21st May 2024
Share

TUMAKURU:SHAKTHIPEETA FOUNDATION

  ಮಾಧ್ಯಮ ಒಂದರ ವರದಿ ನಂತರ ನಾನು ಕೆಲವಾರು ಅಧಿಕಾರಿಗಳೊಂದಿಗೆ ಚರ್ಚಿಸಿ ಆತ್ಮಾವಾಲೋಕನ ಮಾಡಿಕೊಳ್ಳಬೇಕು ಎಂದೆನಿಸಿತು. ಪ್ರಮುಖ ಅಂಶಗಳನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೆ ಮಾಡಿಕೊಳ್ಳುತ್ತೇನೆ. ಅಧಿಕಾರಿಗಳ ಸಲಹೆಯೂ ಸಾರ್ ಮೀಟಿಂಗ್‌ನಲ್ಲಿ ಅಧಿಕಾರಿಗಳಿಗೆ ಕೆಲಸ ಮಾಡಲು ಬರುವುದಿಲ್ಲಾ ಎಂಬಂತೆ ನಮ್ಮ ಮರ್‍ಯಾದೆ ಕಳೆಯ ಬೇಡಿ ಮೊದಲೇ ಹೇಳಿಬಿಡಿ. ನಾವು ಸಿದ್ಧರಾಗಿ ಬರುತ್ತೇವೆ ಎಂಬುದು ಅವರ ಅನಿಸಿಕೆ. ಇನ್ನೂ ಮುಂದೆ ನಮ್ಮ ’ಸ್ಟೈಲ್’ ಸಂಪೂರ್ಣ ಬದಲಾಗಲಿದೆ.

ಅಧಿಕಾರಿ ಮಿತ್ರರರ ಸಲಹೆ :- ಸಾರ್ ಎಂಪಿಯವರು ಮತ್ತು ನೀವು ಈಗ ತುಮಕೂರು ಜಿಲ್ಲೆಯಲ್ಲಿ ‘ದಿಶಾ ಸಮಿತಿ’ ಮುಖಾಂತರ ಏನೇನು ಕಾರ್ಯಕ್ರಮ ಮಾಡಲು ಹೊರಟಿದ್ದೀರಿ, ನಿಜಕ್ಕೂ ಶೇ 100 ರಷ್ಟು ಉತ್ತಮವಾಗಿದೆ. ಬೆಂಬಲ ನೀಡುವುದು ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಆಧ್ಯ ಕರ್ತವ್ಯ.

  ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಆಳವಾದ ಜ್ಞಾನವಿದೆ’ ಅರಿವೂ ಇದೆ. ಅವರ ಮುಂದೆ ನಾವೇ ಯೋಚಿಸಬೇಕಾಗುತ್ತದೆ. ನೀವು ಸಹ ಸಾಕಷ್ಟು ಅಧ್ಯಯನ ಮಾಡಿದ್ದೀರಿ, ಪತ್ರಿಕೆಯವರು ಯಾವ ದೃಷ್ಠಿಯಲ್ಲಿ ಬರೆದಿದ್ದಾರೋ ಆ ವಿಚಾರ ಬೇಡ ಸಾರ್. ಇನ್ನೂ ಮುಂದೆ ಎಂಪಿಯವರ ಮತ್ತು ನಿಮ್ಮ ಅಭಿಪ್ರಾಯಗಳನ್ನು ನಮಗೆ ಮೊದಲೇ ತಿಳಿಸಿ ಸಾರ್. ಆ ಪ್ರಕಾರ ನಾವು ಪೂರ್ವ ತಯಾರಿ ಮಾಡಿಕೊಂಡು ಬರುತ್ತೇವೆ.

  ನಿಮ್ಮ ಗುರಿ ಇಡೀ ತುಮಕೂರು ಜಿಲ್ಲೆಯ ಅಭಿವೃದ್ಧಿ ತಾಜಾ ಡೇಟಾ ಒಂದೇ ಕಡೆ ಬರಬೇಕು’ ಒಂದೇ ಜಿಐಎಸ್ ಮ್ಯಾಪ್‌ನಲ್ಲಿ ಎಲ್ಲಾ ದಾಖಲೆಯಾಗ ಬೇಕು. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಧ್ಯತಾ ಯೋಜನೆಯೂ ಹೌದು. ಎಲ್ಲರಿಗೂ ಯೋಜನೆಗಳ ಫಲ ದೊರಕಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಯೋಜನೆಗಳ ಮಂಜೂರಾತಿಗೆ ಅನಾಲೀಸಿಸ್ ಮಾಡಲು ಮಾಹಿತಿ ಇರಬೇಕು ಎಂಬುದಾಗಿದೆ.

