8th December 2024
Share

 TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯದಲ್ಲಿನ ಎಲ್ಲಾ 30 ಜಿಲ್ಲೆಗಳ ದಿಶಾ ಸಮಿತಿಗಳಲ್ಲಿ ಇದೂವರೆಗೂ ನಾಲ್ಕು ಸಭೆಗಳನ್ನು ಮಾಡಿರುವುದು ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆ ಮಾತ್ರ. ಆದರೆ ಇದೂವರೆಗೂ ತುಮಕೂರು ಜಿಲ್ಲೆಗೆ ಎಲ್ಲಾ ಇಲಾಖೆಗಳ, ವಿವಿಧ ಯೋಜನೆಗಳಿಗೆ 2019-20 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಬಂದ ಅನುದಾನವೆಷ್ಟು ಎಂಬ ಲೆಕ್ಕ ಮಾತ್ರ ಇನ್ನೂ ಸಿದ್ಧವಾಗಿಲ್ಲ.

ದಿನಾಂಕ:30.06.2020 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ದಿಶಾ ಸಮಿತಿಯ ಸಭೆ ಕರೆಯುವಾಗ ಈ ಕೆಳಕಂಡ ವಿಷಯದ ಬಗ್ಗೆ ಅಜೆಂಡಾದಲ್ಲಿ ಸೇರ್ಪಡೆ ಮಾಡಲು ಸೂಚಿಸಿದ್ದರ ಹಿನ್ನಲೆಯಲ್ಲಿ ಈ ಕೆಳಕಂಡ ತೀರ್ಮಾನವನ್ನು ಮಾಡಲಾಗಿದೆ.

29. ಆರ್ಥಿಕ ವ್ಯವಹಾರಗಳ ಇಂಡೆಕ್ಸ್ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣೆ ಇಟ್ಟಿರುವ ಬಗ್ಗೆ.

 ಮಾನ್ಯ ಅಧ್ಯಕ್ಷರು ಮಾತನಾಡಿ ಜಿಲ್ಲೆಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ 2019-2020 ನೇ ವರ್ಷದಲ್ಲಿ ಮಂಜೂರಾದ ಹಣ, ಖರ್ಚುಮಾಡಿರುವ ಹಣ, ಉಳಿತಾಯದ ಹಣ, ಬಿಡುಗಡೆಯಾಗಿರುವ ಹಣ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣೆ ಇಟ್ಟಿರುವ ಮೊತ್ತದ ಆರ್ಥಿಕ ವ್ಯವಹಾರಗಳ ಇಂಡೆಕ್ಸ್ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ಠೇವಣೆ ಇಟ್ಟಿರುವ ಇಲಾಖಾವಾರು ಇಂಡೆಕ್ಸ್ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.

ನಿರ್ಣಯದ ಅನುಪಾಲನಾ ವರದಿ ಪಲಿತಾಂಶವೇನು?

 ಎರಡು ಮೂರು ಸಭೆಯಲ್ಲಿಯೂ ಈ ವಿಷಯದ ಬಗ್ಗೆ ಔಪಚಾರಿಕವಾಗಿ ಚರ್ಚೆ ಮಾಡಲಾಗಿತ್ತು. ಆದರೂ ಈ ಇಂಡೆಕ್ಸ್ ಸಿದ್ಧವಾಗಲಿಲ್ಲ, ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶುಭಕಲ್ಯಾಣ್ ರವರು ಎಲ್ಲಾ ಅಧಿಕಾರಿಗಳು ಈ ಮಾಹಿತಿಯನ್ನು ನೀಡಲು ಸೂಚಿಸಿದ್ದರು.

  ನಾನು ಗಮನಿಸಿದ ಹಾಗೆ ರೈಲ್ವೇ ಇಲಾಖೆಯವರು ಮಾತ್ರ ದಿಶಾ ಸಮಿತಿಗೆ ಪಕ್ಕಾ ಮಾಹಿತಿಯೊಂದಿಗೆ ಬಂದಿದ್ದರು. ಅದು ಅವರ ಕರ್ತವ್ಯವಾದರೂ  ನಿಜಕ್ಕೂ ಅವರಿಗೆ ಅಭಿನಂದನೆ ಸಲ್ಲಿಸಬೇಕು. ದಿಶಾ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿರುವ ಉದ್ದೇಶ ಅವರಿಗೆ ಅರ್ಥವಾಗಿದೆ.

