21st December 2024
Share

TUMAKURU:SHAKTHIPEETA FOUNDATION

 ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ‘Consultative committee for the ministry of jalashkthi’ ಸಮಿತಿ ಸದಸ್ಯರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ತಯಾರಿಸಿರುವ ಕಲ್ಪನಾವರದಿ.

 ನೀರಾವರಿ ತಜ್ಞ ಹಾಗೂ ಮಾಜಿ ಅಪ್ನಾಸ್ ಅಧ್ಯಕ್ಷ ದಿ. ಜಿ.ಎಸ್.ಪರಮಶಿವಯ್ಯನವರ ಜೊತೆ ಕಾರ್ಯನಿರ್ವಹಿಸಿರುವ, ತುಮಕೂರು ಜಿಲ್ಲಾ ದಿಶಾ ಸಮಿತಿಯ ಸದಸ್ಯ, ತುಮಕೂರು ಸ್ಮಾರ್ಟ್ ಸಿಟಿ ಸದಸ್ಯ ಮತ್ತು  ತುಮಕೂರು ಜಿಲ್ಲಾ ಇರ್ರಿಗೇಷನ್ ಪ್ಲಾನ್ ರಚನೆ ಸಮಿತಿ ಸದಸ್ಯನಾಗಿ, ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಹಾಗೂ ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದು  ನಮ್ಮ ಸಂಸ್ಥೆಯಅಧ್ಯಯನ ವರದಿ ಪ್ರಕಾರ ಈ ಕೆಳಕಂಡ ಅಂಶಗಳು WATER BUDGET- WATER AUDIT- WATER  STRATAGY’ ಅಂತಿಮಗೊಳಿಸಲು ಅಗತ್ಯವಾಗಿವೆ.

 ಇಲಾಖೆಗಳು ಬಗ್ಗೆ ಪರಿಶೀಲಿಸಿ ಅಗತ್ಯವಾಗಿದ್ದಲ್ಲಿ ಅಗತ್ಯವಿರುವ ಯೋಜನೆಗಳನ್ನು ಸೇರ್ಪಡೆ ಮಾಡಬಹುದು, ಅನಗತ್ಯವಾಗಿದ್ದಲ್ಲಿ ತೆಗೆದು ಹಾಕಲೂ ಬಹುದು. ಅವರ ಅಧ್ಯಯನದ ಪ್ರತಿಯೊಂದು ವಿಷಯಕ್ಕೂ ಸಭೆ ನಡವಳಿಕೆಯಲ್ಲಿ ದಾಖಲೆಯಾಗ ಬೇಕು’

2013 ನೇ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ಸುಮಾರು 64 ವಿಷಯಗಳ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮ ಪ್ರಕಾರ  ಮಾಹಿತಿ ಪಡೆದು ಅಧ್ಯಯನ ಮಾಡಿರುವ ಪ್ರಕಾರ ತಾಜಾ ಡೇಟಾ ಯಾವುದೇ ಇಲಾಖೆಯಲ್ಲಿ ಕರಾರುವಕ್ಕಾಗಿ ಇರುವುದು ಕಂಡು ಬಂದಿಲ್ಲ. ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ’ಕ್ಕೆ ಪೂರಕವಾಗಿ ತುಮಕೂರು ಜಿಲ್ಲೆಯಲ್ಲಿ ವಿಶೇಷವಾಗಿ ಯೋಜನೆ ರೂಪಿಸುವುದು ಸಮಯೋಚಿತವಾಗಿದೆ.

ಪ್ರತಿಯೊಂದು ಯೋಜನೆಗಳ ಪೂರ್ಣಗೊಂಡಿರುವ, ಪ್ರಗತಿಯಲ್ಲಿರುವ, ಅಪೂರ್ಣವಾಗಿರುವ, ಹಾಳಾಗಿರುವ ಮತ್ತು ಹೊಸ ಪ್ರಸ್ತಾವನೆಗಳ ಜಿಐಎಸ್ ಲೇಯರ್ ಮಾಡಿ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯವಾರು ಹೊಣೆಗಾರಿಕೆ ನೀಡುವುದು ಸೂಕ್ತವಾಗಿದೆ’

1. ಜಿಲ್ಲಾಡಳಿತ ಅಗತ್ಯ ಬಿದ್ದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ

  1. ವಿವಿಧ ಇಲಾಖೆಗಳ ಪ್ರಸ್ತಾವನೆ :- ತುಮಕೂರು ಜಿಲ್ಲೆಯ ನೀರು ಮತ್ತು ಹಸಿರಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿರುವ ವಿವಿಧ ಇಲಾಖೆಗಳ ಯೋಜನೆಗಳ ಪ್ರಸ್ತಾವನೆಗಳನ್ನು ಸಲ್ಲಿಸಲು ಇಲಾಖಾವಾರು ಕ್ರಮಕೈಗೊಳ್ಳಲು ಪತ್ರ ಬರೆಯುವುದು.
  2. ಒತ್ತುವರಿ ತೆರವು :- ತುಮಕೂರು ಜಿಲ್ಲೆಯಲ್ಲಿ ಜಲಸಂಗ್ರಹಾಗಾರಗಳ ಒತ್ತುವರಿ ಗುರುತಿಸಿ, ಆಂದೋಲನ ರೂಪದಲ್ಲಿ ನಿರ್ಧಾಕ್ಷಣ್ಯವಾಗಿ  ಜಲಸಂಗ್ರಹಗಾರಗಳ ಒತ್ತುವರಿ ತೆರವುಗೊಳಿಸುವುದು.
  3. ಭೂ ಬಳಕೆಯ ಉದ್ದೇಶ:- ತುಮಕೂರು ಜಿಲ್ಲಾಧ್ಯಾಂತ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿನ ಬಹಳಷ್ಟು ಜಾಗದ ಭೂ ಬಳಕೆಯ ಉದ್ದೇಶ ಬದಲಾಗಿದೆ. ಅಂತಹ ಅಚ್ಚುಕಟ್ಟು ಪ್ರದೇಶಗಳ ಭೂ-ಬಳಕೆಯ ಬದಲಾವಣೆ ಪ್ರದೇಶಗಳು ಯೋಜನಾವಾರು ಎಷ್ಟು ಎಕರೆ, ಯಾವ ಯಾವ ಉದ್ದೇಶಕ್ಕೆ ಬಳಕೆಯಾಗಿದೆ. ಅಂತಹ ಪ್ರದೇಶಗಳಿಂದ ಎಷ್ಟೆಷ್ಟು ನೀರು ಉಳಿತಾಯವಾಗಲಿದೆ ಎಂಬ ಮಾಹಿತಿ ಲೆಕ್ಕ ಹಾಕಲು ಭೂ ಬದಲಾವಣೆ ದಾಖಲೆ ನೀಡುವುದು.
  4. ಪರಿಣಿತ ತಜ್ಞರ ವಿಷನ್ ಗ್ರೂಪ್ :- ತುಮಕೂರು ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿರುವ ನೀರಿಗೆ ಹಾಗೂ ಹಸಿರೀಕರಣಕ್ಕೆ ಸಂಬಂಧಿಸಿದ ಇಲಾಖೆಗಳಲ್ಲಿ ವಿಶೇಷ ಜ್ಞಾನ ಹೊಂದಿರುವ ಅಧಿಕಾರಿ, ನೌಕರರು ಅಥವಾ ನಿವೃತ್ತ ಅಧಿಕಾರಿ, ನೌಕರರ ಮತ್ತು ಜಿಲ್ಲೆಯಲ್ಲಿನ ನೀರಾವರಿ ತಜ್ಞರುಗಳು, ನೀರಾವರಿ ಹೋರಾಟಗಾರರು, ಪ್ರಗತಿಪರ ರೈತರು ಮತ್ತು  ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಜಿಲ್ಲೆಯ ಭವಿಷ್ಯದ ಭದ್ರ ಬುನಾದಿಗೆ ಯೋಜನೆ ಸಿದ್ಧಪಡಿಸಲು ಶ್ರಮಿಸಲು ಸ್ವಯಂ ಸೇವಾ ಸಂಸ್ಥೆಗಳು ಒಳಗೊಂಡ ಸ್ಥಳೀಯ ಸಂಸ್ಥೆವಾರು ಸಮಿತಿ ರಚಿಸುವುದು. 
  5. ಜಿಲ್ಲೆಯ ಸ್ಥಳೀಯ ಸಂಸ್ಥೆ ಮತ್ತು ವಿವಿದ ಹಂತದ ಸಮಿತಿಗಳಲ್ಲಿ ಸಭೆ ನಡವಳಿಕೆ:- ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ, ವಿಧಾನ ಸಭಾ ಕ್ಷೇತ್ರವಾರು ಶಾಸಕರ ಅಧ್ಯಕ್ಷತೆಯಲ್ಲಿ  ಮತ್ತು ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆವಾರು ಆಯಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅವರ ಅಭಿಪ್ರಾಯಗಳ ನಡವಳಿಕೆಗಳನ್ನು ಕ್ರೋಢಿಕರಿಸುವುದು.
  6. ತುಮಕೂರು ಜಿಲ್ಲೆಯ ಬೃಹತ್ ಯೋಜನೆಗಳು:-  ಜಿಲ್ಲೆಯ ಪ್ರತಿಯೊಂದು ಇಲಾಖೆಯು ಮುಂದೆ ಕೈಗೊಳ್ಳ ಬಹುದಾದ ಯೋಜನೆಗಳನ್ನು ಗುರುತಿಸಿ ಅವುಗಳಿಗೆ ಅಗತ್ಯವಿರುವ ನೀರಿನ ಮಾಹಿತಿ ನೀಡುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಪತ್ರ ಬರೆದು ಮಾಹಿತಿ ಪಡೆಯುವುದು. 
  7. ಚುನಾಯಿತ ಜನಪ್ರತಿಧಿಗಳ ಅಭಿಪ್ರಾಯ ಸಂಗ್ರಹ:- ವರದಿಯ ಕರಡು ಪ್ರತಿಯನ್ನು ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರಿಂದ ಆರಂಭಿಸಿ ಲೋಕಸಭಾ ಸದಸ್ಯರವರೆಗೆ  ಎಲ್ಲಾ ಹಂತದ ಚುನಾಯಿತ ಜನಪ್ರತಿಧಿಗಳಿಗೆ ಕಳುಹಿಸಿ ಅಭಿಪ್ರಾಯ ಸಂಗ್ರಹ ಮಾಡುವುದು.
  8. ಸೋಶಿಯಲ್ ಮೀಡಿಯಾ:- ತುಮಕೂರು ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಗ್ರಾಮವಾರು ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ಬಡಾವಣೆವಾರು ಸೋಶಿಯಲ್ ಮೀಡಿಯಾ ಗ್ರೂಪ್ ಮಾಡಿ ಪ್ರಚಾರ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು.
  9. ಹೂಡಿಕೆದಾರರಿಗೆ ಮಾಹಿತಿ :- ತುಮಕೂರು ಜಿಲ್ಲೆಯಲ್ಲಿ ಹೂಡಿಕೆದಾರರಿಗೆ ಹೂಡಿಕೆ ಮಾಡುವ ಅವಕಾಶಗಳ ಬಗ್ಗೆ ನಕ್ಷೆ, ಮೂಲಭೂತ ಸೌಕರ್ಯಗಳೊಂದಿಗೆ ನೀರಿನ ಅಲೋಕೇಷನ್ ಮಾಹಿತಿಯೊಂದಿಗೆ ಅಗತ್ಯ ಕ್ರಮಕೈಗೊಳ್ಳುವುದು.

