28th March 2024
Share

TUMAKURU:SHAKTHIPEETA FOUNDATION

  ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯನ್ನು 2019-2020 ನೇ ಸಾಲಿನ ಸಂಸದರ ಆದರ್ಶ ಗ್ರಾಮ ಯೋಜನೆಗೆ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಆಯ್ಕೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಸತಿ ಮತ್ತು ನಿವೇಶನ ರಹಿತರಿಗೆ ಅಗತ್ಯ ಸೌಲಭ್ಯ ನೀಡಲು ಪಲಾನುಭವಿಗಳ ಪಟ್ಟಿ ನೀಡಲು ಲೋಕಸಭಾ ಸದಸ್ಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಗುರುಮೂರ್ತಿಯವರಿಗೆ  ಸೂಚಿಸಿದ್ದಾರೆ.

 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 18 ಗ್ರಾಮಗಳಲ್ಲಿ ವಾಸವಿರುವ ಹಾಗೂ ಪ್ರಸ್ತುತ ಕೊರೊನಾ ಪ್ರಯುಕ್ತ ವಲಸೆ ಹೋಗಿರುವವರು ಗ್ರಾಮಗಳಿಗೆ ವಾಪಾಸ್ಸು ಬಂದಿರುವ ನಿವೇಶನ ಅಥವಾ ವಸತಿ ರಹಿತ ಪಲಾನುಭವಿಗಳಿಗೂ ಅನೂಕೂಲ ಕಲ್ಪಿಸುವುದು ಅಗತ್ಯವಾಗಿದೆ.

  ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಇದ್ದಲ್ಲಿ ಗುರುತಿಸುವುದು, ಒಂದು ವೇಳೆ ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಸೂಕ್ತ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲು ನಿಯಾಮಾನುಸಾರ ಕ್ರಮ ಕ್ಯಗೊಳ್ಳಲು ಸೂಚಿಸಿದ್ದಾರೆ.

  ಪಲಾನುಭವಿಗಳಿಗೆ ಸರ್ಕಾರ ನೀಡುವ ಅನುದಾನದ ಜೊತೆಗೆ ಬ್ಯಾಂಕ್‌ಗಳಿಂದ ಸಾಲದ ಅವಶ್ಯಕತೆಯಿದ್ದಲ್ಲಿ, ಫಲಾನುಭವಿಗಳ ಪಟ್ಟಿಯನ್ನು ಈ ವ್ಯಾಪ್ತಿಯ ಬ್ಯಾಂಕಿಗೆ ಸಲ್ಲಿಸಲು ಸೂಚಿಸಿದ್ದಾರೆ. ದಿನಾಂಕ:31.08.2020 ರೊಳಗೆ ನಿವೇಶನ ಅಥವಾ ವಸತಿ ರಹಿತರ ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಡಲು ಸೂಚಿಸಿದ್ದಾರೆ’

 ಎಲ್ಲಾ ಪಲಾನುಭವಿಗಳ ಸೋಶಿಯಲ್ ಮೀಡಿಯಾ ಗ್ರೂಪ್ ರಚಿಸಿ, ಪ್ರತಿ ಹಂತದ ಮಾಹಿತಿಯನ್ನು ಪಲಾನುಭವಿಗಳಿಗೆ ತಿಳಿಸಲು ‘SAGY:MARASHETTIHALLI GP VISION GROUP’ ಸಂಚಾಲಕರಿಗೆ ಸೂಚಿಸಿದ್ದಾರೆ.

 ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸಿನ ಹೌಸಿಂಗ್ ಫಾರ್ ಆಲ್- 2022 ಯೋಜನೆ ಸಂಪೂರ್ಣ ಜಾರಿಯಾಗಲು ಅಧಿಕಾರಿಗಳು ಹಾಗೂ ಪಲಾನುಭವಿಗಳು ಜಂಟಿಯಾಗಿ ಶ್ರಮಿಸಲು ಸೂಚಿಸಿದ್ದಾರೆ.

 ಸಂಸದರ ಆದರ್ಶ ಗ್ರಾಮ ಯೋಜನೆಯ ನೋಡೆಲ್ ಅಧಿಕಾರಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಯವರಾದ ಶ್ರೀ ರಮೇಶ್‌ರವರು, ಗುಬ್ಬಿ ತಾಲ್ಲೂಕು ಪಂಚಾಯತ್ ಇಓ ಶ್ರೀ ನರಸಿಂಹಯ್ಯನವರು ಮತ್ತು ಗ್ರಾಮಪಂಚಾಯಿತಿಯ ಆಡಳಿತಾಧಿಕಾರಿ ಶ್ರೀ ಸೋಮಶೇಖರ್‌ರವರು ಈ ಬಗ್ಗೆ ವಿಶೇಷ ಗಮನ ಹರಿಸಲು ಸೂಚಿಸಿದ್ದಾರೆ.