  ಇದೂವರೆಗೂ ರಾಜಕಾರಣಿಗಳು ನಮ್ಮ ಪಾಲಿನ ಷೇರು ನೀಡಿ’ ಎಂದು ಒತ್ತಾಯಿಸುವುದು ನಮ್ಮ ಅವಧಿಯಲ್ಲಿ ನೋಡಿರುವ ದೃಷ್ಯ. ತುಮಕೂರಿನಲ್ಲಿ ಇದು ನಮಗೆ ಹೊಸ ಅನುಭವ, ಆಗಲಿ ಸಾರ್ ನಾವೂ ಸಹ ನಿರ್ಧಿಷ್ಟ ಸಮಯವನ್ನು ಈ ಉತ್ತಮವಾದ ಕೆಲಸಕ್ಕೆ ಮೀಸಲಿಡುತ್ತೇವೆ. ನಿಮ್ಮ ನೀರಿಕ್ಷಿಗಿಂತ ಜಾಸ್ತಿ ಮಾಡುತ್ತೇವೆ. ಜಿಲ್ಲೆಯ ಎಲ್ಲಾ ಅಭಿವೃದ್ಧಿ ಯೋಜನೆಗಳ ಮಾಹಿತಿ ಬೆರಳ ತುದಿಯಲ್ಲಿ’ ಇರುವಂತೆ ಮಾಡುತ್ತೇವೆ.

  ಏಕೆಂದರೆ ಎಂಪಿಯವರು ಬುದ್ದಿವಂತಿಕೆ ಮಾಡಿ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ಯೋಜನೆಯ ಮಹತ್ವದ ಅರಿವು ಆಗುವಂತೆ ಮಾಡಿರುವುದು ಅವರ ಈ ಅವಧಿಯ ‘ಮೊದಲ ವರ್ಷದ ಸಾಧನೆಯೇ’ ಹೌದು. ಈಗ ಟ್ರಾಫಿಕ್ ವ್ಯವಸ್ಥೆ, ಅನೈತಿಕ ಚಟುವಟಿಕೆ, ಅಪರಾಧಗಳ ಗುಣ ಮಟ್ಟ, ಕರೊನಾ ಮುಂದಿಟ್ಟು ಕೊಂಡು ಉತ್ತಮ ರಸ್ತೆಗಳಾಗ ಬೇಕು ಎಂದು ಎಸ್.ಪಿ ಯವರಿಗೂ ಜಿಐಎಸ್ ಲೇಯರ್ ಪರಿಶೀಲಿಸಲು ಜವಾಬ್ಧಾರಿ ನೀಡುವ ಮೂಲಕ ನಮಗೆ ಚಾಟಿ ಬೀಸಿದ್ದೀರಿ, ನಾವು ವಿಧಿಯಿಲ್ಲದೇ ಮಾಡಲೇ ಬೇಕಲ್ವಾ ಸಾರ್ ಎಂಬ ಹಾಸ್ಯ ಚಟಾಕಿ ಉತ್ತರ ಬಂದಿದೆ’

   ಎಂಪಿಯವರು ಈ ವಯಸ್ಸಿನಲ್ಲಿ ಮೋದಿಜಿಯವರ ಮತ್ತು ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿರವರ ಚಿಂತನೆಗೆ ಪೂರಕವಾಗಿ ಮಾದರಿ ಜಿಲ್ಲೆ’ ಮಾಡಲು ಹೊರಟಿದ್ದಾರೆ. ಈ ಯೋಜನೆ ಜಾರಿಯಿಂದ  ಕೋಟಿಗಟ್ಟಲೆ ಹಣ ದುರುಪಯೋಗವಾಗುವುದನ್ನು ತಪ್ಪಿಸುತ್ತಿದೆ. ನಾವೂ ಸಹಕರಿಸ ಬೇಕು ಅಲ್ವ ಸಾರ್.

