TUMAKURU:SHAKTHIPEETA FOUNDATION
2023 ರೊಳಗೆ ಜಲಜೀವನ್ ಮಿಷನ್ ಅಡಿ ದೇಶದ ಗ್ರಾಮೀಣ ಪ್ರದೇಶದ ಪ್ರತಿಯೊಂದು ‘ಮನೆ ಮನೆಗೆ ನಲ್ಲಿ ನೀರು’ ನೀಡಬೇಕು ಎಂಬುದು ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಘೋಷಣೆ. ರಾಜ್ಯದ ಆಯವ್ಯಯದಲ್ಲಿ ‘ಮನೆ ಮನೆಗೆ ಗಂಗೆ’ ಎಂಬ ಯೋಜನೆಯಡಿ ನೀರು ನೀಡುತ್ತೇವೆ ಎಂದು ಶ್ರೀ ಕೆ.ಎಸ್.ಈಶ್ವರಪ್ಪನವರು ಅಬ್ಬರಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ದಿಶಾ ಸಮಿತಿಯಲ್ಲಿ ಈಗಾಗಲೇ ಚರ್ಚಿಸಲಾಗಿದೆ, ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯವರಾದ ಶ್ರೀ ಎಲ್.ಕೆ.ಅತೀಕ್ ರವರೊಂದಿಗೆ ಮತ್ತು ಮುಖ್ಯ ಇಂಜಿನಿಯರ್ ಆದ ಶ್ರೀ ಹೊಳೆಯಾಚಿ ರವರೊಂದಿಗೂ ಪ್ರತ್ಯೇಕವಾಗಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಸಭೆ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ವಿವರವಾದ ಯೋಜನಾವರದಿ ತಯಾರಿಸಲು ಶ್ರೀ ಎಲ್.ಕೆ.ಅತೀಕ್‌ರವರು ಸೂಚಿಸಿದ್ದರೂ ಈ ಯೋಜನೆಗೆ ಕೊಕ್ಕೆ ಯಾರು? ಎಂಬುದು ಯಕ್ಷ ಪ್ರಶ್ನೆಯಾಗಿದೆ. ದಿನಾಂಕ:26.08.2020 ರಂದು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಶ್ರೀ ಕೆ.ಎಸ್.ಈಶ್ವರಪ್ಪನವರು ಸಭೆ ನಡೆಸಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಸಿಇಓ ಗಳಿಗೆ 2023 ರೊಳಗೆ ಯೋಜನೆ ಪೂರ್ಣಗೊಳಿಸಲು ಖಡಕ್ ಸಂದೇಶ ನೀಡಿದ್ದಾರೆ. 2020-21. 2021-22 ಮತ್ತು 2022-23 ಈ ಮೂರು ವರ್ಷಗಳಲ್ಲಿ ಯೋಜನೆಯನ್ನು ಸಂಪೂರ್ಣ ಪೂರ್ಣಗೊಳಿಸಲೇಬೇಕು.
ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ 37.5 ರಾಜ್ಯ ಸರ್ಕಾರದಿಂದ ಶೇ 37.5 ಕೇಂದ್ರ ಸರ್ಕಾರದ 15 ನೇ ಹಣಕಾಸು ಯೋಜನೆಯಡಿ ಗ್ರಾಮಪಂಚಾಯತ್‌ಗಳು ಶೇ 15 ಮತ್ತು ಪಲಾನುಭವಿಗಳು ಶೇ 10 ಭರಿಸಬೇಕು, ಎಸ್.ಸಿ-ಎಸ್.ಟಿ ಕಾಲೋನಿಗಳಿಗೆ ಪಲಾನುಭವಿಗಳು ಶೇ 5 ಭರಿಸಬೇಕು, ಇನ್ನುಳಿದ ಶೇ 5 ರಲ್ಲಿ ಕೇಂದ್ರ ಸರ್ಕಾರ ಶೇ.2.5 ಮತ್ತು ರಾಜ್ಯ ಸರ್ಕಾರ ಶೇ 2.5 ಭರಿಸಲಿವೆ
ಈ ಯೋಜನೆಗೆ ಅಡ್ಡಗಾಲು ಹಾಕಿರುವರು ಯಾರು ಎಂದು ಬಹಿರಂಗವಾಗಿ ಘೋಶಿಸ ಬೇಕೆ? ಅಥವಾ ಶೀಘ್ರವಾಗಿ ಯೋಜನೆಗೆ ಡಿಪಿಆರ್ ಮಾಡಲು ಟೆಂಡರ್ ಕರೆಯಲು ಕ್ರಮಕೈಗೊಳ್ಳುತ್ತೀರಾ ಎಂದು ಇಇ ಶ್ರೀ ಚನ್ನವೀರಯ್ಯನವರಿಗೆ ಬಹಿರಂಗ ಪ್ರಶ್ನೆ ಮಾಡಲಾಗಿದೆ.