11th December 2024
Share

GOI LETTER

TUMAKURU:SHAKTHIPEETA FOUNDATION

 ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿ ಸಭೆಗಳನ್ನು ವಿಡಿಯೋ ಕಾನ್ಪೆರೆನ್ಸ್ ಮೂಲಕ ನಡೆಸಲು ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯನ್ನು ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ದಿಶಾ ಸಮಿತಿಯ ಅಧ್ಯಕ್ಷ ಹಾಗೂ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ದಿಶಾ ಸಮಿತಿಯ ಕಾರ್ಯದರ್ಶಿ ಹಾಗೂ ಜಿಪಂ ಸಿಇಓ ರವರಾದ ಶ್ರೀಮತಿ ಶುಭಕಲ್ಯಾಣ್‌ರವರಿಗೆ ಸೂಚಿಸಿದ್ದಾರೆ.

 ಮೊಟ್ಟಮೊದಲ ಆನ್‌ಲೈನ್ ಸಭೆಯಲ್ಲಿ ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳಿಯ ಸಂಸ್ಥೆಗಳ ಜಲಸಂಗ್ರಹಾಗಾರಗಳ ಡಿಜಿಟಲ್ ಸೆನ್ಸೆಸ್   ಬಗ್ಗೆ ಸಮಾಲೋಚನೆ ನಡೆಸಲು ಚಿಂತನೆ ನಡೆಸಿದ್ದಾರೆ.

 ಈಗಾಗಲೇ ಸಣ್ಣ ನೀರಾವರಿ ಇಲಾಖೆ ವತಿಯಿಂದ ಟೆಂಡರ್ ನೀಡಿ ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್ ಮೂಲಕ ಜಿಲ್ಲೆಯ ಎಲ್ಲಾ ಜಲಸಂಗ್ರಹಾಗಾರಗಳ ನಕ್ಷೆಯನ್ನು ಸಿದ್ಧಪಡಿಸಿದೆ. ಇದರಲ್ಲಿ ಕೆಲವು ಜಲಸಂಗ್ರಹಾಗಾರಗಳು ಯಾವ ಇಲಾಖೆಯ ಮಾಲೀಕತ್ವದಲ್ಲಿ ಇವೆ ಎಂಬ ಬಗ್ಗೆ ದಾಖಲೆ ದೊರಕಿಲ್ಲ.

 ಅಧ್ದರಿಂದ ಪ್ರತಿ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳಿಯ ಸಂಸ್ಥೆಗಳಿಗೆ ಡಿಜಿಟಲ್ ನಕ್ಷೆಯನ್ನು ಕಳುಹಿಸಿ, ಸ್ಪೆಕ್ಟ್ರಾ ಅಸೋಶಿಯೇಷನ್ ಸಿದ್ಧಪಡಿಸಿರುವ ಆಪ್‌ನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಮಾರ್ಪಾಡು ಮಾಡಿ, ಬಿಡುಗಡೆ ಮಾಡಿ ಮಾಹಿತಿ ನೀಡಲು ಸುತ್ತೋಲೆ ಹೊರಡಿಸಲು ಸೂಚಿಸಿದ್ದಾರೆ.

 ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದಡಿಯ ಅಟಲ್‌ಭೂಜಲ್ ಮತ್ತು ರಾಜ್ಯ ಸರ್ಕಾರದ ಜಲಾಮೃತ ಯೋಜನೆಯಡಿ ಮಾಹಿತಿಯನ್ನು ಡಿಜಿಟಲ್ ಮಾಡುವುದು ಕಡ್ಡಾಯವಾಗಿದೆ. ತುಮಕೂರು – ಜಿಐಎಸ್ ನಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸುವುದು ಸೂಕ್ತವಾಗಿದೆ ಎಂದಿದ್ದಾರೆ.

 ಎನ್.ಐ.ಸಿ, ತುಮಕೂರು – ಜಿಐಎಸ್, ಎನ್.ಆರ್.ಡಿ.ಎಂ.ಎಸ್. ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ, ಸಣ್ಣ ನೀರಾವರಿ ಇಲಾಖೆ ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಎಕ್ಸಿಕ್ಯೂಟೀವ್ ಇಂಜಿನಿಯರ್‌ಗಳು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.