22nd November 2024
Share
G.S.BASAVARAJ.MP TUMAKURU RAKESH SING IAS. NEDARLAND BRUIJIN & KUNDARANHALLI RAMESH

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಕೇಶ್‌ಸಿಂಗ್‌ರವರಿಗೆ ದಿನಾಂಕ:18.05.2020 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ತುಮಕೂರು ಜಿಲ್ಲಾ ಇರ್ರಿಗೇಷನ್ ಪ್ಲಾನ್’ ಪರಿಶೀಲಿಸಿ ಕರಾರುವಕ್ಕಾದ  WATER BUDGET- WATER AUDIT- WATER  STRATAGY ತಯಾರಿಸಿ  ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಯ ಫೈಲಟ್’ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. ಕಾಲಮಿತಿ ನಿಗದಿಗೊಳಿಸಿ ಬರೆದಿರುವ ಪತ್ರದ ಸಾರಾಂಶ.

  ಹಿನ್ನಲೆ ಈಗಾಗಲೇ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ, ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರ ಅಧ್ಯಕ್ಷತೆಯಲ್ಲಿ,  ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಎಲ್.ಕೆ.ಅತೀಕ್ ಅಧ್ಯಕ್ಷತೆಯಲ್ಲಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿರವರ ಜೊತೆ ಸಮಾಲೋಚನೆ ಸಭೆಗಳನ್ನು ನಡೆಸಲಾಗಿದೆ.

  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಪತ್ರ ಬರೆದು ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಯ ಫೈಲಟ್’ ಯೋಜನೆಯಾಗಿ ಕೈಗೊಳ್ಳಲು ಮನವಿ ಮಾಡಿದ್ದಾರೆ.

  ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ನ್ಯಾಷನಲ್ ವಾಟರ್ ಡೆವಲಪ್‌ಮೆಂಟ್ ಏಜೆನ್ಸಿ ಡೈರೆಕ್ಟರ್ ಜನರಲ್ ಶ್ರೀ ಭೂಪಾಲ್ ಸಿಂಗ್ ರವರೊಂದಿಗೆ ಸಮಾಲೋಚನೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನೀತಿ ಆಯೋಗಕ್ಕೆ ರೂ ೧.೯೩ ಲಕ್ಷ ಕೋಟಿ ವೆಚ್ಚದಲ್ಲಿ ಕರ್ನಾಟಕ ರಾಜ್ಯದಲ್ಲಿ ನೀರಾವರಿ ಯೋಜನೆ ಕೈಗೊಳ್ಳುವುದಾಗಿ ಯೋಜನಾ ಇಲಾಖೆ ಅಫ್ ಲೋಡ್ ಮಾಡಿದೆ.

  ತುಮಕೂರಿನ ಸಣ್ಣ ನೀರಾವರಿ ಇಲಾಖೆ ಟೆಂಡರ್ ಕರೆದು ತುಮಕೂರು ಜಿಲ್ಲೆಗೆ ಹೇಮಾವತಿ, ಎತ್ತಿನಹೊಳೆ, ಭಧ್ರಾ ಮೇಲ್ದಂಡೆ ಮತ್ತು ತುಂಗಭಧ್ರಾ ಯೋಜನೆಯಡಿಯಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಅಲೋಕೇಷನ್ ನಿಂದ ಯಾವ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಕೆರೆಗಳಿಲ್ಲದ ಗ್ರಾಮಗಳಲ್ಲಿ ಏನು ಮಾಡ ಬೇಕು ಎಂಬ ಮಾಹಿತಿಯ ವರದಿ ತಯಾರಿಸಲು ಕ್ರಮ ಕೈಗೊಂಡಿದೆ.

 ತುಮಕೂರಿನ ಗುತ್ತಿಗೆದಾರ ಶ್ರೀ ಸತ್ಯಾನಂದ್, ಸ್ಪೆಕ್ಟ್ರಾ ಅಸೋಶಿಯೇಟ್ಸ್‌ಗೆ ದಿನಾಂಕ:30.03.2020   ರಂದು ಕಾರ್ಯಾದೇಶ ನೀಡಿ ದಿನಾಂಕ:30.04.2020 ರಂದು ವರದಿ ನೀಡಲು ಗಡುವು ನೀಡಲಾಗಿದೆ. ಕೊರೊನಾ ಲಾಕ್ ಡೌನ್‌ನಿಂದ ವಿಳಂಭವಾಗಿದೆ.

  ಇಲಾಖಾವಾರು ಹಾಲಿ ಇರುವ ಡಿಜಿಟಲ್ ಡೇಟಾ ಮತ್ತು ಭವಿಷ್ಯದ ಅಗತ್ಯತೆಯ ಮಾಹಿತಿಯನ್ನು ಒಂದೇ ಕಡೇ ಕ್ರೋಢಿಕರಿಸಲು ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ತುಮಕೂರು ಜಿಲ್ಲಾ ದಿಶಾ ಸಮಿತಿಯ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಅಂಶವನ್ನು ತಮ್ಮ ಆಧ್ಯಗಮನಕ್ಕೆ ತರಬಯಸುತ್ತೇನೆ. ಆದ್ದರಿಂದ ತಾವು ತುರ್ತಾಗಿ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಲು ಕೋರಿದೆ

 ಎಲ್ಲಾ ಇಲಾಖೆಗಳು ಸಹ ಇತಿಹಾಸ ಶೀಟ್‌ನಲ್ಲಿ ದಾಖಲೆ ಕಡ್ಡಾಯವಾಗಿ ಹಾಕಬೇಕು, ಒಂದು ವೇಳೆ ದಾಖಲೆ ಲಭ್ಯವಿಲ್ಲದಿದ್ದಲ್ಲಿ ಆಯಾ ಇಲಾಖೆಗಳು  ಕಾರಣ ನಮೂದಿಸಿ ಡೇಟಾ ಸಂಗ್ರಹಿಸಲು ಕ್ರಮಕೈಗೊಳ್ಳಬೇಕು. ಆರ್ಥಿಕ ನೆರವು ಅಗತ್ಯವಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ’ ಮಂಜೂರು ಮಾಡಿಸಲು ಶ್ರಮಿಸಲಾಗುವುದು ಎಂಬ ಅಂಶವನ್ನು ತಮ್ಮ ಆಧ್ಯಗಮನಕ್ಕೆ ತರಬಯಸುತ್ತೇನೆ.

 ಯಾವುದೇ ಕಾರಣಕ್ಕೂ ಯಾವುದೇ ಇಲಾಖೆ ಡೇಟಾ ಇಲ್ಲಾ ಎಂದು ಬಾಯಿ ಮಾತಲ್ಲಿ ಹೇಳುವ ಪರಿಪಾಠ ಬೇಡ’ ಯಾವ ಕಾರಣದಿಂದ ಡೇಟಾ ಇಲ್ಲ ಎಂಬುದು ಮುಂದಿನ ದಿಶಾ ಸಮಿತಿ ಸಭೆ ನಡವಳಿಕೆಯಲ್ಲಿ ನಮೂದಾಗಲಿ.  

  ಮಾನ್ಯ ಪ್ರಧಾನ ಮಂತ್ರಿಯವರ ಮಂಕಿಬಾತ್ ಅಥವಾ ವಿಡಿಯೋ ಕಾನ್ಪೆರೆನ್ಸ್  ಅಥವಾ ಸಮಯ ನೀಡಿದಲ್ಲಿ ನಿಯೋಗ’ ಹೋಗಿ ನಮ್ಮ ಜಿಲ್ಲೆಯಲ್ಲಿ ತಯಾರಿಸಿರುವ ಫೈಲಟ್ ಯೋಜನೆಯ ಪ್ರಸ್ತಾವನೆಯನ್ನು  ನೀಡಿ ಯೋಜನೆ ಮಂಜೂರಾತಿಗೆ ಮನವಿ ಮಾಡುವ ಗುರಿಯಿರುವುದರಿಂದ ಒಂದು ತಿಂಗಳಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸಲು ಅಗತ್ಯವಿರುವ ಎಲ್ಲಾ ಇಲಾಖೆಗಳ ಮಾಹಿತಿಯನ್ನು ಒಂದೇ ರೂಪ್‌ನಲ್ಲಿ ಸಂಗ್ರಹಿಸಲು ಕ್ರಮ ಕೈಗೊಳ್ಳಲು ಮನವಿ.

   5 ನೇ ಭಾರಿಗೆ ಲೋಕಸಭಾ ಸದಸ್ಯನಾಗಿ ದಿನಾಂಕ:26.05.2019  ರಂದು ಆಯ್ಕೆಯಾಗಿದ್ದು. ದಿನಾಂಕ:21.09.2019  ರಂದು ಪ್ರಥಮ ದಿಶಾ ಸಮಿತಿ ನಡೆಸಿ ಅಂದಿನಿಂದಲೇ ಈ ಯೋಜನೆ ಜಾರಿಗೆ ಇಲ್ಲಿಯವರೆಗೂ ನಡೆದ ವಿವಿಧ ಸಭೆಗಳಲ್ಲಿ ಸುರ್ಧೀಘವಾಗಿ ಚರ್ಚಿಸಲಾಗಿದೆ.

  ಆದ್ದರಿಂದ ದಿನಾಂಕ:26.05.2020 ರೊಳಗೆ ದಿಶಾ ಸಮಿತಿ ಸಭೆ ನಡೆಸಿ ವರದಿಯನ್ನು ಅಂತಿಮ ಗೊಳಿಸಲು ಕಾಲಮಿತಿ ನಿಗದಿಗೊಳಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ದಿಶಾ ಸಮಿತಿಯ ಸಭೆ ನಡವಳಿಕೆಯನ್ನು  ಕನ್ನಡ, ಇಂಗ್ಲೀಷ್ ಮತ್ತು ಹಿಂದಿ’ ಯಲ್ಲಿ ಮಾಡಿ ವೆಬ್‌ಸೈಟ್‌ಗೆ ಅಫ್ ಲೋಡ್ ಮಾಡಲು ಕ್ರಮಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಬೇಕಿದೆ.

 ಈ ಪತ್ರದೊಂದಿಗೆ ಶಕ್ತಿಪೀಠ ಫೌಂಡೇಷನ್ ತಯಾರಿಸಿರುವ ಕಲ್ಪನಾ ವರದಿಯನ್ನು ಲಗತ್ತಿಸಿದೆ. ವರದಿಯಲ್ಲಿನ ಪ್ರತಿಯೊಂದು ಅಂಶಗಳ ಬಗ್ಗೆ ಆಯಾ ಇಲಾಖೆಗಳು ಲಿಖಿತ ಮಾಹಿತಿಗಳೊಂದಿಗೆ ಸಭೆಗೆ ಹಾಜಾರಾಗಲು ಸೂಚಿಸಲು ಕೋರಿದ್ದಾರೆ. 

ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಪಿಪಿಪಿ ಮಾದರಿಯಲ್ಲಿ ಡೇಟಾ ಪಾರ್ಕ್’ ಗಳನ್ನು ದೇಶಾಧ್ಯಾಂತ ಸ್ಥಾಪಿಸಲು ಘೋಶಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ವಿದೇಶಗಳ ಆಸಕ್ತರ ಸಹಭಾಗಿತ್ವದಲ್ಲಿ ನೀರಾವರಿ ಡೇಟಾ ಪಾರ್ಕ್’ ಸ್ಫಾಪಿಸಲು ಚಿಂತನೆ ನಡೆಸಿರುವುದರಿಂದ ತುಮಕೂರು ಜಿಲ್ಲೆಯ ನೀರಾವರಿಗೆ ಸಂಬಂಧಿಸಿದ ಡಿಜಿಟಲ್ ಡೇಟಾ ಸಂಗ್ರಹಿಸುವ ಮೂಲಕ  ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದೆ. ತಾವೂ ಸಲಹೆ ನೀಡಬಹುದು.