22nd November 2024
Share

SHAKTHI PEETA FOUNDATION TUMAKURU

ವಿಲೇಜ್-1, 2017 ರಲ್ಲಿ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಬಿಡುಗಡೆ ಮಾಡಿರುವ ಜನತೆಯ ವಿಷನ್ ಡಾಕ್ಯುಮೆಂಟ್ – 2025  ರಲ್ಲಿ ಪ್ರಕಟವಾಗಿದೆ. ಈ ಪುಸ್ತಕಕ್ಕೆ ರಾಜ್ಯಪಾಲ ಶ್ರೀವಜುಭಾಯಿ ವಾಲಾರವರು ಸಂದೇಶ ಬರೆದಿದ್ದಾರೆ.

   ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿ ಎಂಬ ದೃಷ್ಟಿಯಿಂದ ಮಾನ್ಯ ಪ್ರಧಾನಿಯವರಿಗೆ ಮನವಿ ಮಾಡಿದ್ದೆ. ಜೊತೆಗೆ ಪ್ರಸ್ತುತ ಮಾನ್ಯ ಮುಖ್ಯ ಮಂತ್ರಿಯವರ ಉಪಕಾರ್ಯದರ್ಶಿಯಾಗಿರುವ ಶ್ರೀ ರವಿಯವರು ಮತ್ತು ಅವರ ಸಹಪಾಠಿ ಶ್ರೀ ಮನುರವರು ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿತ್ತಿರುವಾಗ ಈ ಪುಸ್ತಕ ನೀಡಿ ಚರ್ಚೆ ನಡೆಸಿದ್ದೇವು.

   ನಂತರ ಅವರಿಬ್ಬರು ಮಾನ್ಯ ಮುಖ್ಯ ಮಂತ್ರಿಯವರ ಕಚೇರಿಗೆ ಬಂದ ನಂತರ, ಈ ನನ್ನ ಕನಸಿನ ಯೋಚನೆ ಬೀಜಕ್ಕೆ ಗೊಬ್ಬರ, ನೀರು ನೀಡಲು ಆರಂಭಿಸಿದರು. ಟಿಪ್ಪಣೆಯನ್ನು ಮಾಡಿ ಮಾನ್ಯ ಮುಖ್ಯಮಂತ್ರಿಯವರಿಗೆ ನೀಡಿದರು.

 ತುಮಕೂರು ಲೋಕಸಭಾ ಸಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ನಾನು ಮುಖ್ಯ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶ್ರೀ ರವಿಕುಮಾರ್ರವರನ್ನು ಮತ್ತು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾದಾಗ 3-4  ಭಾರಿ ಈ ವಿಚಾರ ಮನವರಿಕೆ ಮಾಡಲಾಗಿತ್ತು.

  ಯೋಜನೆಯನ್ನು ಮಾನ್ಯ ಮುಖ್ಯ ಮಂತ್ರಿಯವರು 2020-21 ಮುಂಗಡ ಪತ್ರದಲ್ಲಿ ಪ್ರಕಟಿಸಿದ್ದಾರೆ. ಗ್ರಾಮ-1 ಎಂಬ ತಲೆಬರಹದಲ್ಲಿ ಘೋಷಣೆಯಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರದ ಐಟಿ-ಬಿಟಿ ಇಲಾಖೆ ಹಾಗೂ ಯೋಜನಾ (ಅಂಕಿ ಅಂಶಗಳ) ಇಲಾಖೆ ಜಾರಿಗೊಳಿಸುವುದು ಸೂಕ್ತವಾಗಿದೆ. ಶ್ರಮಿಸಿದ ಎಲ್ಲರಿಗೂ ಹೃದಯಪೂರ್ವಕ ನಮನ.