  ಇಲಾಖೆಗಳ ಸಮನ್ವಯವಿಲ್ಲದೇ ಒಂದೇ ಕೆಲಸಕ್ಕೆ ಹಲವಾರು ಯೋಜನೆಗಳ ಹಣ ಬಳಕೆ ಮಾಡಿ, ಗೊತ್ತು ಗುರಿ ಇಲ್ಲದೆ ಹಾಳು ಮಾಡುತ್ತಿದ್ದೇವು. ಇನ್ನೂ ಮುಂದೆ ಅದು ತಪ್ಪಲಿದೆ. ನಮಗೂ ವಾಸ್ತವದ ಅರಿವು ಆಗಿದೆ. ಆದರೇ  ಬಲವಾದ ನಾಯಕತ್ವದ ಕೊರತೆ ಇತ್ತು, ಈಗ ಎಂಪಿಯವರಿಗೆ ದಿಶಾ ಎಂಬ ಬ್ರಹ್ಮಾಸ್ತ್ರ’ ಸಿಕ್ಕಿದೆ.

   ಯಾವುದೇ ಕಾಮಗಾರಿ ಆರಂಭಿಸುವ ಮುನ್ನ ಜಿಲ್ಲೆಯ ಎಲ್ಲಾ ಇಲಾಖೆ ಯೋಜನೆಗಳ ಮಾಹಿತಿಯನ್ನು  ಒಂದೇ ಜಿಐಎಸ್ ಮ್ಯಾಪ್‌ನಲ್ಲಿ, ಒಂದೇ ಕಡೇ ಗುರುತು ಮಾಡಿ ನಕ್ಷೆ ಪಡೆದು ಕಡತಕ್ಕೆ ಸೇರಿಸುವುದರಿಂದ ಯಾವುದೇ ಕಾರಣಕ್ಕೂ ಕಾಮಗಾರಿ ಡೂಪ್ಲಿಕೇಟ್’ ಆಗುವುದಿಲ್ಲ.

  ನಂತರ ಯಾವುದೇ ಕಾಮಗಾರಿ ಪೂರ್ಣಗೊಂಡ ನಂತರ ಅದೇ ಜಿಐಎಸ್ ಮ್ಯಾಪ್‌ನಲ್ಲಿ ಇತಿಹಾಸ ಸಹಿತ ಅಫ್ ಲೋಡ್ ಮಾಡುವುದರಿಂದ ಅದೇ ಕಾಮಗಾರಿಗೆ ಪದೇ, ಪದೇ ಹಣ ಹಾಕುವ ವ್ಯವಸ್ಥೆಗೆ ಕಡಿವಾಣ ಬೀಳಲಿದೆ. ಅಭಿವೃದ್ಧಿ ಹಣ ಸಾಮಾಜಿಕ ನ್ಯಾಯದ’ ಆಧಾರದಲ್ಲಿ ಎಲ್ಲಾ ಕಡೆ ಸಮಾನಾಗಿ ಹಂಚಿಕೆಯಾಗಲಿದೆ.

  ಕನ್ನಡಿ ಎಂಬ ಜಿಐಎಸ್ ನಕ್ಷೆ ಪಾರದರ್ಶಕವಾಗಿ’ ಎಲ್ಲವನ್ನು ಬಹಿರಂಗಗೊಳಿಸುತ್ತದೆ, ಜಾತಿ ಆಧಾರಿತ ಕೆಲಸಗಳಿಗೆ, ಪಕ್ಷ ಆಧಾರಿತ ಕೆಲಸಗಳಿಗೆ, ರಾಜಕೀಯಾಧರಿತ ಕೆಲಸಗಳಿಗೆ ಕಡಿವಾಣ ಬೀಳಲಿದೆ. ತಾಂತ್ರಿಕವಾಗಿ ಎಲ್ಲಿ ಯಾವ ಕಾಮಗಾರಿ ಆಗ ಬೇಕೋ ಅಲ್ಲಿ ನಿರ್ಧಿಷ್ಟ ಕಾಮಗಾರಿ ಆಗಲಿದೆ.

  ಹೌದು ಸಾರ್ ನಾವು ಆಯವ್ಯಯದಲ್ಲಿ ಬಂದಿರುವ ಅನುದಾನದ ಬಳಕೆಗೆ ಯೋಚಿಸುತ್ತೇವೇಯೋ ಹೊರತು ದೂರಧೃಷ್ಠಿ ಚಿಂತನೆಗೆ ನಮಗೆ ಸಮಯವಿಲ್ಲ. ಅಲ್ಲದೆ ಹಿಂದಿನ ಕಾಲದಲ್ಲಿ ಮಕ್ಕಳಿಗೆ ತಾಯಿ ಸಮಾನಾಗಿ ಹಂಚಿ ತಿನ್ನಿಸುತ್ತಿದ್ದರು’ ಈಗ ಅವರು ಸಹ ಪಾರ್ಷಿಯಾಲಿಟಿ ಮಾಡುತ್ತಾರೆ ಬಿಡಿ.

