22nd November 2024
Share

TUMAKURU:SHAKTHIPEETA FOUNDATION

ದಿನಾಂಕ:14.05.2020  ರಂದು ಬೆಂಗಳೂರಿನ ಬಹುಮಹಡಿ ಕಟ್ಟಡದ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ಎಲ್.ಕೆ.ಅತೀಕ್ ಅವರ ಅಧ್ಯಕ್ಷತೆಯಲ್ಲಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಸಭೆ ನಡೆಯಿತು.

  ಈ ಸಭೆಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಭಾಗವಹಿಸಿ ತುಮಕೂರು ಜಿಲ್ಲೆಗೆ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅಗತ್ಯ, ಈಗ ಇರುವ ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ದಂಡೆ ಮತ್ತು ತುಂಗಭಧ್ರಾ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಅಲೋಕೇಷನ್.

  ಇದರಲ್ಲಿ ನಗರ ಪ್ರದೇಶಗಳ ಕುಡಿಯುವ ನೀರಿನ ನೀರಿನ ಬಳಕೆ, ಕೈಗಾರಿಕೆಗಳಿಗೆ ಕುಡಿಯುವ ನೀರಿನ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಬಳಕೆ ಸೇರಿದಂತೆ, ಇತರೆ ಉದ್ದೇಶಗಳಿಗಾಗಿ ತುಮಕೂರು ಜಿಲ್ಲೆಯ ಕುಡಿಯುವ ನೀರಿನ  ಮಾಹಿತಿ.  

  ತುಮಕೂರು ಜಿಲ್ಲೆಯ ನೀರಾವರಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತಯಾರಿಸಿರುವ ’ತುಮಕೂರು ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್ ಮಾಹಿತಿಗಳನ್ನು ಒಂದೇ ಕಡೆ ತರುವ ವಿಷಯದ ಬಗ್ಗೆ ಮಾನಾಡಿದರು. 

  ಶ್ರೀ ಎಲ್.ಕೆ.ಅತೀಕ್ ರವರು ಅಧಿಕಾರಿಗಳಿಗೆ ಮುಂದಿನ 15  ದಿವಸದಲ್ಲಿ ತುಮಕೂರು ಜಿಲ್ಲೆಯ ಕುಡಿಯುವ ನೀರಿನ ಯೋಜನೆಯ ಸ್ಪಷ್ಟ ಮಾಹಿತಿಯನ್ನು ’ಜಿ.ಐ.ಎಸ್ ಲೇಯರ್‍ ಇತಿಹಾಸ  ಸಹಿತ ಒಂದೇ ನಕ್ಷೆಯಲ್ಲಿ ಕ್ರೋಢಿಕರಿಸಿ, ಇದೂವರೆಗೂ ಕಾರ್ಯನಿರ್ವಹಿಸುತ್ತಿರುವ ಬಹುಗ್ರಾಮ ಯೋಜನೆಗಳ ಡೇಟಾ ಸಹಿತ ಸಾಧಕ-ಭಾಧಕಗಳ ಬಗ್ಗೆ ಮಾಹಿತಿ ಒದಗಿಸಲು ಖಡಕ್ ಸೂಚನೆ ನೀಡಿದರು.

  ಗ್ರಾಮೀಣಾಭಿವೃದ್ಧಿ ಇಲಾಖೆಯ ಕುಡಿಯುವ ನೀರಿನ ಮುಖ್ಯ ಇಂಜಿನಿಯರ್ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು. ಭಾಗವಹಿಸಿದ್ದ ಇತರೆ ಇಲಾಖೆಗಳ ಅಧಿಕಾರಿಗಳು ಸಹಕರಿಸುವುದಾಗಿ ತೀಳಿಸಿದರು.

    ಸಭೆಯಲ್ಲಿ ಭಾಗವಹಿಸಿದ್ದ ತುಮಕೂರಿನ ದಿಶಾ ಸಮಿತಿ ಸದಸ್ಯ ಹಾಗೂ ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕ ಕುಂದರನಹಳ್ಳಿ ರಮೇಶ್ ದಿಶಾ ಸಮಿತಿಯ ನಿರ್ಣಯದ ಮೇರೆಗೆ ಈಗಾಗಲೇ ಬಹಳಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಎಲ್ಲಾ ಇಲಾಖೆಗಳ ಮಾಹಿತಿ ಕ್ರೋಢಿಕರಿಸಲು ನಮ್ಮ ಸಂಸ್ಥೆಯು ಸಹಕರಿಸುವುದಾಗಿ ತಿಳಿಸಿದರು.

  ತುಮಕೂರಿನ ಸ್ಪೆಕ್ಟ್ರಾ ಅಸೋಯೇಷನ್‌ಗೆ ಸಣ್ಣ ನೀರಾವರಿ ಇಲಾಖೆ ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರಿನಿಂದ ತುಂಬಿಸಲು ಸಾಧ್ಯವಿರುವ ಬಗ್ಗೆ ವರದಿ ನೀಡಲು ಗುತ್ತಿಗೆ ನೀಡಿದೆ. ಈ ವರದಿಯಲ್ಲಿ ಎಲ್ಲಾ ಮಾಹಿತಿಗಳನ್ನು ಕ್ರೋಢಿಕರಿಸಿ ಪಿಪಿಟಿ ಪ್ರದರ್ಶಿಸುವುದಾಗಿ ತಿಳಿಸಿದರು.

 ಸಭೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಲಕ್ಷ್ಮಣ ರಾವ್ ಪೇಶ್ವೆ, ಎತ್ತಿನಹೊಳೆ ಮುಖ್ಯ ಇಂಜಿನಿಯರ್ ಶ್ರೀ ಮಾಧವ, ಗ್ರಾಮೀಣಾಭಿವೃದ್ಧಿ ಕುಡಿಯುವ ನೀರಿನ ಮುಖ್ಯ ಇಂಜಿನಿಯರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.