15th September 2024
Share

ದಿನಾಂಕ:19.03.2020 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಪತ್ರಿಕಾ ಘೋಷ್ಠಿ ಕರೆದು ಹೇಮಾವತಿ ವಿಚಾರ ಮಂಡಿಸಿದರು.

ನಂತರ ಕರೋನಾ ವಿಷಯ ಪ್ರಸ್ತಾಪಕ್ಕೆ ಬಂತು.

ನಂತರ ಗುಬ್ಬಿ ತಹಶೀಲ್ದಾರ್ ವರ್ಗಾವಣೆ ವಿಚಾರ ಬಂತು

ವರದಿಗಾರ: ಸಂಸದರು ಹೊದಲೂರು ಕೆರೆಯನ್ನು ಒತ್ತುವರಿ ಮಾಡಿದ್ದೀರಂತೆ ಒತ್ತುವರಿ ತೆರವಿಗೆ ತಹಶೀಲ್ದಾರ್ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ವರ್ಗಾವಣೆ ಎಂಬ ಸುದ್ದಿ ಮಾಧ್ಯಮದಲ್ಲಿ ಬಂದಿದೆ ನಿಮ್ಮ ಪ್ರತಿಕ್ರಿಯೇ ಏನು?

ಸಂಸದರು: ನಮ್ಮ ಜಮೀನಿನಲ್ಲಿ ಒತ್ತುವರಿ ಇದ್ದಲ್ಲಿ ತಕ್ಷಣ ತೆರವುಗೊಳಿಸಲು ನಾನೇ ಅಧಿಕಾರಿಗಳಿಗೆ ಸೂಚಿಸುತ್ತೇನೆ.

ವರದಿಗಾರ: ನೀವು ಎಷ್ಟು ಎಕರೆ  ಒತ್ತುವರಿ ಮಾಡಿದ್ದೀರಿ?

ಸಂಸದರು: ನಾನು ಒತ್ತುವರಿ ಮಾಡಿಲ್ಲ.

ವರದಿಗಾರ: ಕೆರೆ ಎಷ್ಟು ಎಕರೆ ಒತ್ತುವರಿಯಾಗಿದೆ?

ಸಂಸದರು: ನನಗೆ ಗೊತ್ತಿಲ್ಲ.

ವರದಿಗಾರ: ನೀವು ಎಂಪಿಯಾಗಿ ಕೆರೆ ಒತ್ತುವರಿ ಆಗಿರುವ ಮಾಹಿತಿ ಇಲ್ವ?

ಸಂಸದರು: ಎಸಿಯವರನ್ನು ಕೇಳಿ ಅವರೇ ಒತ್ತುವರಿ ಟಾಸ್ಕ್ ಪೋರ್ಸ್ ಚೇರ್‍ಮನ್.

ವರದಿಗಾರ: ನೀವ್ಯಾಕೆ ಎಂಪಿ ಆಗಿದ್ದೀರಾ?

ಸಂಸದರು: ನೀನು —— ಕೆಲಸ ಮಾಡುತ್ತಿಯಾ ಅಥವಾ ವರದಿಗಾರನೋ?

ವರದಿಗಾರರ ಒಂದು ಗುಂಪು: ಗೊಂದಲ ಸೃಷ್ಟಿಸಿದರು

ನನ್ನ ಪ್ರವೇಶ: ಮಾಧ್ಯಮ ವರದಿಗಾರರು ಹೇಗಿರಬೇಕು ಎಂಬ ಬಗ್ಗೆ ಕೆಲವು ಮಾತು.

ವರದಿಗಾರರ ಒಂದು ಗುಂಪು: ಪ್ರತ್ಯೇಕ ಸಭೆ ನಂತರ, ಸಂಸದರು ಓಕೆ ದೇವರಂತವರು ಆದರೆ ಕುಂದರನಹಳ್ಳಿ ರಮೇಶ್ ಯಾಕೆ? ಗೊಂದಲ ಪರಸ್ಪರ ಚರ್ಚೆ, ನಾನು ಏನು ಮಾತನಾಡಿದೆ ಎಂಬ ಕ್ಲಿಪ್ ಕಳುಹಿಸಲು ಟಿವಿ ಮಾಧ್ಯಮದವರನ್ನು ಕೇಳಿದ್ದೇನೆ ಇನ್ನೂ ಕೊಟ್ಟಿಲ್ಲ ಕೊಟ್ಟ ನಂತರವೇ ಉತ್ತರ ನೀಡಬಹುದು.

ನನಗೆ ಬಹಳ ನಗು ಬಂತು ನಕ್ಕು ಮನೆಗೆ ಬಂದೆ.