TUMAKURU:SHAKTHIPEETA FOUNDATION
ಕಳೆದ ಕೆಲವಾರು ವರ್ಷಗಳಿಂದ ಪ್ರಧಾನಿಯವರಾದ ಸನ್ಮಾನ್ಯ ಶ್ರೀ ನರೇಂದ್ರಮೋದಿಯವರು ಭಾರತದ 75 ನೇ ವರ್ಷದ ಸ್ವಾತಂತ್ರ್ಯದ 15.08.2020 ದಿವಸಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಅವರ ನೆಚ್ಚಿನ ನೀತಿ ಆಯೋಗ ಅಭಿವೃದ್ಧಿಗಾಗಿಯೇ ಒಂದು ಅಜೆಂಡಾ ಮಾಡಿ STRATEGY FOR NEW INDIA @ 75 ಘೋಷಣೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಅನುಷ್ಠಾನಕ್ಕೆ 2022 ಕಾಲಮಿತಿ ಘೋಶಿಸಿದ್ದಾರೆ. ದೇಶದಲ್ಲಿ ಎಲ್ಲಿ ಏನೇನೂ ಆಗುತ್ತಿದೆಯೋ ಗೊತ್ತಿಲ್ಲ, ತುಮಕೂರು ಜಿಲ್ಲಾ ದಿಶಾ ಸಮಿತಿಯು ಈ ಎಲ್ಲಾ ಯೋಜನೆಗಳ ಅನುಷ್ಠಾನಕ್ಕಾಗಿ ತಾಜಾ ಜಿಐಎಸ್ ಆಧಾರಿತ ಡೇಟಾ ಲೇಯರ್ ಮಾಡಲು ಪಣ ತೊಟ್ಟಿದೆ.
ಪ್ರಧಾನಿಯವರಾದ ಸನ್ಮಾನ್ಯ ಶ್ರೀ ನರೇಂದ್ರಮೋದಿಯವರು ಒಬ್ಬ ಸಾಮಾನ್ಯ ಮನಷ್ಯನ ಹುಟ್ಟಿದ ದಿನಾಂಕಗಳನ್ನು ಪಡೆದು ಅವರ ಟೀಂನಿಂದ ಹುಟ್ಟುಹಬ್ಬದ ಗ್ರೀಟಿಂಗ್ ಕಳುಹಿಸುವ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಥೆ ಅವರ ಪ್ರೀತಿಯ ದಿವಸ ಅವರ ಯೋಜನೆಗಳು ತುಮಕೂರು ಜಿಲ್ಲೆಯಲ್ಲಿ ಯಾವ ರೀತಿ ಅನುಷ್ಠಾನವಾಗಿವೆ ಎಂಬ ಬಗ್ಗೆ ಜಿಐಎಸ್ ವರದಿಯಾಧಾರಿತ ಪುಸ್ತಕವನ್ನು ತುಮಕೂರು ಜಿಲ್ಲಾಡಳಿತದಿಂದ ಅಥವಾ ನಮ್ಮ ಸಂಸ್ಥೆಯ ವತಿಯಿಂದ ಬಿಡುಗಡೆ ಮಾಡಲು ದೃಢ ನಿರ್ಧಾರ ಕೈಗೊಳ್ಳಲಾಗಿದೆ.
ಪೂರಕವಾಗಿ ದಿನಾಂಕ:30.06.2020 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ 28 ನೇ ವಿಷಯವಾಗಿ ಕೆಳಕಂಡಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ತಾವೂ ಸಹ ಕೈಜೋಡಿಸಲು ಮನವಿ ಮಾಡುತ್ತೇನೆ.
ವಿಶ್ವದ ಆಸಕ್ತ ಜನರಿಗೆ ಪ್ರತಿ ದಿನ ನಮ್ಮ ಸಂಸ್ಥೆಯ ಕಾರ್ಯವೈಖರಿಗಳನ್ನು ತಲುಪಿಸಲು ಡಿಸೆಂಬರ್ 2019 ರಲ್ಲಿ ಆರಂಭಿಸಿರುವ ಇ ಪತ್ರಿಕೆ ಈಗಾಗಲೇ ವಿಶ್ವದ 38 ದೇಶಗಳ, 164 ನಗರಗಳ ಡಿವಿಸನ್ ವ್ಯಾಪ್ತಿಯ 14261 USERS, 14191 NEW USERS, 29580 SESSIONS ಮತ್ತು 39799 ಪೇಜ್‌ವ್ಯೂಸ್ ಮಾಡಿದ್ದಾರೆ. ಅಭಿವೃದ್ಧಿ ಒಂದು ಡ್ರೈ ಸಬ್ಜೆಟ್, ಜಾಸ್ತಿ ಜನರ ಗಮನಸೆಳೆಯುವುದು ಬಹಳ ಕಷ್ಟದ ಕೆಲಸವಾದರೂ ಇಷ್ಟು ಜನ ನಮ್ಮ ಪತ್ರಿಕೆ ಓದುವ ಮೂಲಕ ಸಹಕಾರ ನೀಡಿದ್ದೀರಿ. ನಿಮಗೆ ನಮ್ಮ ಪತ್ರಿಕೆ ವತಿಯಿಂದ ಅಭಿನಂದನೆಗಳು.
