ಕೊರೊನಾ ಮಹಾಮಾರಿಯಿಂದ ಜನತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ಕರ್ನಾಟಕ ರಾಜ್ಯವನ್ನು ಲಾಕ್‌ಡೌನ್ ಮಾಡಲು ಜನತೆಗೆ ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂಧಿಸುವುದು ನಮ್ಮ ಆಧ್ಯ ಕರ್ತವ್ಯ.
ನಾವೇನು ಮಾಡಬೇಕು?
- ಸೊಂಕು ಇರುವವರು ಯಾವುದೇ ವಸ್ತುವನ್ನು ಮುಟ್ಟಿದರೂ ಕನಿಷ್ಟ 7 ಗಂಟೆ ಕಾಲ ವೈರಸ್ ಜೀವಂತವಾಗಿರುತ್ತದೆ. ಉದಾ: ಟೋಲ್ ಗೇಟ್ ಚೀಟಿ, ನೋಟು, ನ್ಯೂಸ್ ಪೇಪರ್, ಹಾಲಿನ ಪ್ಯಾಕೇಟ್, ತರಕಾರಿ, ಹಣ್ಣು, ಕುರ್ಚಿ, ಟೇಬಲ್, ಗ್ರಿಲ್, ನಮ್ಮ ವಾಹನಗಳಾದ ಸೈಕಲ್, ಬೈಕ್, ಕಾರು, ಟ್ರಾಕ್ಟರ್ ಹೀಗೆ ಯಾವುದೇ ಸರ್‌ಫೇಸ್ ಆಗಿರಬಹುದಂತೆ ಎಚ್ಚರ ವಹಿಸಿ.
- ಸೊಂಕು ಇರುವವರು ನಾವು ಹಾಕಿಕೊಂಡಿರುವ ಬಟ್ಟೆಯನ್ನು ಮುಟ್ಟಿದರೂ 7 ಗಂಟೆ ಕಾಲ ವೈರಸ್ ಜೀವಂತವಾಗಿರುತ್ತದೆ. ಹೊರಗಿನಿಂದ ಬಂದ ತಕ್ಷಣ ಬಟ್ಟೆ ಬಿಚ್ಚಿ ಹಾಕಿ ಬೇರೆ ಬಟ್ಟೆ ಹಾಕಿಕೊಳ್ಳಿ.
- ಶೂ ಚಪ್ಪಲಿಯಲ್ಲೂ ಬರಲಿದೆಯಂತೆ ಹೊರಗಡೆಯಿಂದ ಬಂದ ನಂತರ ಕೈ ಕಾಲು ತೊಳೆದು ಕೊಳ್ಳಿ.
- ನಾವು ಈಗ ಇರುವ ಮನೆಯಿಂದ ಹೊರಗೆ ಹೋಗಬಾರದು. ಯಾರನ್ನು ಮನೆಗೆ ಸೇರಿಸಿಕೊಳ್ಳಬಾರದು. ನಂಟಸ್ತಿಕೆ, ವಿಶ್ವಾಸ ಈಗ ಬೇಡ.
- ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗಿ ಹಣ್ಣು ತರಕಾರಿ, ದಿನಸಿ, ಮೆಡಿಸನ್ ತಂದು 7 ಗಂಟೆ ಉಪಯೋಗಿಸಬೇಡಿ. ಕವರ್ ಒಳಗೆ ಇರುವ ವಸ್ತುಗಳನ್ನು ಉಪಯೋಗಿಸ ಬಹುದಂತೆ.
- ಮನೆ ಒಳಗೆ ಬಂದ ನಂತರ ಸೋಪಿನಿಂದ ಕೈತೊಳೆದು ಕೊಳ್ಳಿ, ಸ್ಯಾನಿಟೈಸರ್ ಬೇಕು ಎನ್ನುವ ಭಯ ಬೇಡ, ಹೊರಗಡೆ ಹೋದಾಗ ಸ್ಯಾನಿಟೈಸರ್ ಇಟ್ಟುಕೊಳ್ಳಿ.
- ನಗರ ಪ್ರದೇಶಗಳ ಜನತೆ ಪೌರಕಾರ್ಮಿಕರನ್ನು ಕಾಯದೆ ತಮ್ಮ ಮನೆ ಸುತ್ತ ಮುತ್ತ ಶುಚಿಯಾಗಿಟ್ಟು ಕೊಳ್ಳಿ. ನಾವು ಕಸಗುಡಿಸಿದರೆ ಏನು ಆಗುವುದಿಲ್ಲ.