ಜಲಗ್ರಾಮ ಕ್ಯಾಲೆಂಡರ್ ನೋಡೆಲ್ ಆಫೀಸರ್

  ತುಮಕೂರು ಜಿಲ್ಲೆಯ ಪ್ರತಿ ಗ್ರಾಮಗಳ ನೀರಿನ ಆಡಿಟ್, ನೀರಿನ ಬಡ್ಜೆಟ್ ಮತ್ತು ನೀರಿನ ಸ್ಟ್ರಾಟಜಿ’ ಮಾಡಲು ಕೆಳಕಂಡಂತೆ ನೋಡೆಲ್ ಆಫಿಸರ್ ನೇಮಕಮಾಡುವುದು.

  1. ಜಿಲ್ಲಾ ಮಟ್ಟದಲ್ಲಿ ಮುಖ್ಯ ಇಂಜಿನಿಯರ್ ನೋಡೆಲ್ ಆಫೀಸರ್ ಆಗಿ ನೇಮಕ ಮಾಡುವುದು.
  2. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಎಸ್.ಇ ಅಥವಾ ಇ.ಇ. ಅಥವಾ ಎ.ಇ.ಇ ಯವರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡುವುದು.
  3. 330  ಗ್ರಾಮ ಪಂಚಾಯಿತಿಗಳಿಗೂ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಎ.ಇ. ಯವರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡುವುದು.
  4. 11 ನಗರ ಸ್ಥಳೀಯ ವ್ಯಾಪ್ತಿಗೆ ಒಬ್ಬೊಬ್ಬ ಎ.ಇ.ಇ ಯವರನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡುವುದು.
  5. 2457 ಗ್ರಾಮಕ್ಕೂ ಒಬ್ಬ ಎಇ ಅಥವಾ ಜೆಇ ಅಥವಾ ಒಬ್ಬ ಅಧಿಕಾರಿಗಳನ್ನು ನೋಡೆಲ್  ಆಫೀಸರ್ ಆಗಿ ನೇಮಕ ಮಾಡಿ ಮಾಡುವುದು.

 ಈ ರೀತಿ ನೋಡೆಲ್ ಆಫೀಸರ್ ನೇಮಿಸಿ  ಅಕೌಂಟಬಲಿಟಿ ನಿಗದಿ ಮಾಡಿ ಪ್ರತಿ ಗ್ರಾಮವಾರು ಜಲಗ್ರಾಮ ಕ್ಯಾಲೆಂಡರ್’ ಮಾಡಿಸುವ ಮೂಲಕ ದೇಶಕ್ಕೆ ಮಾದರಿ ಕೆಲಸ ಮಾಡುವುದು ಅಗತ್ಯವಾಗಿದೆ.

2. ಜಿಲ್ಲಾ ಪಂಚಾಯತ್, ತುಮಕೂರು

  1. ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್,  ’ತುಮಕೂರು ಜಿ.ಐ.ಎಸ್.  ಎನ್.ಐ.ಸಿ,  ಎನ್.ಆರ್.ಡಿ.ಎಂ.ಎಸ್.  ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ’ ಗುತ್ತಿಗೆದಾರ ಕಂಪನಿಯಾದ ಸ್ಪೆಕ್ಟ್ರಾ ಅಸೋಯೇಷನ್ ತುಮಕೂರು ಜಿಲ್ಲೆಯ ಒಂದೇ ಜಿಐಎಸ್ ಮ್ಯಾಪ್’ ಮತ್ತು ನೀರಾವರಿಗೆ ಸಂಬಂಧಿಸಿದ ಎಲ್ಲಾ ಡಿಜಿಟಲ್ ಡೇಟಾಗಳನ್ನು ಒಂದೇ ಕಡೆ ತರಲು ಕ್ರಮಕೈಗೊಳ್ಳುವುದು.
  2. ಸರ್ಕಾರದ ವಿವಿದ ಇಲಾಖೆಗಳಲ್ಲಿ ಈಗಾಗಲೇ ಇರುವ ಡಿಜಿಟಲ್ ಡೇಟಾವನ್ನು ಒಂದೇ ಕಡೆ’ ಸಂಗ್ರಹಮಾಡುವುದು, ಹಾಲಿ ಇರುವ ಆಪ್‌ಗಳ ಡೇಟಾ ಬಗ್ಗೆ ಚರ್ಚಿಸುವುದು ಮತ್ತು ಅಗತ್ಯ ಬಿದ್ದಲ್ಲಿ ಡೇಟಾ ಸಂಗ್ರಹಿಸಲು ನಮ್ಮ ಜಿಲ್ಲಾ ಮಟ್ಟದಲ್ಲಿಯೇ ಆಫ್ ತಯಾರಿಸಿ ತಾಜಾ ಡೇಟಾ ಸಂಗ್ರಹಿಸಲು ಕಾಲಮಿತಿ ನಿಗದಿ ಮಾಡುವುದು.
  3. ಇನ್ನೂ ಮುಂದೆ ಜಿಲ್ಲೆಯಲ್ಲಿ ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಯೋಜನೆಗಳನ್ನು ಆರಂಭದಲ್ಲಿ ಇದೇ ನಕ್ಷೆಯಲ್ಲಿ ನಮೂದಿಸಿ ಮಂಜೂರಾತಿ’ ನೀಡಬೇಕು ಮತ್ತು ಅಂತಿಮ ಬಿಲ್ ನೀಡುವಾಗ ಎಲ್ಲಾ ಮಾಹಿತಿಗಳೊಂದಿಗೆ ನಕ್ಷೆಯಲ್ಲಿ ದಾಖಲಿಸುವುದು’ ಕಡ್ಡಾಯವಾಗ ಬೇಕು.
  4. ವಿವಿಧ ಹಂತಗಳಲ್ಲಿ ಅನಾಲೀಸಿಸ್ ಮಾಡಲು ಗ್ರಾಮ, ಗ್ರಾಮ ಪಂಚಾಯತ್, ಹೋಬಳಿ, ವಿಧಾನಸಭಾ ಕ್ಷೇತ್ರ, ತಾಲ್ಲೂಕು, ಲೋಕಸಭಾ ಕ್ಷೇತ್ರ, ಜಿಲ್ಲೆ, ವಿಭಾಗೀಯ, ಡ್ರೈನೇಜ್ ಮ್ಯಾಪ್, ವಾಟರ್ ಬೇಸಿನ್ ಲೇಯರ್, ವಾಟರ್ ಬಾಡಿ ಲೇಯರ್, ಸ್ಲೋಪ್ ಲೇಯರ್, ಡೆಮ್ ಲೇಯರ್, ವಾಟರ್ ಷೆಡ್ ಲೇಯರ್ ಹೀಗೆ ಗುತ್ತಿಗೆ ದಾರ ಕಂಪನಿಗೆ ಅಗತ್ಯ ಸಾಫ್ಟ್ ಕಾಫಿ ಜಿಐಎಸ್ ಲೇಯರ್‌ಗಳ’ ನಿಯಮ ಪ್ರಕಾರ ನೀಡುವುದು.
  5. ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರ ಪ್ರಕಾರ ಜಲಶಕ್ತಿ ಅಭಿಯಾನದ ರೂಪುರೇಷೆ ಕೈಪಿಡಿ ಸಿದ್ಧಪಡಿಸುವುದು.
  6. ಪಾವಗಡ ತಾಲ್ಲೂಕಿಗೆ ಕುಡಿಯುವ ನೀರಿನ ಯೋಜನೆಯ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  7. ಗ್ರಾಮೀಣ ಜನತೆಗೆ ಅಗತ್ಯವಿರುವ  ಗ್ರಾಮವಾರು ನೀರಿನ ಬೇಡಿಕೆ ಮತ್ತು  ಕುಡಿಯುವ ನೀರಿನ ಯೋಜನೆಗಳಾದ ಬಹುಗ್ರಾಮ’ ಮತ್ತು ಇತರೆಯೋಜನೆಗಳ  ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  8. ಜಿಲ್ಲೆಯಲ್ಲಿ ಇಲಾಖೆಯ ಮಾಲೀಕತ್ವದಲ್ಲಿ ಇರುವ ಜಲಸಂಗ್ರಹಾಗಾರಗಳ ನದಿ ನೀರಿನ ಅಲೋಕೇಷನ್ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  9. ಜಲಾಮೃತ’ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ಇಲಾಖೆ ಸಿದ್ಧಪಡಿಸಿರುವ ಸ್ಥಳೀಯ ಸಂಸ್ಥೆವಾರು ನೀರಿನ ಆಯವ್ಯಯ ಮತ್ತು ಯೋಜನೆಗಳ ಮಾಹಿತಿ ನೀಡುವುದು.
  10. ಅಂತರ್ಜಲ ಚೇತನ’ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ಇಲಾಖೆ ಸಿದ್ಧಪಡಿಸಿರುವ ಸ್ಥಳೀಯ ಸಂಸ್ಥೆವಾರು ನೀರಿನ ಆಯವ್ಯಯ ಮತ್ತು ಯೋಜನೆಗಳ ಮಾಹಿತಿ ನೀಡುವುದು.
  11. ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳ ವ್ಯಾಪ್ತಿಯ ಜಲಾನಯನ ಪ್ರದೇಶದ ಅಭಿವೃದ್ಧಿಯ ಖರ್ಚು-ವೆಚ್ಚಗಳನ್ನು ಖಾತೆಗೆ ಸೇರಿಸುವುದು.
  12. ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿ ಖರ್ಚು-ವೆಚ್ಚಗಳನ್ನು ಖಾತೆಗೆ ಸೇರಿಸುವುದು.
  13. ಪ್ರತಿಹಳ್ಳಿಯ ಜಲಸಂಗ್ರಹಾಗಾರಗಳ ಮತ್ತು ನೀರಿನ ಮೂಲಗಳ ಜಲಗ್ರಾಮ ಕ್ಯಾಲೆಂಡರ್’ ರಚಿಸುವುದು. ಜಲಗ್ರಾಮ ಕ್ಯಾಲೆಂಡರ್ ಮಾಡಲು ಮಹಾತ್ಮಗಾಂಧಿ ನರೇಗಾ ಯೋಜನೆ’ ಯಡಿಯಲ್ಲೂ ಅನುದಾನ ಬಳಸಿಕೊಳ್ಳ ಬಹುದು. ಶೇ 40 ರಷ್ಟು ಜಾಬ್ ಕಾರ್ಡ್ ಇರುವವರಿಂದ ಡೇಟಾ ಸಂಗ್ರಹಿಸ ಬಹುದು. ಶೇ 60 ರಷ್ಟು ಸಲಹಾಗಾರರಿಗೆ ಅನುದಾನ ನೀಡಲು ಸರ್ಕಾರ ಆದೇಶ ಮಾಡುವುದು ಅಗತ್ಯವಾಗಿದೆ.
  14. ತುಮಕೂರು ಜಿಲ್ಲೆಯಲ್ಲಿ ನೀರಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಅರ್ಧಕ್ಕೆ ನಿಂತಿರುವ, ಅಪೂರ್ಣವಾಗಿರುವ, ನೆನೆಗುದ್ದಿಗೆ ಬಿದ್ದಿರುವ ಯೋಜನೆಗಳ ಗ್ರಾಮವಾರು ಪಟ್ಟಿ ಮಾಡುವುದು. ಪೂರ್ಣಗೊಳಿಸಲು ಅಗತ್ಯವಿರುವ ಅನುದಾನದ ಪಟ್ಟಿ ಸಿದ್ಧಪಡಿಸುವುದು.
  15. ಸ್ವಚ್ಛ ಭಾರತ ಆಂದೋಲನ ಅಡಿ ಪ್ರತಿಯೊಂದು ಹಳ್ಳಿಯಲ್ಲಿರುವ ಕೆರೆ, ಕಟ್ಟೆ, ಪಿಕ್‌ಅಪ್, ಬಾಂದಾರ, ಇಂಗು ಗುಂಡಿ, ಕಾಲುವೆ ಹೀಗೆ ಪ್ರತಿಯೊಂದು ಜಲ ಸಂಗ್ರಹಗಾರಗಳ ಸ್ವಚ್ಛತೆಗೆ ಆದ್ಯತೆ ನೀಡಿ, ಶ್ರಮದಾನದ ಮೂಲಕ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳ ಅಡಿ ಅಭಿವೃದ್ಧಿ ಮತ್ತು ರಕ್ಷಣೆ ಮಾಡಲು ಕೆರೆ-ಕಟ್ಟೆ ಸೈನಿಕರು ಕೆಟಾಲಿಸ್ಟ್‌ನಂತೆ ಶ್ರಮಿಸಬೇಕು,  ತುಮಕೂರು ಜಿಲ್ಲೆಯಲ್ಲಿ ಯಾವುದಾದರೂ ಒಂದು ದಿವಸವನ್ನು ನಮ್ಮೂರ ಕೆರೆ-ಕಟ್ಟೆ ಹಬ್ಬ’ ದ ದಿನವನ್ನು ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಆಚರಿಸುತ್ತಿರುವ ಪರ ಮಾದರಿ’ ಯಲ್ಲಿ ಘೋಷಿಸಬೇಕು.
  16. ತುಮಕೂರು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಎಲ್ಲಾ ಕೆರೆ-ಕಟ್ಟೆಗಳಿಗೂ ಒಬ್ಬೊಬ್ಬ ಅಥವಾ ಅಗತ್ಯವಿದ್ದಲ್ಲಿ ದೊಡ್ಡ ಕೆರೆಗಳಿಗೆ ಅಗತ್ಯವಿರುವಷ್ಟು ಜನ ಕೆರೆ-ಕಟ್ಟೆ ಸೈನಿಕ’ ನನ್ನು ನೇಮಕ ಮಾಡಿ ಕೆರೆ-ಕಟ್ಟೆಗಳ ರಕ್ಷಣೆಗಾಗಿ  ಜವಾಬ್ದಾರಿ  ನೀಡುವುದು. ಪ್ರತಿಯೊಂದು ಕೆರೆ-ಕಟ್ಟೆಯ ವ್ಯಾಪ್ತಿಯ ರೈತರು ಅಥವಾ ನಿರುದ್ಯೋಗಿಗಳು ಕೆರೆ-ಕಟ್ಟೆ ಸೈನಿಕರಾಗಲು ಮುಂದೆ ಬರುವವರಿಗೆ ಆಧ್ಯತೆ ನೀಡುವುದು. ನರೇಗಾ ಜಾಬ್ ಕಾರ್ಡ್ ಇರುವವರನ್ನು ಗುರುತಿಸಿ ಉದ್ಯೋಗ ನೀಡುವುದು. ಮೂರು ವರ್ಷ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸುವುದು.
  17. ತುಮಕೂರು ಜಿಲ್ಲಾಧ್ಯಾಂತ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿ ಇರುವ ಕೆರೆ-ಕಟ್ಟೆಗಳು, ಪಿಕ್‌ಅಪ್‌ಗಳು, ಬಾಂದಾರಗಳು, ಬಾವಿಗಳು, ಕೊಳವೆ ಬಾವಿಗಳು, ಕೃಷಿ ಹೊಂಡಗಳನ್ನು ಗ್ರಾಮ ಪಂಚಾಯಿತಿವಾರು ಪಟ್ಟಿ ಮಾಡುವುದು. ಒಂದೊಂದಕ್ಕೂ ಒಂದೊಂದು ಕೋಡ್ ನಂಬರ್’ ಕೊಡುವುದು. ಸ್ಥಳೀಯ ಸಂಸ್ಥೆವಾರು ವ್ಯಾಪ್ತಿಯ ನಕ್ಷೆ ಸಿದ್ಧಪಡಿಸಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮತ್ತು ವಿಲೇಜ್ ಅಕೌಂಟೆಂಟ್‌ಗಳ ಕಚೇರಿಯಲ್ಲಿ ಪ್ರದರ್ಶಿಸುವುದು.
  18. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಕೆರೆ-ಕಟ್ಟೆಗೆ ಒಂದು   ಇತಿಹಾಸ ಖಾತೆ’ ತೆರೆಯುವುದು. ಖಾತೆಯಲ್ಲಿ ಕೆರೆ-ಕಟ್ಟೆ ಆರಂಭದ ದಿವಸದಿಂದ ಪ್ರತಿ ವರ್ಷ ಖರ್ಚು ಮಾಡಿರುವ ಹಣ, ಆದಾಯ, ನೀರು ಸಂಗ್ರಹ, ನೀರು ವಿತರಣೆ, ನೀರು ಹಿಂಗುವಿಕೆ, ನೀರು ಆವಿಯಾಗುವಿಕೆ, ಮರ ಗಿಡಗಳು, ಭೂ-ದಾಖಲೆಗಳು ಇತ್ಯಾದಿ ವಿವರವಿರಬೇಕು. ಕೆರೆಗೆ  ಸಂಬಂಧಿಸಿದ ಎಲ್ಲಾ ವಿವರಗಳ ಜೊತೆಗೆ ಖರ್ಚು-ವೆಚ್ಚದ ಮಾಹಿತಿ ನಮೂದಿಸುವುದು.
  19. ತುಮಕೂರು ಜಿಲ್ಲೆಯ ೩೩೦ ಗ್ರಾಮ ಪಂಚಾಯಿತಿ ವ್ಯಾಪ್ತಿವಾರು ಎಲ್ಲಾ ವಿಧವಾದ  ಕೆರೆಗಳು, ಕಟ್ಟೆಗಳು, ಪಿಕ್ ಅಫ್‌ಗಳು, ಕೃಷಿ ಹೊಂಡಗಳು, ಒಣಗಿರುವ ಮತ್ತು ಚಾಲ್ತಿಯಲ್ಲಿರುವ ಭಾವಿಗಳು, ಕಲ್ಯಾಣಿಗಳು, ಒಣಗಿರುವ ಮತ್ತು ಚಾಲ್ತಿಯಲ್ಲಿರುವ ಕೊಳವೆ ಬಾವಿಗಳು ಸರ್ಕಾರಿ ಮತ್ತು ಖಾಸಗಿ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  20. ಘನತ್ಯಾಜ್ಯ ವಸ್ತು ಘಟಕಗಳಿಗೆ ಅಗತ್ಯವಿರುವ ನೀರು.
  21. ಸ್ಮಶಾನಗಳಿಗೆ  ಅಗತ್ಯವಿರುವ ನೀರು.
  22. ಉದ್ಯಾನವನಗಳಿಗೆ ಅಗತ್ಯವಿರುವ ನೀರು.
  23. ಗ್ರಾಮೀಣ ಪ್ರದೇಶಗಳಲ್ಲಿ ಸತ್ತು ಹೋಗಿರುವ ಕೆರೆ-ಕಟ್ಟೆಗಳ ನೀರಿನ ಪ್ರಮಾಣ.
  24. ಗ್ರಾಮೀಣ ಪ್ರದೇಶಗಳಲ್ಲಿನ ವಸತಿ ರಹಿತರಿಗೆ ನಿವೇಶನ ನೀಡುವ ಹೊಸ ಲೇ ಔಟ್‌ಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.

