27th December 2024
Share

TUMAKURU:SHAKTHIPEETA FOUNDATION

ದಿನಾಂಕ:30.06.2020 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ತುಮಕೂರು ಜಿಲ್ಲೆಯಲ್ಲಿನ ಎಲ್ಲಾ ವಿಧವಾದ ರಸ್ತೆಗಳನ್ನು ಮೇಲ್ದರ್ಗೆರಿಸುವ ಬಗ್ಗೆ ವರದಿ ನೀಡಲು ತಿಳಿಸಲಾಗಿತ್ತು, ತುಮಕೂರು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಶ್ರೀ ಸಂಜೀವರಾಜುರವರಿಗೆ ಜವಾಬ್ಧಾರಿ ನೀಡಲಾಗಿತ್ತು.

  ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ, ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ಧಾರಿಗಳಾಗಿ ಮತ್ತು ರಾಜ್ಯ ಹೆದ್ಧಾರಿಗಳನ್ನು ರಾಷ್ಟ್ರೀಯ ಹೆದ್ಧಾರಿಗಳಾಗಿ ಮೇಲ್ದರ್ಗೆರಿಸುವ ಪಟ್ಟಿಯನ್ನು ನೀಡಬೇಕಾಗಿತ್ತು. ಈ ಸಂಬಂದ ರಾಷ್ಟ್ರೀಯ ಹೆದ್ದಾರಿ, ಎನ್.ಹೆಚ್.ಎ.ಐ. ಪಿಎಂಜಿಎಸ್‌ವೈ, ಪಂಚಾಯತ ರಾಜ್ ಇಂಜನಿಯರಿಂಗ್, ಜಿಲ್ಲಾನಗರಾಭಿವೃದ್ಧಿ ಕೋಶ ಹೀಗೆ ಅಗತ್ಯವಿರುವ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸ ವರದಿ ನೀಡಬೇಕಾಗಿತ್ತು. ಅವರು ಯಾವುದರ ಗೋಜಿಗೆ ಹೋಗದೆ ಅವರ ಇಲಾಖೆಯ ರಸ್ತೆಗಳನ್ನು ಪಟ್ಟಿ ಮಾಡಿ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಪಟ್ಟಿ ನೀಡಿದ್ದಾರೆ.

 ರಾಷ್ಟ್ರೀಯ ಹೆದ್ಧಾರಿಗಳಾಗಿ ಮೇಲ್ದರ್ಗೆರಿಸುವ ಪಟ್ಟಿಯನ್ನು ನೀಡಲು ಕೇಂದ್ರ ಸಚಿವರಾದ ಮಾನ್ಯ ಶ್ರೀ ನೀತಿನ್ ಗಡ್ಕರಿಯವರು ಲೋಕಸಭಾ ಸದಸ್ಯರಿಗೆ ಪತ್ರ ಬರೆದ ಕೂಡಲೇ ಇಂಜಿನಿಯರ್‌ಗಳ ಗಮನಕ್ಕೆ ತರಲಾಗಿದ್ದರೂ ಅವರು ಇನ್ನೂ ಪಟ್ಟಿ ನೀಡದೇ ಇರುವ ಕಾರಣ ತಿಳಿದಿಲ್ಲ.

  ಸಂಜೀವರಾಜುರವರು ಪಟ್ಟಿ ನೀಡಿದ್ದಾರೆ, ಆದರೇ ಜಿಐಎಸ್ ಆಧಾರಿತ ಲೇಯರ್ ನೀಡಿಲ್ಲ, 80 ವರ್ಷದ ಸಂಸದರು ಜಿಐಎಸ್ ಬಗ್ಗೆ ಹಬ್ಬರಿಸುತ್ತಿದ್ದಾರೆ. 54 ವರ್ಷದ ಸಂಜೀವರಾಜುರವರು ಇನ್ನೂ ಓಬಿರಾಯರ ಕಾಲದಲ್ಲಿದ್ದಾರೆ. ಶೀಘ್ರವಾಗಿ ಎಲ್ಲಾ ಇಲಾಖೆಯವರು ಸೇರಿ ಸಭೆ ನಡೆಸಿ ಜಿಐಎಸ್ ಆಧಾರಿತ ಪಟ್ಟಿ ನೀಡುವುದರ ಜೊತೆಗೆ ಎಲ್ಲಾ ಶಾಸಕರ/ಸಂಸದರ/ಸಚಿವರ ಅಭಿಪ್ರಾಯಗಳನ್ನು ಪಡೆಯುವುದು ಒಳ್ಳೆಯದು.

