TUMKURU:SHAKTHIPEETA FOUNDATION
ಪ್ರಧಾನ ಮಂತ್ರಿಯವರಾದ ಮಾನ್ಯ ಶ್ರೀ ನರೇಂದ್ರ ಮೋದಿಯವರು ದೇಶದ ಜನತೆಗೆ ಕುಡಿಯುವ ನೀರು ಮತ್ತು ಕೆಲವು ನೀರಾವರಿ ಯೋಜನೆಗಳ ಜಾರಿಗೆ ’2022’ ರ ಗುರಿ ಪ್ರಕಟಿಸಿದ್ದಾರೆ.
ಮುಖ್ಯ ಮಂತ್ರಿಯವರಾದ ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು 2022 ರೊಳಗೆ ’ರಾಜ್ಯದ ಸಮಗ್ರ ನೀರಾವರಿ ಬಗ್ಗೆ ಸ್ಪಷ್ಟ ಚಿತ್ರಣ ಪ್ರಕಟಿಸಲು’ ಸ್ವಯಂ ಗುರಿ ಹೊಂದಿದ್ದು. ಈ ಭಾರಿ ಮುಖ್ಯ ಮಂತ್ರಿಯಾದ ಆರಂಭದಿಂದಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಪತ್ರದಲ್ಲಿನ ಅಂಶಗಳನ್ನು ಗಮನಿಸ ಬಹುದು.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ’ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಜಾರಿಗೊಳಿಸಿ ರಾಜ್ಯದ ಎಲ್ಲಾ ಕೆರೆಗಳಿಗೆ ನದಿನೀರು ಅಲೋಕೇಷನ್ ಆಗ ಬೇಕು ಎಂದು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಮಾರ್ಗದರ್ಶನದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ.
ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಶ್ರೀ ಜಿ.ಎಸ್.ಬಸವರಾಜ್‌ರವರ 60 ನೇ ವರ್ಷದ ಜನ್ಮ ದಿನ (04.05.2001) ದಂದು ಸ್ಥಾಪನೆಯಾಗಿ ನಿರಂತರವಾಗಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ 19 (04.05.2020) ವರ್ಷ ಪೂರ್ಣಗೊಳಿಸಿ. 20 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಶ್ರೀ ಜಿ.ಎಸ್.ಬಸವರಾಜ್‌ರವರು 79 ವರ್ಷ ಪೂರೈಸಿ 80 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ.
’ನಾನು ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ನೀಡಿದ ಒಂದು ಮಾತಿಗೆ ಕಟ್ಟು ಬಿದ್ದು, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಯಾರಿಂದಲೂ ಈವರೆಗೂ ದೇಣಿಗೆ, ಸರ್ಕಾರದ ಅನುದಾನ ಪಡೆಯದೆ, ಪತ್ರದಲ್ಲಿ ತಿಳಿಸಿದಂತೆ ಪುಸ್ತಕಗಳ ಪ್ರಿಂಟ್ ಮಾಡಿಸಲು ಮಾತ್ರ ಆರ್ಥಿಕ ನೆರವು ಪಡೆದು, ಉಳಿದ ಎಲ್ಲಾ ಹಣವನ್ನು ನನ್ನ ಆದಾಯದಲ್ಲಿ ಖರ್ಚು ಮಾಡುವ ಮೂಲಕ ಶ್ರಮಿಸಿದ್ದೇನೆ’
‘ಇದು ನನ್ನ ಕುಟುಂಬಕ್ಕೆ ಭಾರಿ ಹೊಡೆತವಾಗಿದೆ’ ಇನ್ನೂ ಮುಂದೆ ನಮ್ಮ ಮನೆಯಿಂದ ಒಂದು ರೂಪಾಯಿಯನ್ನು ಪಡೆಯದೆ ’ದಾನಿಗಳಿಂದ ದೇಣಿಗೆ ಅಥವಾ ಸರ್ಕಾರಗಳಿಂದ ಅನುದಾನ’ ಪಡೆದೇ ಶ್ರಮಿಸಲು ’ಶಕ್ತಿಪೀಠ ಫೌಂಡೇಷನ್’ ಸ್ಥಾಪಿಸಿದ್ದೇನೆ. ನೀರಾವರಿ ಯೋಜನೆಗಳ ಜಾರಿಗೆ ಶ್ರಮಿಸಲು ’ಪ್ರತಿಜ್ಞೆ’ ಕೈಗೊಳ್ಳುವ ಮೂಲಕ ನಿಮ್ಮ ಕನಸಿನ ಯೋಜನೆಗೆ ಶ್ರಮಿಸಲಾಗುವುದು.
ಇನ್ನೂ ಮುಂದೆ ’ಅಭಿವೃದ್ಧಿ ರೆವೂಲ್ಯೂಷನ್ ಫೋರಂ’ ನಡೆಸಿಕೊಂಡು ಹೋಗುವ ಹೊಣೆಗಾರಿಕೆಯನ್ನು ಶ್ರೀ ಜಿ.ಎಸ್.ಬಸವರಾಜ್‌ರವರು ’ಅರ್ಹರಿಗೆ ನೀಡಲು’ ಈ ಮೂಲಕ ಸಾರ್ವಜನಿಕವಾಗಿ ಬಹಿರಂಗ ಮನವಿ ಮಾಡಿದ್ದೇನೆ. ಒಂದು ವೇಳೆ ಅವರು ಗಮನ ಹರಿಸದಿದ್ದಲ್ಲಿ 20 ವರ್ಷ ಪೂರ್ಣಗೊಳಿಸಿ (ದಿನಾಂಕ:04.05.2021 ಕ್ಕೆ) ಸಂಸ್ಥೆಯನ್ನು ‘ವಿಸರ್ಜನೆ’ ಮಾಡಲು ಉದ್ದೇಶಿಸಿದ್ದೇನೆ.
ಪ್ರತಿಯೊಂದು ಚಟುವಟಿಕೆಯೂ ಸಹ ಪಾರದರ್ಶಕವಾಗಿ ಶಕ್ತಿಪೀಠ www.shakthipeeta.in ವೆಬ್ ಸೈಟ್ ನಲ್ಲಿ ಮತ್ತು epaper shakthipeeta.in ನಲ್ಲಿ ಬಿತ್ತರವಾಗಲಿದೆ. ಹಿಂದಿನ ಎಲ್ಲಾ ಯೋಜನೆಗಳ ಹೋರಾಟದ ಬಗ್ಗೆಯೂ ಡಿಜಿಟಲ್ ದಾಖಲೆ ಆರಂಭವಾಗಿದೆ.
ಆಸಕ್ತರು ಕೈ ಜೋಡಿಸಲು ಹೃದಯಪೂರ್ವಕ ಮನವಿ.