- ಅನಗತ್ಯವಾಗಿ ಓಡಾಡುವರಿಗೆ ಕಿಟಕಿಯಲ್ಲಿಯೇ ಬುದ್ಧಿ ಹೇಳಿ, ಮನೆಗೆ ಕಳುಹಿಸಿ.
- ಯೋಗ, ಧ್ಯಾನ, ವಾಕ್ ಮನೆಯ ಆವರಣದಲ್ಲಿಯೇ ಮಾಡಿ.
- ಮನೆಯಲ್ಲಿ ಕುಳಿತು ಪುಸ್ತಕ ಓದಿ, ಬರೆಯಿರಿ, ಮನೆ ಮಂದಿಯಲ್ಲಾ ಖುಷಿಯಾಗಿರಿ.
- ಪೂಜೆಯನ್ನು ಮನೆಯವರೇ ಮಾಡಿಕೊಳ್ಳಿ.
- ಸಂಬಂಧಿಕರಿಗೆ ಕರೆ ಮಾಡಿ ಮನೆಯಲ್ಲಿಯೇ ಇರಲು ಹೇಳಿ.
- ಮನೆ ಕೆಲಸದವರು, ಡ್ರೈವರ್ ಈಗ ಬೇಡ ನಮ್ಮ ಮನೆ ಕೆಲಸವನ್ನು ನಾವೇ ಮಾಡಿಕೊಳ್ಳೋಣ.
- ಕಟಿಂಗ್, ಬ್ಯೂಟಿ ಪಾರ್ಲರ್, ಬಟ್ಟೆ ಐರನ್ ಯಾವುದು ಹೊರಗಡೆ ಬೇಡ.
- ಮಿಟಿಂಗ್, ಕಚೇರಿ ಕೆಲಸ, ಮಾರಾಟ ಈಗ ಬೇಡ, 15 ದಿವಸದಲ್ಲಿ ಏನೂ ಕೊಳ್ಳೆ ಹೊಗುವುದಿಲ್ಲಾ.
- ಸೈನಿಕರು, ಪೋಲೀಸ್, ಡಾಕ್ಟರ್, ದಾದಿಯರು, ಪೌರ ಕಾರ್ಮಿಕರು ನಮ್ಮ ಪಾಲಿನ ದೇವರು, ಅವರಿಗೆ ಜಾಸ್ತಿ ಕೆಲಸ ಕೊಡಬೇಡಿ.
- ಜಿಲ್ಲಾಡಳಿತ, ಆರಕ್ಷಕರು, ನಗರಾಡಳಿತ, ಡಿ.ಹೆಚ್.ಓ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಸೂಚಿಸುವಂತೆ ಇರಿ.
- ಕೊರೊನಾ ಸೋಂಕು ತಗುಲಿದರೆ ತಮ್ಮ ಸಂಭಂದವರನ್ನು ಸಹ ನೋಡುವಂತಿಲ್ಲವಂತೆ.
- ಉದಾಸೀನ ಮಾಡಲೇ ಬಾರದು, ಗ್ರಾಮೀಣ ಪ್ರದೇಶದಲ್ಲಿ ಹರಳಿ ಕಟ್ಟೆ ಹರಟೆ ಕಾರ್ಯಕ್ರಮ ಬೇಡ.
- ತೋಟಗಳಿಗೆ ನೀರು ಮಾತ್ರ ನೋಡಿಕೊಳ್ಳಿ, ಆಳುಗಳ ಕೆಲಸ ಈಗಬೇಡ.
- ತೋಟಕ್ಕೆ ಹೋಗುವಾಗ ಬೈಕ್‌ನಲ್ಲಿ ಯಾರನ್ನು ಕುರಿಸಿಕೊಳ್ಳ ಬೇಡಿ. ಒಬ್ಬರೇ ಹೋಗಿ ಒಬ್ಬರೇ ಬನ್ನಿ.
- ನಿಮ್ಮ ಮನೆಯವರನ್ನು ಬಿಟ್ಟರೆ ಬೇರೆ ಯಾರ ಸಂಪರ್ಕವೂ ಬೇಡ.