TUMAKURU:SHAKTHIPEETA FOUNDATION
ಸಂಸದರ ಆದರ್ಶ ಗ್ರಾಮದ ನೋಡೆಲ್ ಆಫೀಸರ್ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀ ರಮೇಶ್‌ರವರೇ ಆಕ್ಷನ್ ಪ್ಲಾನ್‌ಗೆ ಇದೂವರೆಗೂ ಏಕೆ ಅನುಮೋದನೆ ನೀಡಿಲ್ಲ, ಯಾವುದಾದರೂ ಅಡಚಣೆಯಿದೆಯೇ?
- ಸಂಸದರು ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಲು ಪತ್ರ ನೀಡಿದ್ದು ಯಾವ ದಿನಾಂಕ.
- ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿದ್ದು ಯಾವ ದಿನಾಂಕ.
- ನೋಡೆಲ್ ಆಫಿಸರ್ ನೇಮಕ ಮಾಡಿದ್ದು ಯಾವ ದಿನಾಂಕ.
- ಸಂಸದರು ಮಾರಶೆಟ್ಟಿಹಳ್ಳಿಯಲ್ಲಿ ಪ್ರಥಮ ಸಭೆ ನಡೆಸಿದ್ದು ಯಾವ ದಿನಾಂಕ.
- ಸಂಸದರು ಗುಬ್ಬಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದು ಯಾವ ದಿನಾಂಕ.
- ಗುಬ್ಬಿ ಇಓರವರು ಸಿಐಟಿಯ ಜೊತೆ ಸಭೆ ನಡೆಸಿ, ಆಕ್ಟಿವಿಟಿ ಪಾಯಿಂಟ್ಸ್‌ಗಾಗಿ ವಿಧ್ಯಾರ್ಥಿಗಳನ್ನು ಬಳಸಿಕೊಳ್ಳಲು ಸಭೆ ನಡೆಸಿದ್ದು ಯಾವ ದಿನಾಂಕ.
- ಮಾರಶೆಟ್ಟಿಹಳ್ಳಿ ಪಿಡಿಓ ಗುಬ್ಬಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಆಕ್ಷನ್ ಪ್ಲಾನ್ ಸಲ್ಲಿಸಿದ್ದು ಯಾವ ದಿನಾಂಕ.
- ಗುಬ್ಬಿ ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ತಮಗೆ ಆಕ್ಷನ್ ಪ್ಲಾನ್ ಸಲ್ಲಿಸಿದ್ದು ಯಾವ ದಿನಾಂಕ.
- ನಾನು ನಿಮಗೆ, ಇಓ ರವರಿಗೆ ಮತ್ತು ಪಿಡಿಓ ರವರಿಗೆ ಎಷ್ಟು ಬಾರಿ ದೂರವಾಣಿ ಕರೆಮಾಡಿರುವುದು.
ನೀವೇ ಕುಳಿತು ಮೌನವಾಗಿ ಯೋಚಿಸಿ ನೋಡಿ, ಈ ರೀತಿ ಆದರೆ ಒಂದು ಕೋಟಿ ಜನ ನರೇಂದ್ರ ಮೋದಿಯವರಂತೆ ಆದರೂ ಯೋಜನೆ ಅನುಷ್ಠಾನ ಸಾಧ್ಯವೇ?