27th July 2024
Share

TUMAKURU: SHAKTHIPEETA FOUNDATION

(ದಿಶಾ ರೀಸರ್ಚ್ & ಡೆವಲಪ್‌ಮೆಂಟ್  ವರದಿ ತಯಾರಿಸಲು ತಾವೂ ನಮ್ಮ ಸಂಸ್ಥೆಗೆ ಸಹಕರಿಸಬಹುದು)

  1999 ರಲ್ಲಿ   ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮೂರನೇ ಭಾರಿಗೆ ಆಯ್ಕೆಯಾದರು. ನಾನು ಗಮನಿಸಿದಾಗ ಸಂಸದರು ಎಲ್ಲಾ ಸಮಿತಿಯಲ್ಲಿ ಸದಸ್ಯರಾಗಿದ್ದರೆ ಹೊರತು ಎಲ್ಲೂ ಯಾವುದೇ ಸಮಿತಿಗೆ ಅಧ್ಯಕ್ಷರಾಗಿರಲಿಲ್ಲ.

  ಆಗಿನ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿರವರಿಗೆ ಮತ್ತು ಹಲವಾರು ಸಚಿವರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಸಂಸದರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ನಾನು ಸಂಸದರಿಂದ ಪತ್ರ ಬರೆದು ಕಳುಹಿಸಿದೆ.

   ಕಾಕತಾಳಿಯವಾಗಿ ಸಂಸದರ ಅಧ್ಯಕ್ಷತೆಯಲ್ಲಿ ವಿಜಿಲೆನ್ಸ್ ಅಂಡ್ ಮಾನಿಟರಿಂಗ್’ ಸಮಿತಿ ರಚನೆಯಾಯಿತು. ಯಾರ ಸಲಹೆಯಿಂದಾದರೂ ಸಮಿತಿ ರಚಿಸಿರಲಿ ನಾನು ಸಹ ಈ ಯೋಚನೆ ಮಾಡಿ ಸಂಸದರಿಂದ ಪತ್ರ ಬರೆಸಿದ್ದೆನಲ್ಲಾ ಎಂದು ಬಹಳ ಖುಷಿಯಾಯಿತು. ಮೊದಲ ಸಮಿತಿಗೆ ನನ್ನನ್ನು ಸದಸ್ಯನಾಗಿ ಸಂಸದರು ನೇಮಿಸಿದರು.

   ನಂತರ ದಿನಾಂಕ:27.06.2016 ರಂದು ವಿ & ಎಂಸಿ ಬದಲಾಯಿಸಿ ದಿಶಾ  (DISHA-DISTRICT DEVELOPMENT COORDINATION AND MONITORING COMMITTES)’  ಸಮಿತಿಯನ್ನು ಕೇಂದ್ರ ಸರ್ಕಾರದಿಂದ ರಚಿಸಿದ್ದಾರೆ. 2019 ರಲ್ಲಿ ಐದನೇ ಬಾರಿ ಸಂಸದರಾಗಿ ಶ್ರೀ ಜಿ.ಎಸ್.ಬಸವರಾಜ್ ರವರು ಆಯ್ಕೆಯಾದಾಗಲೂ ನನ್ನನ್ನು ದಿಶಾ ಸಮಿತಿಯ ಸದಸ್ಯನಾಗಿ ನೇಮಕ ಮಾಡಿದ್ದಾರೆ.

   ನನಗೆ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಬೇಕು ಎಂದು ಬಹಳ ವರ್ಷಗಳಿಂದ ಶ್ರಮಿಸುತ್ತಿದ್ದರೂ. ದಿಶಾ ಸಮಿತಿ ಕಡೆ ನನ್ನ ಗಮನ ಹೋಗದೇ ಇರುವುದಕ್ಕೆ ನಾನೇ ಶಪಿಸಿಕೊಂಡಿದ್ದೇನೆ. ನಾನು ದೆಹಲಿ ಪ್ರತಿನಿಧಿಗಳ ಹಿಂದೆ ಬಿದ್ದು ಅವರ ಕಚೇರಿಯನ್ನು ಚುರುಕುಗೊಳಿಸಲು ಪ್ರಯತ್ನಿಸಿದೆ. ಆದರೂ ಅದು ಫಲಕಾಣಲಿಲ್ಲ.

  ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದನ್ವಯ ಕರ್ನಾಟಕ ರಾಜ್ಯ ಮಟ್ಟದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ರಚಿಸಲಾಗಿದೆ.

  ನಮ್ಮ ಸಂಸ್ಥೆಯ ಮತ್ತು ಇ-ಪೇಪರ್ ಪ್ರಮುಖ ಉದ್ದೇಶವೇ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಶ್ರಮಿಸುವುದಾಗಿದೆ. ದಿಶಾ ಸಮಿತಿಯ ಪ್ರಮುಖ ಉದ್ದೇಶ ಕೇಂದ್ರ ಸರ್ಕಾರದ ಅನುದಾನ ಸದ್ಭಳಕೆ, ಸದುಪಯೋಗ ಮತ್ತು ಹೊಸ ಯೋಜನೆಗಳ ಜಾರಿಗೆ ಚಿಂತನೆ ಎಂಬ ಅಭಿಪ್ರಾಯ ನನ್ನದಾಗಿದೆ.

  ಭಾರತ ದೇಶದ ಎಲ್ಲಾ ರಾಜ್ಯಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸದಸ್ಯ ಕಾರ್ಯದರ್ಶಿಯಾಗಿದ್ದರೆ, ನಮ್ಮ ರಾಜ್ಯದಲ್ಲಿ ಯೋಜನಾ ಇಲಾಖೆಯ  ಪ್ರಧಾನ ಕಾರ್ಯದರ್ಶಿ, ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

 ಇದಕ್ಕೂ ನನ್ನ ಚಿಂತನೆಯೇ ಪ್ರಮುಖ ಕಾರಣ. ನನ್ನ ಅನಿಸಿಕೆಗೆ ಸಹಕಾರ ನೀಡಿದವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂಪ್ಪನವರಿಗೆ ಪತ್ರ ಬರೆಯುವ ಮೂಲಕ ಬದಲಾಯಿಸಲಾಗಿದೆ.

  ಇಡೀ ದೇಶದಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಸದಸ್ಯಕಾರ್ಯದರ್ಶಿಯಾಗಿ ಜಿಲ್ಲಾಧಿಕಾರಿಗಳಾಗಿದ್ದಾರೆ. ಆದರೇ ನಮ್ಮ ರಾಜ್ಯದಲ್ಲಿ ಮಾತ್ರ ಸದಸ್ಯ ಕಾಯದರ್ಶಿಯಾಗಿ ಜಿಲ್ಲಾ ಪಂಚಾಯತ್ ಸಿಇಓ ಗಳಾಗಿದ್ದಾರೆ. ಇದನ್ನು ಯಾರು, ಯಾಕೆ ಮಾಡಿದ್ದಾರೆ ಎಂಬ ಮಾಹಿತಿ ಇನ್ನೂ ಸರಿಯಾಗಿ ದೊರಕಿಲ್ಲ ಸಂಗ್ರಹಿಸಿ ದಾಖಲಿಸುತ್ತೇನೆ.

   ಆದರೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂಪ್ಪನವರಿಗೆ ಪತ್ರ ಬರೆಯುವ ಮೂಲಕ ಜಿಲ್ಲಾಧಿಕಾರಿಗಳನ್ನು ದಿಶಾ ಸಮಿತಿ ಸದಸ್ಯಕಾರ್ಯದರ್ಶಿಯಾಗಿ ಮಾಡಲು ಒತ್ತಾಯಿಸಿದ್ದಾರೆ,

   ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಶ್ರೀ ರಾಮಕೃಷ್ಣರವರು ನಿರ್ಧೇಶಕರಾಗಿದ್ದಾಗ ಈ ಬಗ್ಗೆ ವಿಚಾರಿಸಿದಾಗ ಎಂಪಿಯವರ ಪತ್ರದ ಮೇಲೆ ಕೇಂದ್ರ ಸರ್ಕಾರಕ್ಕೆ ಬರೆಯಲಾಗಿದೆ. ಇನ್ನೂ ಪಲಿತಾಂಶ ಬಂದಿಲ್ಲ ಎಂದು ತಿಳಿಸಿದ್ದಾರೆ. ನಂತರ ನಿರ್ಧೇಶಕರಾಗಿ ಬಂದ ಶ್ರೀಮತಿ ಕಲಾವತಿಯವರು ಕಡತ ಮಾನ್ಯ ಮುಖ್ಯ ಮಂತ್ರಿಯವರ ಕಚೇರಿಗೆ ಹೋಗಿದೆ ಬಂದಾಗ ತಿಳಿಸುವುದಾಗಿ ತಿಳಿಸಿದ್ದಾರೆ.

  ಪ್ರಸ್ತುತ ಯೋಜನಾ ಇಲಾಖೆಯ ನಿರ್ಧೇಶಕರಾದ ಶ್ರೀಮತಿ ಕಲ್ಪನಾರವರು ದಿಶಾ ಸಮಿತಿಯ ಕಡತಗಳನ್ನು ನೋಡಿಕೊಳ್ಳುತ್ತಿದ್ದಾರೆ. ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‌ರವರು ನೇಮಕವಾಗಿದ್ದಾರೆ. ಅವರು ಸಹ ನನಗೆ ವೈಯಕ್ತಿಕವಾಗಿ ಬಹಳ ವರ್ಷಗಳಿಂದ ಪರಿಚಯವಿರುವದರಿಂದ ನನ್ನ ಈ ಆಧ್ಯಯನಕ್ಕೆ ಅನೂಕೂಲವಾಗಲಿದೆ ಎಂಬ ಆಶಾಭಾವನೆ ನನ್ನದಾಗಿದೆ.

  ಹಿಂದಿನ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ದಿಶಾ ಸಮಿತಿಯನ್ನೆ ರಚಿಸಿರಲಿಲ್ಲ. ನಾನು ಅವರನ್ನು ಖುದ್ಧಾಗಿ ಭೇಟಿಯಾಗಿ ಚರ್ಚಿಸಿ ಅವರ ಅಭಿಪ್ರಾಯ ಬರೆಯುತ್ತೇನೆ.

   ದಿನಾಂಕ:18.01.2020 ರಂದು ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿ ರಚನೆಯಾಗಿದೆ. ಈವರೆಗೂ ಇನ್ನೂ ಒಂದು ಸಭೆಯನ್ನು ನಡೆಸಿರುವುದಿಲ್ಲಾ, ಕಾರಣ ಸದಸ್ಯ ಕಾರ್ಯದರ್ಶಿಯವರು ರಜಾಹಾಕಿದ್ದಿರಬಹುದು. ಮುಖ್ಯಮಂತ್ರಿಗಳು ಆಯವ್ಯಯದ ಕಡೆ ಹೆಚ್ಚು ಗಮನ ನೀಡಿರುವುದಾಗಿರಬಹುದು, ಈಗ ಕೊರೊನಾ ವಿಷಯವಿರಬಹುದು.

   ನಾನು ಈ ಅಧ್ಯಯನ ವರದಿಯನ್ನು ಗುಟ್ಟಾಗಿ ತಯಾರಿಸಿ ವರದಿ ಬಿಡುಗಡೆ ಮಾಡುವ ಉದ್ದೇಶವಿಲ್ಲ. ಆರಂಭದಿಂದಲೇ ಮಾನ್ಯ ಪ್ರಧಾನಿ ಕಚೇರಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಕಚೇರಿ, ಮಾನ್ಯ ಮುಖ್ಯ ಮಂತ್ರಿಯವರ ಕಚೇರಿ ಅಧಿಕಾರಿಗಳಿಗೆ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯಕಾಯದರ್ಶಿ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿ ಸದಸ್ಯ ಕಾರ್ಯರ್ಶಿಗಳಿಗೆ, ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನಿರ್ಧೇಶಕರಿಗೆ ನಿಮಗಿದೋ ಗೊತ್ತೆ’ ಇ- ಪೇಪರ್ ಮೂಲಕ ವಿಷಯ ತಿಳಿಸಲು ಇಚ್ಚಿಸಿದ್ದೇನೆ.  

   ಸುದ್ದಿಗದ್ದಲವಿಲ್ಲದೆ ಕಳೆದ ಡಿಸೆಂಬರ್‌ನಲ್ಲಿ ಆರಂಭವಾದ ಇ-ಪೇಪರ್ ಕೇಂದ್ರ ಸರ್ಕಾರದ ಒಂದು ಪೈಸೆ ಅನುದಾನದ ಮಾಹಿತಿಯನ್ನು ಕಲೆ ಹಾಕಿ ಬರೆಯುವ ಉದ್ದೇಶ ಹೊಂದಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ.

   ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದೊಂದು ಇ-ಅಭಿವೃದ್ಧಿ ತಂಡ’ ವನ್ನು ಕಟ್ಟುವ ಇರಾದೆ ಇದೆ. ಈಗಾಗಲೇ ಬಹುತೇಕ ಎಲ್ಲಾ ಜಿಲ್ಲೆಗಳ ಸ್ನೆಹಿತರಿಗೂ ಇ- ಪೇಪರ್ ಓದುವ ಅವಕಾಶ ಸಿಕ್ಕಿರಬಹುದು.

  ಇಲ್ಲಿ ಬರುವ ಕಾಮೆಂಟ್‌ಗಳಿಗೆ ನಾನು ಉತ್ತರಿಸುವುದಿಲ್ಲಾ, ನೀವು ಪರವಾಗಿಯಾದರೂ ಬರೆಯಿರಿ, ವಿರೋಧವಾಗಿಯಾದರೂ ಬರೆಯಿರಿ, ನಾನು ಖಂಡಿತವಾಗಿ ಪ್ರತಿಯೊಬ್ಬರ ಕಾಮೆಂಟ್‌ಗಳನ್ನು ಓದುತ್ತೇನೆ. ಕಾಮೆಂಟ್ ಮಾಡುವವರೇ ನನ್ನ ಅಭಿವೃದ್ಧಿ ಆಸ್ತಿ’ ಎಂಬ ಭಾವನೆ ನನಗಿದೆ. ಸಮಯ ಬಂದಾಗ ಒಂದೆಡೆ ಸೇರೋಣ.

  ದಿಶಾ ಸಮಿತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಲೋಪದೋಷಗಳಿದ್ದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುವ ಅಧಿಕಾರವಿದ್ದರೂ, ನಾನು ಭ್ರಷ್ಠಾಚಾರದ/ದುರುಪಯೋಗದ ವಿಚಾರಗಳ ಕಡೆ ಗಮನ ಹರಿಸುವುದಿಲ್ಲಾ.

   ನನ್ನ ಗುರಿ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ಬರಲು ಶ್ರಮಿಸುವುದಾಗಿದೆ. ಇದನ್ನು ಕಳೆದ 31 ವರ್ಷದಿಂದಲೂ ಪಾಲಿಸಿಕೊಂಡು ಬಂದಿದ್ದೇನೆ, ಇದೂವರೆಗೂ ಅಧಿಕಾರಿಗಳೊಂದಿಗೆ ಗಡುಸಾಗಿ ಮಾತನಾಡುತ್ತಿದ್ದೆ. ಈಗ ಮೌನವೇ ಸರಿ ಎಂಬ ಪಾಲಿಸಿಗೆ ಬಂದಿದ್ದೇನೆ.

ಅದರೂ ನಾನು ಪೂಜಿಸುವ ದೇವತೆ ಶಕ್ತಿಪೀಠ. ಮೌನಕ್ಕಿಂತ ರೌದ್ರ್ರಾವತಾರವೇ ಹೆಚ್ಚು ನೋಡೋಣ?

  ಶ್ರೀ ಜಿ.ಎಸ್.ಬಸವರಾಜ್‌ರವರು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ನರೆಂದ್ರಸಿಂಗ್ ತೋಮರ್‌ರವರಿಗೆ ಪತ್ರ ಬರೆದು ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಗೆ ನನ್ನನ್ನು ಸದಸ್ಯನಾಗಿ ನೇಮಿಸಲು ಖುದ್ದಾಗಿ ಹೋಗಿ ಚರ್ಚಿಸಿದ್ದರು. ಆದರೇ ಪತ್ರ ನೀಡುವ ವೇಳೆಯೊಳಗೆ ಸದಸ್ಯರನ್ನು ನೇಮಕ ಮಾಡಿ ರಾಜ್ಯಕ್ಕೆ ಕಳುಹಿಸಿದ್ದರು.