13th June 2024
Share

ಅಭಿಯಾನಆರಂಭಿಸಿ ಅಥವಾಡಸ್ಟ್ಬಿನ್’  ಗೆ ಹಾಕಿ

ಎಲ್ಲಾ ಜಲಮೂಲಗಳ ಸಮೀಕ್ಷೆಯ ಸಪ್ತಾಹವನ್ನುಅಭಿಯಾನದ ರೂಪದಲ್ಲಿ ಆಯೋಜಿಸಿ

TUMAKURU:SHAKTHIPEETA FOUNDATION

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಎಲ್.ಕೆ.ಅತೀಕ್‌ರವರು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದ ಮೇರೆಗೆ ದಿನಾಂಕ:12.06.2020 ರಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಬರೆದಿರುವ ಪತ್ರದ ಆಧಾರದ ಮೇಲೆ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಅಭಿಯಾನ’ ಆರಂಭಿಸಿ ಇಲ್ಲವೇ ಈ ಪತ್ರವನ್ನು ಡಸ್ಟ್‌ಬಿನ್’ ಗೆ ಹಾಕುವ ಕಾರ್ಯಕ್ರಮವನ್ನಾದರೂ ಆಯೋಜಿಸಿ.

 ತುಮಕೂರು ಜಿಲ್ಲೆಯಲ್ಲಿ  ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ Consultative committee for the ministry of jalashkthi  ಸಮಿತಿ ಸದಸ್ಯರು, ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ‘ಇಬ್ಬರೂ ಸಹ ಗಂಭೀರವಾಗಿ ಜಲಮೂಲಗಳ ಪತ್ತೆಗಾಗಿ   ನಿರಂತರವಾಗಿ ಶ್ರಮಿಸುತ್ತಿದ್ದಾರೆ’

 ಈ ಪತ್ರ ಬರುವ ಮುನ್ನ, ಅಟಲ್ ಭೂಜಲ್ ಯೋಜನೆ ಉದ್ಘಾಟನೆ ಆಗುವ ಮೊದಲೆ ದಿಶಾ ಸಮಿತಿಯಲ್ಲಿ ಜಲಗ್ರಾಮ ಕ್ಯಾಲೆಂಡರ್ ರಚಿಸಿ ಪ್ರದರ್ಶನ ಮಾಡುವ ಮೂಲಕ ಜಿ.ಎಸ್.ಬಸವರಾಜ್ ಬದ್ಧತೆ ತೋರಿದ್ದಾರೆ.

 ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್‌ರವರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಶುಭ ಕಲ್ಯಾಣ್‌ರವರು   ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಜಲಮೂಲಕ್ಯಾಲೆಂಡರ್ ರಚಿಸಲು ನಿರ್ದೇಶನ ನೀಡಿದ್ದಾರೆ, ಆದರೇ ಬೆಂಕಿಗೆ ಗಂಟೆ ಕಟ್ಟುವವರು ಯಾರು?’

 ಪೂರಕವಾಗಿ ರಾಜ್ಯದ ಸಣ್ಣನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿರವರು ತುಮಕೂರು ಜಿಲ್ಲೆಯ ಜಲಮೂಲಗಳ ಪತ್ತೆಗಾಗಿ ಟೆಂಡರ್ ಕರೆದು ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್ ಗೆ ಟೆಂಡರ್ ನೀಡಿದ್ದಾರೆ. ನಮ್ಮ ಶಕ್ತಿಮೀರಿ ದೊರಕಿರುವ ಮಾಹಿತಿ ಕ್ರೋಡೀಕರಿಸಿದ್ದೇವೆ. ‘ದೊರಕಿರುವ ಬೋಗಸ್ ಡೇಟಾ ನೀಡಿ ಬಿಲ್ ಪಡೆಯಬೇಕೆ? ಅಥವಾ ಪಕ್ಕಾ ಡೇಟಾ ಸಂಗ್ರಹಿಸಿ ಕೊಡಬೇಕೆ? ನೀವೇ ಆಲೋಚಿಸಿ’

 ಈ ಮಾಹಿತಿ ಸರಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು 11 ನಗರ ಸ್ಥಳೀಯ ಸಂಸ್ಥೆಗಳ ಕಮೀಷನರ್/ಚೀಪ್‌ಆಫಿಸರ್ ಹಾಗೂ 330 ಗ್ರಾಮಪಂಚಾಯಿತಿಗಳ ಪಿಡಿಓಗಳಿಗೆ ನೀಡಿ, ಇಲಾಖಾವಾರು ಅಧಿಕಾರಿಗಳಿಗೆ ಅವರವರ ಇಲಾಖೆಯ ಜಿಐಎಸ್ ಆಧಾರಿತ ಡಿಜಿಟಲ್ ಮಾಹಿತಿ ನೀಡಲು ಸುತ್ತೋಲೆ ಹೊರಡಿಸಿ. ಪ್ರತಿಯೊಂದು ಇಲಾಖೆಗೂ ಒಂದೊಂದು ಪಾಸ್‌ವಾರ್ಡ್ ನೀಡಿ ಅಫ್ ಲೋಡ್ ಮಾಡಲು ಸೂಚಿಸಿ.  ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿದ್ದರೂ ಇದೂವರೆಗೂ ಯಾಕೆ ಆಗಿಲ್ಲ?’

ಶ್ರೀ ಜಿ.ಎಸ್.ಬಸವರಾಜ್‌ರವರು ಜಲಗ್ರಾಮ ಕ್ಯಾಲೆಂಡರ್’ ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಪ್ರಕಟಿಸಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಆಯವ್ಯಯದಲ್ಲಿಯೂ ಪ್ರಕಟವಾಗಿದೆ. ಇದರ ಅಪ್ಪ-ಅಮ್ಮ ಇಲಾಖೆ ಯಾವುದು?’

 ಶ್ರೀ ಜಿ.ಎಸ್.ಬಸವರಾಜ್‌ರವರು ಜಲಗ್ರಾಮ ಕ್ಯಾಲೆಂಡರ್’ ನ್ನು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ, ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಲ ಜಾರಕಿಹೊಳೆ ರವರಿಗೆ ಮತ್ತು ಎಲ್ಲಾ ಅಧಿಕಾರಿಗಳಿಗೆ ಪ್ರದರ್ಶನ ಮಾಡಿಸಿದ್ದಾರೆ. ಒಂದು ರೀತಿ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಗೊಂಬೆರಾಮರ ನಾಟಕ’ ನಡೆದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಮುಂದೆ ಪ್ರದರ್ಶಿಸಿದ್ದಾರೆ.

ಅಧಿಕಾರಿಗಳು ಅಟಲ್‌ಭೂಜಲ್ ಯೋಜನೆ ವ್ಯಾಪ್ತಿಯ ಆರು ತಾಲ್ಲೂಕುಗಳು ಮತ್ತು ಜಲಾಮೃತ ಯೋಜನೆಯಿಂದ ನಾಲ್ಕು ತಾಲ್ಲೂಕುಗಳು ಸೇರಿ ಯಾವುದೇ ಹೆಸರಿನಲ್ಲಿ ಎಲ್ಲಾ ಜಲಮೂಲಗಳ ಸಮೀಕ್ಷೆಯ ಸಪ್ತಾಹವನ್ನು’ ಆಯೋಜಿಸಲು ಸಲಹೆಗಳು.

 1. ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್.
 2. ಎನ್.ಐ.ಸಿ.
 3. ಎನ್.ಆರ್.ಡಿ.ಎಂ.ಎಸ್.
 4. ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ
 5. ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್

ಈ ಐದು ಸಂಸ್ಥೆಗಳು ಇದೂವರೆಗೂ ಸಂಗ್ರಹಿಸಿರುವ ಜಲಮೂಲಗಳ ಸಂಖ್ಯೆಗಳನ್ನು 11 ನಗರ ಸ್ಥಳೀಯ ಸಂಸ್ಥೆಗಳು ಮತ್ತು 330 ಗ್ರಾಮ ಪಂಚಾಯಿತಿಗಳ ನಕ್ಷೆಯಲ್ಲಿ ಹಾಕಿ. ಜಲಸಂಗ್ರಹಾಗಾರಕ್ಕೊಂದು ಕೋಡ್ ನಂಬರ್ ನೀಡಿ,