3  ಎಕ್ಸಿಕ್ಯೂಟೀವ್ ಇಂಜನಿಯರ್ ಸಣ್ಣ ನೀರಾವರಿ ಇಲಾಖೆ

  1. ತುಮಕೂರು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಮಾಲೀಕತ್ವದಲ್ಲಿ ಇರುವ ಜಲಸಂಗ್ರಹಾಗಾರಗಳ ನದಿ ನೀರಿನ ಅಲೋಕೇಷನ್ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  2. ಸಣ್ಣ ನೀರಾವರಿ ಸಚಿವಾಲಯ ಬೆಂಗಳೂರು ಇವರಿಂದ ಅಟಲ್ ಭೂಜಲ್’ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ಸಿದ್ಧಪಡಿಸಿರುವ ಸ್ಥಳೀಯ ಸಂಸ್ಥೆವಾರು ನೀರಿನ ಆಯವ್ಯಯ.
  3. ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳ ವ್ಯಾಪ್ತಿಯ ಜಲಾನಯನ ಪ್ರದೇಶದ ಅಭಿವೃದ್ಧಿಯ ಖರ್ಚು-ವೆಚ್ಚಗಳ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು.
  4. ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿ ಖರ್ಚು-ವೆಚ್ಚಗಳ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು.
  5. ಸ್ಪೆಕ್ಟ್ರಾ ಅಸೋಶಿಯೇಟ್ಸ್ ನೀಡುವ ಮಾಹಿತಿಯನ್ನು ಸಣ್ಣ ನೀರಾವರಿ ಕಾರ್ಯದರ್ಶಿಯರವರೊಂದಿಗೆ ಸಮಾಲೋಚನೆ ನಡೆಸಿ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮ ಪ್ರಕಾರ ಎಲ್ಲಾ ಇಲಾಖೆಗಳ ಮಾಲೀಕತ್ವದ ಜಲಸಂಗ್ರಹಾಗಾರಗಳ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ಮತ್ತು ಜಿಲ್ಲೆಯಲ್ಲಿ ಹೊಸದಾಗಿ ವಿವಿಧ ಇಲಾಖೆಗಳು ಮುಂದಿನ 10 ವರ್ಷ ಕೈಗೊಳ್ಳುವ ಜಲಸಂಗ್ರಹಾಗಾರಗಳ ಸ್ಥಳ ನಿಗದಿ ಮಾಡಿ ಸರ್ಕಾರದಿಂದ ಅದೇಶ ಮಾಡಲು ಅಗತ್ಯ ಕ್ರಮಕೈಗೊಳ್ಳುವುದು.

4.ಜಂಟಿ ನಿರ್ಧೇಶಕರು, ಕೃಷಿ ಇಲಾಖೆ ತುಮಕೂರು

ತುಮಕೂರು ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್ ಪಕ್ಷಿ ನೋಟ

   ನದಿ ಜೋಡಣೆಗೆ ಪೂರಕವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಾರಿಗೆ ತಂದು ಭಾರತ ದೇಶದ ಪ್ರತಿಯೊಂದು ಸರ್ವೆ ನಂಬರ್, ಗ್ರಾಮ, ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ, ರಾಜ್ಯವಾರು ಜನತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ನೀರು, ಕೃಷಿಗೆ ನೀರು ಹೀಗೆ ವಾಟರ್ ಬಜೆಟ್, ವಾಟರ್ ಆಡಿಟ್, ವಾಟರ್ ಸ್ಟ್ರಾಟಜಿ ಮಾಡಲು ದೇಶದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು ತುಮಕೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ಸಹ ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್’ ಮಾಡಿ ವರದಿ ಸಲ್ಲಿಸಿದ್ದಾರೆ. 

