1st November 2024
Share

TUMAKURU: SHAKTHIPEETA FOUNDATION

ಪದವಿ ಇಂಜಿನಿಯರಿಂಗ್ ಮೆಕಾನಿಕಲ್ ವಿಭಾಗ-ಪ್ರವೇಶಕ್ಕೆ  ಇಲ್ಲ ಆಸಕ್ತಿ ಬೇಕು-

ಕಾಲೇಜ್ ಆಡಳಿತ ಮಂಡಳಿಯಿಂದ ಕಾರ್‍ಯಕ್ರಮ -ಮೂಡಿಸಲು ಆಸಕ್ತಿ

ಟಿ ಆರ್.ರಘೋತ್ತಮ ರಾವ್

 ಇತ್ತೀಚಿನ ವರ್ಷಗಳಲ್ಲಿ ಪದವಿ ಇಂಜಿನಿಯರಿಂಗ್ ವಿಭಾಗಗಳಾದ ಸಿವಿಲ್/ಎಲೆಟ್ರಿಕಲ್ಸ್ ಅದರಲ್ಲೂ ಇಂಜಿನಿಯರಿಂಗ್ ಮೆಕಾನಿಕಲ್ ವಿಭಾಗ ಪ್ರವೇಶಕ್ಕೆ ರಾಜ್ಯದ  ಭವಿಷ್ಯದಲ್ಲಿ ಇಂಜಿನಿಯರ್ ಆಗಬೇಕೆಂಬ ಯುವಕರಲ್ಲಿ ನಿರಾಸಕ್ತಿ. ಈ ಹಿನ್ನಲೆಯಲ್ಲಿ ಸೀಟು ಭರ್ತಿ ಪ್ರಕ್ರಿಯೆ ಅವಲೋಕಿಸಿದರೆ, ಅಂದಾಜಿನ ಪ್ರಕಾರ ಶೇ.30 ರಿಂದ 40 ರಷ್ಟು ಸೀಟುಗಳು ಇಂಜಿನಿಯರಿಂಗ್ ಕಾಲೇಜು ಗಳಲ್ಲಿ ಭರ್ತಿ ಆಗದೇ ಉಳಿದಿರುವುದು ಕಂಡು ಬರುತ್ತಿದೆ. ಕಾರಣ ಕೆದಕಿದರೆ ಉದ್ಯೋಗ ದೊರುಕುವ  ಭರವಸೆ ಮಾಹಿತಿ ತಂತ್ರಜ್ಞಾನ ವಿಭಾಗ ಕ್ಕೆ ಹೋಲಿಸಿದರೆ ಮೆಕಾನಿಕಲ್ ಭಾಗದಲ್ಲಿ ಕಡಿಮೆ ಎಂದು ಇಂಜಿನಿಯರಿಂಗ್ ಪ್ರವೇಶ ಪಡೆಯ ಬಯುಸುವ ವಿಧ್ಯಾರ್ಥಿಗಳಲ್ಲಿ ಭಾವನೆಯಾಗಿದೆ. ತುಮಕೂರು ಜಿಲ್ಲೆಯ ಪದವಿ ಇಂಜಿನಿಯರಿಂಗ್‌ಮೆಕಾನಿಕಲ್ ವಿಭಾಗ ಪ್ರವೇಶ ಅಂಕಿ ವಂಶ ಅವಲೋಕಿಸಿದರೆ,  ಜಿಲ್ಲೆಯ ಕಾಲೇಜುಗಳಲ್ಲಿ ಸಹಾ ಶೇ.30 ರಿಂದ 40 ರಷ್ಟು ಸೀಟುಗಳು ಭರ್ತಿ ಆಗದೇ ಉಳಿದಿರುವುದು ಕಂಡು ಬರುತ್ತಿದೆ.

