9th October 2024
Share

TUMAKURU:SHAKTHIPEETA FOUNDATION

ಆತ್ಮಿಯರೇ

ನಮ್ಮ ಸಂಸ್ಥೆಯು ಅಭಿವೃದ್ಧಿ ಯೋಜನೆಗಳಿಗೆ ಮಾತ್ರ ವಿಶೇಷ ಗಮನ ಹರಿಸಲಿದೆ, ಅಭಿವೃದ್ಧಿ ಒಂದು ಡ್ರೈ ಸಬ್ಜೆಟ್ ಬೇಗ ಯಾರಿಗೂ ಅರ್ಥವಾಗಲ್ಲ. ಆದರೂ ಹಲವಾರು ಜನ ಎಲೆಮರೆ ಕಾಯಿಯ ಹಾಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಗಲಿರಳು ಶ್ರಮಿಸುತ್ತಿದ್ದಾರೆ.

 ನಿಮಗಿದು ಗೊತ್ತೆ ? ಅಭಿವೃದ್ಧಿ ಆಸಕ್ತರ ಒಂದು ಟೀಮ್ ಮಾಡಿ ಅವರ ಅಭಿವೃದ್ಧಿ ಅನುಭವಗಳನ್ನು ಹಂಚಿಕೊಳ್ಳಲು ಚಿಂತನೆ ನಡೆಸಲಾಗಿದೆ. ಆಸಕ್ತರು ಈ ಗ್ರೂಪ್‌ನಲ್ಲಿ ಸೇರ್ಪಡೆಯಾಗಲು ಅವಕಾಶ ಕಲ್ಪಿಸಲಾಗಿದೆ.

  ಯಾವುದೇ ಸರ್ಕಾರಿ ಯೋಜನೆಗಳು ಜಾರಿಯಾಗ ಬೇಕಾದಲ್ಲಿ ಯಾವುದೋ ಒಂದು ಶಕ್ತಿ ಆ ಯೋಜನೆಯ ಹಿಂದೆ ಇದ್ದೆ ಇರುತ್ತದೆ. ಕೆಲವರು ಅಬ್ಬರ ಮಾಡಿಕೊಂಡು ಕೆಲಸ ಮಾಡುತ್ತಾರೆ, ಕೆಲವರು ಮೌನವಾಗಿ ಕೆಲಸ ಮಾಡುತ್ತಾರೆ.

  ಇನ್ನೂ ಕೆಲವರು ಯಾರೋ ಮಾಡಿದ ಕೆಲಸವನ್ನು ನಾನು ಮಾಡಿಸಿದ್ದೇನೆ ಎಂದು ಬೊಗಳೆ ಬೀಡುತ್ತಾರೆ. ಇದು ರಾಜಕಾರಣೆಗಳಲ್ಲಿ ಜಾಸ್ತಿ. ಯೋಜನೆಯ ಪರಿಕಲ್ಪನೆ ಎಲ್ಲರಿಗೂ ಬರುವುದಿಲ್ಲ ಹಾಗೂ ಯಾವ ಗ್ರಾಮಕ್ಕೆ ಯಾವ ಯೋಜನೆ ಅಗತ್ಯ ಎಂಬ ಅರಿವು ಸಹ ಎಲ್ಲರಿಗೂ ಗೊತ್ತಿರುವುದಿಲ್ಲ. ನೀಡ್ ಬೇಸ್ಡ್ ಯೋಜನೆ ಜಾರಿಗೆ ಸ್ಥಳೀಯರ ಸಲಹೆ ಅಗತ್ಯ.

  ನನಗೆ ಹಲವಾರು ಜನರು ಹಲವಾರು ಸಲಹೆಗಳನ್ನು ನೀಡುತ್ತಿದ್ದೀರಿ, ಒಂದು ದಿವಸ ಪತ್ರಿಕೆ ಬರೆಯದಿದ್ದರೂ ಪ್ರಶ್ನೆ ಮಾಡುತ್ತಿದ್ದೀರಿ, ಯಾಕೆ ಆರೋಗ್ಯ ಸರಿ ಇಲ್ವ ಎಂಬ ಮಾತುಗಳು ಕೇಳಿ ಬರುತ್ತವೆ. ನಮ್ಮ ಪತ್ರಿಕೆಯ ವಿಷಯಗಳು ಅಭಿವೃದ್ಧಿ ಡಿಜಿಟಲ್ ದಾಖಲೆಯಂತಾಗಬೇಕು ಎಂಬ ಹಂಬಲವಿದೆ.

  ನನಗೆ ಕನ್ನಡವೂ ಸರಿಯಾಗಿ ಬರುತ್ತಿಲ್ಲ, ಸಾಕಷ್ಟು ತಪ್ಪುಗಳನ್ನು ಹುಡುಕಿ ಸರಿ ಪಡಿಸುತ್ತಿದ್ದೀರಿ. ಅಂಥಹವರ ಒಂದು ತಂಡ ಸಕ್ರೀಯವಾಗಿಲಿ ಎಂಬ ದೃಷ್ಟಿಯಿಂದ ಈ ಟೀಮ್‌ಗೆ ಸೇರಲು ಮನವಿ.