21st November 2024
Share

TUMAKURU:SHAKTHIPEETA FOUNDATION

  ಸನ್ಮಾನ್ಯ ಉಪ ಮುಖ್ಯಮಂತ್ರಿಯವರು, ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಅಭಿನಂದನೆಗಳು. ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಮಕ್ಕಳ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವುದು ನಿಜಕ್ಕೂ ಸ್ವಾಗಾತಾರ್ಹ.

ಸರ್ಕಾರದ ಹಂತದಲ್ಲಿ ಈಗಾಗಲೇ ಚರ್ಚೆಯ ಹಂತದಲ್ಲಿರುವ, ಕಳೆದ ಒಂದು ನಾನು ವರ್ಷದಿಂದ ಇಂಡಿಯಾ @ 100 ಅಂಗವಾಗಿ ನವ ಕರ್ನಾಟಕ ಮಿಷನ್-2047 ಬಗ್ಗೆ ಮಕ್ಕಳ ಅಭಿಪ್ರಾಯ ಪಡೆಯುತ್ತಿರುವ, ವಿಷಯವನ್ನು ಬ್ರ್ಯಾಂಡ್ ಬೆಂಗಳೂರು ಸಲಹೆ ನೀಡಿದ್ದ ನನ್ನ ಮನವಿ ಬಗ್ಗೆ ಅವರ ಹೇಳಿಕೆ ನನಗೆ  ಖುಷಿ ತಂದಿದೆ.

ಇದು ವ್ಯವಸ್ಥಿತವಾಗಿ ಸರ್ಕಾರಿ ಆದೇಶದೊಂದಿಗೆ ಆಗಬೇಕು. ಈ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು. ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಪ್ರಮುಖ ಅಂಶ ಇದಾಗಿದೆ.

‘ಮಾನ್ಯ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರು ಐಟಿ-ಬಿಟಿ ಪಿತಾಮºರಾಗಿ ಬೆಂಗಳೂರು ವಿಶ್ವದ ಗಮನ ಸೆಳೆಯುಂತೆ ಮಾಡಿದರು. ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾರತವನ್ನು ಬ್ರ್ಯಾಂಡ್ ಮಾಡುತ್ತಿದ್ದಾರೆ.’

ನನ್ನ ಪ್ರಕಾರ ಈ ಕೆಳಕಂಡ ಮೂರು ಭಾಗಗಳಾಗಿ ಯೋಜನೆಗಳನ್ನು ವಿಂಗಡಿಸಿ, ಡಿಕೆಶಿಯವರು ಸಾಮಾನ್ಯ ಜನಸಾಮಾನ್ಯರಿಂದ ಆರಂಭಿಸಿ, ಅಂತರರಾಷ್ಟ್ರೀಯ ಮಟ್ಟದವರ ಗಮನ ಸೆಳೆಯುವ ಕಡೆ ಹೆಚ್ಚು ಒಲವು ತೋರಬೇಕಿದೆ.

  1. ಬ್ರ್ಯಾಂಡ್ ಬೆಂಗಳೂರುಅಂತ್ರರಾಷ್ಟ್ರೀಯ ಗಮನ ಸೆಳೆಯುವ ಯೋಜನೆಗಳು.
  2. ಬ್ರ್ಯಾಂಡ್ ಬೆಂಗಳೂರುಭಾರತ ದೇಶದ ಗಮನ ಸೆಳೆಯುವ  ಯೋಜನೆಗಳು.
  3. ಬ್ರ್ಯಾಂಡ್ ಬೆಂಗಳೂರುಬಡಾವಣೆಗಳ ಜನರ ನೀಡ್ ಬೇಸ್ಡ್ ಯೋಜನೆಗಳು.