ಜನತೆಯ ವಿಷನ್ ಡಾಕ್ಯುಮೆಂಟ್ – 2025  ರಲ್ಲಿ ಪ್ರಕಟವಾಗಿರುವ ಅಂಶಗಳು

ನವ ಇಂಡಿಯಾ -2022  ಕ್ಕೆ ಕರ್ನಾಟಕ ರಾಜ್ಯವನ್ನು ಫೈಲಟ್ ಆಗಿ ಘೋಷಿಸಲು ಮನವಿ

ಸನ್ಮಾನ್ಯ ಪ್ರಧಾನ ಮಂತ್ರಿಗಳೇ,

   ನವ ಇಂಡಿಯಾ – 2022 ಆಂದೋಲನ  ಘೋಷಿಸಿರುವುದು ಸುತ್ಯರ್ಹ. ನಿಮ್ಮ ದಾರಿಯನ್ನು ಅನುಸರಿಸಿ ರಾಜ್ಯ ಸರ್ಕಾರವು  ನವ ಕರ್ನಾಟಕ 2025 ಪ್ರಕಟಿಸಿದೆ. ಐಟಿ-ಬಿಟಿಯಲ್ಲಿ ರಾಜ್ಯ ಈಗಾಗಲೇ ನಂಬರ್ ಒನ್ ಸ್ಥಾನದಲ್ಲಿರುವುದರಿಂದ ಡಿಜಿಟಲ್ ಕ್ಷೇತ್ರದಲ್ಲಿ ರಾಜ್ಯವೂ ದೇಶದಲ್ಲೇ ಮಂಚೂಣಿಯಲ್ಲಿದೆ. ಈ ಅವಕಾಶ ಬಳಸಿಕೊಂಡು ನವ ಇಂಡಿಯಾಗೆ ಕರ್ನಾಟಕದ ಕೊಡುಗೆ ದೊಡ್ಡದಿರುತ್ತದೆ. ಇದಕ್ಕಾಗಿ ರಾಜ್ಯಕ್ಕೆ ನೀವು ವಿಶೇಷ ಪೈಲಟ್ ಯೋಜನೆಯನ್ನು ಜಾರಿಗೊಳಿಸಬೇಕು. ಗುಬ್ಬಿ ವಿಧಾನಸಭಾ ಕ್ಷೇತ್ರವನ್ನು ಫೈಲಟ್ ಸ್ಟಡಿಗೆ ತೆಗೆದು ಕೊಂಡು ಆಧ್ಯತಾವಾರು ಯೋಜನೆಗಳ ಅಧ್ಯಯನ ಮಾಡುವುದು.

  ರಾಜ್ಯ ಏಕೆ ಈ ದಾರಿಯಲ್ಲಿ ಮಂಚೂಣಿಯಲ್ಲಿರಬೇಕು. ಕೇಂದ್ರದ ಯೋಜನೆ ಬಳಸಿಕೊಂಡು ಬೆಳವಣಿಗೆಯಲ್ಲಿ ವಿಶ್ವದ ನಂಬರ್ ರಾಜ್ಯ ಆಗಬೇಕು ಎಂಬುದನ್ನು ಜನರ ಸಾರ್ವಜನಿಕವಾಗಿ ಚರ್ಚೆಮಾಡಬೇಕಾಗಿದೆ. ಮುಖ್ಯಮಂತ್ರಿ ನಿಯೋಗ , ಬಿಜೆಪಿ ನಿಯೋಗ. ಜನ ಸಾಮಾನ್ಯರ ನಿಯೋಗ, ರೈತರ ನಿಯೋಗ, ಬುದ್ಧಿ ಜೀವಿಗಳ ನಿಯೋಗ, ಎಲ್ಲ ಪ್ರಾದೇಶಿಕ ಪಕ್ಷಗಳ ನಿಯೋಗಳು ಪ್ರಧಾನಿ ಅವರನ್ನು ಭೇಟಿ ಮಾಡಿ ನವ ಭಾರತಕ್ಕೆ ಕರ್ನಾಟಕವನ್ನೇ ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಹೆಚ್ಚು ಅನುದಾನ, ಯೋಜನೆ ಜಾರಿಗೆ ಬೇಕಾದ ಎಲ್ಲ ರೀತಿಯ ಸಂಪನ್ಮೂಲ ಒದಗಿಸುವಂತೆ ಒತ್ತಡ ತರಬೇಕಾಗಿದೆ.

