3rd March 2026
Share

TUMAKURU:SHAKTHI PEETA FOUNDATION

ರಾಜ್ಯದ ಮಾಜಿ ಮುಖ್ಯ ಮಂತ್ರಿ, ಹಿರಿಯ ಮುತ್ಸುದ್ಧಿ, ಐಟಿ-ಬಿಟಿ ಯಲ್ಲಿ ಬೆಂಗಳೂರು ವಿಶ್ವದಲ್ಲಿ ಪ್ರಸಿದ್ಧಿಯಾಗಲು ಕಾರಣೀ ಭೂತರಾದ ಶ್ರೀ ಎಸ್.ಎಂ.ಕೃಷ್ಣರವರಿಗೆ ನಾಗರೀಕ ಸನ್ಮಾನ ಮಾಡಲು ಅವರ ಸಮಕಾಲಿನರು, ಹಿತೈಷಿಗಳು, ಸರ್ವಪಕ್ಷಗಳ ನಾಯಕರು ಆಲೋಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದಿನಾಂಕ:23.12.2022 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಎಸ್.ಎಂ.ಕೃಷ್ಣರವರು ಮತ್ತು ಶ್ರೀಮತಿ ಪ್ರೇಮ ಕೃಷ್ಣರವರನ್ನು, ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.

ನಾಗರೀಕ ಸನ್ಮಾನವನ್ನು ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು, ಎಂಬ ಬಗ್ಗೆ ಶೀಘ್ರದಲ್ಲಿ ಆಸಕ್ತ ಎಲ್ಲಾ ವರ್ಗದವರ ಸಭೆ ಕರೆದು ರೂಪುರೇಷೆ ನಿರ್ಧರಿಸಲಾಗುವುದು ಎಂದು ಜಿ.ಎಸ್.ಬಸವರಾಜ್ ರವರು ತಿಳಿಸಿದ್ದಾರೆ.