21st May 2024
Share

 ಕ್ರಮಾಂಕ:ತುವಾ/1/2020                                             ದಿನಾಂಕ:21.03.2020

ಸಂಪಾದಕರು, ತುಮಕೂರು ವಾರ್ತೆ.ತುಮಕೂರು.

ಮಾನ್ಯರೇ,

ವಿಷಯ:- ದಿನಾಂಕ:19.03.2020 ರಂದು ತಮ್ಮ ಪತ್ರಿಕೆಯಲ್ಲಿ ನನ್ನ ಬಗ್ಗೆ ವರದಿ ಮಾಡಿರುವ ಬಗ್ಗೆ.

  ದಿನಾಂಕ: 19.03.2020 ರಂದು ತಮ್ಮ ಪತ್ರಿಕೆಯಲ್ಲಿ ನನ್ನ ಬಗ್ಗೆ  ಕುಂದರನಹಳ್ಳಿ ರಮೇಶ್ ಸಂಸದರಾ? ಎಂಬ ಶೀರ್ಷಿಕೆಯಡಿ ವರದಿ ಮಾಡಿದ್ದು, ನನಗೆ ವಾಟ್ಸ್‌ಅಫ್ ಮೂಲಕ ಕಳುಹಿಸಿದ್ದೀರಿ. ನೋಡಿ ಸ್ವಾಮಿ ಈ ವರದಿಯಿಂದ ನನಗೆ ಮಾನ ನಷ್ಟ ಆಗಲಿದೆ. ಆದ್ದರಿಂದ ಒಂದು ವಾರದೊಳಗೆ ತಾವು ಬರೆದಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ, ಯಾವ ಅಧಿಕಾರಿ ನಿಮಗೆ ಹೇಳಿದ್ದಾರೆ ನನಗೂ ತಿಳಿಸಿ, ಇಲ್ಲವಾದಲ್ಲಿ ತಾವೇ ಊಹಿಸಿಕೊಂಡು ಬರೆದು ನನ್ನ ತೇಜೋವದೆ ಮಾಡಿರುವ ಬಗ್ಗೆ ಮೊಕೊದ್ದಮೆ/ದೂರು ನೀಡಲಾಗುವುದು ಎಂಬ ಅಂಶವನ್ನು ತಮ್ಮ ಆಧ್ಯ ಗಮನಕ್ಕೆ ತರಬಯಸುತ್ತೇನೆ.

ವಂದನೆಗಳೊಂದಿಗೆ                                             ತಮ್ಮ ವಿಶ್ವಾಸಿ

                                                                            (ಕುಂದರನಹಳ್ಳಿ ರಮೇಶ್)

ಕುಂದರನಹಳ್ಳಿ ರಮೇಶ್ ಸಂಸದರಾ? ಸಂಪಾದಕರಿಗೊಂದು ಸಲಾಂ.

  ಸಂಪಾದಕರೇ,

  ತಾವು ನನಗೆ ಡಿಜಿಟಲ್ ಮೀಡಿಯಾ ಮೂಲಕ ಪತ್ರಿಕೆ ವರದಿ ಕಳುಹಿಸಿದ್ದೀರಿ ನನಗೆ ಖುಷಿಯಾಯಿತು, ನನಗೆ ವರದಿ ಬಂದ ತಕ್ಷಣ ತುಮಕೂರು ಲೋಕಸಭಾ ಸದಸ್ಯರಾದ  ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಫೋನ್ ಮಾಡಿ ಸಾರ್ ತುಮಕೂರು ವಾರ್ತೆ ಓದಿದ್ದೀರಾ? ಎಂದೆ

ಸಂಸದರು:- ಇಲ್ಲ ಏನು ವಿಚಾರ ಎಂದು ಕೇಳಿದರು.

ನಾನು:- ನೀವು ಬರೆದಿರುವ ವಿಷಯ ತಿಳಿಸಿದೆ.