 ಇಂಥ ಎಲ್ಲ ನಿಯೋಗಗಳನ್ನು ಸನ್ಮಾನ್ಯ ಪ್ರಧಾನಿಗಳೇ ನೇರವಾಗಿ ಆಹ್ವಾನಿಸಿ ಚರ್ಚಿಸಬೇಕು ಎಂದು ನಾವು ಮನವಿ ಮಾಡುತ್ತಿದ್ದೇವೆ. ಎಲ್ಲ ನಿಯೋಗಗಳೊಂದಿಗೆ ಪ್ರಧಾನಿ ಚರ್ಚಿಸುವ ಅಗತ್ಯವನ್ನು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಬೇಕಾದ ಕೆಲಸವನ್ನು ರಾಜ್ಯ ಬಿಜೆಪಿ ಮಾಡಬೇಕು. 

  ರಾಜ್ಯವನ್ನು ಪೈಲಟ್ ಯೋಜನೆಯಾಗಿ ಘೋಷಿಸಲು ಪ್ರಧಾನಿಯವರಿಗೆ ಮನವಿ ಮಾಡುವುದರ ಜೊತೆಗೆ ಕೆಳಕಂಡ ವಿಶೇಷ ಪ್ಯಾಕೇಜ್ ನೀಡಲು ಮನವಿ ಮಾಡುವುದು ಅಗತ್ಯವಾಗಿದೆ.ನವ ಇಂಡಿಯಾ – 2022 ಅಂಗವಾಗಿ ಡೇಟಾ ಬೇಸ್ ಮತ್ತು ಮನೆಬಾಗಿಲಿಗೆ ಸರ್ಕಾರಿ ಸೇವೆಗಾಗಿ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ಇಲಾಖೆ, ಸ್ಕಿಲ್ ಡೆವಲಪ್‌ಮೆಂಟ್ ಇಲಾಖೆ ಅಥವಾ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಕೆಳಕಂಡ ಯೋಜನೆ ಜಾರಿಗೆ ಅನುದಾನ ಬಿಡುಗಡೆ ಮಾಡುವುದು ಸೂಕ್ತವಾಗಿದೆ.

ವಿಶ್ವವಿದ್ಯಾನಿಲಯ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸುಮಾರು  59620  ಉದ್ಯೋಗ ಸೃಷ್ಟಿಸಲಿದೆ.

                ರಾಜ್ಯದ 29340  ಹಳ್ಳಿಗಳಲ್ಲೂ  ತಲಾ ಇಬ್ಬರಂತೆ  58680  ಉದ್ಯೋಗ ಸೃಷ್ಟಿಸಲಿದೆ.

                30  ಜಿಲ್ಲಾ ಮಟ್ಟದ ಅಭಿವೃದ್ಧಿ ಅಧ್ಯಯನ ಪೀಠ 5 ಉದ್ಯೋಗ ಸೃಷ್ಟಿಸಲಿದೆ.

                113  ಇಲಾಖಾವಾರು ಮತ್ತು ಯೋಜನಾವಾರು ಮಟ್ಟದ ಅಭಿವೃದ್ಧಿ ಅಧ್ಯಯನ ಪೀಠ 565 ಉದ್ಯೋಗ ಸೃಷ್ಟಿಸಲಿದೆ.

                ರಾಜ್ಯ ಮಟ್ಟದ ಅಭಿವೃದ್ಧಿ ಅಧ್ಯಯನ ಪೀಠ 10 ಉದ್ಯೋಗ ಸೃಷ್ಟಿಸಲಿದೆ.

ಏನಿದು ವಿಲೇಜ್-1 ?