 1. ಪಿಕ್-ಅಫ್
 2. ಅಪೂರ್ಣ ಪಿಕ್‌ಅಫ್
 3. ಭಾಂಧಾರ
 4. ಕೃಷಿಹೊಂಡ.
 5. ಇಂಗು ಗುಂಡಿಗಳು
 6. ಖಾಸಗಿ ಬಾವಿ
 7. ಖಾಸಗಿ ಒಣಬಾವಿ
 8. ಸರ್ಕಾರಿ ಭಾವಿ
 9. ಸರ್ಕಾರಿ ಒಣಭಾವಿ
 10. ಸರ್ಕಾರಿ ಬೋರ್‌ವೆಲ್
 11. ಸರ್ಕಾರಿ  ಒಣ ಬೋರವೆಲ್
 12. ಖಾಸಗಿ ಬೋರ್‌ವೆಲ್
 13. ಖಾಸಗಿ  ಒಣ ಬೋರವೆಲ್
 14. ಕೆರೆ
 15. ಕಟ್ಟೆ
 16. ಡ್ಯಾಂ
 17. ಹಳ್ಳ
 18. ಕರಾಬು
 19. ಕಾಲುವೆ
 20. ಸರ್ವೆ ನಂಬರ್‌ವಾರು ಬದುಗಳು
 21. ಕಲ್ಯಾಣಿ
 22. ಹಸಿರು ಜಿಯೋ ಟ್ಯಾಗಿಂಗ್
 23. ಯಾವಗ್ರಾಮದಲ್ಲಿ ಕೆರೆ-ಕಟ್ಟೆಗಳಿಲ್ಲವೋ ಅಂತಹ ಕಡೆ ಹೊಸ ಜಲಸಂಗ್ರಹಾಗಾರ.
 24. ಮಳೆಮಾಪನ ಕೇಂದ್ರ
 25. ನೀರು ಮಾಪನ ಕೇಂದ್ರ

 ಇನ್ನಿತರೆ ಯಾವುದೇ ಹೆಸರಿನ ಹಾಲಿ ಇರುವ ಜಲಮೂಲಗಳವಾರು ಒಂದೊಂದು ಕಲರ್ ಮತ್ತು ಹೊಸದಾಗಿ ಕೈಗೊಳ್ಳುವ ಜಲಸಂಗ್ರಹಾಗಾರಗಳಿಗೆ ಒಂದೊಂದು ಕಲರ್ ನೀಡಿ ಗುರುತಿಸಲು ಗ್ರಾಮವಾರು/ನಗರಗಳಲ್ಲಿ ಬಡಾವಾಣಿವಾರು ನಕ್ಷೆ ತೆಗೆಸಿ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ನೀಡಿ.

ಪ್ರತಿ ಗ್ರಾಮಗಳ ಜಲಗ್ರಾಮಕ್ಯಾಲೆಂಡರ್ ಆಯಾ ಗ್ರಾಮದ ಜನತೆಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲಿ

 ಪ್ರತಿಯೊಂದು ಜಲಮೂಲದ ಡಿಜಿಟಲ್ ಗಣತಿಯನ್ನು ಗ್ರಾಮವಾರು/ಬಡಾವಾಣಿವಾರು ಯಾರು ಮಾಡಬೇಕು ಎಂಬ ಬಗ್ಗೆ ಇಲಾಖಾವಾರು ಅಧಿಕಾರಿಗಳನ್ನು ಹೊಣೆಗಾರಿಕೆ ಮಾಡಿ ‘ಜಿಲ್ಲಾಧಿಕಾರಿಗಳು ಆದೇಶ ನೀಡಿ ಸುತ್ತೋಲೆ ಹೊರಡಿಸಲಿ

 ಗ್ರಾಮವಾರು/ಬಡಾವಾಣಿವಾರು ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿ, ರೈತ ಪ್ರತಿನಿಧಿ, ಮಹಿಳಾ ಪ್ರತಿನಿಧಿ, ಪರಿಣಿತ ತಜ್ಞರ ಪ್ರತಿನಿಧಿ ಹೀಗೆ ಯಾವುದೇ ವಿಧವಾದ ಸಾರ್ವಜನಿಕರನ್ನು ಸೇರಿಸಿ ಒಂದೊಂದು ಜಲಮೂಗಳ ಡಿಜಿಟಲ್ ಗಣತಿ ಟಾಸ್ಕ್ ಪೋರ್ಸ್’ ರಚಿಸಿ.

  ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್ ಮೂಲಕ ಸಿದ್ಧಪಡಿಸಿರುವ 51 ಅಂಶಗಳ ‘ಆಪ್‌ನ್ನು’ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಯೋಜನೆಯ ಜಾಬ್‌ಕಾರ್ಡ್ ಇರುವ ಯುವಕರು ಹಾಗೂ ಯುವತಿಯರನ್ನು ಗುರುತಿಸಿ, ಒಂದು ವಾರದ ಕೂಲಿಹಣವನ್ನು ನೀಡಿ, ತರಬೇತಿ ನೀಡಿ ಪ್ರತಿ ಸರ್ವೆನಂಬರ್‌ಗೂ ಭೇಟಿನೀಡಿ ಅಫ್ ಲೋಡ್ ಮಾಡಲು ಸೂಚಿಸಿ, ಅಧಿಕಾರಿಗಳು ಇವುಗಳನ್ನು ಪರೀಶಿಲಿಸಲಿ ನಂತರ ಗ್ರಾಮವಾರು ಸಂಬಂಧಿಸಿದ ಅಧಿಕಾರಿಗಳು ಅಂತಿಮ ನಕ್ಷೆಯನ್ನು ಅನುಮೋದಿಸಿ ನೀಡಲಿ ಸುಳ್ಳು ಡೇಟಾ ಇದ್ದಲ್ಲಿ ಸಹಿ ಹಾಕಿದವರನ್ನು ಹೊಣೆಗಾರಿಕೆ ಮಾಡಲು ಒಂದು ಮಾರ್ಗಸೂಚಿಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಲಿ’ 

 ಏಸಿ ರೂಂನಲ್ಲಿ ಕುಳಿತು ನೂರು ಸಭೆ ನಡೆಸಿದರೂ ಪಕ್ಕಾ ಮಾಹಿತಿ ದೊರಕಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ, ಮೋದಿಯವರ ಡಿಜಿಟಲ್ ಯುಗ ಬಂದು 7 ವರ್ಷ ಕಳೆಯುತ್ತಾ ಬಂದಿದ್ದರೂ ನಿಖರವಾದ ಡೇಟಾ ಇಲ್ಲದಿದ್ದರೇ ಅಧಿಕಾರಿಗಳಿಗೆ ಮುತ್ತುಕೊಡಬೇಕೆ? ಅಥವಾ ಕಟುಸತ್ಯವನ್ನು ಬಯಲಿಗೆ ಎಳೆಯಬೇಕೆ? ನೀವುಗಳೇ ಆತ್ಮಾವಲೋಕನ ಮಾಡಿಕೊಳ್ಳಿ?

  ಜೆಸಿಎಂ ಸಣ್ಣ ನೀರಾವರಿ ಸಚಿವರು ಮತ್ತು ಜಿಎಸ್‌ಬಿ ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿ ಸದಸ್ಯರು, ಶ್ರೀ ರಮೇಶ್ ಜಾರಕಿ ಹೊಳೆರವರು ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರು ದಿ.ಕೆ.ಹೆಚ್.ಪಾಟೀಲ್ ರವರ ಗರಡಿಯಲ್ಲಿ ಬೆಳೆದವರು, ತುಮಕೂರಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ರವರು, ತುಮಕೂರಿನವರೇ ಆದ ಶ್ರೀ ಎಲ್.ಕೆ.ಅತೀಕ್ ರವರು, ಶ್ರೀ ಎನ್.ಲಕ್ಷ್ಮಣರಾವ್ ಪೇಶ್ವೆರವರು, ಶ್ರೀ ಮೃತ್ಯುಂಜಯ ಸ್ವಾಮಿರವರು, ಶ್ರೀ ಜೈಪ್ರಕಾಶ್‌ರವರು ಇವರು ಎಲ್ಲಾ ಇದ್ದರೂ ಪಕ್ಕಾ ಡೇಟಾ ಮಾಡಿಸದೆ ಇದ್ದರೆ ಇನ್ನು ಯಾವಾಗ ಮಾಡಿಸಲು ಸಾಧ್ಯ?

 ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿತವಾಗಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠ, ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹಗಲು-ಇರಳು ಎನ್ನದೆ ಶ್ರಮಿಸಿ ಇಡೀ ವಿಶ್ವಕ್ಕೆ ಮಾದರಿಯಾಗುವ ಜಲಮೂಲಗಳ ಡಿಜಿಟಲ್ ಡೇಟಾ ಮಾಡಿ, ವಾಟರ್ ಬಡ್ಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡುವ ಮೂಲಕ ಕೇಂದ್ರದಿಂದ ಅಟಲ್ ಭೂಜಲ್ ಯೋಜನೆಯ ಆವಾರ್ಡ್ ಪಡೆಯಲೇ ಬೇಕು?

 ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸಮಿತಿ ಮತ್ತು ದಿಶಾ ಸಮಿತಿಯ ಸದಸ್ಯನಾಗಿರುವ ನನಗೆ ಡೇಟಾ ಪಕ್ಕಾ ಮಾಡಲು ಇದಕ್ಕಿಂತ ಒಳ್ಳೆಯ ಅವಕಾಶ ದೊರೆಯಲಾರದು. ವಾಟರ್ ಡೇಟಾ ಪಾರ್ಕ್ ಸ್ಥಾಪಿಸುವ ಚಿಂತನೆಗೆ ಇದೊಂದು ಮೈಲಿಗಲ್ಲಾಗಲೇ ಬೇಕು.

 ನನ್ನ ಕಠೋರ ನಿಲುವಿನಿಂದ ಯಾರಿಗಾದರೂ ಬೇಜಾರು ಆದರೆ ಕ್ಷಮಿಸಿ, ಯಾವುದೇ ಕಾರಣಕ್ಕೂ ರಾಜಿ ಇಲ್ಲ.