  1. ವರದಿ ಪ್ರಕಾರ ತುಮಕೂರು ಜಿಲ್ಲೆಗೆ 2020 ಇಸವಿ ವೇಳೆಗೆ
  2. ಜನತೆಗೆ ಕುಡಿಯುವ ನೀರಿಗಾಗಿ 5.1   ಟಿ.ಎಂ.ಸಿ ಅಡಿ ನೀರು,
  3. ಜಾನುವಾರುಗಳಿಗೆ 1.12 ಟಿ.ಎಂ.ಸಿ ಅಡಿ ನೀರು,
  4. ಕೃಷಿಗೆ 84.03 ಟಿ.ಎಂ.ಸಿ ಅಡಿ ನೀರು,
  5. ಕೈಗಾರಿಕೆಗಳಿಗೆ  1.56  ಟಿ.ಎಂ.ಸಿ ಅಡಿ ನೀರು
  6. ಇತರೆ ಉದ್ದೇಶಕ್ಕೆ 0.51 ಟಿ.ಎಂ.ಸಿ ಅಡಿ ನೀರು
  7. ಒಟ್ಟು 92.39 ಟಿ.ಎಂ.ಸಿ ಅಡಿ ನೀರಿನ ಅಗತ್ಯವಿದೆ ಎಂದು ವರದಿ ಸಿದ್ಧಪಡಿಸಿದ್ದಾರೆ. 

ವಿಧಾನಸಭಾ ಕ್ಷೇತ್ರವಾರು:- ಈ ನೀರಿನ ಬಜೆಟ್ ಮಾಡಿ ಮಳೆ, ಕೆರೆ, ನದಿ ಮೂಲ ಎಲ್ಲಾ ಸೇರಿ   45.802   ಟಿ.ಎಂ.ಸಿ ಅಡಿ ನೀರು, ಅಂತರ್ಜಲದಿಂದ 29.686 ಟಿ.ಎಂ.ಸಿ ಅಡಿ ನೀರು ಸೇರಿ ಒಟ್ಟು 83.88  ಟಿ.ಎಂ.ಸಿ ಅಡಿ ನೀರು ಈಗಾಗಲೇ ಜಿಲ್ಲೆಗೆ ದೊರೆಯುತ್ತಿದೆ. ಜಿಲ್ಲೆಗೆ ಕೇವಲ 16.82 ಟಿ.ಎಂ.ಸಿ ಅಡಿ ನೀರು ಕೊರೆತೆಯಾಗಲಿದೆ ಎಂದಿದ್ದಾರೆ. ಈ ಅಂಕಿಅಂಶಗಳು ಜಿಲ್ಲಾ ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್ ಮತ್ತು ರಾಜ್ಯ  ಇರ್ರಿಗೇಷನ್ ಪ್ಲಾನ್ ಎರಡರಲ್ಲೂ ಗೊಂದಲವಾಗಿದೆ. ವಿಧಾನಸಭಾ ಕ್ಷೇತ್ರವಾರು’ ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯಗಳು ಅಗತ್ಯವಾಗಿದೆ.

    ತುಮಕೂರು ಜಿಲ್ಲೆಗೆ ನದಿ ನೀರಿನ ಅಲೋಕೇಷನ್:-

  1. ಹೇಮಾವತಿ ಯೋಜನೆಯಿಂದ ಅಚ್ಚುಕಟ್ಟಿಗೆ 14.41 ಟಿ.ಎಂ.ಸಿ ಅಡಿ ನೀರು, ಕುಡಿಯುವ ನೀರಿಗೆ 5.455 ಟಿ.ಎಂ.ಸಿ ಅಡಿ ನೀರು, ಒಟ್ಟು 19.865 ಟಿ.ಎಂ.ಸಿ ಅಡಿ ನೀರು, (ಹೇಮಾವತಿ ಸ್ವಲ್ಪ ಗೊಂದಲವಿದೆ)
  2. ಭಧ್ರಾ ಮೇಲ್ದಂಡೆಯಿಂದ ಅಚ್ಚುಕಟ್ಟಿಗೆ 1.385 ಟಿ.ಎಂ.ಸಿ ಅಡಿ ನೀರು, ಕೆರೆಗಳಿಗೆ/ಕುಡಿಯುವ ನೀರಿಗೆ 3.025 ಟಿ.ಎಂ.ಸಿ ಅಡಿ ನೀರು, ಒಟ್ಟು 4.41 ಟಿ.ಎಂ.ಸಿ ಅಡಿ ನೀರು,
  3. ಎತ್ತಿನಹೊಳೆ ಯೋಜನೆಯಿಂದ  ಕುಡಿಯುವ ನೀರಿಗೆ 2.433 ಟಿ.ಎಂ.ಸಿ ಅಡಿ ನೀರು, ಕೆರೆಗಳಿಗೆ 2.954 ೨ಟಿ.ಎಂ.ಸಿ ಅಡಿ ನೀರು ಒಟ್ಟು 4.53 ಟಿ.ಎಂ.ಸಿ ಅಡಿ,
  4. ತುಂಗಭಧ್ರಾ ನದಿಯಿಂದ ಕುಡಿಯುವ ನೀರಿಗಾಗಿ 0.745 ಎಂಸಿಎಫ್‌ಟಿ (0.75 ಟಿ.ಎಂ.ಸಿ ಅಡಿ ನೀರು)
  5. ಒಟ್ಟು 29.666 ಟಿ.ಎಂ.ಸಿ ಅಡಿ ನೀರು ಅಲೋಕೇಷನ್ ಆಗಿದೆ. (ಹೇಮಾವತಿ ಸ್ವಲ್ಪ ಗೊಂದಲವಿದೆ)
  6. ಈ ಮಾಹಿತಿ ಪ್ರಕಾರ ಕೃಷಿಗೆ 15.846  ಟಿ.ಎಂ.ಸಿ ಅಡಿ ನೀರು ಮತ್ತು ಕುಡಿಯುವ ನೀರು ಹಾಗೂ ಕೆರೆಗಳಿಗೆ ತುಂಬಿಸಲು 13.82 ಟಿ.ಎಂ.ಸಿ ಅಡಿ ನದಿ ನೀರಿನ ಅಲೋಕೇಷನ್ ಇದೆ. 
  7. ಸಾಮಾಜಿಕ ನ್ಯಾಯದಡಿ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರಿನಿಂದ ತುಂಬಿಸಲಿ:- ಜಿಲ್ಲೆಗೆ ನಿಗದಿಯಾಗಿರುವ ನದಿ ಮೂಲದ 29.666  ಟಿ.ಎಂ.ಸಿ ಅಡಿ ನೀರು.
  8. ಜಿಲ್ಲೆಯ 2457 ಗ್ರಾಮಗಳ, ಎಲ್ಲಾ ಕೆರೆ-ಕಟ್ಟೆಗಳನ್ನು ಊರಿಗೊಂದು ಕೆರೆ- ಕೆರೆಗೆ ನದಿ ನೀರು ಯೋಜನೆ’ ಯಡಿ ತುಂಬಿಸಿಲು ಅಗತ್ಯವಿರುವ ನೀರಿನ ಮಾಹಿತಿಯನ್ನು ಸಂಗ್ರಹಮಾಡಬೇಕಿದೆ.
  9. ಕೃಷಿಗೆ ನೀರು:- ತುಮಕೂರು ಜಿಲ್ಲೆಯ ಕೃಷಿ ಇಲಾಖೆ ಗ್ರಾಮವಾರು ಇಸ್ರೇಲ್ ಮಾದರಿಯಲ್ಲಿ ಮೈಕ್ರೋ ಇರ್ರಿಗೇಷನ್‌ಗೆ  ಅಗತ್ಯವಿರುವ ನೀರಿನ ಮಾಹಿತಿ ನೀಡುವುದು.
  10. ಕೃಷಿ ಹೊಂಡ:- ಇಲಾಖೆಯಡಿಯಲ್ಲಿ ನಿರ್ಮಾಣ ಮಾಡಿರುವ ಕೃಷಿ ಹೊಂಡಗಳ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು.
  11. ವೈಜ್ಞಾನಿಕ ಬೆಳೆ ಪದ್ಧತಿ:- ಹಾಲಿ ಇರುವ ಬೆಳೆಪದ್ಧತಿಯನ್ನು  ವೈಜ್ಞಾನಿಕ ಬೆಳೆ ಪದ್ಧತಿ ಜಾರಿಯಿಂದ ಉಳಿಯುವ ನೀರಿನ ಮಾಹಿತಿ ನೀಡುವುದು.

5. ಉಪ ನಿರ್ಧೇಶಕರು, ಪಶುಸಂಗೋಪನಾ ಇಲಾಖೆ ತುಮಕೂರು

  1. ಜಾನುವಾರುಗಳಿಗೆ ನೀರು:- ತುಮಕೂರು ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ಅಗತ್ಯವಿರುವ  ಗ್ರಾಮವಾರು ನೀರಿನ ಮಾಹಿತಿಯನ್ನು ನೀಡುವುದು.

6.ಜಿಲ್ಲಾ ಆಯುಷ್ ಅಧಿಕಾರಿ. ತುಮಕೂರು

  1. ತುಮಕೂರು ಜಿಲ್ಲೆಯಲ್ಲಿರುವ ಕೆರೆ-ಕಟ್ಟೆಗಳ ಏರಿಯ ಮೇಲೆ ಹಣ್ಣು, ಹೂ, ತರಕಾರಿ, ಮೇವು, ಔಷಧಿ ಗಿಡಗಳನ್ನು ಬೆಳಸಿ ಕೆರೆ ಸೈನಿಕರಿಗೆ ಆದಾಯ ಬರುವಂತೆ ಮಾಡುವುದು. ಮಳೆಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆ ಮೂಲಕ ನಿರಂತರವಾಗಿ ನೀರಿನ ಸೌಲಭ್ಯ ಕಲ್ಪಿಸಬೇಕು. ಈ ಯೋಜನೆಗೆ ಅಗತ್ಯವಾಗಿರುವ ನೀರಿನ ಮಾಹಿತಿ ನೀಡುವುದು.
  2. ಅಗತ್ಯವಿದ್ದಲ್ಲಿ ಬೋರ್‌ವೆಲ್ ಕೊರೆಸುವುದು.
  3. ನರೇಗಾ ಜಾಬ್ ಕಾರ್ಡ್ ಇರುವವರನ್ನು ಗುರುತಿಸಿ ಉದ್ಯೋಗ ನೀಡುವುದು. ಮೂರು ವರ್ಷ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸುವುದು.

7.ಎಕ್ಸಿಕ್ಯೂಟೀವ್ ಇಂಜನಿಯರ್ ಬೆಸ್ಕಾಂ ತುಮಕೂರು

  1. ತುಮಕೂರು ಜಿಲ್ಲೆಯ ಗ್ರಾಮೀಣಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವಿರುವ ಎಲ್ಲಾ ವಿಧವಾದ ನೀರಿನ ಮೂಲಗಳ ಪಂಪ್‌ಸೆಂಟ್‌ಗಳ ಗ್ರಾಮವಾರು ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  2. ತುಮಕೂರು ಜಿಲ್ಲೆಯ ನಗರಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವಿರುವ ಎಲ್ಲಾ ವಿಧವಾದ ನೀರಿನ ಮೂಲಗಳ ಪಂಪ್‌ಸೆಂಟ್‌ಗಳ ನಗರ ಸ್ಥಳೀಯ ಸಂಸ್ಥೆವಾರು, ಬಡಾವಾಣೆವಾರು ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.

8. ಕೇಂದ್ರ ಅಂತರ್ಜಲ ನಿರ್ಧೇಶನಾಲಯ

  1. ತುಮಕೂರು ಜಿಲ್ಲೆಯ ಗ್ರಾಮೀಣಪ್ರದೇಶಗಳಲ್ಲಿ ಅಂತರ್ಜಲ ಮಾಹಿತಿಯನ್ನು ಗ್ರಾಮವಾರು ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  2. ತುಮಕೂರು ಜಿಲ್ಲೆಯ ನಗರಪ್ರದೇಶಗಳಲ್ಲಿ  ಅಂತರ್ಜಲ ಮಾಹಿತಿಯನ್ನು ನಗರ ಸ್ಥಳೀಯ ಸಂಸ್ಥೆವಾರು, ಬಡಾವಾಣೆವಾರು ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.

