TUMAKURU:SHAKTHIPEETA FOUNDATION
ಪ್ರತಿಯೊಬ್ಬ ಮಾನವನು ಇಂದು ಈ ಮೂರು ಸಮಸ್ಯೆಗಳಲ್ಲಿ ಒಂದಲ್ಲ ಒಂದು ಸಮಸ್ಯೆಯಿಂದ ನರಳುತ್ತಾನೆ. ಕೆಲವರು ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಂಡರೇ, ಇನ್ನೂ ಕೆಲವರು ಎಲ್ಲವನ್ನೂ ನುಂಗಿಕೊಂಡು ಏನೂ ಆಗಿಲ್ಲವೇನೋ ಎಂಬಂತೆ ನಟಿಸುತ್ತಾ ಜೀವನ ಸಾಗಿಸುತ್ತಿದ್ದಾರೆ.
ನಾನು ಕಳೆದ ಕೆಲವು ದಿನಗಳಿಂದ ಹಲವಾರು ಜನರ ಜೊತೆ ಮಾನವ ಗ್ರಂಥಾಲಯದ ಬಗ್ಗೆ ಮುಕ್ತವಾಗಿ ಸಮಾಲೋಚನೆ ನಡೆಸುತ್ತಿದ್ದೇನೆ. ದೇವರು ಸೃಷ್ಠಿಸಿದ ಸಾಪ್ಟ್‍ವೇರ್‍ನಲ್ಲಿ ಏನಿದೆ ಎಂಬುದನ್ನು ಯಾರು ಬಿಚ್ಚಿ ನೋಡಲು ಸಾದ್ಯಾವಿಲ್ಲ, ಇದೊಂದು ಪವಾಡ, ಇದೇ ದೇವರು, ಇದೇ ಅಗೋಚರ ಶಕ್ತಿ.
ನನಗೆ ಹಲವಾರು ಪರಿಣಿತರು ನೀಡಿದ ಮಾರ್ಗದರ್ಶನ ನಿಜಕ್ಕೂ ಹೆಮ್ಮೆ ಎನಿಸಿದೆ. ಅವರ ನೈಜ ಸ್ಥತಿ ಹೇಳಿಕೊಂಡ ನಂತರ, ನನಗೆ ಹೇಳಿದ ಮಾತುಗಳು, ನಿಮ್ಮ ಗುರಿ ಅಚಲ, ಇವುಗಳಿಗೆ ನಮ್ಮಂಥ ಸಾವಿರಾರು ಜನರು ಸ್ಪಂಧಿಸುವ ಕಾಲ ಮುಂದೊಂದು ದಿನ ಬರಲಿದೆ.
ಈಗ ನೀವೂ ಅತಿ ಮುಖ್ಯವಾಗಿ ಮಾಡಬೇಕಿರುವುದು, ಶಕ್ತಿಪೀಠ ಕ್ಯಾಂಪಸ್‍ನಲ್ಲಿಯೇ ಬಂದು ನಾವು ಸಹ ಒಂದೆರಡು ದಿವಸ ಉಳಿದುಕೊಂಡು, ವಿಶ್ವದ 108 ಶಕ್ತಿಪೀಠಗಳ, ನದಿ ನೀರಿನ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆಯೇ ಚರ್ಚೆ ನಡೆಸಬೇಕು.ಇಂಥ ವಾತಾವಾರಣವನ್ನು ಮೊದಲು ಸೃಷ್ಠಿ ಮಾಡಿ.
ನಂತರ ಮುಂದಿನ 25 ವರ್ಷಗಳ ನಂತರವೂ ನಿರಂತರವಾಗಿ ಆಸಕ್ತರು ಮುನ್ನಡಿಸಿಕೊಂಡು ಹೋಗಲಿದ್ದಾರೆ. ನೀವೂ ಈಗ ಮಾಡಬೇಕಿರುವುದು ದಾನಿಗಳ, ಸಿ.ಎಸ್.ಆರ್. ಫಂಡ್ ಹಾಗೂ ಸರ್ಕಾರಿ ಅನುದಾನಗಳನ್ನೇ ಪಡೆದು, ತಾವು ಈಗಾಗಲೇ ಆರಂಭಿಸಿರುವ, ರಾಜ್ಯದ 31 ಜಿಲ್ಲೆಗಳಿಗೂ ಒಂದೊಂದು ಕೊಂಠಡಿಗಳಂತೆ, 32 ಕೊಠಡಿಗಳ ಪ್ರಥಮ ಕಟ್ಟಡವನ್ನು ಪೂರ್ಣಗೊಳಿಸಿ.ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಸಾಲ ಮಾಡಬೇಡಿ.