  ಡಿಜಿಟಲ್ ಇಂಡಿಯಾ ಯೋಜನೆ ಮೂಲಕ ಈ ಯೋಜನೆ ಜಾರಿಯಾದರಲ್ಲಿ ನವಭಾರತದ ಮೈಲಿಗಲ್ಲಾಗಲಿದೆ, ಯಾವುದೇ ದೇಶದ ಸಮಗ್ರ ಅಭಿವೃದ್ಧಿಯಾಬೇಕಾದರೆ, ನಿಖರವಾದ ಅಂಕಿಅಂಶ. ಸಾಮಾಜಿಕ ನ್ಯಾಯ, ಪಾರದರ್ಶಕತೆ ಬಹುಮುಖ್ಯ, ಇದು ಶೇ 100 ರಷ್ಟು ಜಾರಿಯಾಗಲು ವಿಲೇಜ್-1 ಸಹಕಾರಿಯಾಗಲಿದೆ, ಭೂಮಿಗೆ ಸಂಬಂಧಿಸಿದಂತೆ ವೀಲೇಜ್-1. ಬೂತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಬೂತ್-1, ಕುಟುಂಬಕ್ಕೆ ಸಂಬಂಧಿಸಿದಂತೆ ಫ್ಯಾಮಿಲಿ-1, ವ್ಯಕ್ತಿಗೆ ಸಂಬಂಧಿಸಿದಂತೆ ಮೆಂಬರ್-1 ಬಹುಮುಖಿ ಯೋಜನೆಯಾಗಲಿದೆ.

  ಈ ಯೋಜನೆ ಬರೀ ಡೇಟಾಬೇಸ್‌ಗೆ ಸೀಮಿತವಾಗದೇ ಆ ಗ್ರಾಮದ ಸರ್ವೋತೊಮುಖ ಅಭಿವೃದ್ಧಿಗೆ ಮೆಟ್ಟಿಲಾಗಬೇಕು, ಸಕಲ ಸರ್ಕಾರಿ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಬೇಕು, ಅಲ್ಲಿನ ಪ್ರತಿಯೊಂದು ಉತ್ಪನ್ನಕ್ಕೂ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಕೇಂದ್ರವಾಗಬೇಕು, ಎಲ್ಲರ ಬೇಡಿಕೆಗಳಿಗೆ ಅಕ್ಷಯಪಾತ್ರೆಯಂತಾಗಬೇಕು, ಸರ್ಕಾರದ ಎಲ್ಲಾ ಇಲಾಖೆಯ ಅನುದಾನದ ವಿವರ ನಕ್ಷೆ ಸಹಿತ, ಇತಿಹಾಸ ಶೀಟ್ ಸಹಿತ ದಾಖಲಾಗಬೇಕು.

  ಅಯಾ ಗ್ರಾಮಕ್ಕೆ ಬೇಟಿ ನೀಡಿದ ಪ್ರತಿಯೊಬ್ಬ ಅಧಿಕಾರಿಯ ಆಧಾರ್ ಸಹಿತ ಬಯೋಮೆಟ್ರಿಕ್‌ನಲ್ಲಿ ದಾಖಾಲಾಗಬೇಕು, ಭೇಟಿ ನೀಡಿದ ವಿವರ ಅಲ್ಲಿಯೇ ದಾಖಲಾಗಬೇಕು, ಪ್ರತಿಯೊಬ್ಬರ ಜನರು ಅಲ್ಲಿಗೆ ಬಂದಾಗ ಆಧಾರ್ ಬಯೋಮೆಟ್ರಿಕ್‌ನಲ್ಲಿ ದಾಖಲೆಯಾಬೇಕು, ಬೆರಳು ಸರಿಯಿಲ್ಲ ದಾಖಲಾಗಲಿಲ್ಲ ಎಂಬ ಸಬೂಬು ಬರದ ಹಾಗೆ ನೋಡಿಕೊಳ್ಳಲು ಬಯೋಮೆಟ್ರಿಕ್ ಒತ್ತಿದರೆ ಅವರ ಭಾವಚಿತ್ರವೂ ದಾಖಲಾಗಬೇಕು.

