TUMAKURU:SHAKTHIPEETA FOUNDATION
ಕರ್ನಾಟಕ ನೀರಾವರಿ ನಿಗಮ, ಕೃಷ್ಣ ಜಲಭಾಗ್ಯ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮದ ಎಲ್ಲಾ ವ್ಯಾಪ್ತಿಯಲ್ಲಿ ಬಳಸುತ್ತಿರುವ ’ನದಿ ನೀರಿನ ಲೆಕ್ಕ’ ವನ್ನು ಶೀಘ್ರದಲ್ಲಿ ಕ್ರೋಢಿಕರಣ ಮಾಡಿ ಗ್ರಾಮಗಳಿಂದ ಆರಂಭಿಸಿ, ಸ್ಥಳೀಯ ಸಂಸ್ಥೆಗಳು, ವಿಧಾನಸಭಾ ಕ್ಷೇತ್ರಗಳು, ಲೋಕಸಭಾ ಕ್ಷೇತ್ರಗಳ ವ್ಯಾಪ್ತಿ, ತಾಲ್ಲೂಕು, ಜಿಲ್ಲಾ ವ್ಯಾಪ್ತಿ ಹೀಗೆ ಯಾವ ಕ್ಷೇತ್ರದ ಅಗತ್ಯವಿದೆಯೋ ಆ ವ್ಯಾಪ್ತಿಯಲ್ಲಿ ನದಿ ನೀರು ಎಷ್ಟು ಉತ್ಪತ್ತಿಯಾಗುತ್ತಿದೆ ಮತ್ತು ಎಷ್ಟು ನೀರನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಅಷ್ಟು ಮಾಹಿತಿಯನ್ನು ’ಜಿಐಎಸ್ ಲೇಯರ್’ ಸಹಿತ ಡಿಜಿಟಲ್ ಮಾಹಿತಿಯನ್ನು ನೀಡಲಾಗುವುದು ಎಂದು ಪೇಶ್ವೆರವರು ತಿಳಿಸಿದರು.
ದಿನಾಂಕ:02.05.2020 ನೇ ಶನಿವಾರ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹಾಗೂ ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಎನ್.ಲಕ್ಷಣರಾವ್ ಪೇಶ್ವೆರವರರೊಂದಿಗೆ ಸಮಾಲೋಚನೆ ನಡೆಸಲಾಯಿತು.
ಜೊತೆಗೆ ರಾಜ್ಯ ಸರ್ಕಾರದ ಆಯವ್ಯಯದಲ್ಲಿನ ಘೋಷಣೆಯಂತೆ ನದಿ ನೀರಿನ ಅಚ್ಚುಕಟ್ಟು ಪ್ರದೇಶದಲ್ಲಿ ಇಸ್ರೇಲ್ ಮಾದರಿ ಮೈಕ್ರೋ ಇರ್ರಿಗೇಷನ್ ಪದ್ಧತಿ, ಕರಾವಳಿ ಪ್ರದೇಶದಲ್ಲಿನ ಕಿಂಡಿ ಯೋಜನೆಗಳು, ಕೆರೆಗಳಿಗೆ ನದಿ ನೀರು, ಹೊಸದಾಗಿ ಅಗತ್ಯವಿರುವ ಕಡೆ ಏತ ನೀರಾವರಿ ಯೋಜನೆಗಳು ಸೇರಿದಂತೆ ಪ್ರತಿಯೊಂದು ಮಾಹಿತಿಗಳನ್ನು ಸಿದ್ಧಪಡಿಸಲಾಗುವುದು.
ಬೇರೆ, ಬೇರೆ ಇಲಾಖೆಯವರು ಬಳಸುತ್ತಿರುವ ನದಿ ನೀರಿನ ಮಾಹಿತಿಯನ್ನು ಸಂಗ್ರಹಿಸಲಾಗುವುದು, ಕೇಂದ್ರ ಸರ್ಕಾರದ 2022 ರೊಳಗೆ ಪ್ರತಿ ಮನೆ ಮನೆಗೂ ನಲ್ಲಿ ನೀರು ನೀಡುವ ಯೋಜನೆಗೆ ಯಾವ ನದಿಮೂಲದಿಂದ/ ಜಲಸಂಗ್ರಹಗಾರದಿಂದ ಎಷ್ಟೆಷ್ಟು ನೀರು ಕೊಡಲಾಗುವುದು ಎಂಬ ಮಾಹಿತಿಯನ್ನು ಸಿದ್ಧಪಡಿಸಲೇ ಬೇಕಿದೆ.
ಜಲನೀತಿ, ಕೇಂದ್ರ ಜಲಶಕ್ತಿ ಅಭಿಯಾನ, ರಾಜ್ಯ ಸರ್ಕಾರದ ಆಯವ್ಯಯದಲ್ಲಿನ ಘೋಷಣೆ ಮತ್ತು ಜಲಸಂಪನ್ಮೂಲ ಸಚಿವರ ಆದೇಶ ಮತ್ತು ಇಲಾಖಾ ಮಾರ್ಗಸೂಚಿ ಪ್ರಕಾರ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂಬ ಖಚಿತ ಭರವಸೆ ನೀಡಿದ್ದಾರೆ.
ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ವೈ.ನಾರಾಯಣಸ್ವಾಮಿ, ಇಐ ಟೆಕ್ನಾಲಜಿ ಎಂಡಿ ಶ್ರೀ ರಂಗನಾಥ್, ಶಕ್ತಿಪೀಠ ಫೌಂಡೇಷನ್ ಛೇರ್‍ಮನ್ ಕುಂದರನಹಳ್ಳಿ ರಮೇಶ್ ಉಪಸ್ಥಿತರಿದ್ದರು.