TUMAKURU:SHAKTHIPEETA FOUNDATION
ರಾಜಧಾನಿ ಬೆಂಗಳೂರಿಗೆ ಉಪ ನಗರದಂತಿರುವ ತುಮಕೂರಿನ ವಸಂತನರಸಾಪುರದ ನಿಮ್ಜ್/ ಇಂಡಸ್ಟ್ರಿಯಲ್ ನೋಡ್/ ಚನ್ನೈ- ಬೆಂಗಳೂರು- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಹೀಗೆ ಯಾವುದೇ ಹೆಸರಿನಲ್ಲಿ ಕರೆದರೂ ಗ್ರೇಟರ್ ನೊಯ್ಡಾ ಬಿಟ್ಟರೆ ದೇಶದಲ್ಲಿಯೇ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶ ವಸಾಹತು ಹೊಂದಿದೆ.
ವಸಂತಾನರಸಾಪುರ ಕೈಗಾರಿಕಾ ಪ್ರದೇಶ, ತುಮಕೂರು ಸ್ಮಾರ್ಟ್ ಸಿಟಿ ಮತ್ತು ಈ ಎರಡರ ಮಧ್ಯೆ ಬರುವ ಪ್ರದೇಶದಲ್ಲಿ ಇನ್ನೊಂದು ನಗರವೂ ಸೇರಿದಂತೆ ತುಮಕೂರು ತ್ರಿವಳಿ ನಗರವಾಗಲಿದೆ, ಇಲ್ಲಿಗೆ ನಿಗದಿಯಾಗಿರುವ ಎತ್ತಿನಹೊಳೆ ಅಲೋಕೇಷನ್ ಹಿಂಪಡೆದಿರುವುದು ಅಕ್ಷಮ್ಯ ಅಪರಾಧ ಎಂದು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಆತಂಕ ವ್ಯಕ್ತ ಪಡಿಸಿದರು.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ನೀರಿನ ಅಲೋಕೇಷನ್ ನಿಗದಿ ಮಾಡಲು ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು ನಗರದಲ್ಲಿ ಸ್ಥಳೀಯ ಹೂಡಿಕೆದಾರರು ಮತ್ತು ಚೀನಾ ದೇಶದಿಂದ ಹೊರಬರುವ ವಿಶ್ವದ ಇತರೆ ದೇಶಗಳ ಹೂಡಿಕೆದಾರರನ್ನು ಆಕರ್ಷಿಸಿಲು ’ತುಮಕೂರು ಇನ್ವೆಸ್ಟರ್ ಮೀಟ್’ ಮಾಡಲು ಸಂಸದರು ಸಚಿವರ ಗಮನ ಸೆಳೆದರು.
ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರ ಸಲಹೆಯಂತೆ ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಹಲವಾರು ದೇಶಗಳ ಮತ್ತು ರಾಜ್ಯದ ಇತರ ಸಂಸ್ಥೆಗಳ ಸಹಯೋಗದಲ್ಲಿ ’ತುಮಕೂರು ಇನ್ವೆಸ್ಟರ್ ಮೀಟ್’ ಮಾಡುವ ಆಲೋಚನೆಯ ಬಗ್ಗೆ ಸಚಿವರಿಗೆ ಕುಂದರನಹಳ್ಳಿ ರಮೇಶ್ ಮನವಿ ಮಾಡಿದರು.
ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಬಸವರಾಜ್ ರವರು ತಿಳಿಸಿದರು. ಸಚಿವರು ನೀವು ಯಾವಾಗ ಬೇಕಾದರೂ ಮಾಡಬಹುದು ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪಾವಗಡದ ಶಿವಪ್ರಸಾದ್‌ರವರು ಸ್ಥಳೀಯರಿಗೆ ಉದ್ಯೋಗ ನೀಡಲು ಅಗತ್ಯ ಕ್ರಮಕೈಗೊಳ್ಳಲು ಸಚಿವರಲ್ಲಿ ಮನವಿ ಮಾಡಿದರು.