  ಸರ್ಕಾರಗಳು ಮುಂಗಡ ಪತ್ರ ಮಂಡಿಸುವಾಗ ನೀಡ್‌ಬೇಸ್ಡ್ ಆಧಾರಿತ ಮಾಹಿತಿಯ ಮೇರೆಗೆ ಮಂಡಿಸಲು ಇವು ಆಧಾರವಾಗಬೇಕು. ಪ್ರತಿವರ್ಷ ಇಂತಿಷ್ಟು ಬೇಡಿಕೆ ಹಿಡೇರಿಸಿದ್ದೇವೆ ಎಂಬ ಬಗ್ಗೆ ಗ್ರಾಮವಾರು ಶೇಕಡಾವಾರು ದಾಖಲೆಯಿರಬೇಕು. ಎಲ್ಲ ಯೋಜನೆಗಳಿಗೂ ಗ್ರಾಮವಾರು ಸೀನಿಯಾರಿಟಿ ಮಾನದಂಡವಾಗಬೇಕು. ರಾಜಕೀಯ ಬೇಡಿಕೆಗಳಿಗೆ ಕಡಿವಾಣ ಹಾಕುವ ಸಾಧನ ಇದಾಗಬೇಕು, ಲಂಚಮುಕ್ತ ಬಾರತಕ್ಕೆ ಅಡಿಗಲ್ಲಾಗಬೇಕು, ಪ್ರತಿಯೊಬ್ಬರೂ ಅವರ ಜೀವನದ ಬೇಡಿಕೆ ಇಲ್ಲಿ ದಾಖಲಾಗಬೇಕು, ಅವುಗಳಿಗೆ ಸರ್ಕಾರ ಸ್ಪಂಧಿಸಬೇಕು, ಆತ ಎಮ್ಮೆ ಸಾಕುತ್ತೇನೆ ಸಾಲಕೊಡಿ ಎಂದರೆ, ಅದಕ್ಕೆ ಸ್ಕೀಂ ಇಲ್ಲ, ಕೋಳಿಸಾಕು ಸ್ಕೀಂ ಇದೆ ಎಂದರೆ ಯೋಜನೆ ದುಪಯೋಗವಾಗುವುದಿಲ್ಲವೇ, ನನಗೆ ಮದುವೆ ಮಾಡಲು ಹಣ ಸಾಲಕೊಡಿ ಎಂದರೆ ಕೈಗಾರಿಕೆಗೆ ಸಾಲಕೊಡುತ್ತೇವೆ ಎಂದರೆ ಅವನು ಮೋಸಮಾಡಲೇ ಬೇಕು ಅಲ್ಲವೇ.

   ಇವೆಲ್ಲವಕ್ಕೂ ಕಡಿವಾಣ ಹಾಕಬೇಕು, ಅಲ್ಲದೇ ಈ ಕೇಂದ್ರಗಳು ಶೇ 100 ತೆರಿಗೆ, ಸಾಲ ವಸೂಲಾತಿಯ ಮೂಲಗಳು ಆಗಬೇಕು, ಆಯಾ ಗ್ರಾಮದಲ್ಲಿ ಸರ್ಕಾರಿ ಕೆಲಸ ಮಂಜೂರಾಗುವ ಮುನ್ನವೇ ಲ್ಯಾಟ್ ಲ್ಯಾಗ್ ಸಹಿತ ನಕ್ಷೆಯಲ್ಲಿ ನಮೂದಿಸಿ ಇತಿಹಾಸ ಶೀಟ್ ಹಾಕಬೇಕು, ಕೆಲಸ ಆದ ತಕ್ಷಣ ಅಫ್‌ಲೋಡ್ ಆಗಬೇಕು. ಭೂಬಳಕೆ ಸಮೋತೋಲನ, ಒತ್ತುವರಿ ವಿವರ, ಬೆಳೆಪದ್ದತಿ, ಪ್ರತಿಯೊಬ್ಬರ, ಕುಟುಂಬದ, ಆಸ್ತಿ ವಿವರ ಸೇರಿದಂತೆ ಎಲ್ಲಾ ದಾಖಲೆಗಳು ಡಿಜಿಲಾಕರ್‌ನಿಂದ ಇಲ್ಲೆ ನೀಡಬೇಕು.

  ವಿಲೇಜ್-1 ಕೇಂದ್ರ ತೆರೆಯಲು ಸ್ವಯಂ ಉದ್ಯೋಗಿಗಳಿಗೆ ನೀಡಬೇಕು, ಸರ್ಕಾರ ಸಾಫ್ಟ್‌ವೇರ್ ಸಿದ್ಧಪಡಿಸಿ ನೀಡಬೇಕು, ಒಂದು ಲಕ್ಷ ಅನುದಾನ ನೀಡಬೇಕು, ಅದರಲ್ಲಿ ಕಂಪ್ಯೂಟರ್, ಹ್ಯಾಂಡ್ ಜಿಪಿಎಸ್, ಬಾಡಿಸಿಸಿಟಿವಿ, ಇತ್ಯಾದಿ ಉಪಕರಣಗಳನ್ನು ಅವರೇ ಖರೀದಿಸಬೇಕು. ರೆಸಿಡೆನ್ಸ್ ಕಂ ಆಫೀಸ್ ಆಗಿರಬೇಕು, ಅವರ ವೇತನಕ್ಕೆ ಪ್ರತಿಯೊಂದು ಕೆಲಸಕ್ಕೂ ಸರ್ಕಾರ ಸೇವಾಶುಲ್ಕ ನಿಗದಿಮಾಡಬೇಕು, ಒಂದು ಹಳ್ಳಿಯಲ್ಲಿ ಕಡಿಮೆ ಭೂಮಿ ಇರಬಹುದು, ಕಡಿಮೆ ಜನಸಂಖ್ಯೆ ಇರಬಹುದು ಆದರೇ ಕರಾರು ವಕ್ಕಾದ ಮಾಹಿತಿಗೆ ವಿಲೇಜ್-1 ಅಗತ್ಯ, ವೇತನ ತಾರತಮ್ಯ, ದುಡಿಮೆ ತಾರತಮ್ಯವನ್ನು ಸರ್ಕಾರ ಬಗೆಹರಿಸಬೇಕು.

  ಸರ್ಕಾರ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದರೆ ಇಂದಿರಾಕ್ಯಾಂಟೀನ್ ಮಾದರಿ ಒಂದು ಮಾದರಿ ಕಟ್ಟಡ ನಿರ್ಮಿಸಿ ಗ್ರಂಥಾಲಯ, ಟಿವಿ, ಸಭಾಭವನ, ಅವರಿಗೆ ವಾಸದ ಮನೆ ಹೀಗೆ ವಿಶಿಷ್ಟ ಕೇಂದ್ರವಾಗಿ ರೂಪಿಸಬಹುದು. ವಿವಿಧ ಇಲಾಖೆಗಳಲ್ಲಿರುವ ಎಲ್ಲಾ ಯೋಜನೆಗಳನ್ನು ಸೇರಿಸಬಹುದು, ಸರ್ಕಾರವೇ ಸಂಬಳ ನೀಡಬಹುದು. ಲಂಚಕೋರರಿಗೆ, ಭ್ರಷ್ಟ ರಾಜಕಾರಣಿಗಳಿಗೆ, ಕಮಿಷನ್ ದಂಧೆಕೋರರಿಗೆ ಕಡಿವಾಣ ಬೀಳಲಿದೆ, ಬಡವರ ಹೆಸರೇಳಿ ನುಂಗಿಹಾಕುವ ವ್ಯವಸ್ಥೆ ರದ್ದಾಗಲಿದೆ, ರಾಮರಾಜ್ಯ ಕನಸು ನನಸಾಗಲಿದೆ. ಈ ಯೋಜನೆಗೆ ‘ರಾಮರಾಜ್ಯ ವಿಲೇಜ್-1’ ಎಂದೇ ಕರೆಯಬಹುದು. ಸಹಕಾರಿ ಸಂಸ್ಥೆಗಳ ಧರ್ಮನಿಧಿ, ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಈ ಯೋಜನೆಗೆ ಬಳಸಿಕೊಳ್ಳಬಹುದು.