TUMAKURU:SHAKTHIPEETA FOUNDATION
ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ‘ಶಕ್ತಿಪೀಠ ಮ್ಯೂಸಿಯಂ’ ಸ್ಥಾಪಿಸಲು, ‘ಶಕ್ತಿಭವನ’ದ ಕಟ್ಟಡ ನಿರ್ಮಾಣ ಹಂತ ಪ್ರಾರಂಭವಾಗಲಿದೆ. ಹಾಲಿ ಇರುವ ನಿವೇಶನದಲ್ಲಿಯೇ, ‘ಡಿಜಿಟಲ್ ಯುಗ’ದಲ್ಲಿ ಅತ್ಯಂತ ಕಡಿಮೆ ವಿಸ್ಥೀರ್ಣದ ಕಟ್ಟಡದಲ್ಲಿ, ‘ಡಿಜಿಟಲ್ ಬ್ರಹ್ಮಾಂಡ’ ಸೃಷ್ಠಿಸುವುದು ಒಂದು ಕಲೆಯಾಗಬೇಕು.
ಸಿಎ ನಿವೇಶನ ತೆಗೆದುಕೊಂಡು ದೊಡ್ಡದಾಗಿ ಮಾಡಬೇಕಿತ್ತು, ಎಂದು ಸಲಹೆ ನೀಡುವ ಸ್ನೇಹಿತರಿಗೆ ಒಂದು ಕಿವಿ ಮಾತು. ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಗಾದೆ ಮಾತಿನಂತೆ ಶಕ್ತಿಭವನ ನಿರ್ಮಾಣ ಮಾಡುವ ಶಂಕುಸ್ಥಾಪನೆ ದಿನಾಂಕ:28.10.2022 ರಂದು ನಡೆದಿದೆ.
ಹಾಲಿ ಇದ್ದ ಹಳೇ ಕಟ್ಟಡವನ್ನು ದಿನಾಂಕ:17.10.2022 ರಂದು ಪೂಜೆ ಮಾಡಿ ಕೆಡವಿ ಹಾಕಲಾಗಿದೆ. ಸೆಟ್ ಬ್ಯಾಕ್ ನಿಯಮ, ವಾಸ್ತು, ಆಯಾ, ಧಾರ್ಮಿಕ, ಜ್ಞಾನಾರ್ಜನೆ, ಅಭಿವೃದ್ಧಿ, ಸಂಶೋಧನೆಗೆ ಮತ್ತು ವಾಸಕ್ಕೂ ಪೂರಕವಾಗುವಂತಹ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಒಂದು ಪ್ಲಾನ್ ಅಂತಿಮ ಹಂತ ತಲುಪಿದೆ.
ವಿಶೇಷವಾಗಿ ಶಕ್ತಿಪೀಠ ಮ್ಯೂಸಿಯಂನಲ್ಲಿ ‘ಬ್ರಹ್ಮ ಸ್ಥಾನ’ದಲ್ಲಿ ಸೂರ್ಯ ಬರುವಂತೆ, ಈ ಭಾಗದಲ್ಲಿ ಯಾವುದೇ ಗೋಡೆ ಅಥವಾ ಪಿಲ್ಲರ್ ಬರದಂತೆ ನಿರ್ಮಾಣ ಮಾಡಲು ತಜ್ಞರು ಹೇಳುತ್ತಾರೆ. ನವಗ್ರಹಗಳು ಅವರವರ ಸ್ಥಾನದಲ್ಲಿ ಅಲಂಕರಿಸುವಂತೆ ನಿರ್ಮಾಣ ಮಾಡುವ ಕೌಶಲ್ಯತೆ ನಡೆಯುತ್ತಿದೆ.
- ಪಾರ್ಕಿಂಗ್: ಪಾರ್ಕಿಂಗ್ ಮತ್ತು ಅಭಿವೃದ್ಧಿ ಪೀಠದ ಸಂಶೋಧನೆ.
- ನೆಲ ಅಂತಸ್ತು: ಶಕ್ತಿಪೀಠ ಮ್ಯೂಸಿಯಂ ಹಾಗೂ ಜಲಪೀಠದ ಸಂಶೋಧನೆ.
- ಮೊದಲನೇ ಮಹಡಿ: ಒಂದು ಬಿಹೆಚ್‍ಕೆ ವಾಸದ ಮನೆ.
- ಎರಡನೇ ಅಂತಸ್ತು: 3 ಕೊಠಡಿಗಳು.
- ಮೂರನೇ ಅಂತಸ್ತು: ಲಿಪ್ಟ್ ಹೆಡ್ ರೂಂ ಮತ್ತು ಸಿಂಟೆಕ್ಸ್ ಮಧ್ಯೆ, ತಾತ್ಕಾಲಿಕ ಶೆಡ್‍ನಲ್ಲಿ ಧ್ಯಾನ ಮಂದಿರ. ಕರಡು ಪ್ಲಾನ್‍ನಲ್ಲಿ ನಕ್ಷೆ ಇಲ್ಲ.
ಕರಡು ಪ್ಲಾನ್ ಬಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಲು ಪರಿಣಿತರಲ್ಲಿ ಮನವಿ. ಪ್ಲಾನ್ ಅಂತಿಮ ಮಾಡಿದ ನಂತರ, ಶ್ರಮಿಸಿದವರ ನೇತೃತ್ವದಲ್ಲಿ,À ಒಂದು ಸಂವಾದ ಏರ್ಪಡಿಸುವ ಆಲೋಚನೆಯಿದೆ. ಇದು ಶಕ್ತಿದೇವಿಯ ಇಚ್ಚೆಯಾಗಿದೆ.