22nd December 2024
Share




G.S.BASAVARAJ. L.K.ATHEEK & KUNDARNAHALLI RAMESH

ತುಮಕೂರು ಜಿಲ್ಲೆಗೆ ವಿವಿಧ ನದಿ ನೀರು ಅಲೋಕೇಷನ್ ಮಾಹಿತಿ, ಇದರಲ್ಲಿ ತುಂಗಾಭಧ್ರಾ ನೀರು ಸೇರಿಸಿಲ್ಲ

TUMAKURU:SHAKTHIPEETA FOUNDATION

  ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ Consultative committee for the ministry of jalashkthi ಸಮಿತಿ ಸದಸ್ಯರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ರವರು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ  ಶ್ರೀ ಅತೀಕ್ ರವರೊಂದಿಗೆ, ತುಮಕೂರು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಕುಡಿಯುವ ನೀರಿಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ದಿನಾಂಕ: 08.05.2020 ರಂದು ಸಮಾಲೋಚನೆ ನಡೆಸಿದರು.

 ಶ್ರೀ ಅತೀಕ್ರವರು ಕೇಂದ್ರ ಸರ್ಕಾರದ  ಜಲಜೀವನ್  ಮಿಷನ್  ಮತ್ತು ರಾಜ್ಯ ಸರ್ಕಾರದ ಮನೆಮನೆಗೆ ಗಂಗೆ, ಜಲಧಾರ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ದಿನಾಂಕ:14.05.2020 ರಂದು ಸಭೆ ಕರೆದು ನೀಡಲಾಗುವುದು ಎಂದು ಬಸವರಾಜ್ ರವರಿಗೆ ತಿಳಿಸಿದರು

  ಕೇಂದ್ರದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳು, ಹೊಸ ಪ್ರಸ್ತಾವನೆಗಳು, ಪ್ರಗತಿಯಲ್ಲಿರುವ ಹೀಗೆ ನೀರಿನ ಎಲ್ಲಾ ಯೋಜನೆಗಳು ಜಲಶಕ್ತಿ ಸಚಿವಾಲಯದ ವ್ಯಾಪ್ತಿಗೆ ಬರುವುದರಿಂದ ನೀರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳ ಮಾಹಿತಿಯನ್ನು ನೀಡಲು ಸೂಚಿಸಿದರು.

 ತುಮಕೂರು ಜಿಲ್ಲೆಗೆ ಕುಡಿಯುವ ನೀರಿಗೆ ಅಗತ್ಯವಿರುವ ನದಿ ನೀರನ್ನು ಹೇಮಾವತಿ, ಭಧ್ರಾ ಮೇಲ್ದಂಡೆ, ಎತ್ತಿನಹೊಳೆ ಮತ್ತು ತುಂಗಾಭಧ್ರಾ ಯೋಜನೆ ಮೂಲಕ ಪಡೆಯಬಹುದಾಗಿದೆ. ಬಗ್ಗೆ ಮಾಹಿತಿಯನ್ನು ಪಡೆದು ಚರ್ಚಿಸಲು ಸಲಹೆ ನೀಡಿದರು.

 ಈಗಾಗಲೇ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಪತ್ರ ಬರೆದು ಪೈಲಟ್ ಯೋಜನೆಯಾಗಿ  ತುಮಕೂರು ಜಿಲ್ಲೆಯ ಸಮಗ್ರ ಕುಡಿಯುವ ನೀರು ಮತ್ತು ಸಮಗ್ರ ನೀರಾವರಿ ಯೋಜನೆ ಕೈಗೊಳ್ಳಲು ಮನವಿ ಮಾಡಿದ್ದಾರೆ.

 ಆದ್ದರಿಂದ ಬಗ್ಗೆ ವಿವರವಾಗಿ ಚರ್ಚಿಸಿ ನಂತರ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ರಾಜ್ಯ ಮಟ್ಟದ ದಿಶಾ ಸಮಿತಿಗೆ ಸಲ್ಲಿಸುವ ಬಗ್ಗೆ ಸಮಾಲೋಚನೆ ನಡೆಸಿದರು.