9th October 2024
Share

TUMAKURU:SHAKTHIPEETA FOUNDATION

ಗೆ.

ಸನ್ಮಾನ್ಯ ಶ್ರೀ ರಮೇಶ್  ಲ  ಜಾರಕಿಹೊಳೆರವರು , ಜಲಸಂಪನ್ಮೂಲ ಸಚಿವರು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು

WATER BUDGET- WATER AUDIT- WATER STRATAGY

ದಿನಾಂಕ:11.05.2020  ಸಭೆಗೆ ಪೂರಕವಾಗಿ ನಮ್ಮ ಸಂಸ್ಥೆಯ ಅಧ್ಯಯನ

 ತಾವೂ ದಯವಿಟ್ಟು ಈ ಪತ್ರದಲ್ಲಿರುವ ಪ್ರತಿಯೊಂದು ಪ್ಯಾರಗಳಿಗೂ ತಮ್ಮ ಅಭಿಪ್ರಾಯ ನೀಡಲು ಮನವಿ. ನಂತರ ಆನ್‌ಲೈನ್ www.shakthipeeta.in  –   epaper shakthipeeta.in  – FOURM    ಚರ್ಚೆಗೆ ಅವಕಾಶ ಕಲ್ಪಿಸಿ ಎಲ್ಲಾ ವರ್ಗದವರ ಪರ-ವಿರೋಧ ಸಲಹೆಗಳನ್ನು ಸ್ವೀಕರಿಸೋಣ.

 ರಾಜ್ಯದ ಹಿತದೃಷ್ಟಿಯಿಂದ ಈ ಸಭೆ ಅತ್ಯಂತ ಪ್ರಮುಖವಾಗಿದೆ. ದಿನಾಂಕ:08.05.2020 ರಂದು ಸಭೆ ನಿಗದಿಯಾಯಿತು. ಅಂದು ರಾತ್ರಿ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಯೊಬ್ಬರೂ ಫೋನ್ ಮಾಡಿ, ಸಭೆಯ ನಿರ್ಣಯವೇ ರಾಜ್ಯದ ನೀರಾವರಿಗೆ ಒಂದು  ಮೈಲಿಗಲ್ಲಾಗಬೇಕು’ ಎಂದು ಸಲಹೆ ನೀಡಿದರು.

 ನನಗೆ ದಿನಾಂಕ:09.05.2020 ರ ಬೆಳಿಗ್ಗೆ 4 ಗಂಟೆಗೆ ಒಂದು ಇನ್ನೋವೇಟೀವ್ ಐಡಿಯಾ’ ಹೊಳೆಯಿತು. ಜಲಸಂಪನ್ಮೂಲ ಸಚಿವರೊಂದಿಗೆ ಜಲ ಸಂದರ್ಶನ’ ನಡೆಸಿ, ಒಂದು ಪುಸ್ತಕ ರೂಪದಲ್ಲಿ ಜನತೆಗೆ ನೀಡಿದರೆ ಮತ್ತು ಆನ್ ಲೈನ್ ಚರ್ಚೆಗೆ ಅವಕಾಶ ಕೊಟ್ಟರೆ’ ಎಲ್ಲಾ ವರ್ಗದವರ ಅಭಿಪ್ರಾಯಗಳನ್ನು ಡಿಜಿಟಲ್ ದಾಖಲೆ’ ಮಾಡಬಹುದು ಎಂಬ ಚಿಂತನೆಯೊಂದಿಗೆ ಒಂದು ಕಿರು ಕೈಪಿಡಿ ಸಚಿವರಿಗೆ ನೀಡಿದ್ದೇನೆ.

 ಪ್ಯಾರಾವಾರು/ವಿಷಯವಾರು ಸಚಿವರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ನಿಮ್ಮೆಲ್ಲರ ಸಲಹೆಗೆ ಪ್ರಕಟಿಸಲು ಚಿಂತನೆ ನಡೆಸಲಾಗಿದೆ. ನಂತರ ಸಂಬಂಧಿಸಿದ ಎಲ್ಲಾ ಸಚಿವರ ಜಲ ಸಂದರ್ಶನ’ ನಮ್ಮ ಗುರಿ ಆಗಿದೆ.

 ಕೇಂದ್ರ ಸರ್ಕಾರದ ಜನಗಣತಿ ಪುಸ್ತಕದ ಮುಖಪುಟ ಹಾಕಿದ್ದೇನೆ. ಈ ಪುಸ್ತಕದಲ್ಲಿ 500 ಪುಟಗಳಿವೆ. ರಾಜ್ಯದ 29340 ಗ್ರಾಮಗಳ ಹೆಸರು ಇದೆ. ಆ ಹೆಸರಿನ ಮುಂದೆ  WATER BUDGET- WATER AUDIT- WATER STRATAGY  ಕಾಲಂ ಹಾಕಿ ಪಕ್ಕಾ ಡೇಟಾ ಹಾಕಬೇಕಾದರೆ. ನಮ್ಮ ಸಂಸ್ಥೆಯ ಅಧ್ಯಯನ ಪ್ರಕಾರ ಅಷ್ಟು ಅಂಶಗಳ ಮಾಹಿತಿ ಅಗತ್ಯವಾಗಿದೆ. ತಾವೂ ಸಹಕರಿಸಲು ಮನವಿ.

ಅತಿ ಶೀಘ್ರದಲ್ಲಿ ಆನ್ ಚರ್ಚೆ ಆರಂಭವಾಗಲಿದೆ. ಸಿಹಿಕಹಿ ಎರಡನ್ನು ಸಮಚಿತ್ತವಾಗಿ ಸ್ವೀಕರಸಿ ನಂತರ ಅಂತಿಮಗೊಳಿಸೋಣ. ಜನತೆ ಸರ್ಕಾರದ ಒಂದು ಭಾಗವಾಗಿನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಕ್ಕಾಗಿ ಶ್ರಮಿಸೊಣ.