ದಿಶಾ ಸಮಿತಿ ನಿರ್ಣಯ 20.ಲೋಕೋಪಯೋಗಿ ಇಲಾಖೆ:

 ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‌ರವರು ಮಾತನಾಡಿ ಹಿಂದಿನ ಸಭೆಯಲ್ಲಿ ಜಿಲ್ಲೆಯಲ್ಲಿ ಯಾವ ರಸ್ತೆಗಳನ್ನು ಮೇಲ್ದರ್ಗೆರಿಸಬೇಕು ಎಂಬ ಬಗ್ಗೆ ವರದಿ ನೀಡಲು ತಿಳಿಸಲಾಗಿತ್ತು, ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಕೇಳಿದರು.

  ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯಪಾಲಕ ಇಂಜಿನಿಯರ್‌ರವರು ಮಾತನಾಡಿ, ಕಾರ್ಯಕ್ರಮಗಳ ಪ್ರಗತಿ ಮಾಹಿತಿಯನ್ನು ಸಭೆಗೆ ವಿವರಿಸಿದರು. ಮುಂದುವರೆದು ಮಾತನಾಡುತ್ತಾ, ಕಳೆದ ಸಭೆಯ ತೀರ್ಮಾನದಂತೆ ಅಪ್‌ಗ್ರಡೇಷನ್ ಬಗ್ಗೆ ಕ್ರಮವಹಿಸಲಾಗಿದ್ದು, ರಸ್ತೆ ಅಗಲೀಕರಣದ ಕುರಿತು ರಾಷ್ಟ್ರೀಯ ಹೆದ್ದಾರಿ, ಎನ್.ಹೆಚ್.ಎ.ಐ. ಪಿಎಂಜಿಎಸ್‌ವೈ, ಪಂಚಾಯತ ರಾಜ್ ಇಂಜನಿಯರಿಂಗ್, ಜಿಲ್ಲಾನಗರಾಭಿವೃದ್ಧಿ ಕೋಶ ಹೀಗೆ ಅಗತ್ಯವಿರುವ ಇಲಾಖೆಗಳ ಅಧಿಕಾರಿಗಳೊಂದಿಗೆ ಕೂಡಲೇ ಸಭೆ ನಡೆಸಿ ತೀರ್ಮಾನಿಸುವುದಾಗಿ ಸಭೆಗೆ ಮಾಹಿತಿ ವಿವರಿಸಿದರು.

  ಸಭೆಯ ಮಾನ್ಯ ಅಧ್ಯಕ್ಷರು ಮಾತನಾಡುತ್ತಾ, ಚಿಕ್ಕನಹಳ್ಳಿ, ಚೇಳೂರು ಮತ್ತು ಮಾಯಸಂದ್ರ ಗ್ರಾಮಗಳ ರಸ್ತೆ ಸಂಪರ್ಕದ ಬಗ್ಗೆ ಮಾಹಿತಿ ಪಡೆದರು. ಮಾನ್ಯ ವಿಧಾನ ಪರಿಷತ್ ಸದಸ್ಯರು ಮಾತನಾಡುತ್ತಾ, ರಾಷ್ಟ್ರೀಯ ಹೆದ್ದಾರಿಗಳನ್ನು ಘೋಷಣೆ ಮಾಡುತ್ತಾರೆ, ಆದರೆ ಸಂಖ್ಯೆಯನ್ನು ನಮೂದಿಸುವುದಿಲ್ಲ. ಈ ನಿಟ್ಟಿನಲ್ಲಿ ಎನ್.ಸಿ ಮತ್ತು ಎಸ್.ಸಿ ಅಡಿ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿವೆ ಎಂದು ಸಭೆಯ ಗಮನಕ್ಕೆ ತಂದರು. ಸಭೆಯ ಮಾನ್ಯ ಅಧ್ಯಕ್ಷರು ಮಾತನಾಡಿ, ಹುಳಿಯಾರಿನಿಂದ ಶಿರಾ ತಾಲ್ಲೂಕಿನವರೆಗೆ ಮತ್ತು ಶಿರಾ ತಾಲ್ಲೂಕಿನಿಂದ ಕೋಲಾರ ಜಿಲ್ಲೆಯವರೆಗೆ ಹೆದ್ದಾರಿ ನಿರ್ಮಾಣದ ಕುರಿತು ಮಾಹಿತಿ ಪಡೆದರು.

[ಕ್ರಮ: ಕಾರ್ಯಪಾಲಕ ಅಭಿಯಂತರರು, ಪಿ.ಡಬ್ಲ್ಯೂಡಿ, ತುಮಕೂರು/ ಮಧುಗಿರಿ]