  ಉಳಿದವರು ಮಾತ್ರ ಇದು ನಮಗೆ ಸಂಬಂಧವಿಲ್ಲ ಎನ್ನುವಂತೆ ಈ ಮಾಹಿತಿ ಬಗ್ಗೆ ಏಕೋ ಏನೋ ವಿಶೇಷ ಗಮನಹರಿಸಿಲ್ಲದೆ ಇರುವುದು ಕಂಡು ಬಂದಿದೆ. ದಿಶಾ ಸಮಿತಿಯ ಅನುಪಾಲನಾ ವರದಿಯ ಎಲ್ಲಾ ಮಾಹಿತಿಗಳನ್ನು ಪ್ರಾಜೆಕ್ಟ್ ಡೈರೆಕ್ಟರ್ ಆದ ಶ್ರೀ ಮೋಯಿದ್ಧಿನ್‌ರವರು ಸಂಗ್ರಹಿಸುವುದು ಅವರ ಜವಾಬ್ಧಾರಿ ಇರಬಹುದು ಅಥವಾ ಯಾರಿಗಿದೆಯೋ ಗೊತ್ತಿಲ್ಲ. ತಾವು ಸದಸ್ಯ ಕಾರ್ಯದರ್ಶಿಯಾಗಿರುವುದರಿಂದ ಈ ಇಂಡೆಕ್ಸ್‌ನ್ನು ಸಿದ್ಧಪಡಿಸಿಕೊಳ್ಳಲು ಯಾರಿಗಾದರೂ ಹೊಣೆಗಾರಿಕೆ ನೀಡಬೇಕು ಅಲ್ಲವೇ?

 ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ತಮ್ಮ ಕಚೇರಿಗೆ ಶೀಘ್ರದಲ್ಲಿ ಭೇಟಿ ನೀಡಿ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದರೂ ನಡೆಸಬಹುದು. ನೀವೇ ಯೋಚಿಸಿ ಮೇಡಂ ಈ ಮಾಹಿತಿ ಇಲ್ಲದೆ ಸಭೆಯಲ್ಲಿ ಯಾವುದರ ಬಗ್ಗೆ ಚರ್ಚಿಸುವುದು.

  ಕೇಂದ್ರ ಸರ್ಕಾರ ಯಾವ ಉದ್ದೇಶಕ್ಕೆ ಈ ಸಮಿತಿ ರಚಿಸಿದೆ ಎಂಬ ಪ್ರಶ್ನೆ ನನಗೆ ಅನಿಸಿದೆ, ನಾನು ಈ ಹಿಂದೆ ಕಳೆದ ಲೋಕಸಭಾ ಸದಸ್ಯರ ಅವಧಿಯಲ್ಲಿ ರಾಜ್ಯದ 225 ವಿಧಾನಸಭಾ ಸದಸ್ಯರಿಗೆ, 75 ಜನ MLC ಸದಸ್ಯರಿಗೆ, 28 ಜನ ಲೋಕಸಭಾ ಸದಸ್ಯರಿಗೆ ಮತ್ತು 12 ಜನ ರಾಜ್ಯಸಭಾ ಸದಸ್ಯರಿಗೆ ಹಾಗೂ ಇಬ್ಬರು ದೆಹಲಿ ಪ್ರತಿ ನಿಧಿ 2 ಸೇರಿದಂತೆ ಸೇರಿದಂತೆ ಸುಮಾರು 342 ಜನರಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಈ ಮಾಹಿತಿ ಕೇಳಿದ್ದೆ.

 ಪ್ರಾಮಾಣಿಕವಾಗಿ ಉತ್ತರ ಬರೆದ ಕೆಲವು ಜನಪ್ರತಿನಿಧಿಗಳು ಪತ್ರ ನೋಡಿ. ನನಗೂ ಯಾರಾದರೂ ಈ ಮಾಹಿತಿ ಕೇಳಿದರೆ ನಾನು ಏನು ಉತ್ತರ ನೀಡಬೇಕು. ಅವರುಗಳ ಸಹ ದಿಶಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಈಗ ನಾನು ದಿಶಾ ಸಮಿತಿಯ ಸದಸ್ಯ ಅಲ್ಲವೇ? ಈ ಮಾಹಿತಿ ಇಲ್ಲದೆ ಹೇಗೆ ಎಂಬ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಿ.