15th January 2025
Share

TUMAKURU: SHAKTHIPEETA FOUNDATION

ತುಮಕೂರು ನಿಮ್ಜ್ ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ತುಮಕೂರು ಗ್ರಾಮಾಂತರ, ಕೊರಟಗೆರೆ, ಶಿರಾ ಮತ್ತು ಪ್ರದೇಶದ ವ್ಯಾಪ್ತಿ ಇಲ್ಲದಿದ್ದರೂ ತುಮಕೂರು ನಗರ ವಿಧಾನಸಭಾ ಕ್ಷೇತ್ರ. ಶ್ರೀ ಜಿ.ಎಸ್.ಬಸವರಾಜ್ ಕಳೆದಭಾರಿ ಸಂಸದರಾದ ಅವಧಿಯಲ್ಲಿ ಮಂಜೂರು ಮಾಡಿಸಿದ ಪ್ರತಿಷ್ಠಿತ ಯೋಜನೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹ ಗಂಭೀರವಾಗಿ ಶ್ರಮಿಸಿದ ಯೋಜನೆ, ಕೈಐಡಿಬಿ ಅಧಿಕಾರಿಯಾಗಿದ್ದ ಶ್ರೀ ರಾಮಕೃಷ್ಣರವರು ಹೇಳುತ್ತಿದ್ದರು ಅಲ್ಲ ರಮೇಶ್ ಇಷ್ಟು ವರ್ಷ ಆದರೂ ಕೈಗಾರಿಕಾ ಪ್ರದೇಶಕ್ಕೇ ನೀರು ನಿಗದಿ ಮಾಡಿ ಯೋಜನೆ ಆರಂಭಿಸಿಲ್ಲ ಎಂದರೆ ಹೇಗೆ? ಆರಂಭದಲ್ಲಿ ನಿಮ್ಜ್ ತರಬೇಕು ಎಂಬ ಉತ್ಸಾಹ ಎಲ್ಲಿಹೋಯಿತು.

ಬರೀ ಭಾಷಣ ಪತ್ರಿಕಾ ಹೇಳಿಕೆಯೇ ಹೊರತು ಮೂಲಭೂತ ಸೌಕರ್ಯ ಅಷ್ಟಕ್ಕಷ್ಟೆ. ಅದೇನೆ ಇರಲಿ ಪ್ರಸ್ತುತ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಕಡತದ ಅನುಸರಣೆ ಮಾಡಿ ಅಧಿಕಾರಿಗಳಿಂದ ವಸಂತಾನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಮೊದಲನೇ ಹಂತದಲ್ಲಿ ಎತ್ತಿನಹೊಳೆ ನೀರನ್ನು ಎಲ್ಲಿ ಸಂಗ್ರಹ ಮಾಡಬಹುದು ಎಂಬ ನಕ್ಷೆ ಮತ್ತು ಯಾವ ಯಾವ ಕೆರೆಗೆ ನೀರು ತುಂಬಿಸಬಹುದು ಎಂಬ ಒಂದು ಯೋಜನೆ ರೂಪಿಸಿದ್ದಾರೆ.

ದಿನಾಂಕ:04.10.2019 ರಂದು ಶ್ರೀ ಚಂದ್ರಪ್ಪನವರು ಮತ್ತು ಅವರ ತಂಡ ನಮ್ಮ ಫೋರಂ ಕಚೇರಿಗೆ ಬಂದು ನೀರಿನ ಅವಶ್ಯಕತೆಯ ಬಗ್ಗೆ ಸಮಾಲೋಚನೆ ನಡೆಸಿದ್ದರು. ಶ್ರೀ ಲಿಂಗಪ್ಪನವರು ಸಹ ಆಗಿಂದಾಗ್ಗೆ ವಿಚಾರಿಸುತ್ತಿದ್ದರು. ಶ್ರೀ ಡಮರುಗ ಉಮೇಶ್ ಸೋಶಿಯಲ್ ಮೀಡಿಯಾದಲ್ಲಿ ರುದ್ರನರ್ತನ ಮಾಡುತ್ತಿದ್ದರು.

 ವಸಂತಾನರಸಾಪುರ ಕೈಗಾರಿಕಾ ಅಸೋಶಿಯೇಷನ್‌ನವರು ಮುಂದಿನ ಸಭೆ ವೇಳೆಗೆ ನಿರ್ಧಿಷ್ಠ ಆದೇಶದೊಂದಿಗೆ ಬನ್ನಿ ಎಂದು ಶ್ರೀ ಜಿ.ಎಸ್.ಬಸವರಾಜ್‌ರವರು ನಡೆಸಿದ ಸಭೆಯಲ್ಲಿ ಹೇಳಿ, ನಾವು ಸಂಸದರನ್ನು ಕೇಳುವುದಿಲ್ಲಾ ಕುಂದರನಹಳ್ಳಿರಮೇಶ್‌ರವರೇ ಉತ್ತರಿಸಬೇಕು ಎಂದು ಚಾಟಿ ಬೀಸಿದ್ದರು.

 ಪ್ರಸ್ತುತ ಈ ವ್ಯಾಪ್ತಿಯ ಎಲ್ಲಾ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳು ತಮ್ಮ ಅಮೋಘವಾದ ಬಾಯಿ ಬಿಟ್ಟು ಈ ಯೋಜನೆ ಬಗ್ಗೆ ಮಾತನಾಡಲಿ. ವಸಂತಾನರಸಾಪುರ ಕೈಗಾರಿಕಾ ಅಸೋಶಿಯೇಷನ್ ನವರು ಮತ್ತು ಈ ಗ್ರಾಮಗಳ ಜನತೆಯೂ ಸಹ ಅವರ ಸ್ಪಷ್ಟ ಅಭಿಪ್ರಾಯಗಳನ್ನು ತಿಳಿಸುವುದು ಸೂಕ್ತವಾಗಿದೆ.

ಯೋಜನೆ ಬಗ್ಗೆ ತುಮಕೂರು ಜಿಲ್ಲೆಯ ಹಾಲಿ ಮತ್ತು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ಶ್ರೀ ಡಾ.ಜಿ.ಪರಮೇಶ್ವರ್‌ರವರು ಮತ್ತು ಶ್ರೀ ಟಿ.ಬಿ.ಜಯಚಂದ್ರವರು ಮೌನ ಮುರಿಯಿರಿ ಬಾಯಿ ಸವೆಯುವುದಿಲ್ಲ.