9th October 2024
Share

TUMAKURU:SHAKTHIPEETA FOUNDATION

ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಯಾದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ  ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆ’ 2016 ರಲ್ಲಿ ಸ್ಟೇಟ್ ಇರ್ರಿಗೇಷನ್ ಪ್ಲಾನ್ ಕರ್ನಾಟಕ’ ಮಾಡಿ ಕೇಂದ್ರ ಸರ್ಕಾರದ ವೆಬ್‌ಸೈಟ್‌ನಲ್ಲಿ ಅಫ್ ಲೋಡ್ ಮಾಡಿದೆ. ಅಷ್ಟೆ ಅಲ್ಲ ರಾಜ್ಯದ 30 ಜಿಲ್ಲೆಗಳಲ್ಲೂ ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್’ ಮಾಡಿ ವೆಬ್‌ಸೈಟ್‌ನಲ್ಲಿ ಅಫ್ ಲೋಡ್ ಮಾಡಿದೆ.

ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಸದಸ್ಯರು-28 (ಕೇಂದ್ರ ಸಚಿವರು ಸೇರಿ), ರಾಜ್ಯಸಭಾ ಸದಸ್ಯರು-12 (ಕೇಂದ್ರ ಸಚಿವರು ಸೇರಿ) ವಿಧಾನಸಭಾ ಸದಸ್ಯರು-225 (ಸಚಿವರು ಮತ್ತು 2 ಖಾಲಿ ಸ್ಥಾನ ಸೇರಿ), ವಿಧಾನಪರಿಷತ್ ಸದಸ್ಯರು-75 (ಸಚಿವರು ಸೇರಿ), ಒಟ್ಟು-340 ಜನ ಪ್ರಮುಖ ಚುನಾಯಿತ ಜನಪ್ರತಿನಿಧಿಗಳಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು-30, ಜಿಲ್ಲಾಧಿಕಾರಿಗಳು-30, ಜಿಲ್ಲಾ ಪಂಚಾಯತ್ ಸಿಇಓ ಮತ್ತು ದಿಶಾ ಸಮಿತಿ ಸದಸ್ಯಕಾರ್ಯದರ್ಶಿ-30, ಒಟ್ಟು-90 ಜನ ಆಯಾ ಒಂದು ಜಿಲ್ಲೆಯ ಸ್ಪಷ್ಟ ಚಿತ್ರಣವಿರುವ ಅಧಿಕಾರಿಗಳಿರುತ್ತಾರೆ. ಎಲ್ಲಾ ಸೇರಿ ಒಟ್ಟು= 430

ನಿಮ್ಮ ಅಧೀನದಲ್ಲಿ ನೀರಿಗೆ ಸಂಬಂಧಿಸಿದ ಸಾವಿರಾರು ಜನ ಅಧಿಕಾರಿಗಳು ಇರುತ್ತಾರೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಸೇರಿದಂತೆ ಸಾವಿರಾರು ಜನ ಚುನಾಯಿತ ಜನಪ್ರತಿನಿಧಿಗಳು ಇರುತ್ತಾರೆ.

ರಾಜ್ಯ ಮಟ್ಟದ ಇರ್ರಿಗೇಷನ್ ಪ್ಲಾನ್ ಮಾಡಬೇಕಾದರೆ, ಜಿಲ್ಲಾ ಮಟ್ಟದ ಇರ್ರಿಗೇಷನ್ ಪ್ಲಾನ್ ಮಾಡಿದ್ದಾರೆ, ಈ ಯೋಜನೆಯಡಿಯಲ್ಲಿ ಸರ್ವೇ ನಂಬರ್, ಗ್ರಾಮ, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ, ವಿಧಾನಸಭಾ ವ್ಯಾಪ್ತಿ, ತಾಲ್ಲೂಕು ವ್ಯಾಪ್ತಿ, ಲೋಕಸಭಾ ವ್ಯಾಪ್ತಿ ದೊರೆಯಲೇ ಬೇಕಲ್ಲವೇ.

224 ಜನ ವಿಧಾನಸಭಾ ಸದಸ್ಯರು ನಿಮ್ಮ ವಿಧಾನಸಭಾ ವ್ಯಾಪ್ತಿಯ ಕರಾರು ವಕ್ಕಾದ WATER BUDGET- WATER AUDIT- WATER STRTAGY  ಮಾಹಿತಿ ನೀಡಲು ಸಾಧ್ಯವೇ?

30 ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ನಿಮ್ಮ ಜಿಲ್ಲಾ ಮಟ್ಟದ ವ್ಯಾಪ್ತಿಯ ಕರಾರು ವಕ್ಕಾದ WATER BUDGET- WATER AUDIT- WATER STRTAGY  ಮಾಹಿತಿ ನೀಡಲು ಸಾಧ್ಯವೇ?

ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವ ನೇತೃತ್ವದ ಕೇಂದ್ರ ಸರ್ಕಾರ ಅಟಲ್ ಭೂಜಲ್’ ಯೋಜನೆಯಡಿ WATER BUDGET- WATER AUDIT- WATER STRTAGY  ರೂಪಿಸಿಯೇ ಪೂರಕ ಕೆಲಸ ಮಾಡಿ ಎಂದು ಮಾರ್ಗಸೂಚಿಯಲ್ಲಿ ಹೇಳಿದೆ. (ಸಣ್ಣ ನೀರಾವರಿ ಇಲಾಖೆ)

ಮಾನ್ಯ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ’ಜಲಾಮೃತ’ ಯೋಜನೆಯಡಿ WATER BUDGET- WATER AUDIT- WATER STRTAGY  ರೂಪಿಸಿಯೇ ಪೂರಕ ಕೆಲಸ ಮಾಡಿ ಎಂದು ಮಾರ್ಗಸೂಚಿಯಲ್ಲಿ ಹೇಳಿದೆ. (ಗ್ರಾಮೀಣಾಭಿವೃದ್ಧಿ ಇಲಾಖೆ)

 ಮಾನ್ಯ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಕೇಂದ್ರ ಮಾಡಿ ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಧ್ಯಯನ’ ಮಾಡಲು ಆರ್ಥಿಕ ನೆರವು ನೀಡಿದೆ. (ಜಲಸಂಪನ್ಮೂಲ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆ) 

ರಾಜ್ಯ ಸರ್ಕಾರ 2011-12 ನೇ ಸಾಲಿನ ಆಯವ್ಯಯದಲ್ಲಿ ಮಂಡಿಸಿ, ‘ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರ(ACIWRMADVANCED CENTRE FOR INTEGRATED WATER RESOURCES MANAGEMENT) ವನ್ನು ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸಿ WATER BUDGET- WATER AUDIT- WATER STRTAGY  ಮಾಡಲು ಕ್ರಮಕೈಗೊಂಡಿದೆ. (ಜಲ ಸಂಪನ್ಮೂಲ ಇಲಾಖೆ)

ಮಾನ್ಯ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರ ನೇತೃತ್ವದ  ರಾಜ್ಯ ಸರ್ಕಾರ ದಿನಾಂಕ:04.05.2001 ರಲ್ಲಿ  WATER BUDGET- WATER AUDIT- WATER STRTAGY  ರೂಪಿಸಲು ಜಲಸಂಪನ್ಮೂಲ ಇಲಾಖೆಯಡಿಯಲ್ಲಿ    ಜಿಯೋಮ್ಯಾಟಿಕ್ ಕೇಂದ್ರ’ ರಚಿಸಿದೆ (ಜಲ ಸಂಪನ್ಮೂಲ ಇಲಾಖೆ)

ಬೆಂಗಳೂರಿನಲ್ಲಿರುವ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಮೈಸೂರಿನಲ್ಲಿರುವ ಕರ್ನಾಟಕ ಇಂಜನಿಯರಿಂಗ್ ಸಂಶೋಧನಾ ಕೇಂದ್ರ, ಧಾರವಾಡದಲ್ಲಿರುವ ವಾಲ್ಮಿ ಇವರ್‍ಯಾರು WATER BUDGET- WATER AUDIT- WATER STRTAGY    ಮಾಡಿಲ್ಲವೇ?

ನನಗೆ ಗೊತ್ತಿಲ್ಲದ ಸಂಸ್ಥೆಗಳು ಯಾವ ಇಲಾಖೆಯಲ್ಲಿವೆಯೋ? ಇನ್ನೂ ಎಷ್ಟು ಸಂಸ್ಥೆಗಳು ಜನ್ಮ ತಳೆಯಬೇಕು, ಎಷ್ಟು ನಿಗಮಗಳು ರಚಿಸಬೇಕು?  ಇದೂವರೆಗಿನ ಪಲಿತಾಂಶ ಏನು ? ರಾಜ್ಯದ ನೀರಿನ ಲೆಕ್ಕಕ್ಕೆ ಅಪ್ಪ ಯಾರು? ಅಮ್ಮ ಯಾರು ? ಮಕ್ಕಳು ಯಾರು ?  ಇನ್ನೂ ಎಷ್ಟು ವರ್ಷ ಸುಳ್ಳಿನ ಭಾಷಣ ಮಾಡಬೇಕು? ಇದಕ್ಕೆ ಇತಿಶ್ರೀ ಆಡುವವರು ಯಾರು?

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರ ಜಲಗ್ರಾಮ ಕ್ಯಾಲೇಂಡರ್’ ಯೋಜನೆಯಡಿ ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮದ WATER BUDGET- WATER AUDIT- WATER STRTAGY  ರೂಪಿಸಿಯೇ ಪೂರಕ ಕೆಲಸ ಮಾಡಬೇಕು ಎಂದು 2020-21 ರ ಆಯವ್ಯದಲ್ಲಿ ಮಂಡಿಸಿದೆ. ಇಲಾಖೆ ನಿಗದಿ ಪಡಿಸಿಲ್ಲ್ಲ, ಜವಾಬ್ಧಾರಿ ಹೊರುವ ಸಂಸ್ಥೆ ನೀರಿಗೆ ಅಪ್ಪ-ಅಮ್ಮ ಆಗಲಿ. ನೀವೇನಂತೀರಿ?