  ರಾಜ್ಯದ ಉತ್ಪಾದನಾವಲಯ ಬೆಳವಣೆಗೆ ಪೂರಕವಾದ ವಾತಾವರಣ ಸೃಷ್ಟಿ ಅಗಿದ್ದರೂ ಅದರ ಮಾಹಿತಿ ಕೊರತೆ. ಅದರಲ್ಲೂ ರಾಜ್ಯದ ಜಿಲ್ಲೆಗಳಾದ ಬೆಂಗಳೂರು, ತುಮಕೂರು, ಕೋಲಾರ, ಮೈಸೂರು, ಮಧ್ಯ ಮತ್ತು ಉತ್ತರ ಕರ್ನಾಟಕದ ಹಲವಾರು ಕಡೆ ಬ್ರಹತ್ ಕೈಗಾರಿಕಾ ವಲಯಗಳಲ್ಲಿ ವಿಶೇಷ ಉತ್ಪಾದನಾವಲಯ ನಿರ್ಮಾಣ ಅಲ್ಲಿ ಹೂಡಿಕೆ ಆಗುತ್ತಿರುವ ಬಗ್ಗೆ ಯುವಜನತೆಗೆ ಮಾಹಿತಿ ತಲುಪಬೇಕಾಗಿದೆ. ಇದಕ್ಕೆ ಪೂರಕ ಕಾರ್ಯಕ್ರಮ ರೂಪಿಸಬೇಕಾಗಿದೆ. ಕಾಲೇಜ್ ಆಡಳಿತ ಮಂಡಳಿ ಮತ್ತುರಾಜ್ಯಸರಕಾರ ಜೊತೆಜೊತೆಗೆ ಕೈಜೋಡಿಸುವ ಮೂಲಕ ಕಾರ್‍ಯಕ್ರಮರೂಪಿಸಿ ರಾಜ್ಯದ ಇಂಜಿನಿಯರಿಂಗ್ ಪ್ರವೇಶ ಪಡೆಯ ಬಯುಸುವ ವಿಧ್ಯಾರ್ಥಿಗಳಲ್ಲಿ ಉದ್ಯೋಗ ದೊರಕುವ ಭರವಸೆ ಮೂಡಿಸಿ ಆಸಕ್ತಿ ಮೂಡಿಸಿ ಮೆಕಾನಿಕಲ್ ವಿಭಾಗ ಪ್ರವೇಶಕ್ಕೆ ಹೆಚ್ಚು ಆಗಲು ಕ್ರಮ ವಹಿಸಬೇಕಾಗಿದೆ ಮತ್ತು ಮೆಕಾನಿಕಲ್ ವಿಭಾಗ ಪದವಿ ಪಡೆದ ವಿಧ್ಯಾರ್ಥಿಗಳನ್ನು ಸನ್ನದ್ದು ಮಾಡಬೇಕಿದೆ. ಇದು  ಆಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಜಿಲ್ಲೆಗಳಾದ ಬೆಂಗಳೂರು, ತುಮಕೂರು, ಕೋಲಾರ, ಮೈಸೂರು, ಮಧ್ಯ ಮತ್ತುಉತ್ತರ ಕರ್ನಾಟಕದ ಹಲವಾರು ಕಡೆ ಉತ್ಪಾದನಾವಲಯದಲ್ಲಿ ಸೃಷ್ಠಿ ಯಾಗುವ ಉದ್ಯೊಗ ಗಳು ಅನ್ಯರಾಜ್ಯದ ಯುವಕರ ಪಾಲಾಗುವ ಸಂಭವ ಜಾಸ್ತಿ ಆಗಲಿದೆ.

