TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ ಎಲ್ಲಾ ಜನಾಂಗದ ಬಡವಿದ್ಯಾರ್ಥಿಗಳಿಗೆ, ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್ ಆರಂಭಿಸಲು ಕಳೆದ ವರ್ಷದಿಂದ ಶಕ್ತಿಪೀಠ ಫೌಂಡೇಷನ್ ಶ್ರಮಿಸುತ್ತಿದೆ. ಕರ್ನಾಟಕ ಸರ್ಕಾರ ಉತ್ತಮ ಹೆಜ್ಜೆ ಇಟ್ಟಿದೆ. ಈಗಾಗಲೇ ದೆಹಲಿ ಸರ್ಕಾರದ ಜೊತೆ ಭೂಮಿ ಮಂಜೂರಾತಿಗೆ ಹಲವಾರು ಪತ್ರವ್ಯವಹಾರ ಮಾಡಿದೆ.


ಆದರೇ ಇದೂವರೆಗೂ ದೆಹಲಿ ಸರ್ಕಾರ ಜಮೀನು ಮಂಜೂರಾತಿ ಮಾಡಿಲ್ಲ, ಈ ಬಗ್ಗೆ ರಾಜ್ಯವನ್ನು ಪ್ರತಿನಿಧಿಸುವ ಎಲ್ಲಾ ಕೇಂದ್ರ ಸಚಿವರಿಗೆ ಹಾಗೂ ಎಲ್ಲಾ ಸಂಸದರಿಗೂ ಪತ್ರ ಬರೆದು ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿಜಮೀನು ಮಂಜೂರು ಮಾಡಿಸಲು ಮನವಿ ಮಾಡಲಾಗಿದೆ.
ದೆಹಲಿ ಭೇಟಿ ಸಂದರ್ಭದಲ್ಲಿ ಈ ಬಗ್ಗೆ ಹಲವಾರು ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಲಾಯಿತು. ಮಾನ್ಯಮುಖ್ಯಮಂತ್ರಿರವರು ಈ ಸಂಭಂದ ಸಭೆಯಲ್ಲಿ ಘೋಷಣೆ ಮಾಡಿರುವುದು ನಿಜಕ್ಕೂ ಅಭಿನಂದನೀಯ.