ದಿನಾಂಕ:01.08.2020 ರಿಂದ ದಿನಾಂಕ:15.08.2022 ರವರೆಗೆ ಜಿಲ್ಲೆಯ ಪ್ರತಿಯೊಂದು ಇಲಾಖೆಯ ಕಚೇರಿ ಬಾಗಿಲಿಗೆ ಹೋಗಿ, ಅಧಿಕಾರಿಗಳಿಗೆ ಕೈಮುಗಿದು STRATEGY FOR NEW INDIA @ 75 ಗುರಿ ತಲುಪಲು ನಮ್ಮ ಸಂಸ್ಥೆ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಣೆ ಮಾಡಲಾಗುವುದು.
ದಿಶಾ ಸಮಿತಿಯಲ್ಲಿ ನನಗೆ ಜವಾಬ್ಧಾರಿ ನೀಡಿದ ಸಂಸದ ಹಾಗೂ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್‌ಕುಮಾರ್‌ರವರು ಮತ್ತು ದಿಶಾ ಸದಸ್ಯ ಕಾರ್ಯದರ್ಶಿಯಾದ ಶ್ರೀಮತಿ ಶುಭಕಲ್ಯಾಣ್‌ರವರು ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಲು ಬಯಸುತ್ತೇನೆ.
28. ಅಧಿಕಾರಿಗಳ ಗೈರು ಹಾಜರಿ
ಮಾನ್ಯ ವಿಧಾನಪರಿಷತ್ ಸದಸ್ಯರು ಮಾತನಾಡಿ, ರಾಜ್ಯ ಸರ್ಕಾರಕ್ಕೆ ಸಾಕಷ್ಟು ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತವೆ. ಆದರೆ, ತುಮಕೂರು ಜಿಲ್ಲೆಗೆ ಸಂಬಂಧಪಟ್ಟಂತೆ ಅನುಮೋದನೆಗೆ ಬಾಕಿಯಿರುವ ಪ್ರಸ್ತಾವನೆಗಳ ಬಗ್ಗೆ ಪತ್ರ ವ್ಯವಹಾರ ನಡೆಸಿ, ಸದರಿ ಬಾಕಿ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿಕೊಟ್ಟು ಯೋಜನೆಗಳು ಕಾರ್ಯಗತವಾಗುವ ನಿಟ್ಟಿನಲ್ಲಿ ಕ್ರಮ ಗಮನಹರಿಸಬೇಕೆಂದು ಸಮಿತಿಯ ಮಾನ್ಯ ಅಧ್ಯಕ್ಷರನ್ನು ಕೋರಿದರು.
ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‌ರವರು ಮಾತನಾಡಿ, ಇಂದಿನ ಸಭೆಗೆ ಸಾಕಷ್ಟು ಇಲಾಖೆಗಳ ಅಧಿಕಾರಿಗಳು ಗೈರುಹಾಜರಾಗಿರುವುದರಿಂದ ವಸತಿ, ಮೆಟ್ರೋ ಮತ್ತು ಸಬ್‌ಅರ್ಬನ್ ರೈಲು, ರೈಲ್ವೆ ಮೇಲು ಸೇತುವೆ/ಕೆಳಸೇತುವೆ, ಪ್ರವಾಸೋದ್ಯಮ, ಸಂಸದರ ಆದರ್ಶಗ್ರಾಮ ಯೋಜನೆ, ಅಟಲ್ ಭೂಜಲ್ ಇತರೆ ಯೋಜನೆಗಳ ಕುರಿತು ಚರ್ಚೆಯಾಗಿಲ್ಲವಾದ್ದರಿಂದ, ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಟಾನಗೊಳಿಸುವ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಮುಂದಿನ ಸಭೆಗೆ ಕಡ್ಡಾಯವಾಗಿ ಕರೆಸಲೇಬೇಕೆಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.
ಮಾನ್ಯ ಅಧ್ಯಕ್ಷರು ಮಾತನಾಡಿ ಮುಂದಿನ ಸಭೆಗೆ ಯಾವ ಯೋಜನೆಗಳ ಬಗ್ಗೆ ಚರ್ಚಿಸಲು, ಯಾವ ಇಲಾಖಾ ಅಧಿಕಾರಿಗಳನ್ನು ಆಹ್ವಾನಿಸಬೇಕು ಎಂಬ ಬಗ್ಗೆ ಪಟ್ಟಿ ನೀಡಲು ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರಿಗೆ ಸೂಚಿಸಿದರು. ದಿಶಾ ಸಮಿತಿಯ ಎಲ್ಲಾ ವ್ಯವಹಾರಗಳನ್ನು ಡಿಜಿಟೈಲಸ್ ಮಾಡಲು ಸೂಚಿಸಿದರು. ಜಿಲ್ಲಾಧಿಕಾರಿಗಳು ಸಹಮತ ವ್ಯಕ್ತಡಿಸಿದರು.