22nd December 2024
Share

TUMAKURU:SHAKTHIPEETA FOUNDATION

  ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಮೊದಲ ಭಾರಿ ಪ್ರಧಾನಿಯಾದ ನಂತರ ಸಂಸದರ ಆದರ್ಶ ಗ್ರಾಮ ಯೋಜನೆಗೆ ಚಾಲನೆ ನೀಡಿದರು. ಮಾರ್ಗದರ್ಶಿ ಸೂತ್ರದ ಪ್ರಕಾರ ದೇಶದ ಎಲ್ಲಾ ಸಂಸದರು ತಮ್ಮ ಐದು ವರ್ಷದ ಅವಧಿಯಲ್ಲಿ ಪ್ರತಿ ವರ್ಷಕ್ಕೆ ಒಂದು ಗ್ರಾಮಪಂಚಾಯಿತಿಯಂತೆ ಐದು ಗ್ರಾಮ ಪಂಚಾಯಿತಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸ ಬೇಕಿದೆ.

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ವಿಶೇಷವಾಗಿ ಮೊದಲ ವರ್ಷದಲ್ಲಿಯೇ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಗ್ರಾಮ ಪಂಚಾಯಿತಿಯಂತೆ 7 ಗ್ರಾಮ ಪಂಚಾಯಿತಿಗಳು ಮತ್ತು ತುಮಕೂರು ನಗರ ವಿಧಾನ ಕ್ಷೇತ್ರದ ವ್ಯಾಪ್ತಿಯ ಒಂದು ವಾರ್ಡ್‌ನ್ನು ಆಯ್ಕೆಮಾಡಿ ಕೊಂಡು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುಮತಿ ಪಡೆಯಲು ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿಸಿದ್ದಾರೆ.

  ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ, (ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಆಗಿ)  ಗುಬ್ಬಿ ವಿಧಾನಸಭಾ ಕ್ಷೇತ್ರ, ಅರಳಗುಪ್ಪೆ ಗ್ರಾಮ ಪಂಚಾಯಿತಿ,(ಹೆರಿಟೇಜ್ ವಿಲೇಜ್ ಆಗಿ) ತಿಪಟೂರು ವಿಧಾನಸಭಾ ಕ್ಷೇತ್ರ, ಗೋಡೆಕೆರೆ ಗ್ರಾಮ ಪಂಚಾಯಿತಿ(ಪ್ರವಾಸಿಕೇಂದ್ರವಾಗಿ) ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ, ಕುರುಂಕೋಟೆ ಗ್ರಾಮ ಪಂಚಾಯಿತಿ (ಸಿದ್ಧರಬೆಟ್ಟ ಆಯುಷ್ ಪಾರ್ಕ್ ಆಗಿ) ಕೊರಟಗೆರೆ ವಿಧಾನಸಭಾ ಕ್ಷೇತ್ರ,  ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿ (ಮಾನವೀಯತೆ ಕೇಂದ್ರವಾಗಿ) ಮಧುಗಿರಿ ವಿಧಾನಸಭಾ ಕ್ಷೇತ್ರ, ಸೋರೆಕುಂಟೆ ಗ್ರಾಮ ಪಂಚಾಯಿತಿ,(ಮಾದರಿ ಘನತ್ಯಾಜ್ಯ ವಸ್ತು ಘಟಕವಾಗಿ) ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ, ತುಮಕೂರು ನಗರದ 35 ನೇವಾರ್ಡ್‌ನ್ನು(ಇಸ್ರೋ ಮತ್ತು ಮೈದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಗಂಗಾಮಠ ಧಾರ್ಮಿಕ ಕೇತ್ರ) ಹೀಗೆ ಹಲವಾರು ಆಯಾಮಗಳ ಹಿನ್ನಲೆಯಲ್ಲಿ ಈ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಡಿದ್ದಾರೆ. Banasandra GP Turuvekere

 ಕೇಂದ್ರ ಸರ್ಕಾರದ ಅನುಮತಿ ಬರುವವರೆಗೂ ಕಾಯದೇ ತುಮಕೂರು ಜಿಲ್ಲೆಯನ್ನು ಡೇಟಾ ಜಿಲ್ಲೆಯಾಗಿಸಲು ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಎಲ್ಲಾ ಇಲಾಖೆಗಳ ಅಡಿಯಲ್ಲಿನ ಎಲ್ಲಾ ವಿಧವಾದ ಜಿಐಎಸ್ ಲೇಯರ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ತುಮಕೂರು ಜಿಲ್ಲಾಧಿಕಾರಿಯವರಾದ ಡಾ. ರಾಕೇಶ್‌ಕುಮಾರ್‌ರವರು  ತುಮಕೂರು ಸ್ಮಾರ್ಟ್ ಸಿಟಿಯನ್ನು ಡೇಟಾ ಸಿಟಿಯಾಗಿ ಘೋಶಿಸಲು ಪ್ರತಿ ಶುಕ್ರವಾರ ನಡೆಸುವ ಸಭೆ ಮಾದರಿಯಲ್ಲಿಯೇ ಜಿಲ್ಲಾ ಪಂಚಾಯತ್ ಸಿಇಓ ಶ್ರೀಮತಿ ಶುಭಕಲ್ಯಾಣ್‌ರವರು ಪ್ರತಿ ವಾರದ ಒಂದು ದಿನ ಈ ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಅಧಿಕಾರಿಗಳ ಸಭೆ ಕರೆದು ಸಮರೋಪಾದಿಯಲ್ಲಿ ಜಿಐಎಸ್ ಲೇಯರ್ ಮಾಡಲು ಸೂಚಿಸಿದ್ದಾರೆ.

 ಜೊತೆಗೆ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ಅಭಿವೃದ್ಧಿ ಸಮಿತಿಯನ್ನು ರಚಿಸಿ ಅಥವಾ ಯಾವುದಾದರೂ ಹಾಲಿ ಇರುವ ಸಮಿತಿ ಮುಂದೆ ಬಂದಲ್ಲಿ ಆ ಸಮಿತಿಯ ಸಹಭಾಗಿತ್ವ ಪಡೆಯಲು ಚಿಂತನೆ ನಡೆಸಿದ್ದಾರೆ.

 ಈ ಭಾಗದ ಆಸಕ್ತ ಜನತೆ ಸಂಸದರ ಚಿಂತನೆಗೆ ಸಹಕರಿಸಿ 2020 ರ ಆಗಸ್ಟ್ 15 ರಿಂದ ಚಾಲನೆ ನೀಡಿ, 2022 ರ ಆಗಸ್ಟ್ 15 ರೊಳಗೆ ಮಾದರಿ ಗ್ರಾಮಪಂಚಾಯಿತಿಗಳನ್ನಾಗಿಸಲು  ಸ್ವಯಂ ಕಾಲಮಿತಿ ನಿಗದಿಗೊಳಿಸಿ  ಚಾಲನೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.