22nd December 2024
Share

TUMAKURU: SHAKTHIPEETA FOUNDATION

ಸಿದ್ಧಗಂಗಾ ಶ್ರೀಗಳ ಜನ್ಮ ಶತಮಾನೋತ್ಸವದ’ ಅಂಗವಾಗಿ ಹಮ್ಮಿಕೊಂಡಿದ್ದ ಹಸಿರು-ತುಮಕೂರು’ ಯೋಜನೆಯಡಿಯಲ್ಲಿ ತುಮಕೂರಿನ ಜಯನಗರದಲ್ಲಿ ಸುಮಾರು 3000 ಗಿಡಗಳನ್ನು ಹಾಕಲು ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಸಂಚಾಲಕರನ್ನಾಗಿ 2012 ನೇ ಸಾಲಿನಲ್ಲಿ ನೇಮಕ ಮಾಡಿದ್ದ ಶ್ರೀ ವೀರಪ್ಪದೇವರು ಮತ್ತು ಶ್ರೀಮತಿ ಕೆ.ಆರ್.ಮಂಜುಳ ದಂಪತಿಗಳ ಮಕ್ಕಳಾದ ಆರ್.ವಿ.ನಂದಿನಿ  ಮತ್ತು ಆರ್.ವಿ.ಉಮಾಸುತ ಅವರು ಶಕ್ತಿಪೀಠ ಕ್ಯಾಂಪಸ್‌ನಲ್ಲಿ 342 ಗಿಡಗಳನ್ನು ಹಾಕಿ ಬೆಳೆಸುವುದಾಗಿ ತಿಳಿಸಿದ್ದಾರೆ.

 ನಮ್ಮ ಕುಟುಂಬವೂ ಸಹ ಶ್ರೀ ದುರ್ಗಾಪರಮೇಶ್ವರಿ ಹೆಸರಿನಲ್ಲಿ ವಿವಿಧ ಉದ್ದಿಮೆ ಮಾಡುತ್ತಿದ್ದೇವೆ, ನಾವು ದೇವಿಯ ಭಕ್ತರು ಜಿ.ಎಸ್.ಬಸವರಾಜ್‌ರವರು ಮತ್ತು ನೀವೂ ನನಗೆ ಗಿಡ ಹಾಕಲು ನೀಡಿದ ಜವಾಬ್ಧಾರಿಯಿಂದ ಇಂದು ಜಯನಗರ ಹೊಂಗೆ ಮರಗಳ ಬೀಡಾಗಿದೆ’ ಯಾವುದೇ ರಸ್ತೆಗೆ ಹೋದರೂ ನನಗೆ ಪರಮಾನಂದವಾಗಿದೆ.

 ಯಾರಿಗೆ ದಾನ ನೀಡಿದರೂ ನಮಗೆ ಅಷ್ಟು ಸಂತೋಷವಾಗಿಲ್ಲ, ಆದರೇ ಈ ಹಸಿರುದಾನ ನಿಜಕ್ಕೂ ಅದ್ಭುತ’ ಶಕ್ತಿಪೀಠ ಕ್ಯಾಂಪಸ್ ನಿಜಕ್ಕೂ ಉತ್ತಮವಾದ ಯೋಜನೆ, ನಮ್ಮ ಕುಟುಂಬ ಕ್ಯಾಂಪಸ್‌ನಲ್ಲಿ ಗಿಡ ಹಾಕುವ ಮೂಲಕ ಹಸಿರು ದಾನ ನೀಡಲು ಮುಂದಾಗಿದೆ.

 ನೀವು ಒಂದ ತರಹ ಬೆಂಕಿ, ಅಭಿವೃದ್ಧಿ ಟೈಗರ್, ಯಾವಾಗ ಏನು ನಿಲುವು ತೆಗೆದುಕೊಳ್ಳುತ್ತಿರಾ ಗೊತ್ತಾಗುವುದಿಲ್ಲ. ಶಕ್ತಿಪೀಠದಲ್ಲಿ ಗಿಡ ಹಾಕುವುದು ನಮ್ಮ ಕುಟುಂಬದ ಬಹು ಒಂದು ದೊಡ್ಡ ಸೇವೆ’ ನಮಗೆ ಫೌಂಡೇಷನ್ ಅವಕಾಶ ನೀಡಲಿ ಎಂದು ಚಾಟಿ ಬೀಸಿದ್ದಾರೆ.

 ನಿಮ್ಮ ಕುಟುಂಬದ ತೀರ್ಮಾನಕ್ಕೆ ಸಂತೋಷವಾಗಿದೆ, ಶಕ್ತಿದೇವತೆ ಅವಕಾಶ ನೀಡಿದರೆ ನೀವೂ ಹಸಿರು ದಾನ ಮಾಡಬಹುದು.