9. ಕಾವೇರಿ ನೀರಾವರಿ ನಿಗಮ

ಮಾನ್ಯ ಮುಖ್ಯಂಮತ್ರಿಗಳು, ಮಾನ್ಯ ಪ್ರಧಾನ ಮಂತ್ರಿಗಳಿಗೆ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಯನ್ನು ಫೈಲಟ್ ಯೋಜನೆಯಾಗಿ ಕೈಗೊಳ್ಳಲು ಪತ್ರ ಬರೆದಿರುವ ಹಿನ್ನೆಲೆಯಲ್ಲಿ.

  1. 2024  ರೊಳಗೆ ದೇಶದ ಎಲ್ಲರ ಮನೆಗೂ ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಸರಬರಾಜು.
  2. 2022 ರೊಳಗೆ ರೈತರ ಆದಾಯ ದುಪ್ಪಟ್ಟು ಯೋಜನೆ.
  3. ಕೊವಿಡ್ -19 ನಿಂದ ಹೊರದೇಶಗಳಿಂದ, ಹೊರರಾಜ್ಯಗಳಿಂದ ಬಂದವರಿಗೆ ಗ್ರಾಮ ಮಟ್ಟದಲ್ಲಿ ಉದ್ಯೋಗ ಸೃಷ್ಠಿ.
  4. ಶ್ರೀ ಮಂತ ರೈತರು ಬಗರ್ ಹುಕುಂ ಯೋಜನೆಯಡಿಯಲ್ಲಿ ಸರ್ಕರಿ ಜಮೀನು ಉಳುಮೆ ಮಾಡುತ್ತಿದ್ದು ಅಂತಹವರಿಗೆ ಜಮೀನು ಮಂಜೂರು ಮಾಡಲು ಬರುವುದಿಲ್ಲಾ ಅಂತಹ ಜಮೀನಿನನಲ್ಲಿ ’ಪಿಪಿಪಿ’ ಮಾದರಿಯಲ್ಲಿ ರೈತರ ಸಹಭಾಗಿತ್ವದಲ್ಲಿ ಕೈಗಾರಿಕಾ ವಸಾಹತು ಮಾಡಲು ಯೋಚಿಸಿ, ಅಂತಹ ಪ್ರದೇಶಗಳಿಗೆ ನೀರು.
  5. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಗುರುತಿಸಿ ಬಹುಪಯೋಗಿ ಕ್ಯಾಂಪಸ್ ಗೆ ಜಮೀನು ಗುರುತಿಸಿ ಅಂತಹ ಪ್ರದೇಶಕ್ಕೂ ನೀರು ಸರಬರಾಜು.
  6. ಪೈಲಟ್ ಯೋಜನೆ:- ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಯ ಪೈಲಟ್ ಪ್ರಾಜೆಕ್ಟ್‌ನ್ನು ಸಿಧ್ಧಪಡಿಸುವುದು.
  7. ಹೇಮಾವತಿ ಯೋಜನೆಯಿಂದ ತುಮಕೂರು ಜಿಲ್ಲೆಗೆ ನೀರಿನ ಮೂಲ ಅಲೋಕೇಷನ್, ಆಗಿಂದಾಗ್ಗೆ ಬದಲಾವಣೆ ಮಾಡಿರುವ ಕೆರೆ ಮತ್ತು ಪ್ರದೇಶವಾರು ನೀರಿನ ಅಲೋಕೇಷನ್ ಮತ್ತು ಬಳಕೆಯ ಮಾಹಿತಿ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  8. ಜಿಲ್ಲೆಯಲ್ಲಿ ಒಂದು ಗ್ರಾಮವನ್ನು ಜಲ ಗ್ರಾಮ’ ವಾಗಿ ಆಯ್ಕೆ ಮಾಡಿಕೊಂಡು ಮಾದರಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಎಲ್ಲ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರ ಆಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಸೂಚಿಸಿದ ಹಿನ್ನಲೆಯಲ್ಲಿ ಸಿದ್ಧಗಂಗಾ ಮಠವನ್ನು ಜಲಗ್ರಾಮವನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಯೋಜನೆ ಬಗ್ಗೆ ಮಾಹಿತಿಯನ್ನು ನೀಡುವುದು.
  9. ರಾಜ್ಯ, ರಾಷ್ಟ್ರ ಮತ್ತು ಪ್ರಪಂಚಾದ್ಯಾಂತ ಬೆಸ್ಟ್ ಪ್ರಾಕ್ಟಿಸ್’ ಯೋಜನೆಗಳ ಮಾದರಿಯನ್ನು ವರದಿಯಲ್ಲಿ ಅಳವಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದು.
  10. ಫ್ಲಡ್ ಇರಿಗೇಷನ್ ರದ್ದು ಪಡಿಸಿ,  ಇಸ್ರೇಲ್ ಮಾದರಿ’ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆ ಅಥವಾ ನೂತನ ಇನ್ನೊವೇಷನ್ ಮಾದರಿ ಯೋಜನೆ ಜಾರಿಯಿಂದ ಉಳಿತಾಯವಾಗುವ ನೀರು, ರಾಜ್ಯದ ಆಯವ್ಯಯದಲ್ಲಿ ಪ್ರಕಟಿಸಿರುವಂತೆ ತುಮಕೂರು ಜಿಲ್ಲೆಯ ನದಿ ನೀರಿನಿಂದ ಹನಿ ನೀರಾವರಿ ಯೋಜನೆ ಜಾರಿಗೊಳಿಸಲು ಮಾಸ್ಟರ್ ಪ್ಲಾನ್ ರೂಪಿಸುವುದು. 
  11. ತುಮಕೂರು ಜಿಲ್ಲೆಗೆ ನಿಗದಿ ಪಡಿಸಿರುವ ವಿವಿಧ ನದಿ ಪಾತ್ರಗಳ ನೀರನ್ನು ಸರಿಯಾಗಿ,  ವ್ಯವಸ್ಥಿತವಾಗಿ ವಾಟರ್ ಮ್ಯಾನೇಜ್‌ಮೆಂಟ್ ವ್ಯವಸ್ಥೆ ಜಾರಿಗೊಳಿಸಿದರೆ ಉಳಿಯುವ ನೀರು. 
  12. ತುಮಕೂರು ಜಿಲ್ಲೆಯ ಜಲಸಂಗ್ರಹಾಗಾರಗಳಲ್ಲಿ ಎಕರೆವಾರು ವೈಜ್ಞಾನಿಕವಾಗಿ ನೀರು ಹಂಚಿಕೆ ಮಾಡುವುದರಿಂದ ಉಳಿಯುವ ನೀರು,
  13. ಅಚ್ಚುಕಟ್ಟು ಪ್ರದೇಶದಲ್ಲಿನ ಭೂ-ಬಳಕೆ, ಬೆಳೆ ಪದ್ದತಿ ಬದಲಾವಣೆಯಿಂದ ಉಳಿಯುವ ನೀರು,
  14. ತುಮಕೂರು ಜಿಲ್ಲೆಯ ಕೆರೆ-ಕಟ್ಟೆಗಳಲ್ಲಿ ಹೂಳು ತುಂಬಿರುವ ಸಾಮರ್ಥ್ಯದಷ್ಟು ನೀರು ಬಳಸಲು ಕ್ರಮ.
  15. ಜಲ ವಿವಾದಗಳಲ್ಲಿ ನಿಗದಿ ಪಡಿಸಿರುವ ನೀರಿಗಿಂತ,  ಪ್ರವಾಹದ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಸಮುದ್ರಕ್ಕೆ ಹರಿಯುವ ನೀರನ್ನು ಬಳಸುವ ಬಗ್ಗೆ.
  16. ನಾಲಾ ಆಧುನೀಕರಣ ಮಾಡುವ ಮೂಲಕ ದೊರೆಯುವ ನೀರು
  17. ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳ  ನೀರಿನಿಂದ ಜಿಲ್ಲೆಗೆ ಪಡೆಯಬಹುದಾದ ನೀರಿನ ಯೋಜನೆ.
  18. ಕೇಂದ್ರ ಸರ್ಕಾರದ ಮತ್ತು ರಾಜ್ಯದ ನದಿ ಜೋಡಣೆಗಳಿಂದ ದೊರೆಯುವ ನೀರು
  19. ನಾಮಫಲಕ:- ತುಮಕೂರು ಜಿಲ್ಲೆಯ ಪ್ರತಿ ಕೆರೆ-ಕಟ್ಟೆ/ ಜಲಸಂಗ್ರಹಾಗಾರಗಳ  ಬಳಿ ನಾಮಫಲಕ ಹಾಕಲು ಜಲಸಂಗ್ರಹಾಗಾರಗಳ ಮಾಲಿಕತ್ವ ಇಲಾಖೆಗೆ ಕೆರೆಯ ವಿಸ್ತೀರ್ಣ, ಖಾತೆ ನಂ, ಸಂಖ್ಯೆ, ಪ್ರತಿ ವರ್ಷ ಅಭಿವೃದ್ಧಿಗಾಗಿ ಖರ್ಚು ಮಾಡುವ ಹಣದ ವಿವರಗಳನ್ನು ಪ್ರಕಟಿಸುವ ನಾಮಫಲಕಗಳ ಜಿಐಎಸ್ ಲೇಯರ್ ಮಾಡುವುದು.
  20. ರಾಜ ಕಾಲುವೆ :- ತುಮಕೂರು ಜಿಲ್ಲೆಯ ಪ್ರತಿ ಸರ್ವೆ ನಂಬರ್‌ವಾರು ಕರಾಬು ಹಳ್ಳ, ರಾಜ ಕಾಲುವೆ, ಕೋಡಿಹಳ್ಳಗಳ ಪಟ್ಟಿ ಮಾಡುವುದು. ಸಂಬಂಧ ಪಟ್ಟ ಮಾಲೀಕತ್ವದ ಕೆರೆ-ಕಟ್ಟೆಗಳ ಖಾತೆಗೆ ಸೇರ್ಪಡೆ ಮಾಡುವುದು.
  21. ನದಿಗಳ ಪುನರ್ ಜೀವನ:- ತುಮಕೂರು ಜಿಲ್ಲೆಯಲ್ಲಿ ಸತ್ತು ಹೋಗಿರುವ ನದಿಗಳನ್ನು ಜೀವಂತ ಮಾಡಲು ಅಗತ್ಯವಿರುವ ಅನುದಾನದ ಪಟ್ಟಿ ಸಿದ್ಧಪಡಿಸುವುದು.
  22. ಮಣ್ಣಿನ ರಾಯಲ್ಟಿ :- ತುಮಕೂರು ಜಿಲ್ಲೆಯಲ್ಲಿರುವ ಕೆರೆ-ಕಟ್ಟೆ ಮಣ್ಣಿನ ರಾಯಲ್ಟಿ ಸಂಗ್ರಹಿಸುವ  ಮಾಹಿತಿಗಳನ್ನು ಡಿಜಿಟಲ್ ದಾಖಲಿಸುವುದು.
  23. ಮಳೆ ಮಾಪನ :- ಜಿಲ್ಲೆಯ ಕೆರೆ-ಕಟ್ಟೆ ಬಳಿ ಮಳೆಯಿಂದ ಪ್ರತಿವರ್ಷ ಎಷ್ಟು ನೀರು ಬಂದಿದೆ,     ಕೆರೆ-ಕಟ್ಟೆಗಳಿಗೆ ಎಷ್ಟು ನೀರು ಸಂಗ್ರಹವಾಗಿದೆ, ಎಷ್ಟು ದಿವಸ ನೀರು ಇದೆ ಎಂಬ ಬಗ್ಗೆ ಗಣಕೀಕೃತಗೊಳಿಸಲು ಅಗತ್ಯ ಯೋಜನೆ ರೂಪಿಸುವುದು.
  24. ತಲಪುರಿಗೆ :- ತುಮಕೂರು ಜಿಲ್ಲೆಯಲ್ಲ್ಲಿ ಸಾಂಪ್ರದಾಯಿಕ ನೀರಿನ ಮೂಲಗಳಾಗಿದ್ದ ತಲಪುರಿಗೆ ಗಳನ್ನು ಪುನರುಜ್ಜೀವನಗೊಳಿಸುವ ಸಂಬಂಧ ಜಿ.ಐ.ಎಸ್.ಲೇಯರ್ ಮಾಡುವುದು. 
  25. ಹೂಳು:- ತುಮಕೂರು ಜಿಲ್ಲೆಯ ಜಲಾಶಯಗಳಲ್ಲಿ ಮತ್ತು ಕೆರೆ-ಕಟ್ಟೆಗಳಲ್ಲಿ ತುಂಬಿರುವ ಹೂಳಿನ ಸಾಮರ್ಥ್ಯದ ನೀರು ಬಳಸಿಕೊಳ್ಳಲು ಕೈಗೊಡಿರುವ ಕ್ರಮದ ಬಗ್ಗೆ ಅಧ್ಯಯನ ಮಾಡಿ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸುವುದು.
  26. ಕಾಲುವೆ ಪಕ್ಕ ಹಸೀರಿಕರಣ:- ತುಮಕೂರು ಜಿಲ್ಲೆಯಲ್ಲಿ ಇರುವ ನೀರಾವರಿ ಯೋಜನೆಗಳ, ಯೋಜನಾವಾರು ಮುಖ್ಯ ಕಾಲುವೆ, ಸರ್ವೀಸ್ ಕಾಲುವೆ ಎಷ್ಟೆಷ್ಟು ಕಿ.ಮೀ. ಇದೆ ಈ ಕಾಲುವೆ ಪಕ್ಕ ಹಸಿರೀಕರಣಕ್ಕೆ  ಕ್ರಮಕೈಗೊಳ್ಳುವುದು.
  27. ಸೋಲಾರ್ ಟಾಪ್ ಕೆನಾಲ್:- ತುಮಕೂರು ಜಿಲ್ಲೆಯಲ್ಲಿ ಸೋಲಾರ್ ಟಾಪ್ ಕೆನಾಲ್ ನಿರ್ಮಾಣ  ಮಾಡಿದರೆ ಆವಿಯಾಗುವ  ನೀರು ಎಷ್ಟು ಟಿ.ಎಂ.ಸಿ. ಅಡಿ ಉಳಿತಾಯವಾಗಲಿದೆ ಮಾಹಿತಿ ಸಂಗ್ರಹಿಸುವುದು.
  28. ಸರ್ವೀಸ್ ರಸ್ತೆ:- ತುಮಕೂರು ಜಿಲ್ಲತಾಧ್ಯಾಂತ ಇರುವ ನೀರಾವರಿ ಯೋಜನೆಗಳ, ಯೋಜನಾವಾರು ಡ್ಯಾಂಗಳು,  ಕಾಲುವೆ ಮತ್ತು ಸರ್ವೀಸ್ ರಸ್ತೆಗಳಿಗೆ ಎಷ್ಟೆಷ್ಟು ಎಕರೆ ಜಮೀನು ಭೂ-ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಯೋಜನೆ ನಿರ್ಮಾಣವಾದ ನಂತರ ಯೋಜನಾವಾರು ಎಷ್ಟೆಷ್ಟು ಎಕರೆ ಖಾಲಿ ಜಮೀನು ಉಳಿದಿದೆ. ಇದರಲ್ಲಿ ಒತ್ತುವರಿಯಾಗಿರುವ ಜಮೀನು ಎಷ್ಟು, ಒತ್ತುವರಿ ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳ ವರದಿ ಹಾಗೂ ಉಳಿಕೆ ಜಮೀನನ್ನು ಯಾವ ಉದ್ದೇಶಕ್ಕೆ ಬಳಸಲು ಉದ್ದೇಶಿಸಲಾಗಿದೆ, ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವುದು.

