TUMAKURU: SHAKTHIPEETA FOUNDATION
ಕರ್ನಾಟಕ ರಾಜ್ಯ ದೇಶದ ಏಳು ರಾಜ್ಯಗಳಿಗೆ ಮಾದರಿಯಾಗಿ ಅಟಲ್ ಭೂಜಲ್ ಯೋಜನೆ ಅನುಷ್ಠಾನಕ್ಕೆ ತರಲು ಸಜ್ಜಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ತಿಳಿಸಿದರು.
ತುಮಕೂರಿನ ಶಕ್ತಿಪೀಠ ಫೌಂಡೇಷನ್ ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳ ಲೈನ್ ಎಸ್ಟಿಮೇಟ್ ಕರಡು ಪ್ರತಿಯ ಮಾಹಿತಿಗಳ ಬಗ್ಗೆ ಸಮಾಲೋಚನೆ ನಡೆಸಲು ಬೆಂಗಳೂರಿನ ವಿಕಾಸಸೌಧದಲ್ಲಿರುವ ಅವರ ಕಚೇರಿಗೆ ಭೇಟಿ ನೀಡಿದಾಗ ವಿಷಯ ಹಂಚಿಕೊಂಡರು.
ರಾಜ್ಯದ ಎಲ್ಲಾ ಇಲಾಖೆಗಳ ಮಾಹಿತಿಯನ್ನು ಕ್ರೋಢೀಕರಿಸುವುದು ಒಂದು ದೊಡ್ಡ ಸವಾಲಾಗಿದೆ. ಯಾವುದೇ ಯೋಜನೆಯು ಓವರ್ ಲ್ಯಾಪ್ ಮಾಡದೇ ಇರಲು ವಿಶೇಷ ಗಮನ ಹರಿಸಲಾಗಿದೆ. ನೀವು ನೀಡುವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ರಾಜ್ಯದಲ್ಲಿ ಒಂದು ಇಲಾಖೆ ಮಾಡಿದ ಕೆಲಸ ಇನ್ನೊಂದು ಇಲಾಖೆಗೆ ತಿಳಿಯುವುದಿಲ್ಲ, ಅಷ್ಟೆ ಎಕೆ ಒಂದೇ ಇಲಾಖೆಯಲ್ಲಿ ಹಿಂದಿನ ಯೋಜನೆಗಳ ಮಾಹಿತಿಯನ್ನು ತೆಗೆದು ನೋಡುವುದಿಲ್ಲ, ಒಂದೇ ಯೋಜನೆಗೆ ಆನೇಕ ಭಾರಿ ಹಣ ವ್ಯಯಿಸಿದರೂ ಪಕ್ಕಾ ಡೇಟಾ ಮಾತ್ರ ಇರುವುದಿಲ್ಲ.
’ಕಟ್ ಅಂಡ್ ಪೇಸ್ಟ್ ಡೇಟಾ ಸಂಸ್ಕೃತಿ’ ಬಿಟ್ಟು ಗ್ರಾಮಗಳಿಗೆ ತೆರಳಿ ಸರಿಯಾದ ಡೇಟಾ ಸಂಗ್ರಹಿಸಲು ತುಮಕೂರಿನ ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕ ಕುಂದರನಹಳ್ಳಿ ರಮೇಶ್ ಮತ್ತು ಶ್ರೀ ಶಿವಪ್ರಸಾದ್ ಮನವಿ ಮಾಡಿದರು.
ತುಮಕೂರು ಜಿಲ್ಲೆಯ ಅಧಿಕಾರಿಗಳಿಗೆ ಈ ನೀರಿನ ಯೋಜನೆಯ ಸಭೆಗಳನ್ನು ಮಾಡುವುದೇ ಒಂದು ದೊಡ್ಡ ತಲೇ ನೋವಾಗಿದೆ. ಒಂದೇ ಜಿಲ್ಲೆಯಲ್ಲಿ ಪದೇ ಪದೇ ಅಟಲ್ ಭೂಜಲ್ ಯೋಜನೆ, ಜಲಾಮೃತ ಯೋಜನೆ, ಅಂತರ್ಜಲ ಚೇತನ ಯೋಜನೆ, ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಯೋಜನೆ ಮತ್ತು ಕೇಂದ್ರ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲು ತುಮಕೂರಿನ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮಾಡಿಸುತ್ತಿರುವ ’ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ಧಿ ಫೈಲಟ್’ ಯೋಜನೆ ಸೇರಿದಂತೆ ಗೊಂದಲವಾಗಿದೆ.
ಎಲ್ಲಾ ಯೋಜನೆಗಳ ಬಗ್ಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಯೋಜನೆ ಹಂಚಿಕೊಂಡು ಯಾರು, ಯಾರು ಎಲ್ಲೆಲ್ಲಿ ಯಾವ ಯೋಜನೆ ಕೈಗೊಳ್ಳಬೇಕು ಎಂಬ ಬಗ್ಗೆ ಒಮ್ಮತಕ್ಕೆ ಬರಲು ಸಲಹೆ ನೀಡಿದರು. ಇದು ಹೀಗೆ ಮುಂದುವರೆದರೆ ತಪ್ಪಾಗಲಿದೆ ಎಂದು ಮನವರಿಕೆ ಮಾಡಿದರು.