TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಶ್ರೀ ಗುರುಪಾದಸ್ವಾಮಿ ಯವರೊಂದಿಗೆ ‘ಜಲಗ್ರಂಥ’ದ ಬಗ್ಗೆ ಸುರ್ಧೀರ್ಘವಾಗಿ ಸಮಾಲೋಚನೆ ನಡೆಸಲಾಯಿತು.
ನೀವೂ ಮಾಡಿರುವ ಪಟ್ಟಿಯನ್ನು ಗಮನಿಸಿದ್ದೇನೆ, ಇದೊಂದು ಪುಣ್ಯದ ಕೆಲಸ, ಈ ಕೆಲಸ ಮಾಡಬೇಕಾದರೆ ಬಹಳ ತಾಳ್ಮೆ ಬೇಕು, ಎಲ್ಲಾ ಮಾಹಿತಿಗಳನ್ನು ಒಂದೆಡೆ ತರಲು ಎಲ್ಲಾ ಇಲಾಖೆಗಳು ಆವರವರ ಹಂತದಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ.
ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಮತ್ತು ACIWRM ಮೂಲಕವೇ ಶ್ರಮಿಸಬೇಕಿದೆ. ಇವರಿಗೆ ಬೇಕಾದ ಮಾಹಿತಿಗಳನ್ನು ಎಲ್ಲಾ ನಿಗಮಗಳು ಕಾಲಕಾಲಕ್ಕೆ ನೀಡಬೇಕು, ನಮ್ಮ ರಾಜ್ಯ ಡಿಜಿಟಲ್ ನಲ್ಲಿ ಯಾವಾಗಲೂ ಮಂಚೂಣೆಯಲ್ಲಿದ್ದೇವೆ.
ಜಲಸಂಪನ್ಮೂಲ ಇಲಾಖೆಯು ಈ ಹಿನ್ನಲೆಯಲ್ಲಿ ACIWRM ಮತ್ತು GEOMETIC CENTERE ಸಂಸ್ಥೆ ಆರಂಭಿಸಿವೆ. ತಾವು ಮತ್ತು ತಮ್ಮ ಸಂಸ್ಥೆ ಸರ್ಕಾರದ ಅನೂಕೂಲಕ್ಕಾಗಿ, ಯೋಜನೆಗಳ ಬಗ್ಗೆ ಅಧ್ಯಯನ ಮಾಡುತ್ತಿರುವುದು ನಿಜಕ್ಕೂ ಉತ್ತಮ ಕೆಲಸವಾಗಿದೆ.
ವಿಧಾನಸಭಾ ಕ್ಷೇತ್ರದ ಹಂತದಲ್ಲಿ ಜಲಶಕ್ತಿ ಯೋಜನೆಗಳ ಬಗ್ಗೆ ಮೌಲ್ಯಮಾಪನ ಮಾಡಿದಾಗ, ಆಯಾ ಶಾಸಕರಿಗೆ ಹೊಣೆಗಾರಿಕೆ ಹೆಚ್ಚುತ್ತದೆ. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು ಕನ್ನಡಿಯಾಗಲಿದೆ.
ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರಲು ನಮ್ಮ ರಾಜ್ಯ ಸರ್ಕಾರದ ಯೋಜನಾ ಇಲಾಖೆ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮೂಲಕ ಒಳ್ಳೆಯ ನಿರ್ಧಾರ ಮಾಡಿದೆ. ಪ್ರತಿಯೊಂದು ಇಲಾಖೆಯಲ್ಲೂ ಈ ರೀತಿ ಚರ್ಚೆ ಆರಂಭಿಸಿದರೆ, ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಲಿದೆ.