Sustainable Development Goals (SDGs), as also the aims of Sendai framework. It will enhance climate change adaptation with a focus on disaster resilient infrastructure

78. India submitted its Nationally Determined Contribution, under the Paris Agreement in 2015 on a “best effort” basis, keeping in mind the development imperative of the country. Its implementation effectively begins on 1st January 2021. Our commitments as action will be executed in various sectors by the Departments/Ministries concerned through thenormal budgeting process.

23 (2). Water stress related issues are now a serious concern across the country. Our government is proposing comprehensive measures for one hundred water stressed districts.

62 (1). To bring out soon a policy to enable private sector to build Data Centre parks throughout the country. It will enable our firms to skillfully incorporate data in every step of their value chains.

10. ಸಹಕಾರ ಇಲಾಖೆ ತುಮಕೂರು

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಸಹಕಾರಿ ಸಂಸ್ಥೆಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಸಹಕಾರಿ ಸಂಸ್ಥೆಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

11.ಉಪ ನಿಧೇರ್ಶಕರು ತುಮಕೂರು ಮತ್ತು ಮಧುಗಿರಿ ಶಿಕ್ಷಣ ಇಲಾಖೆ.

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಶಾಲಾ-ಕಾಲೇಜುಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಶಾಲಾ-ಕಾಲೇಜುಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  3. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇರುವ ಹಾಸ್ಟೆಲ್‌ಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  4. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಹಾಸ್ಟೆಲ್‌ಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

12. ಜಂಟಿ ನಿರ್ಧೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಕೈಗಾರಿಕೆಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಕೈಗಾರಿಕೆಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  3. ಜಿಲ್ಲೆಯ 33 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಉತ್ಪನ್ನವಾರು ಕ್ಲಸ್ಟರ್ ಸ್ಥಾಪಿಸಲು ಎಂ.ಎಸ್.ಎಂ.ಇ ರವರಿಂದ ಅಧ್ಯಯನ ಮಾಡಿಸಿ  ಆ ಯೋಜನೆಗಳಿಗೆ ಅಗತ್ಯವಿರುವ ನೀರಿನ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

13. ಯೋಜನಾ ನಿರ್ಧೇಶಕರು ಜಿಲ್ಲಾ ನಗರಾಭಿವೃದ್ಧಿ ಇಲಾಖೆ ತುಮಕೂರು

  1. ತುಮಕೂರು ನಗರ ಪ್ರದೇಶಗಳಲ್ಲಿರುವ ಹಾಲಿ ಇರುವ ಕೆರೆ-ಕಟ್ಟೆಗಳು, ಪಿಕ್‌ಅಪ್‌ಗಳು, ಬಾಂದಾರಗಳು, ಬಾವಿಗಳು, ಕೊಳವೆ ಬಾವಿಗಳು, ನೀರಿನ ಇಂಗು ಹೊಂಡಗಳನ್ನು  ನಗರ ಸ್ಥಳೀಯ ಸಂಸ್ಥೆವಾರು ಪಟ್ಟಿ ಮಾಡುವುದು. ಒಂದೊಂದಕ್ಕೂ ಒಂದೊಂದು ಕೋಡ್ ನಂಬರ್’ ಕೊಡುವುದು. ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ವ್ಯಾಪ್ತಿಯ ನಕ್ಷೆ ಸಿದ್ಧಪಡಿಸಿ  ಆಯಾ ಕಾರ್ಯಾಲಯದಲ್ಲಿ ಮತ್ತು ವಿಲೇಜ್ ಅಕೌಂಟೆಂಟ್‌ಗಳ ಕಚೇರಿಯಲ್ಲಿ ಪ್ರದರ್ಶಿಸುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶಗಳಲ್ಲಿರುವ ಪ್ರತಿ ಕೆರೆ-ಕಟ್ಟೆಗೆ ಒಂದು   ಇತಿಹಾಸ ಖಾತೆ’ ತೆರೆಯುವುದು. ಖಾತೆಯಲ್ಲಿ ಕೆರೆ-ಕಟ್ಟೆ ಆರಂಭದ ದಿವಸದಿಂದ ಪ್ರತಿ ವರ್ಷ ಖರ್ಚು ಮಾಡಿರುವ ಹಣ, ಆದಾಯ, ನೀರು ಸಂಗ್ರಹ, ನೀರು ವಿತರಣೆ, ನೀರು ಹಿಂಗುವಿಕೆ, ನೀರು ಆವಿಯಾಗುವಿಕೆ, ಮರ ಗಿಡಗಳು, ಭೂ-ದಾಖಲೆಗಳು ಇತ್ಯಾದಿ ವಿವರವಿರಬೇಕು. ಕೆರೆಗೆ  ಸಂಬಂಧಿಸಿದ ಎಲ್ಲಾ ವಿವರಗಳ ಜೊತೆಗೆ ಖರ್ಚು-ವೆಚ್ಚದ ಮಾಹಿತಿ ನಮೂದಿಸುವುದು. ಜಿ.ಐ.ಎಸ್. ನೆಟ್‌ವರ್ಕ್ ಅಳವಡಿಸಿ ಕುಳಿತಲ್ಲಿಯೇ ವೀಕ್ಷಣೆ ಮಾಡಬಹುದಾದ ಯೋಜನೆ ಮಾಹಿತಿ. 
  3. ನಗರ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಮಳೆ ಕೊಯ್ಲು ಮೂಲಕ ಪ್ರತ್ಯೇಕ ಕೊಳವೆ ಮಾರ್ಗಗಳ’ ಮೂಲಕ ಜಲ ಸಂಗ್ರಹಾರಗಳಿಗೆ ಸಂಗ್ರಹಿಸಲು ಸಾಧ್ಯಾವಿರುವ ನೀರಿನ ಮಾಹಿತಿ.
  4. ತುಮಕೂರು ಜಿಲ್ಲೆಯ 11 ನಗರಗಳ ಬೋರ್‌ವೆಲ್‌ವಾರು  ನೀರಿನ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು.
  5. ತುಮಕೂರು ಜಿಲ್ಲೆಯ 11 ನಗರಗಳ ಧೋಭಿಘಾಟ್‌ಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು.

14.ಉಪನಿರ್ಧೇಶಕರು ಮೀನುಗಾರಿಕಾ ಇಲಾಖೆ. ತುಮಕೂರು

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ  ಮೀನು ಸಾಕಾಣಿಕೆ ಕೇಂದ್ರಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಮೀನು ಸಾಕಾಣಿಕೆ ಕೇಂದ್ರಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

15. ಉಪ ಸಂರಕ್ಷಣಾಧಿಕಾರಿ ಅರಣ್ಯ ಇಲಾಖೆ

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಅರಣ್ಯ ಪ್ರದೇಶಗಳ ಕಾಡು ಪ್ರಾಣಿಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ’ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಅರಣ್ಯ ಪ್ರದೇಶಗಳ ಕಾಡು ಪ್ರಾಣಿಗಳಿಗೆ ಅಗತ್ಯವಿರುವ ನೀರಿನ ’ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  3. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಜಲಸಂಗ್ರಹಾಗಾರಗಳ ಸುತ್ತ ಒತ್ತುವರಿಯಾಗದಂತೆ ಗಡಿ ಗುರುತಿಸಿ ಮರ-ಗಿಡ ಹಾಕುವುದು. ನರೇಗಾ ಜಾಬ್ ಕಾರ್ಡ್ ಇರುವವರನ್ನು ಗುರುತಿಸಿ ಉದ್ಯೋಗ ನೀಡುವುದು. ಮೂರು ವರ್ಷ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸುವುದು.
  4. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ಬಡಾವಾಣೆವಾರು ಇರುವ ಜಲಸಂಗ್ರಹಾಗಾರಗಳ ಸುತ್ತ ಒತ್ತುವರಿಯಾಗದಂತೆ ಗಡಿ ಗುರುತಿಸಿ ಮರ-ಗಿಡ ಹಾಕುವುದು. ನರೇಗಾ ಜಾಬ್ ಕಾರ್ಡ್ ಇರುವವರನ್ನು ಗುರುತಿಸಿ ಉದ್ಯೋಗ ನೀಡುವುದು. ಮೂರು ವರ್ಷ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸುವುದು.

16. ಡಿ.ಹೆಚ್. ತುಮಕೂರು

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಎಲ್ಲಾ ವಿಧವಾದ ಆಸ್ಪತ್ರೆಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಎಲ್ಲಾ ವಿಧವಾದ ಆಸ್ಪತ್ರೆಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

17. ಉಪ ನಿರ್ಧೇಶಕರು, ತೋಟಗಾರಿಕಾ ಇಲಾಖೆ. ತುಮಕೂರು

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ತೋಟಗಾರಿಕಾ ಬೆಳೆಗಳಿಗೆ ಇಸ್ರೇಲ್ ಮಾದರಿಯಲ್ಲಿ ಮೈಕ್ರೋ ಇರ್ರಿಗೇಷನ್‌ಗೆ  ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ತೋಟಗಾರಿಕಾ ತೋಟಗಾರಿಕಾ ಫಾರಂಗಳಿಗೆ ಅಗತ್ಯವಿರುವ ಫಾರಂವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  3. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ತೋಟಗಾರಿಕಾ ಬೆಳೆಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  4. ವೈಜ್ಞಾನಿಕ ಬೆಳೆ ಪದ್ಧತಿ:- ಹಾಲಿ ಇರುವ ಬೆಳೆಪದ್ಧತಿಯನ್ನು  ವೈಜ್ಞಾನಿಕ ಬೆಳೆ ಪದ್ಧತಿ ಜಾರಿಯಿಂದ ಉಳಿಯುವ ನೀರಿನ ಮಾಹಿತಿ ನೀಡುವುದು.

18. ಅಭಿವೃದ್ಧಿ ಅಧಿಕಾರಿ. ಕೆಐಎಡಿಬಿ 

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಕೈಗಾರಿಕಾ ವಸಾಹತುಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಕೈಗಾರಿಕಾ ವಸಾಹತುಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

19. ಎಕ್ಷಿಕ್ಯೂಟೀವ್ ಇಂಜಿನಿಯರ್ ಕೆ.ಪಿ.ಟಿ.ಸಿ.ಎಲ್

  1. ತುಮಕೂರು ಜಿಲ್ಲೆ ವಿದ್ಯುತ್ ಉತ್ಪಾದನೆ:- ತುಮಕೂರು ಜಿಲ್ಲೆಯಲ್ಲಿರುವ ಜಲವಿಧ್ಯುತ್ ಉತ್ಪಾದನಾ ಘಟಕಗಳಿಗೆ ಅಗತ್ಯವಿರುವ ನೀರಿನ ಬಳಕೆ ಮಾಹಿತಿ ನೀಡುವುದು. 

20. ಪರಿಸರ ಇಲಾಖೆ.

ತುಮಕೂರು ಜಿಲ್ಲೆಯ ನೀರು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಉಂಟು ಮಾಡಲಿದೆ ಎಂಬ ಬಗ್ಗೆ ವರದಿ ನೀಡುವುದು.

21 .ಅಸಿಸ್ಟೆಂಟ್ ಜನರಲ್ ಮ್ಯಾನೇಜರ್. ಕೆಎಸ್ಎಸ್ಐಡಿಸಿ 

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಕೈಗಾರಿಕಾ ವಸಾಹತುಗಳಿಗೆ   ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಕೈಗಾರಿಕಾ ವಸಾಹತುಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  3. ದಿನಾಂಕ:11.10.2019 ರಂದು ವ್ಯವಸ್ಥಾಪಕ ನಿರ್ಧೇಶಕರ ಸುತ್ತೋಲೆಯಂತೆ ಪ್ರತಿ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಗುರುತಿಸಿ ಆ ಜಮೀನಿನ ಯೋಜನೆಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

22. ಎಕ್ಸಿಕ್ಯೂಟೀವ್ ಇಂಜನಿಯರ್ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

  1. ತುಮಕೂರು ಜಿಲ್ಲೆಯ 11 ನಗರದ ಜನತೆಗೆ ಕುಡಿಯುವ ನೀರಿನ ಯೋಜನೆಗಳ ನದಿ ನೀರಿನ ಅಲೋಕೇಷನ್ ಮತ್ತು ಕೆರೆಗಳ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ 11 ನಗರಗಳ ಕೊಳಚೆ ನೀರು ಪುನರ್ ಬಳಕೆ ಯೋಜನೆ ಮಾಡಿ ಎಲ್ಲಿಗೆ ಬಳಸಬಹುದು ಎಂಬ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು. 
  3. ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಉಂಟು ಮಾಡಲಿದೆ ಎಂಬ ಬಗ್ಗೆ ವರದಿ ನೀಡುವುದು.
  4. ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಬಡಾವಾಣೆವಾರು ಕುಡಿಯುವ ನೀರಿನ’ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು
  5. ಟ್ಯಾಂಕ್‌ವಾರು ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು
  6. ಸಿಸ್ಟನ್‌ವಾರು ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು
  7. ಬೀದಿ ನಲ್ಲಿವಾರು ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು
  8. ಗೇಟ್‌ವಾಲುವಾರು ನೀರಿನ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು.

23. ಕೃಷಿ ವಿಜ್ಞಾನ ಕೇಂದ್ರ ಹೀರೆಹಳ್ಳಿ

  1. ಜಲಶಕ್ತಿ ಅಭಿಯಾನದ ಗ್ರಾಮಗಳ  ನೀರಿನ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು.
  2. ಜಲಶಕ್ತಿ ಅಭಿಯಾನದ ಗ್ರಾಮಗಳ ಇತರೆ ನೀರಿನ ಯೋಜನೆಗಳ ಮಾಹಿತಿ ನೀಡುವುದು.

24. ಕೃಷಿ ವಿಜ್ಞಾನ ಕೇಂದ್ರ ಕೊನೆಹಳ್ಳಿ

  1. ಜಲಶಕ್ತಿ ಅಭಿಯಾನದ ಗ್ರಾಮಗಳ  ನೀರಿನ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ ನೀಡುವುದು.
  2. ಜಲಶಕ್ತಿ ಅಭಿಯಾನದ ಗ್ರಾಮಗಳ ಇತರೆ ನೀರಿನ ಯೋಜನೆಗಳ ಮಾಹಿತಿ ನೀಡುವುದು.

25.ಮುಜರಾಯಿ ಇಲಾಖೆ

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ದೇವಾಲಯಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ದೇವಾಲಯಗಳಿಗೆ  ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  3. ಹಬ್ಬ- ಜಾತ್ರೆ ಸಮಯದಲ್ಲಿ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

26. ನಬಾರ್ಡ್ ತುಮಕೂರು

  1. ತುಮಕೂರು ಜಿಲ್ಲೆಯಲ್ಲಿರುವ ಎಫ್.ಪಿ.ಓ ಗಳ ಯೋಜನೆಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  2. ತುಮಕೂರು ಜಿಲ್ಲೆಯಲ್ಲಿರುವ ಸಿ.ಪಿ.ಓ ಗಳ ಯೋಜನೆಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.

27. NWDA: NATIONAL WATER DEVELOPMENT AGENCY

  1. ಕೇಂದ್ರ ಸರ್ಕಾರದ  NPP- National Perspective Plan   ಅಡಿಯಲ್ಲಿ ರಾಜ್ಯದ ನದಿ ಜೋಡಣೆ ಯೋಜನೆ ಮತ್ತು ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ತುಮಕೂರು ಜಿಲ್ಲೆಗೆ ದೊರೆಯುವ/ಸಾಧ್ಯಾತೆ ಇರುವ ನೀರಿನ ಮಾಹಿತಿಯನ್ನು ನೀಡುವುದು. 

28 . ಪೋಲೀಸ್ ಇಲಾಖೆ

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ದೇವಾಲಯಗಳಿಗೆ/ಚರ್ಚ್/ ಮಸೀದಿಗಳಿಗೆ  ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ   ದೇವಾಲಯಗಳಿಗೆ/ಚರ್ಚ್/ ಮಸೀದಿಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  3. ದೇವಾಲಯಗಳಿಗೆ/ಚರ್ಚ್/ ಮಸೀದಿಗಳಿಗೆ ಹಬ್ಬ- ಜಾತ್ರೆ ಸಮಯದಲ್ಲಿ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

29. ಲೋಕೋಪಯೋಗಿ ಇಲಾಖೆ

  1. ತುಮಕೂರು ಜಿಲ್ಲೆಯಲ್ಲಿ ಲೋಕೋಪಯೋಗಿ/ರಾಷ್ಟ್ರೀಯ ಹೆದ್ಧಾರಿ ಇಲಾಖೆಯು ಜಲ ಮಾರ್ಗಗಳಿಗೆ ಅಗತ್ಯವಿರುವ ನೀರಿನ ಮಾಹಿತಿ ನೀಡುವುದು.

30.ಉಪ ನಿರ್ಧೇಶಕರು, ರೇಷ್ಮೆ ಇಲಾಖೆ ತುಮಕೂರು

  1. ರೇಷ್ಮೆ ಕೃಷಿಗೆ ನೀರು:- ಉಪ ನಿರ್ಧೇಶಕರು, ರೇಷ್ಮೆ ಇಲಾಖೆ ತುಮಕೂರು ಇವರಿಂದ ರೇಷ್ಮೆ ಇಲಾಖೆಯ ಗ್ರಾಮವಾರು ನೀರಿನ ಬೇಡಿಕೆ ಮತ್ತು ಕೃಷಿ ಹೊಂಡಗಳ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  2. ವೈಜ್ಞಾನಿಕ ಬೆಳೆ ಪದ್ಧತಿ ಜಾರಿಯಿಂದ ಉಳಿಯುವ ನೀರಿನ ಮಾಹಿತಿ ನೀಡುವುದು.

31. ರಾಜ್ಯ ಅಂತರ್ಜಲ ನಿರ್ಧೇಶನಾಲಯ

  1. ತುಮಕೂರು ಜಿಲ್ಲೆಯ ಗ್ರಾಮೀಣಪ್ರದೇಶಗಳಲ್ಲಿ ಅಂತರ್ಜಲ ಮಾಹಿತಿಯನ್ನು ಗ್ರಾಮವಾರು ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.
  2. ತುಮಕೂರು ಜಿಲ್ಲೆಯ ನಗರಪ್ರದೇಶಗಳಲ್ಲಿ  ಅಂತರ್ಜಲ ಮಾಹಿತಿಯನ್ನು ನಗರ ಸ್ಥಳೀಯ ಸಂಸ್ಥೆವಾರು, ಬಡಾವಾಣೆವಾರು ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.