  ನಾವು ಈಗ ಯೋಜನೆಗೆ ಬರುವ ಅನುದಾನದಲ್ಲಿ ಎಲ್ಲಾ ವರ್ಗಕ್ಕೂ ಸಮಾದಾನ ರೀತಿಯಲ್ಲಿ ಹಂಚಬೇಕು’ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಯಾವ ಕೆಲಸದಲ್ಲಿ ಎಷ್ಟು ಹಣ ಉಳಿಸಬೇಕು, ಯಾರ್‍ ಯಾರಿಗೆ ಎಷ್ಟೆಷ್ಟು ಹಣ ಹಂಚಬೇಕು ಎಂಬುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಅದೂ ಬಿಡಿ ಸಾರ್ ‘ನಮ್ಮ ಕರ್ಮ’ ಹೇಗೋ ನಿಭಾಯಿಸಲೇ ಬೇಕು.

  ಸರಿ ನಾನು ಮೊದಲೇ ಹೇಳಿ ಕೆಲಸ ಮಾಡಿಸುತ್ತಾ ಹೋದರೆ ಒಳ್ಳೆಯದೇ, ಆದರೇ ಇನ್ನೊಂದು ಪತ್ರಿಕೆಯವರು 30 ವರ್ಷ ಆರ್ಭಟ ಮಾಡಿದರು. ಈಗ ‘ಕಪ್ಪಕಾಣಿಕೆ ಪಡೆದು’ ಮೌನವಾದರು, ಎಂದು ಬರೆಯುವುದಿಲ್ಲಾ ಎಂಬ ಗ್ಯಾರಂಟಿ ಏನೂ? ಎಂಬ ಚಿಂತೆ ನನಗೂ ಇದೆ.

   ಈಗಾಗಲೇ ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಸಮ್ಮುಖದಲ್ಲಿಯೇ ತುಮಕೂರು ನಗರ ವಿಧಾನಸಭಾ ಮಾಜಿ ಸದಸ್ಯರಾದ ಶ್ರೀ ರಫೀಕ್ ಅಹಮ್ಮದ್’ ರವರು ಏನು ರಮೇಶ್ ಅವರೇ ನಾನು ಮತ್ತು ಸೊಗಡು ಶಿವಣ್ಣನವರು ಎಂಎಲ್‌ಎ ಆಗಿದ್ದಾಗ ದಿನಕ್ಕೊಂದು ಆರ್ಟಿಕಲ್ ಇರುತಿತ್ತು. ಈಗ ಎಲ್ಲಾ ಸರಿಯಾಗಿ ಬಿಟ್ಟಿದೆಯೋ ಎಂದು ಕುಟುಕಿದರು. ನನ್ನ ಪ್ರಕಾರ  ಕೆಲಸ ಆಗುತ್ತಿದೆ ಅದಕ್ಕೇ ಏನು ಹೇಳುತ್ತಿಲ್ಲಾ ಸಾರ್ ಅಂದಾಗ, ಆ ಪುಣ್ಯಾತ್ಮರು ಏನು ಆಗುತ್ತಿದೆ ಅಂತಲೂ ಹೇಳ ಬೇಕಲ್ಲಾ ರಮೇಶ್ ಅಂದರು.

  ಅಷ್ಟೆ ಅಲ್ಲಾ ಪ್ರಜಾ ಪ್ರಗತಿ ಸಂಪಾದಕರಾದ ಶ್ರೀ ಎಸ್.ನಾಗಣ್ಣನವರು ಸಹ ಇಷ್ಟು ವರ್ಷ ಆರ್ಭಟ ಮಾಡಿ ಎಂಪಿ. ಎಂಎಲ್‌ಎ ಇಬ್ಬರೂ ನಿಮ್ಮವರೇ ಇದ್ದಾಗ ಶಕ್ತಿಪೀಠ ಕ್ಯಾಂಪಸ್’ ಮಾಡುತ್ತೇನೆ ಅಂತ ಊರು ಬಿಟ್ಟು ಹೋಗಿರುವುದು, ಜನಕ್ಕೆ ಅನುಮಾನ ಬರಲ್ವಾ ರಮೇಶ್ ಎಂದು ಚೇಡಿಸಿದ್ದಾರೆ.

  ನನಗೂ ಗೊಂದಲವಾಗಿದೆ ನೋಡೋಣ ಕಾಲವೇ ಉತ್ತರಿಸುತ್ತದೆ.