9th October 2024
Share

TUMAKURU:SHAKTHIPEETA FOUNDATION

ಭಾರತ ಸರ್ಕಾರ ದಿನಾಂಕ:01.07.2015 ರಂದು ಭಾರತ್‌ನೆಟ್ ಎಂಬ ಬಹುಪಯೋಗಿ ಯೋಜನೆಯನ್ನು ಅಂದಿನ ಪ್ರಧಾನಿಯಾದ ಶ್ರೀ ನರೇಂದ್ರಮೋದಿಯವರಿಂದ ಉದ್ಘಾಟನೆ ಮಾಡಿಸಿತು. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಆಫ್ಟಿಕಲ್ ಫೈಬರ್ ಜಾವಾಗಿದೆ.

 ಈ ಯೋಜನೆಯ ಉದ್ದೇಶ ಬ್ರಾಂಡ್‌ಬ್ಯಾಂಡ್ ಬರೀ ನಗರ ಪ್ರದೇಶಗಳಿಗೆ ಸೀಮೀತವಾಗಬಾರದು, ಶ್ರೀಮಂತರು ಮಾತ್ರ ಬಳಸುವ ಯೋಜನೆಯಾಗಬಾರದು, ದೇಶದ ಎರಡು ಲಕ್ಷದ ಐವತ್ತು  ಸಾವಿರದ ಗ್ರಾಮ ಪಂಚಾಯಿತಿಗಳಲ್ಲೂ ಬಳಸ ಬೇಕು ಎಂಬ ಮಹತ್ವದ ಯೋಜನೆ.

 ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ಪೋಸ್ಟ್ ಆಫೀಸ್‌ಗಳಿಗೂ ಸಂಪರ್ಕ ದೊರಕಿರಬೇಕು. ನಾನು ಅಧ್ಯಯನ ಮಾಡಿದ ಪ್ರಕಾರ ಅದೆಷ್ಟೋ ಗ್ರಾಮ ಪಂಚಾಯಿತಿಗಳು ಹಣ ಪಾವತಿ ಮಾಡದೇ ಡಿಸ್ ಕನೆಕ್ಟ್ ಆಗಿರುವ ಮಾಹಿತಿಯೂ ಲಭ್ಯವಾಗಿದೆ.

ಇನ್ನೂ ಬಹಳಷ್ಟು ಗ್ರಾಮ ಪಂಚಾಯಿತಿಗಳು ಸಂಪರ್ಕ ಪಡೆಯುವ ಗೋಜಿಗೆ ಹೋಗಿಲ್ಲವಂತೆ. ಆದ್ದರಿಂದ ಈ ಕೆಳಕಂಡ ಜಿಐಎಸ್ ಲೇಯರ್‌ವಾರು ಮಾಹಿತಿಯನ್ನು, ತುಮಕೂರು ಜಿಐಎಸ್ ಪೋರ್ಟಲ್‌ಗೆ ಅಫ್ ಲೋಡ್ ಮಾಡುವ ಮೂಲಕ ಸಾರ್ವಜನಿಕರಿಗೆ ಲೆಕ್ಕ ಕೋಡಿ ಮೇಡಂ.

  1. ಗ್ರಾಮ ಪಂಚಾಯಿತಿ ಇತಿಹಾಸ, ಸ್ವಂತ ಕಟ್ಟಡ, ಬಾಡಿಗೆ ಕಟ್ಟಡ, ಹಾಲಿ ಇರುವ ಬ್ರಾಡ್ ಬ್ಯಾಂಡ್, ಅವುಗಳು ಕಾರ್ಯನಿರ್ವಹಿಸುತ್ತಿರುವ ಗುಣಮಟ್ಟ ಸಹಿತ ಜಿಐಎಸ್ ಲೇಯರ್.
  2. ಭಾರತ್ ನೆಟ್ ಸಂಪರ್ಕ ಪಡೆದ ಇತಿಹಾಸ ಸಹಿತ ಜಿಐಎಸ್ ಲೇಯರ್.
  3. ಸರ್ವರ್ ಪ್ರಾಬ್ಲಮ್ ಆಗಿರುವ ಸಮಯ ಮತ್ತು ದಿನಗಳ ರೆಕಾರ್ಡಿಂಗ್.
  4. ಶೇಕಡ 100 ರಷ್ಟು ಸಂಪರ್ಕ ಯಾವಾಗ.
  5. ಗ್ರಾಮ ಪಂಚಾಯಿತಿಗಳವಾರು  ಡಿಜಿಟಲ್ ಮಾಹಿತಿ ಲೇಯರ್.