27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಸಮೀಕ್ಷೆ  ಶೀಘ್ರ ಆರಂಭ

 ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 2024  ರೊಳಗೆ ದೇಶದ ಪ್ರತಿ ಮನೆಗೂ ನಲ್ಲಿಗಳ ಮುಖಾಂತರ ಕುಡಿಯುವ ನೀರು ಒದಗಿಸುವ ಯೋಜನೆಯಾದ ಜಲಜೀವನ್ ಮಿಷನ್ ಬಗ್ಗೆ ದಿನಾಂಕ:20.05.2020 ರಂದು ಬೆಂಗಳೂರಿನ ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಸಮಾಲೋಚನೆ ನಡೆಸಿದರು.

  ಸಭೆಯಲ್ಲಿ ಮುಖ್ಯ ಇಂಜಿನಿಯರ್ ಶ್ರೀ ಹೊಳೆಯಾಚಿ, ಎಸ್.ಇ ಶ್ರೀ ನಾಗರಾಜ್‌ರವರು ಮತ್ತು ಇತರ ಇಂಜಿನಿಯರ್‌ಗಳು ಹಾಜರಿದ್ದು ತುಮಕೂರು ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

  ತುಮಕೂರು ಜಿಲ್ಲೆಗೆ ನದಿ ನೀರಿನ ಅಲೋಕೇಷನ್ ಇದ್ದರೂ ಯೋಜನೆಯನ್ನು ಏಕೆ ಪ್ರಾರಂಬಿಸಿಲ್ಲ ಎಂಬ ಬಸವರಾಜ್‌ರವರ ಪ್ರಶ್ನೆಗೆ ಇಂಜಿನಿಯರ್‌ಗಳು ನೀಡಿದ ಉತ್ತರ ಆಶ್ಚರ್ಯಕರವಾಗಿತ್ತು. ತುಮಕೂರು ಜಿಲ್ಲೆಗೆ ಈ ವರೆಗೂ ೨೮ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿವೆ. ಆದರೇ ಅವುಗಳ ಉಪಯೋಗವನ್ನು ಗಮನಿಸಿದರೆ ನೀರಿಗೆ ತೊಂದರೆ ಇದೆ.

  ಇವುಗಳ ಜೊತೆಗೆ ಈಗಲೂ 4 ಬಹುಗ್ರಾಮ ಯೋಜನೆಗಳು ಪ್ರಗತಿಯಲ್ಲಿವೆ, ಅಲ್ಲದೆ ಚಿತ್ರದುರ್ಗ ಜಿಲ್ಲೆಯ ಹಲವು ಭಾಗ  ಮತ್ತು ತುಮಕೂರು ಜಿಲ್ಲೆಯ 369 ಗ್ರಾಮಗಳು ಮತ್ತು ಒಂದು ಟೌನ್ ಸೇರಿದಂತೆ ಸುಮಾರು ರೂ 2352.60  ಕೋಟಿ ವೆಚ್ಚದ ಯೋಜನೆ ಪ್ರಗತಿಯಲ್ಲಿದೆ ಎಂಬ ಮಾಹಿತಿಯನ್ನು ನೀಡಿದರು. ಪ್ರಸ್ತುತ ತುಮಕೂರು ಜಿಲ್ಲೆಯ ಉಳಿದ ಎಲ್ಲಾ ಗ್ರಾಮಗಳ ಸಮೀಕ್ಷೆಯನ್ನು ಕೂಡಲೇ ಆರಂಭಿಸುವುದಾಗಿ ತಿಳಿಸಿದರು.

 ಯೋಜನೆಯ ಸಮೀಕ್ಷೆ ಜೊತೆಗೆ ಈವರೆಗೂ ತುಮಕೂರು ಜಿಲ್ಲೆಯ ಬಹುಗ್ರಾಮ ಯೋಜನೆಗಳ ವೈಪಲ್ಯಕ್ಕೆ ಕಾರಣಗಳು ಏನು? ರಾಜ್ಯದಲ್ಲಿ ಮತ್ತು ದೇಶದಲ್ಲಿಯೇ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಗಳ ಮಾಹಿತಿ ಆಧರಿಸಿ ಅತ್ಯುತ್ತಮವಾದ ಯೋಜನೆಯಾಗಿ ರೂಪಿಸಿ.

 ಹೇಮಾವತಿ, ಭಧ್ರಾ ಮೇಲ್ದಂಡೆ, ಎತ್ತಿನಹೊಳೆ ಮತ್ತು ತುಂಗಭಧ್ರಾ ಯೋಜನೆಯ ನದಿ ನೀರಿನ ಮಾಹಿತಿ ಮತ್ತು ಜಿಲ್ಲೆಯಲ್ಲಿ ಕುಡಿಯುವ ನೀರಿನ ಜಲಸಂಗ್ರಹಾಗಾರಗಳ ಬಗ್ಗೆ ಅಧ್ಯಯನ ಮಾಡಿ ಯೋಜನೆ ರೂಪಿಸಿಸುವುದು ಸೂಕ್ತ ಎಂಬ ಸಂಸದರು ಸಲಹೆ ನೀಡಿದರು. ಸಭೆಯಲ್ಲಿ ಕುಂದರನಹಳ್ಳಿ ರಮೇಶ್  ಇತರರು ಭಾಗವಹಿಸಿದ್ದರು.