ಈ ಕಟ್ಟಡ ಪೂರ್ಣಗೊಳಿಸಲು ಮತ್ತು ಪರಿಸರವೇ ದೇವರು ಎಂಬ ನಿಮ್ಮ ಗುರಿ ಸಾಧಿಸುವ ವಾತಾವರಣವನ್ನು ಕ್ಯಾಂಪಸ್‍ನಲ್ಲಿ ಸೃಷ್ಠಿ ಮಾಡಲು ಆಧ್ಯತೆ ನೀಡಿ. ಅನುದಾನ ಹಾಗೂ ದೇಣಿಗಾಗಿ ನೀವೂ ಪಡುವ ಶ್ರಮವೂ ಮಾನವ ಗ್ರಂಥಾಲಯದ ಮೊದಲ ಗ್ರಂಥವಾಗಬೇಕು.
ನಂತರ ಶಕ್ತಿಪೀಠಗಳ ಸಂಶೋಧನಾ ಗ್ರಂಥ, ಜಲಗ್ರಂಥ, ಕೇಂದ್ರ ಸರ್ಕಾರದ ಅನುದಾನದ ಸ್ಟ್ರಾಟಜಿ ಹಾಗೂ 2047 ರ ನವ ಕರ್ನಾಟಕದ ವಿಷನ್ ಡಾಕ್ಯುಮೆಂಟ್ ಹೊರಬರಬೇಕು. ಈ ಎಲ್ಲವನ್ನೂ ಏಕಕಾಲದಲ್ಲಿಯೇ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ.
ನಾವೆಲ್ಲಾ ಈ ಮೂರು ರೋಗಗಳಿಂದ ನರಳುತ್ತಿದ್ದೇವೆ, ನಮ್ಮಂಥವರಿಗೆ ನಿಮ್ಮ ಪರಿಕಲ್ಪನೆಯ ಕ್ಯಾಂಪಸ್ ಒಂದು ರೀತಿ ಮೆಡಿಸನ್ ಹಾಗೆ ಆಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇದೊಂದು ರೀತಿಯ ಆತ್ಮಾವಲೋಕನ ಸಲಹೆ ಎಂದರೆ ತಪ್ಪಾಗಲಾರದು.
ಶಕ್ತಿಪೀಠ ಕ್ಯಾಂಪಸ್ ಆರಂಭಿಸಿದ ದಿನದಿಂದ, ಪ್ರಥಮ ಕಟ್ಟಡದ ಲೋಕಾರ್ಪಣೆ ಮಾಡುವವರಿಗೂ ದೇವರ ರೂಪದಲ್ಲಿ, ಎಲ್ಲಾ ರೀತಿಯ ಸಹಕಾರ ನೀಡುತ್ತಿರುವ ಪುಣ್ಯಾತ್ಮರು ಸ್ಪಂಧಿಸಿದ ರೀತಿ ಹಾಗೂ ನಂಬಿಸಿ ಮೋಸಮಾಡಿದವರ ರೀತಿಗಳನ್ನು, ಮೊದಲ ಗ್ರಂಥವಾಗಿ ಹೊರತರಲು ಕಾರ್ಯಪ್ರವೃತ್ತಾಗಿದ್ದೇನೆ. ಪ್ರಥಮ ಕಟ್ಟಡದ ಲೋಕಾರ್ಪಣೆ ದಿವಸವೇ, ಈ ಗ್ರಂಥ ಲೋಕಾರ್ಪಣೆ ಗೊಳ್ಳುವ ಚಿಂತನೆ ನಡೆಸಲಾಗಿದೆ.
ಒಬ್ಬ ಸಚಿವರು ಮತ್ತು ಒಬ್ಬ ಅಧಿಕಾರಿ ನನಗೆ ಹೇಳಿದ ಸ್ಪಷ್ಠ ಮಾತು, ನಿಮಗೆ ಅನೂಕೂಲ ಮಾಡಬೇಕು ಎಂಬ ಭಾವನೆ ನಮÀಗೆ ಬಂದಿದೆ. ಆದರೇ ಹೇಗೆ ಮಾಡಬೇಕು ಎಂಬುದಾಗಿ ಯೋಚಿಸುತ್ತಿದ್ದೇನೆ. ನೀವೂ ನಮ್ಮ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ನಡೆಸಿ ನೋಡೋಣ?
ಈ ಒಂದು ಮಾತು ನನ್ನನ್ನೂ ಮೂಕವಸ್ಮೀತನಾಗಿ ಮಾಡಿದೆ. ಅನೂಕೂಲ ಆಗುವುದು, ಬಿಡುವುದು ಬೇರೆ, ಆದರೇ ಅವರ ಭಾವನೆ ನಿಜಕ್ಕೂ ಶಕ್ತಿದೇವತೆಯ ಪ್ರೇರಣೆ ಇರಬಹುದು ಎಂಬ ಭಾವನೆ ನನ್ನದಾಗಿದೆ.