22nd November 2024
Share

TUMAKURU:SHAKTHI PEETA FOUNDATION

 ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿವೇಶನ ರಹಿರತರಿಗೆ ನಿವೇಶನ/ವಸತಿ ನೀಡಲು ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ತುಮಕೂರು ತಾಲ್ಲೂಕು ಪಂಚಾಯಿತಿ ಇಓ ಶ್ರೀ ಜೈಪಾಲ್‌ರವರು ಜಂಟಿ ಕಾರ್ಯಚಾರಣೆ ಮಾಡಿ ಪೋರ್ಟಲ್‌ನಲ್ಲಿ ಅಫ್‌ಲೋಡ್ ಮಾಡಿರುವವರ ಪೈಕಿ ನಿಯಮ ಪ್ರಕಾರ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಮತ್ತು ಈಗಾಗಲೇ ಆಶ್ರಯ ಯೋಜನೆಗೆ ಮೀಸಲಿಟ್ಟ ನಿವೇಶನಗಳ ಜಿಐಎಸ್ ಲೇಯರ್’ ಮಾಡಿ, ಯಾರಿಗೆ ಎಲ್ಲಿ ನಿವೇಶನ ನೀಡಬೇಕು ಎಂಬ ಬಗ್ಗೆ ವರದಿ ತಯಾರಿಸಲು ದಿಶಾ ಸಮಿತಿ ಸದಸ್ಯ ಹಾಗೂ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಆಗ್ರಹಿಸಿದ್ದಾರೆ.

 ಸರ್ಕಾರಿ ಜಮೀನು ನೀಡಲು ಜಿಲ್ಲಾಧಿಕಾರಿ ಡಾ.ಶ್ರೀ ರಾಕೇಶ್ ಕುಮಾರ್, ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್, ತುಮಕೂರು ತಾಲ್ಲೂಕು ತಹಶೀಲ್ಧಾರ್  ಶ್ರೀ ಮೋಹನ್‌ಕುಮಾರ್ ಮತ್ತು ಅವರ ತಂಡ ಸಮರೋಪಾದಿಯಲ್ಲಿ ಕಾರ್ಯ ಆರಂಭಿಸಿದ್ದಾರೆ.

 ಪಾಲಿಕೆ ಅರ್ಹ ಪಲಾನುಭವಿಗಳನ್ನು ಗುರುತಿಸುವುದನ್ನು ಬಿಟ್ಟು ಇನ್ನೂ ಗೊರಕೆ ಹೊಡೆಯುವುದು ತರವಲ್ಲ’ ಎಂದಿದ್ದಾರೆ. ತುಮಕೂರು ತಾಲ್ಲೂಕು ಪಂಚಾಯಿತಿ ಇಓ ಶ್ರೀ ಜೈಪಾಲ್‌ರವರು ಅರ್ಹ ಪಲಾನುಭವಿಗಳ ಪಟ್ಟಿ ಮತ್ತು ಆಶ್ರಯ ಯೋಜನೆಗೆ ಮೀಸಲಿಟ್ಟ ನಿವೇಶನಗಳ ಜಿಐಎಸ್ ಲೇಯರ್ ಮಾಡುವ ಕೆಲಸ ಆರಂಭಿಸಿದ್ದಾರೆ.

 ಒಂದು ಕುಟುಂಬದ ಗಂಡ ಅಥವಾ ಹೆಂಡತಿಯ ಹೆಸರಿನಲ್ಲಿ ಈ ಭೂಮಿಯ ಮೇಲೆ ದೇಶದಲ್ಲಿ ಎಲ್ಲೂ ನಿವೇಶನ ಇರಬಾರದು, ಅವರಿಗೆ ವಾರ್ಷಿಕ ರೂ 18 ಲಕ್ಷ ಆದಾಯ ಬಂದರೂ ಹೌಸಿಂಗ್ ಫಾರ್ ಆಲ್-2022 ಯೋಜನೆಯಲ್ಲಿ ಫಲಾನುಭವಿಗಳಾಗಬಹುದು.

  ಮುಂದಿನ ತಿಂಗಳು 5 ನೇ ತಾರೀಖು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಗೆ ತಾಜಾ ಮಾಹಿತಿಯೊಂದಿಗೆ ಬರಲು ಮನವಿ ಮಾಡಿದ್ದಾರೆ.

 ರಾಜ್ಯದವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ನೀವೇಶನ ನೀಡಿ ಮನೆ ಕೊಡುತ್ತೇನೆ ಎನ್ನುತ್ತಿದ್ದಾರೆ, ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ವಸತಿಗಾಗಿ ನಿಮಗೆ ಎಷ್ಟು ಹಣ ಬೇಕು ಹೇಳಿ ಎನ್ನುತ್ತಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ಮಾತ್ರ ಇದು ನಮಗೆ ಸಂಬಂದವಿಲ್ಲ ಎಂಬಂತೆ, ಕಳೆದ ಹಲವಾರು ವರ್ಷಗಳಿಂದ ಕಾಲ ಕಳೆದಿದೆ ಎಂದು ಕಿಡಿಕಾರಿದ್ದಾರೆ. 

ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ತುಮಕೂರು ನಗರದಲ್ಲಿ ನಿವೇಶನ ರಹಿತರಿಲ್ಲ’ ಎಂದು ಘೋಷಣೆ ಮಾಡಬೇಕು ಎಂದು ಪಣ ತೊಟ್ಟಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ಮಾತ್ರ ಇದು ನಮಗೆ ಸಂಬಂದವಿಲ್ಲ ಎಂಬಂತೆ, ಕಳೆದ ಹಲವಾರು ವರ್ಷಗಳಿಂದ ಕಾಲ ಕಳೆದಿದೆ ಎಂದು ಕಿಡಿಕಾರಿದ್ದಾರೆ.