ಸಂಸದರು:- ಒಳ್ಳೆಯದಾಯಿತು ನಿನ್ನ ಪ್ರೌಡ್‌ನೆಸ್ ಕಣಯ್ಯಾ, ನೀನು ಬುದ್ದಿವಂತ ಅಂತ ಅವರು ಬರೆದಿದ್ದಾರೆ, ಸರಿ ಬೀಡು ಈಗ ಏನು? ನೀನು ಅಧಿಕಾರಿಗಳನ್ನು ತರಾಟೆಗೆ ತಗಣಲ್ವ ಎಂದು ನಕ್ಕರು.

ನಾನು:- ಅಲ್ಲ ಸಾರ್ ಬಹುತೇಕ ಅಧಿಕಾರಿಗಳು ನನಗೆ ಮಾತನಾಡಿ ಸಾರ್ ನಿಜವಾಗಲು ನಮಗೆ ಕೆಲಸ ಕಲಿಸುತ್ತಿದ್ದೀರಿ, ನಾವು ಎಷ್ಟೇ ಕಷ್ಟವಾಗಲಿ ನಿಮ್ಮ ಮತ್ತು ಎಂಪಿಯವರ ಕನಸು ನನಸು ಮಾಡುತ್ತೇವೆ, ಸಂಸದರು ಸೂಚಿಸಿದ ಹಾಗೆ ಕೆಲಸ ಮಾಡಿದರೇ ಜಿಲ್ಲೆಗೆ ಹೆಸರು ಬರಲಿದೆ ಅಂತಾರೆ, ಇವರು ಹೀಗೆ ಬರೆದಿದ್ದಾರೆ.

ಸಂಸದರು:- ಎಲ್ಲಾ ಒಂದೇ ಕಣಪ್ಪ, ನಾನು ಕಳೆದ ತುಂಬಿದ ದಿಶಾ ಸಮಿತಿ ಸಭೆಯಲ್ಲಿ ಎಲ್ಲಾ ಅಧಿಕಾರಿಗಳ ಮುಂದೆ ನಿನ್ನ ಬಗ್ಗೆ ಏಕೆ ಹೇಳಿದೆ ಗೊತ್ತಾ? ನಿನ್ನ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಬರಲಿ ಅಂತಾನೆ ಹೇಳಿದ್ದು. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ನಿನಗೆ ತಕ್ಕನಾದ  ಡಿಸಿ, ಸಿಇಓ ಸಿಕ್ಕಿದ್ದಾರೆ, ಎಲ್ಲಾ ಸೇರಿ ಕೆಲಸ ಮಾಡಿ ಅಷ್ಟೆ. ಮೋದಿಯವರ ಕನಸು ನನಸು ಮಾಡಲು ನೀವು ಹಾಕಿಕೊಂಡಿರುವ ಯೋಜನೆಗಳು ಜಾರಿಯಾಗಬೇಕು. ಇನ್ನೂ ಸಾಕಷ್ಟು ಅಪವಾದ ಬರುತ್ತವೇ? ಆದರೇ ಎಷ್ಟು ಕಷ್ಟವಿದ್ದರೂ ಯಾರು ಏನು ಆಸೆ ತೋರಿಸಿದ್ದರು ಉಷಾರು ಅಷ್ಟೆ. ಸ್ವಲ್ಪ ಯಾಮಾರಿದ್ರು ಬೀದಿಲಿ ಹರಾಜು ಹಾಕಿಬಿಡುತ್ತಾರೆ.

ನಾನು:- ಇರತನಕ ಇದ್ದು ನಾನು ನಿಮಗೆ ಹೇಳಿದ್ನಲ್ಲ ಸಾರ್ ಎಂದು ಸುಮ್ಮನಾದೆ.

  ದಿನಾಂಕ:28.02.2020 ರಂದು ತುಮಕೂರು ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್‌ರವರು ಮತ್ತು ಸಿಇಓ ಶ್ರೀಮತಿ ಶುಭಕಲ್ಯಾಣ್ ರವರು ’ತುಮಕೂರು-ಜಿಐಎಸ್’ ಪೋರ್ಟಲ್  ಉದ್ಘಾಟನೆಯನ್ನು ಶ್ರೀ ಜಿ.ಎಸ್.ಬಸವರಾಜ್ ರವರಿಂದ ಮಾಡಿಸಿದರು. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‌ನ ಶ್ರೀ  ಜಯಚಂದ್ರರವರು ಯೋಜನೆ ಬಗ್ಗೆ ಮಾತನಾಡಿದಾಗ ಎಂಪಿಯವರು ಬಹಳ ಖುಷಿಯಾದರು.

 ಬಸವರಾಜ್‌ರವರು ಮಾತನಾಡುವಾಗ ನೋಡಿ ಕಳೆದ 30 ವರ್ಷದಿಂದ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ನಾನು ಮತ್ತು ಕುಂದರನಹಳ್ಳಿ ರಮೇಶ್ ಹಾಗೂ ಅವರ ತಂಡ ಜಂಟಿಯಾಗಿ ಶ್ರಮಿಸುತ್ತಿದ್ದೇವೆ. ಅಭಿವೃದ್ಧಿಯಲ್ಲಿ  ಕುಂದರನಹಳ್ಳಿ ರಮೇಶ್ ಸರ್ವಜ್ಞ’ ಇದ್ದ ಹಾಗೆ, ನೀವು ಯಾವುದೇ ಇಲಾಖೆಯ ಯಾವುದೇ ಯೋಜನೆಯಾದರೂ ಕರಾರು ವಕ್ಕಾಗಿ ಮಾತನಾಡುತ್ತಾನೆ. ಕಡತದ ಅನುಸರಣೆ ಮಾಡುವುದರಲ್ಲಿ ಎತ್ತಿದ ಕೈ.

 ಈಗ ನೀವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಿದರೇ ಮುಂದೊಂದು ದಿನ ಮೋದಿಜಿಯವರು ನಮ್ಮೂರಿನ ಬಗ್ಗೆ ಮಾತನಾಡುತ್ತಾರೆ. ನಾನಂತೂ ಹಗಲು-ಇರಳು ಕೆಲಸ ಮಾಡುತ್ತೇನೆ ನನ್ನನ್ನು ಉಪಯೋಗಿಸಿಕೊಳ್ಳುವುದು ನಿಮಗೆ ಬಿಟ್ಟಿದ್ದು ಎಂಬ ಮಾತು ಹಾಜರಿದ್ದ ಬಹುತೇಕ ಅಧಿಕಾರಿಗಳ ಪ್ರಶಂಸೆಗೆ ಕಾರಣವಾಗಿತ್ತು.

   ಅಂದಿನ ಸಭೆಗೆ ಶ್ರೀ ಟಿ.ಆರ್.ರಘೊತ್ತಮರಾವ್ ಬಂದಿರಲಿಲ್ಲ ಸಾರ್ ಎಂಪಿಯವರು ಇಂದು ಸಭೆಯಲ್ಲಿ ಮಾತಾಡಿ ನಮಗೆ ನಿದ್ದೆ ಬರದ ಹಾಗೆ ಮಾಡಿದ್ದಾರೆ. ಅವರ ಆಸೆ ಹೀಡೆರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಮಾತನಾಡಿಕೊಂಡೆವು.

  ಅವರು ಜನ ನಿಮ್ಮ ಮೇಲೆ ಇನ್ನೂ ಜಾಸ್ತಿ ಹೊಟ್ಟೆ ಹುರುಕತ್ತಾರೆ ನೋಡಿ ಎಂದು ಅಂದೇ ಮನ್ಸೂಚನೆ ನೀಡಿದ್ದರು. ಅದು ನನಸಾಗುವ ಕಾಲ ಬರುತ್ತಿದೆ, ಜೊತೆಗೆ ಇದನ್ನು ಹೇಳಲು ನಿಮ್ಮ ವರದಿ ನನಗೆ ಅವಕಾಶ ಮಾಡಿದ್ದಕ್ಕೆ ನಿಮಗೆ ಧನ್ಯವಾದ ಸಾರ್.