ಪರಿಣಿತರ, ಅನುಭವಿಗಳ ಜ್ಞಾನವನ್ನು ಕ್ರೋಡೀಕರಿಸಲು ಒಂದು ವಿಶೇಷ ವೇದಿಕೆಯಾಗಲಿದೆ. ನಾನೂ ಸಹ ನಿಮ್ಮ ಸಾಹಸಕ್ಕೆ ಆದಷ್ಟು ಕೈಜೋಡಿಸುತ್ತೇನೆ. ನಿಮ್ಮ ಪಟ್ಟಿಯಲ್ಲಿನ ಪ್ರತಿಯೊಂದು ಅಂಶಗಳ ಬಗ್ಗೆಯೂ ಚರ್ಚೆ ನಡೆಸೋಣ ಎಂಬ ಸಲಹೆ ನೀಡಿದರು.
‘ವಿಶೇವಾಗಿ ಕುಡಿಯುವ ನೀರಿನ ಜೊತೆ ಕೊಳಚೆ ನೀರು ಸೇರ್ಪಡೆಯಾಗಿ ವಿಷಪೂರಿತವಾದ ನೀರು ಕುಡಿಯುತ್ತಿದ್ದೇವೆ, ಇದರ ಬಗ್ಗೆ ಸ್ವಚ್ಚ ಬಾರತದ ಅಡಿ ಒಂದು ಆಂದೋಲವಾಗಬೇಕಿದೆ. ಗ್ರೀನ್ ವಾಟರ್ ಬಗ್ಗೆ ಏನೇನು ಮಾಡಬಹುದು ಎಂಬುದು ಬಹಳ ಪ್ರಮುಖ ಅಂಶವಾಗ ಬೇಕಿದೆ ಎಂದು ಪ್ರತಿಪಾದಿಸಿದರು.’
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಕೇಂದ್ರ ಆರಂಭಿಸುವಾಗ ಇವರು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮನವಿ ನೋಡಿದ ನಂತರ ಇದೊಂದು ಬಹಳ ಒಳ್ಳೆಯ ಕೆಲಸ, ನೋಡಿ ರಮೇಶ್ ನಮ್ಮ ಸರ್ಕಾರ ಫೋರಂ ಪರವಾಗಿ ರೂ 50 ಲಕ್ಷ ಅನುದಾನವನ್ನು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಮಂಜೂರು ಮಾÀಡಲು ಶ್ರಮಿಸುವುದಾಗಿ ಖಚಿತ ಭರವಸೆ ನೀಡುವ ಮೂಲಕ ಬೆನ್ನು ತಟ್ಟಿದ್ದರು.
ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಆಗ ಮಾಜಿಯಾಗಿದ್ದರು, ಹೊರಗಡೆ ಬಂದಾಗ, ನೋಡಪ್ಪಾ ಗುರುಪಾದ ಸ್ವಾಮಿಯವರ ಕಮಿಟ್ ಮೆಂಟ್ ಹೇಗಿದೆ. ಪರಮಶಿವಯ್ಯನವರ ಹೆಸರಿನಲ್ಲಿ ಆರಂಭವಾಗುವ ಅಧ್ಯಯನ ಪೀಠ ಮಾದರಿಯಾಗಲಿ ಎಂದಿದ್ದರು.
ನಮ್ಮ ತುಮಕೂರು ವಿಶ್ವವಿದ್ಯಾನಿಲಯದ ವಿಸಿಯವರು ಹುಳಿ ಹಿಂಡುವ ಮೂಲಕ, ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ ಈ ಮೂಲಕ ಶ್ರಮಿಸಲು ಪರೋಕ್ವಾಗಿ ಸಹಕಾರ ನೀಡಿದ್ದಾರೆ, ಇದರಿಂದ ಅವರಿಗೆ ಧನ್ಯವಾದ ಹೇಳಬೇಕು ಎಂದಾಗ ಗುರುಪಾದಸ್ವಾಮಿಯವರು ಈ ರೀತಿ ಪಾಸೀಟೀವ್ ಚಿಂತನೆ ಒಳ್ಳೆಯದು. ಗಂಗಾಮಾತೆ ಮತ್ತು ಶಕ್ತಿದೇವತೆ ಆಶೀರ್ವಾದ ಇರಲಿದೆ ಎಂದು ಶುಭ ಹಾರೈಸಿದರು.