 ಮುಂದುವರೆದ ಚರ್ಚೆಯಾಗಿ  ತುಮಕೂರು ಜಿಲ್ಲೆಯಲ್ಲಿನ ಕೈಗಾರಿಕೆ ಬೆಳವಣಿಗೆ ಗಮನಿಸಿದರೆ ಬೆಂಗಳೂರಿಗೆ ಪಡಸಾಲೆ ನಗರವಾದ ತುಮಕೂರು ಮತ್ತು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ಹೂಡಿಕೆ ಮತ್ತು ಉತ್ಪಾದನಾ ವಲಯದಲ್ಲಿ ಆಗಲಿದೆ.  ಚನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ನಲ್ಲಿ ಬರುವ  ತುಮಕೂರು ಇಂಡಸ್ಟ್ರಿಯಲ್ ನೋಡ್  ಸಮೀಪದಲ್ಲೇ ಲಗತ್ತಾಗಿ ತುಮಕೂರು ಎಲೆಟ್ರಾನಿಕ್ಸ್ ಉತ್ಪಾದನಾ ಹಬ್ ಸ್ಥಾಪಿಸಲು ಪ್ರಸ್ಥಾವವಿದೆ. ತುಮಕೂರು ಇಂಡಸ್ಟ್ರಿಯಲ್ ನೋಡ್ ಅಂಗಳದಲ್ಲಿಮುಂದಿನ ದಿನಗಳಲ್ಲಿ ತುಮಕೂರು ಮೆಷನ್ ಟೂಲ್ ಕಂಪನಿ, ಜಪನೀಸ್ ಇಂಡಸ್ಟ್ರಿಯಲ್ ಟೌನ್, ಹ್ಯಾವೆಲ್ಸ್ ಕಂಪನಿ, ಗುಬ್ಬಿ ಬಳಿ ಬರುತ್ತಿರುವ ಹೆಚ್ ಎ. ಎಲ್  ಗಳಿಗೆ, ತುಮಕೂರಿನ ಇಸ್ರೋ ಈ ಎಲ್ಲಾ ಉತ್ಪಾದನಾ ಘಟಕಗಳಿಗೆ ಭವಿಷ್ಯದಲ್ಲಿ ಮೆಕಾನಿಕಲ್ ಕೌಶಲ್ಯ್ ಹೊಂದಿದ ಯುವಕರು ಅವಶ್ಯಕ. ಅದಲ್ಲದೆ ನೂರಾರು ಎಂಎಸ್‌ಎಂಇ ಯುನಿಟ್ ಗಳು ಸದ್ಯ ಕಾರ್ಯನಿರ್ವಹಿಸುತ್ತಿದೆ  ಮತ್ತು ಮುಂದೆ ಬರಲಿದೆ. ಭವಿಷ್ಯದಲ್ಲಿನ ರಾಜ್ಯದ ಬೆಂಗಳೂರು ಸಮೀಪ ಮಹತಕಾಂಕ್ಶಿ ಯೋಜನೆ ಯಾದ ಐ.ಟಿ.ಐ.ಆರ್ ರೀಜನ್ ಮತ್ತು ಪ್ರಸ್ಥಾಪಿತ ಏರೋಸ್ಪೇಸ್ ಪಾರ್‍ಕ್ ಸಹಾ ಬರಲಿದೆ. ಅದೇರೀತಿ ಮುಂಬೈ-ಬೆಂಗಳೂರು ಎಕನಾಮಿಕ್ ಕಾರಿಡಾರ್ ಉದ್ದಲಗಕ್ಕೂ ಈಗಾಗಲೇ ಗುರುತಿಸಿರುವ ಇಂಡಸ್ಟ್ರಿಯಲ್ ನೋಡ್‌ಗಳಾದ ಚಿತ್ರದುರ್ಗ-ದಾವಣಗೆರೆ ಮಧ್ಯಭಾಗದ ಭರಮಸಾಗರ, ಅದೇ ರೀತಿಯ ಹುಬ್ಬಳ್ಳಿ-ಧಾರವಾಡ ನಡುವೆ ಬರುವ ಧಾರವಾಡ ನೋಡ್, ಮತ್ತು ಬೆಳಗಾವಿ ಸಮೀಪದ ಎರೋಸ್ಪೇಸ್ ಪಾರ್ಕ್ ಬರಲಿದೆ. ಭವಿಷ್ಯದ ಡಿಫ಼ೆನ್ಸ್ ಕಾರಿಡಾರ್ ರಾಜ್ಯಕ್ಕೂ ವಿಸ್ತರಣೆ ಆಲೋಚನೆ ಸಹಾ ಇದೆ.

ಈ ಕ್ಷೇತ್ರಕ್ಕೆ ನುರಿತ ಕುಶಲಿಗಳನ್ನು ಬೇಡಿಕೆ ಅನುಸರಣೆ ಯಾಗಿ ಎಂಪ್ಲಾಯಬಲ್ ಯುವಕರನ್ನು ಮೊನೆಚಾಗಿ ಸಿದ್ದಪಡಿಸಲು ಕ್ರಮವಹಿಸಬೇಕಾಗಿದೆ. ರಾಜ್ಯದ ವಿಧ್ಯಾವಂತ ಇಂಜಿನಿಯರಿಂಗ ಯುವಕರು ಅಲ್ಲದೇ ಡಿಪ್ಲಮೋ/ಐಟಿಐ ಪಡೆದ ಯುವಕರನ್ನು  ಅದರಲ್ಲೂ ಸ್ಥಳೀಯವಾಗಿ ಬೇಡಿಕೆ ಇರುವ  ಮತ್ತು ಸೃಷ್ಠಿಆಗುವ ಉದ್ಯೋಗ ಗಳಿಗೆ ಮಾನವ ಸಂಪನ್ಮೂಲ ಸರಬರಾಜು ಮಾಡಲು ಗುರಿ ಇಟ್ಟುಕೊಳ್ಳಬೇಕಾಗಿದೆ. ಇದು ಆದರೆ ರಾಜ್ಯದ ಉದ್ಯೋಗ ನಿರೀಕ್ಷೆ ಯುವಕರಿಗೆ ವರದಾನವಾಗಲಿದೆ.

                ಈಗ ಬೇಕಾಗಿರುವುದು ಏನು, ಯಾರು ಯಾರು ಜೊತೆ ಜೊತೆಯಾಗಬೇಕು

                ಜಿಲ್ಲೆಯ ಇಂಜಿನಿಯರಿಂಗ ಕಾಲೇಜ್ ಆಡಳಿತ ಮಂಡಳಿಯವರು ತುಮಕೂರಿನಲ್ಲಿ ಮೊದಲ ಕಾರ್ಯಕ್ರಮವಾಗಿ ಪಿಯುಸಿತೇರ್ಗಡೆ ಹೊಂದಿದ ವಿಧ್ಯಾರ್ಥಿಗಳೊಂಡಂತೆ ಸೆಮಿನಾರ್ ಏರ್ಪಡಿಸಬೇಕು. ಈ ಸೆಮಿನಾರನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ಪಾದನಾ ವಲಯದಲ್ಲಿ ಹೂಡಿಕೆ ಮತ್ತು ಸೃಷ್ಠಿಯಾಗುವ ಉದ್ಯೋಗ ಅಂಶಗಳ ಬಗ್ಗೆ ಮತ್ತು ಹೂಡಿಕೆ ಬಗ್ಗೆ ವಿಸ್ಥಾರವಾಗಿ ನುರಿತ ನಿಪುಣರಿಂದ ವಿವರಣೆ ಕೊಡಿಸಬೇಕು. ರಾಜ್ಯಸರಕಾರದ ಕೈಗಾರಿಕಾ ಸಚಿವರು ಮತ್ತು ಇಲಾಖೆಯ ಉನ್ನತಾಧಿಕಾರಿ ಯವರನ್ನು ಸಹಾ ಆಹ್ವಾನಿಸಿ ಸೆಮಿನಾರ್ ನಲ್ಲಿ ಪಾಲ್ಗೊಳ್ಳಲು ಕೋರಿ ,ಅವರೂ ಸಹಾ ರಾಜ್ಯಸರಕಾರ ವತಿಯಿಂದ ಉತ್ಪಾದನಾ ಕೈಗಾರಿಕೆ ವಲಯದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಠಿ ಬಗ್ಗೆ ವಿವರಣೆ ಕೊಡಿಸಬೇಕು.

                ಇಂತಹ ಕ್ರಮಗಳು ಸ್ಥಳೀಯ ವಿಧ್ಯಾರ್ಥಿಗಳಲ್ಲಿ ಭರವಸೆಯ ಸೂಚ್ಯಾಂಕ ಮೌಲ್ಯದಲ್ಲಿ ಏರಿಕೆ ಮೂಡಿ, ಮೆಕಾನಿಕಲ್/ಎಲೆಟ್ರಿಕಲ್ ಇತರೆ ವಿಭಾಗಗಳಲ್ಲಿ ಪ್ರವೇಶ ಪಡೆಯುವ ವಿಧ್ಯಾರ್ಥಿ ಸಂಖ್ಯೆ ಏರುಮುಖ ಆಗುವುದರಲ್ಲಿ ಸಂಶಯವೇ ಇಲ್ಲ. ಮುಖ್ಯವಾಗಿ ರಾಜ್ಯದ ಉದ್ಯೋಗ ನಿರೀಕ್ಷೆ ಯುವಕರಿಗೆ ವರದಾನವಾಗಲಿದೆ ಮತ್ತು ಸೃಷ್ಠಿ ಯಾಗುವ ಉದ್ಯೊಗ ಗಳು ಅನ್ಯರಾಜ್ಯದ ಯುವಕರ ಪಾಲಾಗುವ ಸಂಭವ ಕಡಿಮೆ ಆಗಲಿದೆ.