32.ಅಂಕಿ ಅಂಶಗಳ ಇಲಾಖೆ ತುಮಕೂರು

  1. ರಾಜ್ಯ ಸರ್ಕಾರ ಗ್ರಾಮ-1’ ರಚಿಸಲು ಆಯವ್ಯಯದಲ್ಲಿ ಘೋಶಿಸಿದೆ. ಇವರನ್ನು ಡಿಜಿಟಲ್ ಲೈವ್ ಡೇಟಾ ನೀಡಲು ಬಳಸಿಕೊಳ್ಳ ಬಹುದು.
  2. ತುಮಕೂರು ಜಿಲ್ಲೆಯ ಪ್ರತಿಗ್ರಾಮಗಳಲ್ಲಿ/ ನಗರ ಪ್ರದೇಶದಲ್ಲಿ ಬಡಾವಾಣೆಗಳಲ್ಲಿ ವಿಲೇಜ್ ಟಾಸ್ಕ್ ಪೋರ್ಸ್ ರಚಿಸಿ ತಾಜಾ ಡೇಟಾ ಸಂಗ್ರಹಿಸುವುದು.

33.ಪ್ರವಾಸೋಧ್ಯಮ ಇಲಾಖೆ

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಪ್ರವಾಸೋಧ್ಯಮಗಳ ಕೇಂದ್ರಗಳಿಗೆ ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ ಪ್ರವಾಸೋಧ್ಯಮಗಳ ಕೇಂದ್ರಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  3. ಪ್ರವಾಸೋಧ್ಯಮಗಳ ಕೇಂದ್ರಗಳಲ್ಲಿ ಹಬ್ಬ- ಜಾತ್ರೆ ಸಮಯದಲ್ಲಿ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

34. ವಿಶ್ವೇಶ್ವರಯ್ಯ ಜಲ ನಿಗಮ

ಎತ್ತಿನಹೊಳೆ ಯೋಜನೆಯಿಂದ ನೀರಿನ ಮೂಲ ಅಲೋಕೇಷನ್, ಆಗಿಂದಾಗ್ಗೆ ಬದಲಾವಣೆ ಮಾಡಿರುವ ಕೆರೆ ಮತ್ತು ಪ್ರದೇಶವಾರು ನೀರಿನ ಅಲೋಕೇಷನ್ ಮತ್ತು ಬಳಕೆಯ ಮಾಹಿತಿ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.

ಭಧ್ರಾ ಮೇಲ್ದಂಡೆ ಯೋಜನೆಯಿಂದ ನೀರಿನ ಮೂಲ ಅಲೋಕೇಷನ್, ಆಗಿಂದಾಗ್ಗೆ ಬದಲಾವಣೆ ಮಾಡಿರುವ ಕೆರೆ ಮತ್ತು ಪ್ರದೇಶವಾರು ನೀರಿನ ಅಲೋಕೇಷನ್ ಮತ್ತು ಬಳಕೆಯ ಮಾಹಿತಿ ಜಿಐಎಸ್ ಲೇಯರ್ ಮತ್ತು ಇತಿಹಾಸ ಸಹಿತ’ ಮಾಹಿತಿ.

35.ವಿಶ್ವವಿದ್ಯಾನಿಲಯ ತುಮಕೂರು

  1. ಆಕ್ಟಿವಿಟಿ ಪಾಯಿಂಟ್:- ಕೇಂದ್ರ ಸರ್ಕಾರದ ಎಐಸಿಟಿ ಮಾರ್ಗದರ್ಶಿ ಸೂತ್ರ ಪ್ರಕಾರ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ಆಕ್ಟಿವಿಟಿ ಪಾಯಿಂಟ್’ ಕಡ್ಡಾಯ ಮಾಡಿದೆ. ಗ್ರಾಮವಾರು ಡೇಟಾ ಸಂಗ್ರಹಿಸಲು ಮತ್ತು ಒಂದೊಂದು ಉದ್ದೇಶದ ಬಗ್ಗೆ ಅಧ್ಯಯನ ಮಾಡಲು ಪ್ರೇರೇಪಿಸುವುದು ಮತ್ತು ತುಮಕೂರು ಜಿಲ್ಲೆಯ ವಿಶ್ವವಿದ್ಯಾನಿಲಯಗಳ  ವ್ಯಾಪ್ತಿಯ ಕಾಲೇಜುಗಳಲ್ಲೂ ವಿಧ್ಯಾರ್ಥಿಗಳ ಸೇವೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು.  
  2. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯನ ಪೀಠ:- ತುಮಕೂರು ಜಿಲ್ಲೆಯ ನೀರಾವರಿ ಬಗ್ಗೆ ಅವರು ಈವರೆಗೂ ಅಧ್ಯಯನ ಮಾಡಿರುವ ಮಾಹಿತಿಗಳ ಬಗ್ಗೆ.
  3. ಜಿಲ್ಲೆಯಲ್ಲಿರುವ ಇಂಜಿನಿಯರ್ ಕಾಲೇಜುಗಳು, ಡಿಪ್ಲೋಮೊ ಕಾಲೇಜುಗಳು ಮತ್ತು 2 ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಬರುವ ಪ್ರತಿಯೊಂದು ಕಾಲೇಜುಗಳಿಗೂ ಇಂತಿಷ್ಟು ಗ್ರಾಮವನ್ನು ಗುರುತಿಸಿ ದತ್ತು ನೀಡಿದಲ್ಲಿ ಆಯಾ ಗ್ರಾಮದ ಎಲ್ಲಾ ವಿಭಾಗದ ವಿಧ್ಯಾರ್ಥಿಗಳ ಟೀಮ್’ ಆನ್‌ಲೈನ್ ತಾಜಾ ಡೇಟಾ ಸಂಗ್ರಹಿಸಲು ಸಹಕಾರಿಯಾಗಲಿದ್ದಾರೆ. ಅವರಿಗೆ ಪ್ರಾಜೆಕ್ಟ್ ವರ್ಕ್ ಆಗಿ ಪರಿಗಣಿಸಬೇಕಾಗುವುದು.
  4. ಇದೇ ಮಾದರಿಯಲ್ಲಿ ರಾಜ್ಯದ ಪಿಯುಸಿ ನಂತರದ ಎಲ್ಲಾ ಕಾಲೇಜುಗಳ ವಿಧ್ಯಾರ್ಥಿಗಳು ಆಕ್ಟಿವಿಟಿ ಪಾಯಿಂಟ್ ಮಾಡಲು ಆದೇಶ ಮಾಡಿ, ಆಯಾ ಗ್ರಾಮದ ವಿಧ್ಯಾರ್ಥಿಗಳು ಅವರ ಗ್ರಾಮದ ಜಲಗ್ರಾಮ ಕ್ಯಾಲೆಂಡರ್’ ಡೇಟಾ ತಯಾರಿಸಲು ಬಳಸಿಕೊಳ್ಳಬಹುದು.

36. ವಕ್ ಬೋರ್ಡ್  ಇಲಾಖೆ

  1. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಇರುವ ಇಲಾಖೆ ಆಸ್ತಿ, ಚರ್ಚ್ ಮತ್ತು ಮಸೀದಿಗಳಿಗೆ  ಅಗತ್ಯವಿರುವ ಗ್ರಾಮವಾರು ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  2. ತುಮಕೂರು ಜಿಲ್ಲೆಯ ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆವಾರು ಬಡಾವಾಣೆವಾರು ಇರುವ  ಇಲಾಖೆ ಆಸ್ತಿ, ಚರ್ಚ್ ಮತ್ತು ಮಸೀದಿಗಳಿಗೆ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.
  3. ಹಬ್ಬ- ಜಾತ್ರೆ ಸಮಯದಲ್ಲಿ ಅಗತ್ಯವಿರುವ ನೀರಿನ ಜಿಐಎಸ್ ಲೇಯರ್ ಸಹಿತ’ ಮಾಹಿತಿ ನೀಡುವುದು.

38. ಮಹಿಳಾ ಮತ್ತು ಮಕ್ಕಳ ಇಲಾಖೆ. ತುಮಕೂರು

  1. ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಕರೆಯಂತೆ ಸ್ತ್ರೀ ಸಂಘಗಳ ಫೆಡ್‌ರೇಷನ್ ಪ್ರತಿನಿಧಿ’ಗಳನ್ನು ಸಹ ಲೈವ್ ಡೇಟಾ ನೀಡಲು ಮತ್ತು ಜಲಸಂಗ್ರಹಾಗಾರಗಳನ್ನು ಗಂಗಾಮಾತೆ ದೇವಾಲಯ’ ಎಂದು ಪೂಜಿಸಿ, ಅಭಿವೃದ್ಧಿ ನಿರ್ವಹಣೆ ಮಾಡಲು ಬಳಸಿಕೊಳ್ಳ ಬಹುದು.

38. ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ. ಬೆಂಗಳೂರು

  1. ಇಸ್ರೇಲ್ ಮಾದರಿ:- ಹನಿ ನೀರಾವರಿ ಯೋಜನೆ ಜಾರಿಗೊಂಡಾಗ ಉಳಿತಾಯವಾಗುವ ನೀರಿನಲ್ಲಿ ಜಿಲ್ಲೆಯ ಯಾವುದೇ ನದಿ ಪಾತ್ರದಿಂದ, ಇನ್ನಾವುದೇ ನದಿ ಪಾತ್ರಕ್ಕೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗೆ ಯೋಜನೆ ಜಾರಿಗೊಳಿಸಲು ಯಾವುದೇ ಅಂತರ ರಾಜ್ಯ ವಿವಾದ ಅಡ್ಡ ಬರಲಿದೆಯೇ, ಜಿಲ್ಲೆಗೆ ನಿಗದಿಯಾಗಿರುವ ನೀರನ್ನು ವಿವಿಧ ಯೋಜನೆಗಳಿಗೆ ಬಳಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆಯೇ ಎಂಬ ಬಗ್ಗೆ ಮಾಹಿತಿ.
  2. ಅಂತರ ರಾಜ್ಯ ನದಿ  ವಿವಾದ:- ತುಮಕೂರು ಜಿಲ್ಲೆಯ ನೀರಾವರಿ ಬೇಸಿನ್‌ಗಳ ಆಧಾರದ ಮೇಲೆ  ನೀರಾವರಿ ವಿವಾದಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶಗಳ ನಿಯಮಗಳನ್ನು ಪಾಲಿಸುವುದು.
  3. ಬದಲಿ ಅರಣ್ಯ ಇಲಾಖೆ:- ನೀರಾವರಿ ಯೋಜನೆಗಳಿಗೆ ಅರಣ್ಯ ಭೂಮಿಯನ್ನು ಭೂ ಸ್ವಾಧೀನ ಮಾಡಲು ಪೂರಕವಾಗಿ ಜಲಸಂಪನ್ಮೂಲ ಇಲಾಖೆ ಬದಲಿ ಅರಣ್ಯ ಬೆಳೆಸುವ ಯೋಜನೆಗೆ ತುಮಕೂರು ಜಿಲ್ಲೆಯ ರೆವಿನ್ಯೂ ಜಮೀನು ಗುರುತಿಸುವುದು
  4. ಜಿಯೋಮೆಟ್ರಿಕ್ ಸೆಂಟರ್ ತುಮಕೂರು ಜಿಲ್ಲೆಯ ನೀರಾವರಿ ಬಗ್ಗೆ ತಯಾರಿಸಿದ ವರದಿ.

ದಿನಾಂಕ: 18.05.2020                          ಕುಂದರನಹಳ್ಳಿ ರಮೇಶ್