26th December 2024
Share

ಬ್ರ್ಯಾಂಡ್ ಬೆಂಗಳೂರು: ಚಂದ್ರಯಾನ ಸೆಟಿಲೈಟ್ ಟೌನ್ ?

TUMAKURU:SHAKTHIPEETA FOUNDATION

   ಚಂದ್ರಯಾನ-3 ಯಶಸ್ವಿಯಾಗಿದೆ. ಪ್ರಪಂಚದ ಎಲ್ಲಾ ವರ್ಗದ ಜನರೂ ಇಸ್ರೋ ವಿಜ್ಞಾನಿಗಳನ್ನು ಮುಕ್ತ ಕಂಠದಿಂದ ಪ್ರಶಂಸೆ ಮಾಡಿದ್ದಾರೆ. ಭಾರತದಲ್ಲೂ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳು ಅಭಿನಂದಿಸಿವೆ.

ಮಾಧ್ಯಮ ಲೋಕ, ಸೋಶಿಯಲ್ ಮೀಡಿಯಾ ಜ್ಞಾನ ಇರುವ ಪ್ರತಿಯೊಬ್ಬ ಬಾರತೀಯನು ಚಂದ್ರಯಾನದ ಬಗ್ಗೆ ಜ್ಞಾನವಂತನಾಗಿದ್ದಾರೆ. ಅಂಕಿ ಅಂಶಗಳ ಸಮೇತ ಚರ್ಚೆ ಮಾಡುತ್ತಿದ್ದಾರೆ. ಈಗ ಎಲ್ಲರ ಚಿತ್ತ ಸೂರ್ಯನತ್ತ ಇದೆ.

ನಮ್ಮ ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ನಮ್ಮ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಇಸ್ರೋಕ್ಕೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಸಹ ಆಗಮಿಸಲಿದ್ದಾರೆ.

ವಿಜ್ಞಾನಿಗಳು ಎಂದರೆ ಜ್ಞಾನದ/ಸಂಶೋಧನೆಯÀ ಸನ್ಯಾಸಿಗಳು’, ಅವರಿಗೆ ಇಟ್ಟು ಗುರಿ ತಲುಪುವುದು ಬಿಟ್ಟು ಬೇರೆ ಏನೂ ಬೇಕಾಗಿಲ್ಲ. ಜೀವನದಲ್ಲಿ ಒಂದು ಸ್ವಂತ ಸೂರಿನ ಕನಸನ್ನು ಕಾಣಲು  ಅವರ ಬಳಿ ಸಮಯ ಇರುವುದಿಲ್ಲ.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಚಂದ್ರಯಾನ ಸೆಟಿಲೈಟ್ ಟೌನ್ ನಿರ್ಮಾಣ ಮಾಡಿ, ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೆ ಒಂದೊಂದು ನಿವೇಶನ ಮತ್ತು ಮನೆಯನ್ನು ಉಚಿತವಾಗಿ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗಿದೆ.

ಬಾಹ್ಯಾಕಾಶ ಸೆಟಿಲೈಟ್ ಟೌನ್ ನಿರ್ಮಾಣ ಮಾಡಿ, ಎಲ್ಲಾ ಯಾನಗಳ ಯಶಸ್ವಿಗೆ ದುಡಿದವರಿಗೆ ನಿವೇಶನ, ಮನೆ ಕೊಡುವುದರ ಜೊತೆಗೆ ಭವಿಷ್ಯದ, ವಿಜ್ಞಾನಿಗಳನ್ನು ರೂಪಿಸುವ ಘಟಕಗಳನ್ನು ಆರಂಭಿಸಿ, ಎಲ್ಲಾ ರೀತಿಯ ಮೂಲಭೂತ ಸೌಕರ್ಯ ನೀಡುವ ಮೂಲಕ ವಿಜ್ಞಾನಿಗಳ ಬಹುದೊಡ್ಡ ಕೆಲಸಕ್ಕೆ ಒಂದು ಸಣ್ಣ ಗೌರವ ನೀಡುವುದು  ಸೂಕ್ತವಾಗಿದೆ.

ಭಾರತದಲ್ಲಿಯೂ ಜ್ಞಾನಿಗಳಿಗೂ ಬೆಲೆ ಇದೆ ಎಂಬುದನ್ನು ಎತ್ತಿ ತೋರಿಸಬೇಕಿದೆ. ಇದೂವರೆಗೂ ಬುದ್ದಿವಂತರೆಲ್ಲಾ ದೇಶ-ವಿದೇಶಗಳಿಗೆ ಹೋಗಿ ಸಾಧಿಸಿದ್ದಾರೆ. ಈಗ ಇಲ್ಲಿಯೂ ಸಾಧಿಸ ಬಹುದು ಎಂಬ ಮನವರಿಕೆ ನಮ್ಮ ಬುದ್ದಿವಂತರಿಗೆ ಬಂದಿದೆ. ಇದಕ್ಕೆ ಪೂರಕ ವ್ಯವಸ್ಥೆಗೆ ಆಧ್ಯತೆ ಕೊಡಲೇ ಬೇಕು.

  ಇಂಡಿಯಾ @ 100 ವೇಳೆಗೆ ಭಾರತ ಎಲ್ಲವನ್ನೂ ಸಾಧಿಸಲಿದೆ.