22nd December 2024
Share
G.S.BASAVARAJ. NANDEESH.MANJUNATH, SHIVARUDRAIAH,SHIKARESH & KUNDARANAHALLI RAMESH

TUMAKURU:SHAKTHIPEETA FOUNDATION

 ಭಾರತದ ಪರಂಪರೆಯಲ್ಲಿ ಗೋವಿಗೆ ಮೊದಲಸ್ಥಾನ, ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಗೋಮೂತ್ರ ಹಾಕುವುದು, ಹಸುವಿನ ಸಗಣಿಯಲ್ಲಿ ಉಂಡೆ ಮಾಡಿ ಗರಿಕೆ ಪತ್ರೆ ಇಟ್ಟರೆ, ಅದೇ ಗಣೇಶ/ಬೆನಕ ಎಂಬ ಭಾವನೆ ಇಂದೂ ಚಾಲ್ತಿಯಲ್ಲಿದೆ.

 INVEST TUMAKURU  ಸಮಾರಂಭ ಮಾಡಬೇಕು ಎಂಬ ಚಿಂತನೆಯನ್ನು ಮಾಡಿದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮೊದಲು ತುಮಕೂರಿನ ಪಶುವೈದ್ಯಾಧಿಕಾರಿ ಶ್ರೀ ನಂದೀಶ್ ಅವರನ್ನು ಕರೆಸಿ ಸಮಾಲೋಚನೆಯನ್ನು ಆರಂಭಿಸಿದ್ದು ಕಾಕತಾಳೀಯ.

 ತುರುವೆಕರೆಯ ಕುಣಿಕೇನಹಳ್ಳಿ ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರದ ಶ್ರೀ ಮಂಜುನಾಥ್‌ರವರು ಅಲ್ಲಿನ ಚಟುವಟಿಕೆಗಳ ಬಗ್ಗೆ ವಿವರಿಸಿದರು. ತುಮಕೂರಿನ ಐಟೆಕ್ ಪಶು ಆಸ್ಪತ್ರೆಯ ಸ್ಥಿತಿಗತಿ ಬಗ್ಗೆ ನಂದೀಶ್ ಮಾಹಿತಿ ಪಡೆದರು.

 ಹಸುವಿನ ಹಾಲು, ಸಗಣೆ, ಬೆರಣೆ, ಗಂಜು, ತುಪ್ಪ, ಬೆಣ್ಣೆ ಹೀಗೆ ಹಸುವಿನ ಬೈಪ್ರಾಡಕ್ಟ್, ಮೇವು ಉತ್ಪಾದನೆ, ಅಮೃತ್ ಮಹಲ್ ಕಾವಲ್ ಸಂರಕ್ಷಣೆ, ಜಿಲ್ಲೆಯ ಗ್ರಾಮಗಳಲ್ಲಿರುವ ಗೋಮಾಳಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ  ಬೆಸ್ಟ್ ಪ್ರಾಕ್ಟೀಸಸ್ ಮಾಹಿತಿ ಸಂಗ್ರಹಿಸಲು ಸೂಚಿಸಿದರು.

 ಹೀಗೆ ಪಶುಗಳಿಗೆ ಸಂಬಂಧಿಸಿದ ಯಾವ ಯೋಜನೆಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಬಹುದು. ರಾಜ್ಯ ಮಟ್ಟದಲ್ಲಿ, ದೇಶ ಮಟ್ಟದಲ್ಲಿ, ವಿಶ್ವ ಮಟ್ಟದ ಪರಿಣಿತ ತಜ್ಞರ ವರದಿಗಳು, ಗೋಶಾಲೆ ಮಾಡಿರುವವರ, ಎಂಪಿಸಿಎಸ್ ಮೂಲಕ ಹಾಲು ಸರಬರಾಜು ಮಾಡುವ ರೈತರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ತರಲು ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿರುವ ಹಾಲಿ ಯಾವ ಯೋಜನೆಗಳನ್ನು ಜಿಲ್ಲೆಯ ಯಾವ ಭಾಗದಲ್ಲಿ ಆರಂಭಿಸಬಹುದು ಎಂಬ ಬಗ್ಗೆ ಜಿಐಎಸ್ ಲೇಯರ್ ಸಹಿತ ಪಿಪಿಟಿ’ ಮಾಡಲು ಸಲಹೆ ನೀಡಿದರು.

   ಪಶುವೈದ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಮಣಿವಣ್ಣನ್‌ರವರ ಜೊತೆ ಮಾತನಾಡಿ ಶೀಘ್ರವಾಗಿ ವಿಶೇಷ ಯೋಜನೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲು  ಸಮಾಲೋಚನೆ ಮಾಡಿದರು. ಕಾರ್ಯದರ್ಶಿಯವರು ದೇಶಕ್ಕೆ ಮಾದರಿಯಾದ ಯೋಜನೆ ರೂಪಿಸುವ ಭರವಸೆ ನೀಡಿದರು.

  ತುರುವೇಕೆರೆ ಶಾಸಕರಾದ ಶ್ರೀ ಮಸಾಲೆ ಜಯರಾಮ್ ರವರ ಜೊತೆ ದೂರವಾಣಿಯಲ್ಲಿ ಚರ್ಚಿಸಿದರು, ತುರುವೇಕೆರೆ ತಹಶೀಲ್ದಾರ್ ಜೊತೆ ಸಮಾಲೋಚನೆ ಮಾಡಿ ದಾಖಲೆಗಳ ಬಗ್ಗೆ ಮಾಹಿತಿ ಪಡೆದರು. ಈ ಯೋಜನೆ ತುರುವೇಕೆರೆ ಕ್ಷೇತ್ರದ ಚಿತ್ರಣ ಬದಲಿಸುವಂತಾ, ವಿಶ್ವದ ಭೂಪಟದಲ್ಲಿ ದಾಖಲೆಯಾಗುವಂತಹ ಯೋಜನೆಯಾಗಬೇಕು.

   ಅಮೃತ್ ಮಹಲ್ ಕಾವಲ್ ಪ್ರೇಮಿಗಳೇ, ಪಶು ಪ್ರೇಮಿಗಳೇ ದಯವಿಟ್ಟು ತಮ್ಮ ಅಮೂಲ್ಯವಾದ ಸಲಹೆ ನೀಡಿ. ಆಸಕ್ತರು ತಮ್ಮ ಅಭಿಪ್ರಾಯ ಸಲಹೆಗಳನ್ನು ಇಲಾಖಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು.