕಾನೂನು ಮತ್ತು ನಿಯಮ ಪ್ರಕಾರ ರಸ್ತೆ ಮಾಡುವುದು ಅಗತ್ಯವಾಗಿದೆ.

ಈಗಾಗಲೇ ಪಿಎಂಜಿಎಸ್‍ವೈ ಇಇ ರವರು ಗುಬ್ಬಿ ತಹಶೀಲ್ಧಾರ್ ರವರಿಗೆ ಸಮೀಕ್ಷೆ ಮಾಡಿ ಗಡಿ ಗುರುತಿಸಲು ಪತ್ರ ಬರೆದಿದ್ದಾರೆ. ತಹಶಿಲ್ಧಾರ್ ರವರು ವಿಳಂಭ ಮಾಡದೆ ರಸ್ತೆ ಗಡಿ ಗುರುತಿಸ ಬೇಕಿದೆ. ರಸ್ತೆ ಹದ್ದುಬಸ್ತು ನಿಗದಿ ಗೊಳಿಸಿ ರಸ್ತೆ ಮಾಡುವುದು ಸೂಕ್ತ. ಒತ್ತುವರಿ ತೆರವು ಎಂಬ ಸಾಮಾಜಿಕ ಪಿಡುಗು ಹಳ್ಳಿಯಿಂದ ದೆಹಲಿವರೆಗೂ ಹಬ್ಬಿದೆ.ಅಧಿಕಾರಿಗಳು ಕಠಿಣ ನಿರ್ಧಾರ ಕೈಗೊಳ್ಳ ಬೇಕಿದೆ.

ಮೊನ್ನೆ ಅದಲಗೆರೆ ಶ್ರೀ ಎ.ಸಿ.ರಾಜುರವರು ಪೋನ್ ಮಾಡಿ ಚರಂಡಿ ಲೆವೆಲ್ ಸರಿ ಇಲ್ಲ ಎಂದು ಫೋನ್ ಮಾಡಿದ್ದರು. ನಂತರ ಇಇ ಶ್ರೀ ಹರೀಶ್ ಅವರಿಗೆ ತಿಳಿಸಿದಾಗ ಚರಂಡಿ ಮಾಡಿದ ರೀತಿಗೆ ಗ್ರಾಮಸ್ಥರ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಅದಲಗೆರೆ ಗ್ರಾಮಸ್ಥರ ಮನವಿ ಗ್ರಾಮದ ಮಿತಿಯಲ್ಲಿ ಸುಮಾರು 150 ಮೀಟರ್ ಉದ್ದ ಸಿಮೆಂಟ್ ರಸ್ತೆ ಆಗಲಿ ಎಂಬುದಾಗಿದೆ.